Royal Enfield: ಪ್ರತಿಸ್ಪರ್ಧಿಗಳಿಗೆ ನಡುಕ.. ರಾಯಲ್ ಎನ್‌ಫೀಲ್ಡ್‌ನ ಮೊದಲ ಎಲೆಕ್ಟ್ರಿಕ್ ಬೈಕ್ ಅನಾವರಣ, ವಿಶೇಷತೆಗಳೇನು?
ರಾಯಲ್ ಎನ್‌ಫೀಲ್ಡ್ (Royal Enfield), ಜನಪ್ರಿಯ ಪ್ರೀಮಿಯಂ ಮೋಟಾರ್‌ಸೈಕಲ್ ತಯಾರಕ ಕಂಪನಿಯಾಗಿದೆ. ದೇಶೀಯ ಮಾರುಕಟ್ಟೆಯಲ್ಲಿ ದಶಕಗಳಿಂದ ಆಕರ್ಷಕ ವಿನ್ಯಾಸ ಹಾಗೂ ವೈಶಿಷ್ಟ್ಯಗಳನ್ನು ಪಡೆದುಕೊಂಡಿರುವ ವಿವಿಧ ಬೈಕ್‌ಗಳನ್ನು ಮಾರಾಟಗೊಳಿಸುತ್ತಿದೆ. ಇಟಲಿಯಲ್ಲಿ ಏರ್ಪಡಿಸಿರುವ 'ಮಿಲನ್ ಮೋಟಾರ್‌ಸೈಕಲ್ ಶೋ'ನಲ್ಲಿ (EICMA - 2024) ಸೋಮವಾರ ರಾಯಲ್ ಎನ್‌ಫೀಲ್ಡ್ ಕಂಪನಿಯು ತನ್ನ ಮೊದಲ ಹೊಚ್ಚ ಹೊಸ ಫ್ಲೈಯಿಂಗ್ ಫ್ಲಿಯಾ ಸಿ6 (Flying Flea C6) ಎಲೆಕ್ಟ್ರಿಕ್ ಬೈಕ್‌ನ್ನು ಅನಾವರಣಗೊಳಿಸಿದೆ. ಬನ್ನಿ.. ಈ ನೂತನ ಮೋಟಾರ್‌ಸೈಕಲ್‌ನ ವಿಶೇಷತೆ ಕುರಿತಂತೆ ಸಂಪೂರ್ಣವಾದ ಮಾಹಿತಿ ತಿಳಿಯೋಣ.
ರಾಯಲ್ ಎನ್‌ಫೀಲ್ಡ್ ಕಂಪನಿಯು ಹೊಸ ಎಲೆಕ್ಟ್ರಿಕ್ ಬೈಕ್‌ಗೆ ಬಹಳ ಆಳವಾಗಿ ಆಲೋಚಿಸಿ 'ಫ್ಲೈಯಿಂಗ್ ಫ್ಲಿಯಾ' ಎಂಬ ಹೆಸರನ್ನು ಕೊಟ್ಟಿದೆ. 1939 ರಿಂದ 1945ರ ಅವಧಿಯಲ್ಲಿ ಜರ್ಮನಿ ಸರ್ವಾಧಿಕಾರಿ ಹಿಟ್ಲರ್‌ನ ನಾಜಿ ಪಡೆ ವಿರುದ್ದ ಬ್ರಿಟಿಷ್ ಸೈನ್ಯದ ಪ್ಯಾರಾಚ್ಯೂಟ್ ರೆಜಿಮೆಂಟ್‌ನ ಯೋಧರು 125 ಸಿಸಿಯ ಫ್ಲೈಯಿಂಗ್ ಫ್ಲಿಯಾ ಮೋಟಾರ್‌ಸೈಕಲ್‌ಗಳನ್ನು ಬಳಕೆ ಮಾಡುತ್ತಿದ್ದರು. ಈ ಬೈಕ್‌ಗಳ ಸ್ಮರಣಾರ್ಥ ತನ್ನ ಮೊದಲ ಎಲೆಕ್ಟ್ರಿಕ್ ಮೋಟಾರ್‌ಸೈಕಲ್‌ಗೆ 'ಫ್ಲೈಯಿಂಗ್ ಫ್ಲಿಯಾ' ಎಂದು ಕಂಪನಿಯು ನಾಮಕರಣ ಮಾಡಿದೆ.

ನೂತನ ರಾಯಲ್ ಎನ್‌ಫೀಲ್ಡ್ ಫ್ಲೈಯಿಂಗ್ ಫ್ಲಿಯಾ ಸಿ6 (Royal Enfield Flying Flea C6) ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ಹೊರಭಾಗದಲ್ಲಿ ಅತ್ಯಾಧುನಿಕವಾದ ವಿನ್ಯಾಸ (ಡಿಸೈನ್) ಹೊಂದಿದೆ. ಸರ್ಕ್ಯುಲರ್ ಹೆಡ್‌ಲೈಟ್, ಮುಂಭಾಗ (ಫ್ರಂಟ್) ಗಿರ್ಡರ್ ಫೋರ್ಕ್ ಸಸ್ಪೆನ್ಷನ್ ಸೆಟಪ್‌ನ್ನು ಪಡೆದಿದೆ. ಸಿಂಗಲ್-ಪೀಸ್ ಸೀಟ್ ಕೂಡ ಒಳಗೊಂಡಿದ್ದು, ಬಹುತೇಕ ನಗರ ಸಂಚಾರಕ್ಕೆ ಉಪಯೋಗವಾಗುವಂತೆ ಈ ಬೈಕ್‌ನ್ನು ಸಿದ್ಧಪಡಿಸಿದಂತೆ ತೋರುತ್ತಿದೆ.
ಈ ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ಪುಲ್-ಟಿಎಫ್‌ಟಿ ಕ್ಲಸ್ಟರ್‌ನ್ನು ಹೊಂದಿದೆ. ಇದನ್ನು ಬ್ಲೂಟೂತ್ ನೆರವಿನಿಂದ ಸ್ಮಾರ್ಟ್‌ಫೋನ್ ಅಪ್ಲಿಕೇಶನ್‌ಗೂ ಸುಲಭವಾಗಿ ಕನೆಕ್ಟ್ ಮಾಡಬಹದು. ಸವಾರರ ಸುರಕ್ಷತೆಗಾಗಿ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಅದಕ್ಕಾಗಿ ಟ್ರಾಕ್ಷನ್ ಕಂಟ್ರೋಲ್ ಮತ್ತು ಕಾರ್ನರಿಂಗ್ ಎಬಿಎಸ್ (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್) ಅನ್ನು ಹೊಂದಿದೆ.

ಸದ್ಯ, ರಾಯಲ್ ಎನ್‌ಫೀಲ್ಡ್ ನೂತನ ಫ್ಲೈಯಿಂಗ್ ಫ್ಲಿಯಾ ಸಿ6 ಎಲೆಕ್ಟ್ರಿಕ್ ಬೈಕ್‌ನ ಬ್ಯಾಟರಿ ಪ್ಯಾಕ್, ರೇಂಜ್ (ಮೈಲೇಜ್) ಹಾಗೂ ಮೋಟಾರ್ ಕುರಿತಂತೆ ಯಾವುದೇ ವಿವರಗಳನ್ನು ಬಹಿರಂಗಪಡಿಸಿಲ್ಲ. ಹೊಸ ಬೈಕ್ 2026 ರಲ್ಲಿ ಬಿಡುಗಡೆಯಾಗಲಿದೆ ಆಗಲೇ ಬೆಲೆಯೂ ಘೋಷಣೆಯಾಗಲಿದ್ದು, ನಂತರದಲ್ಲಿ ಬುಕ್ಕಿಂಗ್ ಪ್ರಾರಂಭವಾಗುವ ನಿರೀಕ್ಷೆಯಿದೆ.
ಇಟಲಿಯಲ್ಲಿ ಆಯೋಜಿಸಿರುವ 'ಮಿಲನ್ ಮೋಟಾರ್‌ಸೈಕಲ್ ಶೋ'ನಲ್ಲಿ ರಾಯಲ್ ಎನ್‌ಫೀಲ್ಡ್ ಫ್ಲೈಯಿಂಗ್ ಫ್ಲಿಯಾ ಸಿ6 ಎಲೆಕ್ಟ್ರಿಕ್ ಬೈಕ್‌ನ್ನು ಮಾತ್ರ ಅನಾವರಣ ಮಾಡಿಲ್ಲ. ಇದರೊಟ್ಟಿಗೆ ಮುಂಬರುವ ತಿಂಗಳಲ್ಲಿ ಬಹಿರಂಗಪಡಿಸುವ 'ಫ್ಲೈಯಿಂಗ್ ಫ್ಲಿಯಾ ಎಸ್6' ಎಲೆಕ್ಟ್ರಿಕ್ ಮೋಟಾರ್‌ಸೈಕಲ್‌ನ ಟೀಸರ್‌ನ್ನು ಬಿಡುಗಡೆಗೊಳಿಸಿದೆ. ಇದೇ ಕಾರ್ಯಕ್ರಮದಲ್ಲಿ ತಯಾರಿಕೆ ಹಂತದಲ್ಲಿರುವ ಹಿಮಾಲಯನ್ ಎಲೆಕ್ಟ್ರಿಕ್ ಬೈಕ್‌ನ್ನು ಪ್ರದರ್ಶನ ಮಾಡಿದೆ.

ಒಟ್ಟಾರೆ ದೇಶೀಯ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಮಾರುಕಟ್ಟೆ ಪ್ರವೇಶಿಸುತ್ತಿರುವುದಾಗಿ 'ಫ್ಲೈಯಿಂಗ್ ಫ್ಲಿಯಾ ಸಿ6' ಎಲೆಕ್ಟ್ರಿಕ್ ಬೈಕ್‌ನ್ನು ಅನಾವರಣಗೊಳಿಸುವುದರೊಂದಿಗೆ ರಾಯಲ್ ಎನ್‌ಫೀಲ್ಡ್ ಕಂಪನಿ ಖಚಿತಪಡಿಸಿದೆ. ಈ ಮೋಟಾರ್‌ಸೈಕಲ್ ಹೆಚ್ಚು ಅತ್ಯಾಧುನಿಕವಾಗಿರುವುದು ಮೇಲ್ನೋಟಕ್ಕೆ ಗೊತ್ತಾಗುತ್ತಿದ್ದು, ಬಿಡುಗಡೆಯಾದ ಮೇಲೆ ಹೊಸ ಇತಿಹಾಸ ಸೃಷ್ಟಿಸುವುದರಲ್ಲಿ ಎರಡು ಮಾಡಿಲ್ಲ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








