ಯುವಕರ ಬೇಡಿಕೆಯಂತೆ ಹೊಸ ಫೀಚರ್ಸ್‌ನಲ್ಲಿ ಬಂದ ಹಿಮಾಲಯನ್ 450: ಬೆಟ್ಟ, ಗುಡ್ಡಗಳು ಲೆಕ್ಕಕ್ಕಿಲ್ಲ!

ಭಾರತದಲ್ಲಿ ರಾಯಲ್ ಎನ್‌ಫೀಲ್ಡ್ (Royal Enfield) ಜನಪ್ರಿಯ ಪ್ರೀಮಿಯಂ ಮೋಟಾರ್‌ಸೈಕಲ್ ಬ್ರ್ಯಾಂಡ್ ಆಗಿದೆ. ಇದರೊಂದಿಗೆ ಭಾರತದ ಅಡ್ವೆಂಚರ್ ಮೋಟಾರ್‌ಸೈಕಲ್ ವಿಭಾಗದಲ್ಲಿ ಕೈಗೆಟುಕುವ ಬೆಲೆ ಹಾಗೂ ಉತ್ತಮ ಪರ್ಫಾಮೆನ್ಸ್ ನೀಡುವ ಬೈಕ್ ಆಗಿ ರಾಯಲ್ ಎನ್‌ಫೀಲ್ಡ್ ಹಿಮಾಲಯನ್ ಸಾಕಷ್ಟು ಜನಪ್ರಿಯತೆ ಪಡೆದಿದೆ. ರಾಯಲ್ ಎನ್‌ಫೀಲ್ಡ್ ಕಂಪನಿಯು ಹಿಮಾಲಯನ್ 450 ಬೈಕಿನ ವೈರ್-ಸ್ಪೋಕ್ ವೀಲ್‌ಗಳು ಮತ್ತು ಟ್ಯೂಬ್‌ಲೆಸ್ ಟೈರ್‌ಗಳೊಂದಿಗೆ ಪರಚಯಿಸಿದೆ. ಇದರ ಬೆಲೆಯು ದೆಹಲಿ ಎಕ್ಸ್ ಶೋರೂಂ ಪ್ರಕಾರ ರೂ.2,96,000 ಆಗಿದೆ. ಇಲ್ಲಿಯವರೆಗೆ, ಅಡ್ವೆಂಚರ್ ಮೋಟಾರ್‌ಸೈಕಲ್ ವೈರ್-ಸ್ಪೋಕ್ ವ್ಹೀಲ್ ಗಳೊಂದಿಗೆ ಮಾತ್ರ ಲಭ್ಯವಿತ್ತು.

ರಾಯಲ್ ಎನ್‌ಫೀಲ್ಡ್ ಹಿಮಾಲಯನ್ 450 (Royal Enfield Himalayan 450) ಬೈಕ್ ಹೊಸ ಪ್ಲಾಟ್‌ಫಾರ್ಮ್, ಶಕ್ತಿಯುತ ಎಂಜಿನ್ ಮತ್ತು ಅದರ ಹಿಂದಿನ ಎಲ್ಲಾ ನ್ಯೂನತೆಗಳನ್ನು ಸರಿದೂಗಿಸಲು ಎಲ್ಲಾ ಆಧುನಿಕ ವೈಶಿಷ್ಟ್ಯಗಳೊಂದಿಗೆ ಪರಿಚಯಿಸಿದ್ದರು. ಪರ್ಫಾಮೆನ್ಸ್‌ನಲ್ಲಿ ಜನ ಮುಗಿಬಿದ್ದರೂ ಟ್ಯೂಬ್‌ಲೆಸ್ ಬೈಕ್ ಖರೀದಿಸಲು ಆಗಲಿಲ್ಲ ಎಂಬ ಕೊರತೆ ಇಂದಿಗೂ ಹಾಗೆಯೇ ಉಳಿದಿದೆ. ಎಲ್ಲೋ ಪಂಕ್ಚರ್ ಬಿದ್ದರೆ ಬೈಕ್ ತಳ್ಳಲೂ ಸಾಧ್ಯವಾಗದಷ್ಟು ಭಾರವಾಗಿತ್ತು. ಆದರೆ ಈಗ ಅದಕ್ಕೂ ಪರಿಹಾರ ಸಿಕ್ಕಿದೆ.

Royal Enfield Himalayan 450

ಸುದೀರ್ಘ ಕಾಯುವಿಕೆಯ ನಂತರ ಅಡ್ವೆಂಚರ್ ಮೋಟಾರ್ ಸೈಕಲ್ ಟ್ಯೂಬ್ ಲೆಸ್ ಟೈರ್ ಗಳೊಂದಿಗೆ ಮಾರುಕಟ್ಟೆ ಪ್ರವೇಶಿಸಿದೆ. ಬಿಡುಗಡೆಗೊಂಡಾಗ 450cc ಮಾದರಿಯನ್ನು ಪ್ರಾರಂಭಿಸಿದಾಗ, ಕಂಪನಿಯು ವೈರ್-ಸ್ಪೋಕ್ ವ್ಹೀಲ್ ಗಳನ್ನು ಸ್ಟ್ಯಾಂಡರ್ಡ್ ಫಿಟ್ಮೆಂಟ್ ಆಗಿ ಅಳವಡಿಸಿತು. ಈ ವೈರ್ ಸ್ಪೋಕ್ ವೀಲ್ ಗಳು ಟ್ಯೂಬ್ ಲೆಸ್ ಟೈರ್ ಗಳಿಗೆ ಹೊಂದಿಲ್ಲ ಎಂದು ಖರೀದಿದಾರರು ನಿರಾಸೆಗೊಂಡರು.

ಆದರೆ ರಾಯಲ್ ಎನ್‌ಫೀಲ್ಡ್ ಶೀಘ್ರದಲ್ಲೇ ಈ ವೈಶಿಷ್ಟ್ಯವನ್ನು ಒದಗಿಸುವುದಾಗಿ ಭರವಸೆ ನೀಡಿತ್ತು. ವಿಳಂಬಕ್ಕೆ ಕಾರಣವೆಂದರೆ ಹೋಮೋಲೋಗೇಶನ್ ಪ್ರಕ್ರಿಯೆಗಳು ಸ್ವಲ್ಪ ಸಮಯ ತೆಗೆದುಕೊಂಡಿತು. ಶ್ಲಾಘಿಸಬೇಕಾದ ಅಂಶವೆಂದರೆ ಹೊಸ ಹಿಮಾಲಯನ್ 450 ಖರೀದಿದಾರರು ಮತ್ತು ಸದ್ಯ ಈ ಬೈಕನ್ನು ಹೊಂದಿರುವ ಹೊಸ ಟ್ಯೂಬ್‌ಲೆಸ್ ವೈರ್-ಸ್ಪೋಕ್ ವ್ಹೀಲ್ ಗಳನ್ನು ಪಡೆಯಬಹುದು. ಈ ಹೊಸ ಹಿಮಾಲಯನ್ 450 ಖರೀದಿದಾರರು ಈ ಟ್ಯೂಬ್‌ಲೆಸ್ ವೈರ್-ಸ್ಪೋಕ್ ವ್ಹೀಲ್ ಆಯ್ಕೆಯನ್ನು ಹೊಂದಿದೆ.

Royal Enfield Himalayan 450

ಈ ಹೊಸ ಬೈಕಿನ ಎಕ್ಸ್ ಶೋ ರೂಂ ಬೆಲೆ 2.96 ಲಕ್ಷ ರೂ. ಆಗಿದೆ. ಅಂದರೆ 2.85 ಲಕ್ಷದಿಂದ ಪ್ರಾರಂಭವಾಗುವ ಟ್ಯೂಬ್ ಮಾದರಿಯ ಟೈರ್‌ಗಳ ಮಾದರಿಗಿಂತ ನೀವು 11,000 ರೂ.ಗಳನ್ನು ಹೆಚ್ಚು ಪಾವತಿಸಬೇಕಾಗುತ್ತದೆ. ರಾಯಲ್ ಎನ್‌ಫೀಲ್ಡ್ ಹಿಮಾಲಯನ್ 450 ಮಾಲೀಕರು ಕಂಪನಿಯ ಅಸಲಿ ಮೋಟಾರ್‌ಸೈಕಲ್ ಆಕ್ಸೆಸರೀಸ್ (GMA) ಕ್ಯಾಟಲಾಗ್ ಮೂಲಕ ಹೊಸದಾಗಿ ಹೋಮೋಲೋಗೇಟೆಡ್ ಮತ್ತು ಲಾಂಚ್ ಮಾಡಿದ ಟ್ಯೂಬ್‌ಲೆಸ್ ವೈರ್-ಸ್ಪೋಕ್ ವ್ಹೀಲ್ ಗಳನ್ನು ಖರೀದಿಸಬಹುದು.

ಕಂಪನಿಯು ಈ ಅಕ್ಸೆಸರೀಸ್ ಬೆಲೆಯನ್ನು ರೂ. 12,424 ನಿರ್ಧರಿಸಿದೆ. ಟ್ಯೂಬ್‌ಲೆಸ್ ವೈರ್-ವ್ಹೀಲ್ ಗಳು ಆಫ್-ರೋಡಿಂಗ್ ಮತ್ತು ಆನ್-ರೋಡ್ ಪ್ರಯಾಣದಲ್ಲಿ ಸವಾರರಿಗೆ ಉತ್ತ್ಮ ಅನುಭವವನ್ನು ನೀಡುತ್ತದೆ. ಇದು ಅನಿರೀಕ್ಷಿತ ಪಂಕ್ಚರ್‌ಗಳ ವಿರುದ್ಧ ಪ್ರಮುಖ ಅಸ್ತ್ರವಾಗಿದೆ, ಆದರೆ ಸ್ವಲ್ಪ ಹೆಚ್ಚಿನ ಬೆಲೆಯಾದರೂ ಪ್ರಯೋಜನೆಕಾರಿಯಾಗಿದೆ. ಹೊಸ ಟ್ಯೂಬ್‌ಲೆಸ್ ವೈರ್-ಸ್ಪೋಕ್ ವ್ಹೀಲ್ ಗಳ ಹೊರತಾಗಿ, ರಾಯಲ್ ಎನ್‌ಫೀಲ್ಡ್ ಹಿಮಾಲಯನ್ 450 ಬೈಕಿನಲ್ಲಿ ಬೇರೆ ಯಾವುದೇ ಬದಲಾವಣೆಗಳನ್ನು ಪಡೆದಿಲ್ಲ.

Royal Enfield Himalayan 450

ಹೊಸ ರಾಯಲ್ ಎನ್‌ಫೀಲ್ಡ್ ಹಿಮಾಲಯನ್ 450 ಬೈಕಿನಲ್ಲಿ 452cc ಶೆರ್ಪಾ ಎಂಜಿನ್ ಅನ್ನು ಹೊಂದಿದೆ. ಈ ಸಿಂಗಲ್ ಸಿಲಿಂಡರ್ ಲಿಕ್ವಿಡ್ ಕೂಲ್ಡ್ DOHC 4V ಎಂಜಿನ್ 8,000 rpm ನಲ್ಲಿ 40 bhp ಪವರ್ ಮತ್ತು 5,500 rpm ನಲ್ಲಿ 40 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು 6-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ ಸ್ಲಿಪ್ಪರ್ ಅಸಿಸ್ಟ್ ಕ್ಲಚ್‌ನೊಂದಿಗೆ ಜೋಡಿಸಲಾಗಿದೆ.

ಈ ರಾಯಲ್ ಎನ್‌ಫೀಲ್ಡ್ ಹಿಮಾಲಯನ್ 450 ಬೈಕ್‌ಗೆ ವಿವಿಧ ಸುಧಾರಿತ ವೈಶಿಷ್ಟ್ಯಗಳನ್ನು ಹೊಂದಿವೆ. ಬ್ರೇಕಿಂಗ್ ವಿಚಾರಕ್ಕೆ ಬಂದರೆ ಈ ಬಾರಿ ಹಿಮಾಲಯನ್ 450 ಸುಧಾರಣೆಯನ್ನು ಕಂಡಿದೆ, ಬೈಕ್ ಮುಂಭಾಗದಲ್ಲಿ 320 ಎಂಎಂ ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದಲ್ಲಿ 270 ಎಂಎಂ ಡಿಸ್ಕ್ ಬ್ರೇಕ್ ಹೊಂದಿದೆ. ರಾಯಲ್ ಎನ್‌ಫೀಲ್ಡ್ ಹಿಮಾಲಯನ್ 450 ಭಾರತೀಯ ಮಾರುಕಟ್ಟೆಯಲ್ಲಿ KTM 390 ಅಡ್ವೆಂಚರ್ ಬೈಕಿಗೆ ಪೈಪೋಟಿ ನೀಡುತ್ತದೆ.

ಬೈಕ್‌ನ ಮುಂಭಾಗದಲ್ಲಿ 21 ಇಂಚಿನ ವೀಲ್‌ಗಳು ಮತ್ತು ಹಿಂಭಾಗದಲ್ಲಿ 17 ಇಂಚಿನ ವೀಲ್‌ಗಳನ್ನು ಅಳವಡಿಸಲಾಗಿದೆ. ಈ ಬೈಕ್‌ನ ಪೆಟ್ರೋಲ್ ಟ್ಯಾಂಕ್ ಸಾಮರ್ಥ್ಯ 17 ಲೀಟರ್ ಆಗಿದೆ. ಗಮನಾರ್ಹ ಫೀಚರ್‌ಗಳ ವಿಷಯಕ್ಕೆ ಬಂದರೆ ಫುಲ್ LED ಲೈಟಿಂಗ್, ರೈಡ್ ಬೈ ವೈರ್, ಸ್ವಿಚ್ ಮಾಡಬಹುದಾದ ABS, ನ್ಯಾವಿಗೇಷನ್ ಮತ್ತು ಬ್ಲೂಟೂತ್ ಸಂಪರ್ಕದೊಂದಿಗೆ ದೊಡ್ಡ ಮತ್ತು ವೃತ್ತಾಕಾರದ TFT ಸ್ಕ್ರೀನ್ ಅನ್ನು ಹೊಂದಿವೆ.

More from DriveSpark

Article Published On: Friday, September 27, 2024, 17:45 [IST]
English summary
Royal enfield himalayan 450 launched with tubeless tyres details
Read more on royal enfield india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+