ರಾಯಲ್ ಎನ್‌ಫೀಲ್ಡ್ ಬುಲೆಟ್ 350 ಬೈಕ್‌ನ್ನು ಮನೆಗೆ ತರಬೇಕೇ.. ಸ್ಪರ್ಧಾತ್ಮಕ ಬೆಲೆ, ಕಡಿಮೆ EMI
ಯುವಕರಿಗೆ ನಿಮ್ಮ ಮೆಚ್ಚಿನ ಬೈಕ್ ಯಾವುದೆಂದು ಕೇಳಿದರೆ ತಕ್ಷಣ ಬರುವ ಒಂದೇ ಉತ್ತರ ರಾಯಲ್ ಎನ್‌ಫೀಲ್ಡ್ ಬುಲೆಟ್ ಎಂದು. ಅಷ್ಟರಮಟ್ಟಿಗೆ ಈ ಮೋಟಾರ್‌ಸೈಕಲ್ ಯುವ ಜನರ ಮನಸ್ಸನ್ನು ಗೆದ್ದಿದೆ. ಉತ್ತಮ ವಿನ್ಯಾಸವನ್ನು ಹೊಂದಿರುವುದರಿಂದ ಬಹುತೇಕ ನವತರುಣರು ಮುಗಿಬಿದ್ದು ಖರೀದಿಸುತ್ತಿದ್ದಾರೆ. ಆದಾಗ್ಯೂ ಬುಲೆಟ್ ಬೈಕ್ ಬೆಲೆ ಕೊಂಚ ಹೆಚ್ಚಿರುವುದರಿಂದ ಹಲವರು ಹಿಂದೇಟು ಹಾಕುತ್ತಾರೆ. ಇಲ್ಲಿ ನೂತನ ರಾಯಲ್ ಎನ್‌ಫೀಲ್ಡ್ ಬುಲೆಟ್ 350 (Royal Enfield Bullet 350) ಮೋಟಾರ್‌ಸೈಕಲ್‌ನ ಆನ್-ರೋಡ್ ಬೆಲೆ ಹಾಗೂ ಇಎಂಐ ಆಯ್ಕೆಯ ಕುರಿತು ಸಂಪೂರ್ಣವಾಗಿ ವಿವರಿಸಿದ್ದೇವೆ.
ನೂತನ ರಾಯಲ್ ಎನ್‌ಫೀಲ್ಡ್ ಬುಲೆಟ್ 350 ಬೈಕ್‌ನ ಬಣ್ಣಗಳಿಗೆ ಅನುಗುಣವಾಗಿ ಆನ್-ರೋಡ್ ದರವನ್ನು ನಿರ್ಧರಿಸಲಾಗುತ್ತದೆ. ಬೆಂಗಳೂರಿನಲ್ಲಿ 'ಮಿಲಿಟರಿ ಸಿಲ್ವರ್ ರೆಡ್ & ಮಿಲಿಟರಿ ಸಿಲ್ವರ್ ಬ್ಲ್ಯಾಕ್' ಆಯ್ಕೆಯನ್ನು ಹೊಂದಿರುವ ಮಾದರಿಯು ರೂ.2,23,279 ಆನ್-ರೋಡ್ ಬೆಲೆಯನ್ನು ಹೊಂದಿದೆ. ರೂ.22,000 ಡೌನ್‌ಪೇಮೆಂಟ್ ಪಾವತಿಸಿ ಈ ಬೈಕ್‌ನ್ನು ಖರೀದಿಸಿದರೆ, ಉಳಿದ ರೂ.2,01,279 ಸಾಲದ ಮೊತ್ತಕ್ಕೆ ಶೇಕಡ 9.7% ಬಡ್ಡಿದರದಲ್ಲಿ ಮೂರು ವರ್ಷದ ಅವಧಿಗೆ (36 ತಿಂಗಳು) ಮಾಸಿಕ ರೂ.6,466 ಇಎಂಐ ಕಟ್ಟಬೇಕು.

ರಾಯಲ್ ಎನ್‌ಫೀಲ್ಡ್ ಬುಲೆಟ್ 350 'ಬ್ಲ್ಯಾಕ್ ಗೋಲ್ಡ್' ಆವೃತ್ತಿಯು ರೂ.2,74,789 ಆನ್-ರೋಡ್ (On-Road) ದರವನ್ನು ಪಡೆದಿದೆ. ನೀವು ರೂ.27,000 ಡೌನ್‌ಪೇಮೆಂಟ್ ಕಟ್ಟಿ ಈ ಮೋಟಾರ್‌ಸೈಕಲ್‌ನ್ನು ಕೊಂಡುಕೊಂಡರೆ, ರೂ.2,47,789 ಸಾಲದ ಹಣಕ್ಕೆ ಶೇಕಡ 9.7% ಬಡ್ಡಿಯೊಂದಿಗೆ 3 ವರ್ಷಗಳಿಗೆ ಮಾಸಿಕ ರೂ.7,961 ಇಎಂಐ (EMI) ಪಾವತಿಸಬೇಕು.
ಈ ಮೋಟಾರ್‌ಸೈಕಲ್‌ನ 'ಸ್ಟ್ಯಾಂಡರ್ಡ್ ಮೆರೂನ್ & ಸ್ಟ್ಯಾಂಡರ್ಡ್ ಬ್ಲ್ಯಾಕ್' ರೂಪಾಂತರವು ರೂ.2,52,384 ಆನ್-ರೋಡ್ ಬೆಲೆಯನ್ನು ಹೊಂದಿದೆ. ರೂ.25,000 ಡೌನ್‌ಪೇಮೆಂಟ್ ಪಾವತಿಸಿ ಈ ಬೈಕ್‌ನ್ನು ಖರೀದಿಸಿದರೆ, ಉಳಿದ ರೂ.2,27,384 ಸಾಲದ ಮೊತ್ತಕ್ಕೆ ಶೇಕಡ 9.7% ಬಡ್ಡಿದರದಲ್ಲಿ ಮೂರು ವರ್ಷದ ಅವಧಿಗೆ ತಿಂಗಳಿಗೆ ರೂ.7,305 ಇಎಂಐ ಕಟ್ಟಬೇಕು.

ಬುಲೆಟ್ 350 'ಮಿಲಿಟರಿ ರೆಡ್ & ಮಿಲಿಟರಿ ಬ್ಲ್ಯಾಕ್' ಮಾದರಿಯು ರೂ.2,23,279 ಆನ್-ರೋಡ್ ದರವನ್ನು ಪಡೆದಿದೆ. ನೀವು ರೂ.22,000 ಡೌನ್‌ಪೇಮೆಂಟ್ ಕಟ್ಟಿ ಈ ಮೋಟಾರ್‌ಸೈಕಲ್‌ನ್ನು ಕೊಂಡುಕೊಂಡರೆ, ರೂ.2,01,279 ಸಾಲದ ಹಣಕ್ಕೆ ಶೇಕಡ 9.7% ಬಡ್ಡಿಯೊಂದಿಗೆ ಮೂರು ವರ್ಷಗಳಿಗೆ ಮಾಸಿಕ ರೂ.6,466 ಇಎಂಐ ಪಾವತಿಸಬೇಕು.
ಹೊಚ್ಚ ಹೊಸ ರಾಯಲ್ ಎನ್‌ಫೀಲ್ಡ್ ಬುಲೆಟ್ 350 ಬೈಕ್ 349 ಸಿಸಿ ಏರ್ ಕೋಲ್ಡ್ ಸಿಂಗಲ್ ಸಿಲಿಂಡರ್ ಜೆ-ಸೀರಿಯಸ್ ಪೆಟ್ರೋಲ್ ಎಂಜಿನ್ ಹೊಂದಿದ್ದು, 20.4 ಪಿಎಸ್ ಗರಿಷ್ಠ ಪವರ್ (ಶಕ್ತಿ) ಹಾಗೂ 27 ಎನ್ಎಂ ಪೀಕ್ ಟಾರ್ಕ್ ಹೊರಹಾಕುತ್ತದೆ. ಜೊತೆಗೆ 5-ಸ್ಪೀಡ್ ಗೇರ್‌ಬಾಕ್ಸ್ ಆಯ್ಕೆಯನ್ನು ಪಡೆದಿದ್ದು, 37 ಕೆಎಂಪಿಎಲ್ ಮೈಲೇಜ್ ಕೊಡುತ್ತದೆ.

ಈ ಬೈಕ್ ಹ್ಯಾಲೊಜೆನ್ ಹೆಡ್‌ಲೈಟ್, ಟೈಲ್ ಲೈಟ್, ಸೆಮಿ-ಡಿಜಿಟಲ್ ಇನ್ಸ್ಟ್ರುಮೆಂಟ್ ಕನ್ಸೋಲ್, ಯುಎಸ್‌ಬಿ ಚಾರ್ಜಿಂಗ್ ಪೋರ್ಟ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಹೊಂದಿದೆ. 195 ಕೆಜಿ ತೂಕವಿದ್ದು, 13 ಲೀಟರ್ ಸಾಮರ್ಥ್ಯದ ಫ್ಯುಯೆಲ್ (ಇಂಧನ) ಟ್ಯಾಂಕ್‌ನ್ನು ಒಳಗೊಂಡಿದೆ. ನಿಮ್ಮ ಗಮನಕ್ಕೆ.. ಈ ಆನ್-ರೋಡ್ ಬೆಲೆಗಳು ಹಾಗೂ ಸಾಲದ ಆಯ್ಕೆಗಳು ರಾಜ್ಯದಿಂದ ರಾಜ್ಯಕ್ಕೆ ಡೀಲರ್‌ಶಿಪ್‌ಗಳಿಗೆ ಅನುಗುಣವಾಗಿ ಬೇರೆಯಿರಲಿದ್ದು, ಹೆಚ್ಚಿನ ವಿವರಗಳಿಗೆ ನಿಮ್ಮ ಸಮೀಪದ ಶೋರೂಂಗೆ ಭೇಟಿ ನೀಡಿರಿ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋ ಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








