ಬುಲೆಟ್‌ ಬಸ್ಯಂದಿರಿಗೆ ಹಾಟ್‌ ನ್ಯೂಸ್‌: ಇನ್ಮೇಲೆ ಬುಲೆಟ್ 350 ಯಾರೂ ಊಹಿಸದ‌ ಈ ಬಣ್ಣಗಳಲ್ಲಿ ಲಭ್ಯ!

ರಾಯಲ್‌ ಎನ್‌ಫೀಲ್ಡ್‌ ಬೈಕ್‌ಗಳೆಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ. ಕ್ಲಾಸಿಕ್‌, ಬುಲೆಟ್‌ನಂತಹ ಬೈಕ್‌ನಲ್ಲಿ ನಮ್ಮ ಹೆದ್ದಾರಿಯಲ್ಲಿ ಹೋದರೆ ಎಂತಹವರೂ ಸಹ ಒಮ್ಮೆ ತಿರುಗಿ ನೋಡುತ್ತಾರೆ. ಅದಕ್ಕೇ ಹೇಳುವುದು ರಾಯಲ್ ಎನ್‌ಫೀಲ್ಡ್‌ನ ಫ್ಯಾನ್‌ ಬೇಸ್‌ ಎಂದರೆ ಸುಮ್ನೇನಾ ಅಂತ. ಇದೀಗ ಎನ್‌ಫೀಲ್ಡ್‌ ಪ್ರೀಯರಿಗೆ ಹೊಸ ಸುದ್ದಿಯೊಂದು ಬಂದಿದೆ.

ಹೌದು, ರಾಯಲ್‌ ಎನ್‌ಫೀಲ್ಡ್‌ ತನ್ನ ಹಾರ್ಡ್‌ ಕೋರ್‌ ಬುಲೆಟ್‌ ಪ್ರೀಯರಿಗೆ ಹೊಸ ಸುದ್ದಿಯೊಂದನ್ನು ತಂದಿದೆ. ಈ ಸುದ್ದಿ ರಾಯಲ್‌ ಎನ್‌ಫೀಲ್ಡ್‌ನ ಪ್ರಸಿದ್ದ ಬೈಕ್‌ ಮಾದರಿಯಾದ ಬುಲೆಟ್‌ 350 ಕುರಿತಾಗಿದ್ದು ಇನ್ನು ಮುಂದೆ ರಾಯಲ್‌ ಎನ್‌ಫೀಲ್ಡ್‌ ಬುಲೆಟ್‌ 350 ಹೊಸ ಬಣ್ಣಗಳಲ್ಲಿ ನಿಮ್ಮ ಮುಂದೆ ಬರಲಿದೆ.

Royal Enfield Bullet 350 Offers New Two Colors Includes Red And Black

ರಾಯಲ್‌ ಎನ್‌ಫೀಲ್ಡ್‌ ಬುಲೆಟ್‌ 350 (Royal Enfield Bullet 350) ಯಲ್ಲಿ ಎರಡು ಹೊಸ ಬಣ್ಣಗಳು ಲಭ್ಯವಾಗಿದ್ದು, ಈ ಬಣ್ಣಗಳು ಗ್ರಾಹಕರನ್ನು ಆಕರ್ಷಿಸುವುದಂತೂ ಖಂಡಿತ ಎಂದು ರಾಯಲ್‌ ಎನ್‌ಫೀಲ್ಡ್‌ ಅಧಿಕೃತರು ಈಗಾಗಲೇ ತಮ್ಮ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ. ಮಿಲಿಟರಿ ಸಿಲ್ವರ್‌ ಬ್ಲಾಕ್‌ ಮತ್ತು ಮಿಲಿಟರಿ ಸಿಲ್ವರ್‌ ರೆಡ್‌ ಈಗ ಈ ರಾಯಲ್‌ ಎನ್‌ಫೀಲ್ಡ್‌ ಬುಲೆಟ್‌ಗೆ ಹೊಸದಾಗಿ ಸೇರ್ಪಡೆ ಆಗಿರುವ ಬಣ್ಣಗಳು.

ಈಗಾಗಲೇ ರಾಯಲ್‌ ಎನ್‌ಫೀಲ್ಡ್‌ ಬುಲೆಟ್‌ನಲ್ಲಿ ಮಿಲಿಟರಿ ಬ್ಲಾಕ್‌, ಮಿಲಿಟರಿ ರೆಡ್‌, ಸ್ಟಾಂಡರ್ಡ್‌ ಬ್ಲಾಕ್‌, ಸ್ಟಾಂಡರ್ಡ್‌ ಮರೂನ್‌ ಮತ್ತು ಡ್ಯುಯಲ್‌ ಟೋನ್‌ ಬ್ಲಾಕ್‌ ಗೋಲ್ಡ್‌ ಬಣ್ಣಗಳಲ್ಲಿ ಲಭ್ಯವಿತ್ತು. ಇದೀಗ ಈ ಬಣ್ಣಗಳ ಜೊತೆಗೆ ಹೊಸ ಮಿಲಿಟರಿ ಸಿಲ್ವರ್‌ ಬ್ಲಾಕ್‌ ಮತ್ತು ಮಿಲಿಟರಿ ಸಿಲ್ವರ್‌ ರೆಡ್ ಬಣ್ಣಗಳು ಸೇರಿದ್ದು ಗ್ರಾಹಕರಿಗೆ ಹೆಚ್ಚಿನ ಆಯ್ಕೆಗಳು ಲಭ್ಯವಾಗುತ್ತದೆ.

Royal Enfield Bullet 350 Offers New Two Colors Includes Red And Black

ರಾಯಲ್‌ ಎನ್‌ಫೀಲ್ಡ್‌ ಬುಲೆಟ್ ೩೫೦ ಹಿಂದಿನಿಂದಲೂ ಚಾಲ್ತಿಯಲ್ಲಿರುವಂತಹ ಬೈಕ್‌. ಕಾಲಕ್ಕೆ ತಕ್ಕಂತೆ ಅಲ್ಪ ಸ್ವಲ್ಪ ಬದಲಾವಣೆ ಮಾಡಿದರೂ, ತನ್ನ ಕ್ಲಾಸಿಕ್‌ ಲುಕ್‌ನಲ್ಲಿ ರಾಯಲ್‌ ಎನ್‌ಫೀಲ್ಡ್‌ ಯಾವತ್ತೂ ರಾಜಿ ಮಾಡಿಕೊಂಡಿಲ್ಲ. ಈ ಬೈಕ್‌ನ ಎಕ್ಸ್‌ ಶೋ ರೂಮ್‌ ಬೆಲೆ ಸುಮಾರು 1.79 ಲಕ್ಷದಿಂದ ಆರಂಭವಾಗುತ್ತದೆ.

ಇನ್ನು ಈ ಬೈಕ್‌ ರಾಯಲ್ ಎನ್‌ಫೀಲ್ಡ್‌ನ ಜೆ-ಸಿರೀಸ್ ಪ್ಲಾಟ್‌ಫಾರ್ಮ್‌ನಲ್ಲಿ ನಿರ್ಮಿಸಲಾಗಿದ್ದು, ಇದು ರಾಯಲ್ ಎನ್‌ಫೀಲ್ಡ್‌ನ ಈಗ ಮಾರಾಟದಲ್ಲಿರುವ ಮಾದರಿಗಳಾದ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350, ಮೀಟಿಯೊರ್ 350 ಮತ್ತು ಹಂಟರ್ 350 ಗಳಿಗೆ ಆಧಾರವಾಗಿರುವ ಅದೇ ಪ್ಲಾಟ್‌ಫಾರ್ಮ್ ಆಗಿದೆ. ಈ ಪ್ಲಾಟ್‌ಫಾರ್ಮ್‌ ಈಗಾಗಲೇ ಪ್ರಸಿದ್ದಿಯಾಗಿದ್ದು, ಗ್ರಾಹಕರಿಂದ ಹಂಟರ್‌ಗೆ ಬಂದ ಪ್ರತಿಕ್ರೆಯೆಯನ್ನು ನೋಡಿದರೆ ತಿಳಿಯುತ್ತದೆ.

Royal Enfield Bullet 350 Offers New Two Colors Includes Red And Black

ರಾಯಲ್ ಎನ್‌ಫೀಲ್ಡ್ ಬುಲೆಟ್ 350 ಯಲ್ಲಿ ಕಂಪನಿಯು ಹೊಸ 349cc, ಸಿಂಗಲ್-ಸಿಲಿಂಡರ್, ಏರ್ ಕೂಲ್ಡ್, ಫ್ಯೂಯಲ್ ಇಂಜೆಕ್ಟೆಡ್ ಪೆಟ್ರೋಲ್ ಎಂಜಿನ್‌ ಅನ್ನು 5-ಸ್ಪೀಡ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ. ಈ ಎಂಜಿನ್ 20.2bhp, 27Nm ಟಾರ್ಕ್ ಉತ್ಪಾದಿಸುತ್ತದೆ. ಹಾಗೆಯೇ ಎಂಜಿನ್ ಇತ್ತೀಚಿನ BS6 ಹಂತ 2 ಎಮಿಷನ್ ಮಾನದಂಡಗಳನ್ನು ಸಹ ಅನುಸರಿಸುತ್ತದೆ. ಇತ್ತೀಚಿನ OBD2 ಪೋರ್ಟ್‌ನೊಂದಿಗೆ ಇದು ಬರುತ್ತದೆ.

ನೀವೇನಾದರೂ ರಾಯಲ್‌ ಎನ್‌ಫೀಲ್ಡ್‌ನ ಹಾರ್ಡ್‌ ಕೋರ್‌ ಫ್ಯಾನ್‌ ಆಗಿದ್ದರೆ ನಿಮಗೆ ಈ ರಾಯಲ್‌ ಎನ್‌ಫೀಲ್ಡ್‌ ಬುಲೆಟ್‌ನ ಹೊಸ ಬಣ್ಣಗಳ ಬೈಕ್‌ಗಳನ್ನು ಆಯ್ಕೆ ಮಾಡಿಕೊಳ್ಳಲು ಉತ್ತಮ ಸಮಯವಾಗಿದೆ. ಹೊಸ ಬಣ್ಣಗಳ ಜೊತೆ ಆರಾಮದಾಯಕ ಪರ್ಫಾಮೆನ್ಸ್‌ ನೀಡುವ ಎಲ್ಲರ ನೆಚ್ಚಿನ ಬೈಕ್‌ ಇದಾಗಿದೆ ಎಂಬುದು ಎಲ್ಲರ ಅಭಿಪ್ರಾಯ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Saturday, January 27, 2024, 10:15 [IST]
English summary
Royal enfield bullet 350 offers new two colors includes red and black
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+