ಹೆಚ್ಚು ಆಕರ್ಷಕವಾದ ರಾಯಲ್ ಎನ್‌ಫೀಲ್ಡ್ ಹಂಟರ್: ಖರೀದಿಗೆ ಮುಗಿಬೀಳಲು ರೆಡಿಯಾದ ಫ್ಯಾನ್ಸ್
ಭಾರತೀಯ ಮಾರುಕಟ್ಟೆಯಲ್ಲಿ ರಾಯಲ್ ಎನ್‌ಫೀಲ್ಡ್ ಬೈಕ್‌ಗಳೆಂದರೆ ಎಲ್ಲರಿಗೂ ಅಚ್ಚುಮೆಚ್ಚು. ಅದರಲ್ಲಿ ಕಳೆದ ಕೆಲ ವರ್ಷಗಳ ಹಿಂದೆ ಮಾರುಕಟ್ಟೆಗೆ ಬಂದ ರಾಯಲ್ ಎನ್‌ಫೀಲ್ಡ್ ಹಂಟರ್ 350, ರಾಯಲ್ ಎನ್‌ಫೀಲ್ಡ್‌ನ ಪ್ರಸಿದ್ದ ಮಾಡೆಲ್‌ಗಳಲ್ಲಿ ಒಂದು. ಇತ್ತೀಚೆಗೆ ಭಾರತೀಯ ಮಾರುಕಟ್ಟೆಯಲ್ಲಿ ರಾಯಲ್ ಎನ್‌ಫೀಲ್ಡ್ ಅಭಿಮಾನಿಗಳು ಹೆಚ್ಚಾಗಲು ಈ ಬೈಕ್ ಸಹ ಕಾರಣ.
ಇದೀಗ ಹಂಟರ್ 350 ಬಗ್ಗೆ ಹೊಸ ಸುದ್ದಿಯೊಂದು ಬಂದಿದ್ದು, ಇದು ಹಂಟರ್ ಬೈಕ್ ಅನ್ನು ಕೊಳ್ಳಬೇಕು ಎಂದುಕೊಂಡವರ ಮುಖದಲ್ಲಿ ಮಂದಹಾಸ ಮೂಡಿಸುವುದಂತೂ ಖಂಡಿತ. ಹೌದು, ಈಗಾಗಲೇ ಹಲವಾರು ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿರುವ ಹಂಟರ್ 350, ಇದೀಗ ಮತ್ತೆ ಹೊಸ ಎರಡು ಬಣ್ಣಗಳ ಆಯ್ಕೆಯನ್ನು ಪಡೆದುಕೊಳ್ಳುತ್ತಿದೆ. ಇದರಿಂದ ಹಂಟರ್ 350 ಕೊಳ್ಳುವವರಿಗೆ ಮತ್ತೆರಡು ಹೊಸ ಬಣ್ಣಗಳ ಆಯ್ಕೆ ಲಭ್ಯವಿರಲಿದೆ.

ರಾಯಲ್ ಎನ್‌ಫೀಲ್ಡ್, ಹಂಟರ್ 350ಗೆ ನೀಡಲಾಗಿರುವ ಹೊಸ ಬಣ್ಣವನ್ನು ಡಾಪರ್ ಓ ಮತ್ತು ಡಾಪರ್ ಜಿ ಎಂದು ಹೆಸರಿಸಿದ್ದಾರೆ. ಈ ಬಣ್ಣದ ಒ ಮತ್ತು ಜಿ ಅಕ್ಷರಗಳು ಆರೆಂಜ್ ಮತ್ತು ಹಸಿರು ಬಣ್ಣವನ್ನು ಸೂಚಿಸುತ್ತದೆ. ಅಂದರೆ ಹಂಟರ್ ಇನ್ನು ಮುಂದೆ ಹಸಿರು ಮತ್ತು ಆರೆಂಜ್ ಬಣ್ಣದ ಆಯ್ಕೆಯಲ್ಲೂ ಲಭ್ಯವಾಗಲಿದೆ.
ಇನ್ನು ಹೊಸ ಡಾಪರ್ ಓ ಮತ್ತು ಡಾಪರ್ ಜಿ ಎರಡೂ ಬಣ್ಣದ ಹಂಟರ್ ಬೆಲೆ ಸುಮಾರು 1.7 ಲಕ್ಷ ಎಕ್ಸ್ ಶೋ ರೂಮ್ ನಿಂದ ಆರಂಭವಾಗಲಿದೆ. ಹಂಟರ್ 350 ಬೈಕ್‌ನಲ್ಲಿ ಕೇವಲ ಬಣ್ಣವಷ್ಟೇ ಬದಲಾಗಲಿದ್ದು, ಉಳಿದ ಸಂಗತಿಗಳು ಹಾಗೆಯೇ ಇರಲಿದೆ ಎಂದು ತಿಳಿದು ಬಂದಿದೆ. ಈ ಮೇಲೆ ತಿಳಿಸಿದಂತೆ ಅತಿ ಹೆಚ್ಚು ಮಾರಾಟವಾಗುವ ಬೈಕ್‌ಗಳಲ್ಲಿ ಹಂಟರ್ ಎರಡನೇ ಸ್ಥಾನದಲ್ಲಿ ಇದ್ದು, ಕ್ಲಾಸಿಕ್ 350 ಅಗ್ರಸ್ಥಾನದಲ್ಲಿ ಇದೆ.

ಇನ್ನು ಈ ರಾಯಲ್ ಎನ್‌ಫೀಲ್ಡ್ 350 ಕುರಿತಾಗಿ ಹೇಳುವುದಾದರೆ, ಹಂಟರ್ 350 ಮೋಟಾರ್‌ಸೈಕಲ್ ಮಾದರಿಯು ರಾಯಲ್ ಎನ್‌ಫೀಲ್ಡ್‌ನ ಪ್ರಮುಖ ವಿನ್ಯಾಸ ಭಾಷೆಗಳನ್ನು ಅನುಸರಿಸಿದ್ದು, ಜೆ-ಪ್ಲಾಟ್‌ಫಾರ್ಮ್ ಅಡಿಯಲ್ಲಿ ನಿರ್ಮಾಣವಾಗಿರುವ ಪ್ರಮುಖ ಬೈಕ್ ಮಾದರಿಗಳೊಂದಿಗೆ ಇದು ಹಲವು ತಾಂತ್ರಿಕ ವಿಶೇಷತೆ ಮತ್ತು ವಿನ್ಯಾಸಗಳನ್ನು ಹಂಚಿಕೊಂಡಿರುವುದನ್ನು ನಾವು ಕಾಣಬಹುದಾಗಿದೆ.
ರಾಯಲ್ ಎನ್‌ಫೀಲ್ಡ್ ಹಂಟರ್ 350 ಎಂಜಿನ್ ಕುರಿತಾಗಿ ಹೆಳುವುದಾದರೆ ಈ ಬೈಕ್‌ನಲ್ಲಿ 349 ಸಿಸಿ, ಫ್ಯೂ-ಇಂಜೆಕ್ಟೆಡ್ ಜೆ ಸರಣಿ ಎಂಜಿನ್‌ನಿಂದ ಚಾಲಿತವಾಗಲಿದ್ದು, ಇದು ಸಿಂಗಲ್-ಸಿಲಿಂಡರ್ ಪವರ್‌ಪ್ಲಾಂಟ್ ಮೂಲಕ 6,100 ಆರ್‌ಪಿಎಂನಲ್ಲಿ 20.2 ಬಿಎಚ್‌ಪಿ ಮತ್ತು 27 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. 5-ಸ್ಪೀಡ್ ಗೇರ್ ಬಾಕ್ಸ್ ಇದ್ದು, ರಾಯಲ್ ಎನ್‌ಫೀಲ್ಡ್ ಹಂಟರ್ 350 ಮೋಟಾರ್‌ಸೈಕಲ್ ಪ್ರತಿ ಗಂಟೆಗೆ 114 ಕಿ.ಮೀ ವೇಗದ ಟಾಪ್ ಸ್ಪೀಡ್ ಅನ್ನು ಹೊಂದಿದೆ.

ಇದರ ಇನ್ನೊಂದು ಪ್ರಮುಖವಾದ ಅಂಶವೇನೆಂದರೆ ಹಂಟರ್ 350 ಇತರೆ J ಸರಣಿ ಬೈಕ್ ಮಾದರಿಗಳಿಗಿಂತಲೂ ಸಾಕಷ್ಟು ಹಗುರವಾಗಿದೆ. ಹಗುರವಾದ ಚಾಸಿಸ್ ಸೆಟಪ್ ಮತ್ತು ಹೊಸ ಅಲಾಯ್ ಮಿಶ್ರಲೋಹದ ಚಕ್ರಗಳೊಂದಿಗೆ 181 ಕಿಲೋಗ್ರಾಂ ತೂಗುತ್ತದೆ. ಇದು ಮಿಟಿಯೊರ್‌ಗಿಂತಲೂ 10 ಕೆ.ಜಿ ಹಗುರವಾಗಿದ್ದರೆ ಮತ್ತು ಕ್ಲಾಸಿಕ್ 350 ಗಿಂತಲೂ 14 ಕೆಜಿ ಯಷ್ಟು ಹಗುರವಾಗಿದೆ.
ಹಂಟರ್ 350 ಮಾದರಿಯಲ್ಲಿ ಮಿಟಿಯೊರ್ ಮತ್ತು ಕ್ಲಾಸಿಕ್ 350 ಮಾದರಿಯಲ್ಲಿ ನೀಡಲಾಗಿರುವ ಎಂಜಿನ್ ಅನ್ನು ನೀಡಲಾಗಿದ್ದರೂ ವಿಶಿಷ್ಟವಾದ ಸವಾರಿ ಅನುಭವಕ್ಕಾಗಿ ಇಗ್ನಿಷನ್ ಮತ್ತು ಇಂಧನ ಮ್ಯಾಪಿಂಗ್ ಅನ್ನು ಟ್ಯೂನ್ ಮಾಡುವ ಮೂಲಕ ಉತ್ತಮಗೊಳಿಸಲಾಗಿದೆ. ಈ ಬೈಕ್ ಇತರ ರಾಯಲ್ ಎನ್‌ಫೀಲ್ಡ್ ಬೈಕ್‌ಗಳಿಗಿಂತ ಹಗುರವಾಗಿರುವ ಕಾರಣ ಮಹಿಳಾ ರೈಡರ್‌ಗಳು ಸಹ ಈ ಬೈಕ್‌ಗೆ ಹೆಚ್ಚಿನ ಮನ್ನಣೆ ನೀಡುತ್ತಿದ್ದಾರೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








