ಹೊಸ‌ 250cc ಬೈಕ್‌ ರೆಡಿ ಮಾಡುತ್ತಿರುವ ರಾಯಲ್‌‌ ಎನ್‌ಫೀಲ್ಡ್: ಬಿಸಿ ಬಿಸಿ ಪಾನೀಪೂರಿಯಂತೆ ಸೇಲ್‌ ಆಗುತ್ತೆ ನೋಡಿ!

ನಿಜ, ರಾಯಲ್‌ ಎನ್‌ಫೀಲ್ಡ್‌ ಬೈಕ್‌ಗಳೆಂದರೆ ಭಾರತೀಯರಿಗೆ, ಅದರಲ್ಲೂ ಮೋಟಾರ್‌ಸೈಕಲ್‌ ಪ್ರೇಮಿಗಳಿಗೆ ಒಂದು ರೀತಿಯಲ್ಲಿ ಎಮೋಷನ್‌. ಬಹುತೇಕರಿಗೆ ಈ ಕಂಪನಿಯ ಬೈಕ್‌ಗಳೆಂದರೆ ಅದೊಂದು ರೀತಿಯ ಪ್ರೀತಿ. ನಮ್ಮ ತಾತನ ಕಾಲದಲ್ಲಿ ಅಲ್ಲಲ್ಲಿ ಒಂದೋ ಎರಡೋ ಬೈಕ್‌ಗಳು ಒಂದು ಊರಿಗೆ ಇದ್ದರೇ, ಅದೇ ಹೆಚ್ಚು. ಹಾಗಾಗಿಯೇ ನಮ್ಮಲ್ಲಿನ ಬಹುತೇಕರಿಗೆ ರಾಯಲ್‌ ಎನ್‌ಫೀಲ್ಡ್‌ ಬೈಕ್‌ಗಳೆಂದರೆ ಒಂದು ರೀತಿಯ ಕಥೆಗಳಿರುತ್ತವೆ ಹೇಳಲು. ಇಂದಿಗೂ ರಾಯಲ್‌ ಎನ್‌ಫೀಲ್ಡ್‌ ತನ್ನ ಬೈಕ್‌ಗಳಿಗೆ ಆಧುನಿಕ ಫೀಚರ್‌ಗಳನ್ನು ನೀಡುತ್ತಿದೆಯಾದರೂ, ಹಳೆಯ ಡಿಸೈನ್‌ ಮಾದರಿಗಳು ಬೈಕ್‌ಗಳಲ್ಲಿ ಮಾಸಿ ಹೋಗದಂತೆ ಜಾಗೃತೆ ವಹಿಸುತ್ತಿದೆ.

ರಾಯಲ್‌ ಎನ್‌ಫೀಲ್ಡ್‌ ಕಂಪನಿಯು ಭಾರತದಲ್ಲಿ ಹಂಟರ್‌ 350 ಬೈಕ್‌ ಅನ್ನು ಲಾಂಚ್‌ ಮಾಡುವ ಮೂಲಕ, ಕೇವಲ ದೊಡ್ಡದಾದಮ ಹೆಚ್ಚು ಭಾರವುಳ್ಳ ಬೈಕ್‌ಗಳು ಮಾತ್ರವಲ್ಲ, ಚಿಕ್ಕದಾದ ಬೈಕ್‌ಗಳನ್ನೂ ಸಹ ತಯಾರಿಸಲು ಗೊತ್ತು ಎಂಬ ಸೂಚನೆಯನ್ನು ನೀಡಿತ್ತು. ಯಾಕೆಂದರೆ ಈ ಕಂಪನಿ ಅಲ್ಲಿಯತನಕ ಹಂಟರ್‌ ರೀತಿಯ ಯಾವುದೇ ಬೈಕ್‌ ಅನ್ನು ಮಾರುಕಟ್ಟೆಗೆ ತಂದಿರಲಿಲ್ಲ.

Royal Enfield developing a new 250cc motorcycle for enthusiasts

ಇದೀಗ ರಾಯಲ್‌ ಎನ್‌ಫೀಲ್ಡ್ ಮಾರುಕಟ್ಟೆಗೆ ಇನ್ನೂ ಅಗ್ರೆಸಿವ್‌‌ ಸ್ಟ್ರಾಟೆರ್ಜಿಗಳನ್ನು ತರುತ್ತಿದ್ದು, ಮಾಹಿತಿಗಳ ಪ್ರಕಾರ ರಾಯಲ್‌ ಎನ್‌ಫೀಲ್ಡ್‌ ತನ್ನ ಪಾಳಯದಲ್ಲಿ ೨೫೦ಸಿಸಿ ಎಂಜಿನ್‌ ಪ್ಲಾಟ್‌ಫಾರ್ಮ್‌ ಅನ್ನು ಅಭಿವೃದ್ದಿ ಪಡಿಸುತ್ತಿದ್ದು, ಭವಿಷ್ಯದಲ್ಲಿ ೨೫೦ ಸಿಸಿ ಬೈಕ್‌ಗಳನ್ನು ಮಾರುಕಟ್ಟೆಗೆ ತರುವ ಯೋಜನೆಯಲ್ಲಿದೆ ಎಂದು ತಿಳಿದು ಬಂದಿದೆ.

ಈ ಮೂಲಕ ರಾಯಲ್‌ ಎನ್‌ಫೀಲ್ಡ್‌ ಎದುರಾಳಿಗಳ ಎದೆಯಲ್ಲಿ ನಡುಕ ಉಂಟು ಮಾಡಿದ್ದು, ರಾಯಲ್‌ ಎನ್‌ಫೀಲ್ಡ್‌ ಏನಾದರೂ ಈ ಸೆಗ್ಮೆಂಟ್‌ಗೆ ಬಂದರೆ ಬಿಸಿ ಬಿಸಿ ಪಾನಿ ಪೂರಿಗಳಂತೆ ಮಾರುಕಟ್ಟೆಯಲ್ಲಿ ಮಾರಾಟವಾಗಲಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಇನ್ನು ರಾಯಲ್‌ ಎನ್‌ಫೀಲ್ಡ್‌ ಇದೇ ಮೊದಲ ಬಾರಿಗೆ 250cc ಬೈಕ್ ಅನ್ನು ಮಾರುಕಟ್ಟೆಗೆ ಇಳಿಸುತ್ತಿಲ್ಲ.

hunter

ಇದಕ್ಕೂ ಮುಂಚೆ ಅಂದರೆ 1960 ರ ದಶಕದಲ್ಲಿ ಮಾರುಕಟ್ಟೆಯಲ್ಲಿ ರಾಯಲ್‌ ಎನ್‌ಫಿಲ್ಡ್‌ ಕಾಂಟಿನೆಂಟಲ್‌ ಜಿಟಿ 250 ಸಿಸಿ ಬೈಕ್‌ ಮಾರಾಟವಾಗುತ್ತಿತ್ತು ಎಂಬುದನ್ನು ನಾವಿಲ್ಲಿ ಗಮನಿಸಬೇಕಿದೆ. ಹಾಗಾಗಿ ಈ ಸೆಗ್ಮೆಂಟ್‌ ರಾಯಲ್‌ ಎನ್‌ಫೀಲ್ಡ್‌ ಬೈಕ್‌ಗೆ ಹೊಸತಲ್ಲವಾದರೂ, ಮಾರುಕಟ್ಟೆಯಲ್ಲಿ ಈಗಿರುವ ಸ್ಪರ್ಧೆಗಳಿಗೆ ಸ್ವಲ್ಪ ಎಕ್ಟ್ರಾ ಎಫರ್ಟ್‌ ಹಾಕಬೇಕಷ್ಟೇ.

ಸದ್ಯಕ್ಕೆ ಮಾರುಕಟ್ಟೆಯಲ್ಲಿರುವ ರಾಯ್‌ ಎನ್‌ಫೀಲ್ಡ್‌ನ ಚಿಕ್ಕ ಬೈಕ್ ಹಂಟರ್‌ ಬಗ್ಗೆ ನೋಡುವುದಾದರೆ, ಭಾರತದಲ್ಲಿ ಮಾತ್ರವಲ್ಲದೆ, ಹಂಟರ್ 350 ಅಂತರಾಷ್ಟ್ರೀಯ ಮಾರುಕಟ್ಟೆಗಳಲ್ಲಿಯೂ ಜನಪ್ರಿಯತೆ ಹೆಚ್ಚುತ್ತಿದೆ. ವಿಸ್ತಾರವಾದ ಜಾಗತಿಕ ಜಾಲದಿಂದ ಯಶಸ್ವಿಯಾಗಿ ಬ್ರಾಂಡ್ ಮುನ್ನಡೆಯುತ್ತಿದೆ ಎಂಬುದರಲ್ಲಿ ಎರಡು ಮಾತಿಲ್ಲ.

ರಾಯಲ್ ಎನ್‌ಫೀಲ್ಡ್ ಹಂಟರ್ 350 'ಮೆಟ್ರೋ' ರೂಪಾಂತರವು ರೂ.2,14,655 ಆನ್-ರೋಡ್ ದರವನ್ನು ಪಡೆದಿದೆ. ನೀವು ರೂ.20,000 ಡೌನ್ ಪೇಮೆಂಟ್ (Down Payment) ಕಟ್ಟಿ ಈ ಮೋಟಾರ್‌ಸೈಕಲ್‌ನ್ನು ಕೊಂಡುಕೊಂಡರೆ, ರೂ.1,94,655 ಸಾಲದ ಹಣಕ್ಕೆ ರೂ.9.7% ಬಡ್ಡಿಯನ್ನು ಹಾಕಿ ಮೂರು ವರ್ಷದ ಅವಧಿಗೆ ರೂ.6,254 ಇಎಂಐ ಪಾತಿಸಬೇಕು.

ಹಂಟರ್ 350 ಮೆಟ್ರೋ 'ರೆಬೆಲ್' ಮಾದರಿಯು ರೂ.2,22,101 ಆನ್-ರೋಡ್ ಬೆಲೆ (On-Road Price)ಯನ್ನು ಹೊಂದಿದೆ. ರೂ.20,000 ಡೌನ್ ಪೇಮೆಂಟ್ ಪಾವತಿಸಿ ಈ ಬೈಕ್‌ನ್ನು ಖರೀದಿಸಿದರೆ, ರೂ.2,02,101 ಸಾಲದ ಮೊತ್ತಕ್ಕೆ ಶೇಕಡ 9.7% ಬಡ್ಡಿ ದರದಲ್ಲಿ ಮೂರು ವರ್ಷದ ಅವಧಿಗೆ ರೂ.6,493 ಇಎಂಐ (EMI) ಕಟ್ಟಬೇಕು.

ನೂತನ ರಾಯಲ್ ಎನ್‌ಫೀಲ್ಡ್ ಹಂಟರ್ 350 ಬೈಕ್ 349 ಸಿಸಿ ಏರ್ ಕೋಲ್ಡ್ ಪೆಟ್ರೋಲ್ ಎಂಜಿನ್ ಹೊಂದಿದ್ದು, 20.4 ಪಿಎಸ್ ಗರಿಷ್ಠ ಶಕ್ತಿ (ಪವರ್) ಹಾಗೂ 27 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಜೊತೆಗೆ 5-ಸ್ಪೀಡ್ ಗೇರ್‌ಬಾಕ್ಸ್‌ ಆಯ್ಕೆಯನ್ನು ಒಳಗೊಂಡಿದ್ದು, 36.2 ಕೆಎಂಪಿಎಲ್‌ವರೆಗೆ ಮೈಲೇಜ್ ನೀಡುತ್ತದೆ.

ಹಂಟರ್ 350 ಮೋಟಾರ್‌ಸೈಕಲ್, ಮುಂಭಾಗ (ಫ್ರಂಟ್) ಟೆಲಿಸ್ಕೋಪಿಕ್ ಫೋರ್ಕ್ ಮತ್ತು ಹಿಂಭಾಗ (ರೇರ್) ಟ್ವಿನ್-ಶಾಕ್ ಅಬ್ಸಾರ್ಬರ್‌ ಸಸ್ಪೆನ್ಷನ್ ಸೆಟಪ್ ಹೊಂದಿದೆ. 17-ಇಂಚಿನ ವೀಲ್‌ಗಳನ್ನು ಪಡೆದಿದ್ದು, ಸುರಕ್ಷತೆಯ ದೃಷ್ಟಿಯಿಂದ ಡಬಲ್ ಡಿಸ್ಕ್ ಬ್ರೇಕ್ ಆಯ್ಕೆಯನ್ನು ಒಳಗೊಂಡಿದೆ. 181 ಕೆಜಿ ತೂಕವಿರುವ ಈ ಬೈಕ್, 13 ಲೀಟರ್ ಸಾಮರ್ಥ್ಯದ ಫ್ಯುಯೆಲ್ (ಇಂಧನ) ಟ್ಯಾಂಕ್‌ನ್ನು ತನ್ನದಾಗಿಸಿಕೊಂಡಿದೆ.

More from DriveSpark

Article Published On: Monday, July 15, 2024, 13:31 [IST]
English summary
Royal enfield developing a new 250cc motorcycle for enthusiasts
Read more on royal enfield india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+