ಇದ್ದಕ್ಕಿದ್ದಂತೆ ರಾಯಲ್ ಎನ್‌ಫೀಲ್ಡ್ ಬೈಕ್‌ಗಳ ಮಾರಾಟದಲ್ಲಿ ಇಳಿಕೆ: ಕಾರಣವೇನು?

ಯುವಕರಿಗೆ ನಿಮ್ಮ ಮೆಚ್ಚಿನ ಬೈಕ್ ಯಾವುದೆಂದು ಕೇಳಿದರೆ ಹೆಚ್ಚಿನವರ ಉತ್ತರ ರಾಯಲ್ ಎನ್‌ಫೀಲ್ಡ್ (Royal Enfield) ಎಂದು. ಅಷ್ಟರಮಟ್ಟಿಗೆ ಈ ಮೋಟಾರ್‌ಸೈಕ ಬ್ರ್ಯಾಂಡ್ ಯುವ ಜನರನ್ನು ಮನಸ್ಸನ್ನು ಗೆದ್ದಿದೆ. ಉತ್ತಮ ವಿನ್ಯಾಸವನ್ನು ಹೊಂದಿರುವುದರಿಂದ ಬಹುತೇಕ ನವತರುಣರು ಮುಗಿಬಿದ್ದು ಖರೀದಿಸುತ್ತಿದ್ದಾರೆ. ಅಲ್ಲದೇ ರಾಯಲ್ ಎನ್‌ಫೀಲ್ಡ್ ಭಾರತೀಯ ಮಾರುಕಟ್ಟೆಯಲ್ಲಿ ಜನಪ್ರಿಯ ಪ್ರೀಮಿಯಂ ಮೋಟಾರ್‌ಸೈಕಲ್ ಬ್ರ್ಯಾಂಡ್ ಆಗಿದೆ. ಈ ಬ್ರ್ಯಾಂಡ್ 2024ರ ಮೇ ತಿಂಗಳಿನ ದ್ವಿಚಕ್ರ ವಾಹನ ಮಾರಾಟದ ವರದಿಯನ್ನು ಬಹಿರಂಗಪಡಿಸಿದೆ. ಕಳೆದ ತಿಂಗಳಿನಲ್ಲಿ ರಾಯಲ್ ಎನ್‌ಫೀಲ್ಡ್ ಕಂಪನಿಯು 71,010 ಯುನಿಟ್‌ಗಳನ್ನು ಮಾರಾಟ ಮಾಡಿತು.

202ರ ಮೇ ತಿಂಗಳಿನಲ್ಲಿ ರಾಯಲ್ ಎನ್‌ಫೀಲ್ಡ್ ಕಂಪನಿಯು 77,461 ಯುನಿಟ್‌ಗಳನ್ನು ಮಾರಾಟ ಮಾಡಲಾಗಿತ್ತು. ಇದನ್ನು ಕಳೆದ ತಿಂಗಳ ಮಾರಾಟಕ್ಕೆ ಹೋಲಿಸಿದರೆ ಶೇ.8 ರಷ್ಟು ಇಳಿಕೆಯಾಗಿದೆ. ಅದೇ ಅವಧಿಯಲ್ಲಿ ರಫ್ತುಗಳು ಹೆಚ್ಚಾದಾಗಲೂ ಕಂಪನಿಯ ದೇಶೀಯ ಮಾರಾಟವು ಕುಸಿತದ ಪ್ರಮಾಣವನ್ನು ದಾಖಲಿಸಿದೆ. ಎಂದಿನಂತೆ ಸಬ್ 350 cc ರಾಯಲ್ ಎನ್‌ಫೀಲ್ಡ್ ಮೋಟಾರ್‌ಸೈಕಲ್‌ಗಳು ಬ್ರ್ಯಾಂಡ್‌ನ ಮಾರಾಟಕ್ಕೆ ಅಗ್ರ ಕೊಡುಗೆ ನೀಡುತ್ತಿವೆ.

Royal Enfield

ಈ ವರ್ಷದ ಮೇ ತಿಂಗಳಿನಲ್ಲಿ 350 ಸಿಸಿಗಿಂತ ಕಡಿಮೆಯಿರುವ ಮಾದರಿಗಳ ಮಾರಾಟವು ಶೇಕಡಾ 13 ರಷ್ಟು ಕುಸಿದು 59,852 ಯುನಿಟ್‌ಗಳಿಗೆ ತಲುಪಿದೆ, ಆದರೆ 350 ಸಿಸಿಗಿಂತ ಹೆಚ್ಚಿನ ಎಂಜಿನ್ ಸಾಮರ್ಥ್ಯದ ಮೋಟಾರ್‌ಸೈಕಲ್ ಮಾರಾಟವು ಶೇಕಡಾ 32 ರಿಂದ 11,158 ಯುನಿಟ್‌ಗಳಿಗೆ ಏರಿಕೆಯಾಗಿದೆ. ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350, ಬುಲೆಟ್ 350, ಹಂಟರ್ 350 ಮತ್ತು ಮೆಟಿಯರ್ 350 ಅನ್ನು ಉಪ-350 ಸಿಸಿ ವಿಭಾಗದಲ್ಲಿ ಮಾರಾಟ ಮಾಡುತ್ತದೆ.

ರಾಯಲ್ ಎನ್‌ಫೀಲ್ಡ್ ಸ್ಕ್ರಾಮ್ 411, ಹಿಮಾಲಯನ್ 450, ಇಂಟರ್‌ಸೆಪ್ಟರ್ 650, ಕಾಂಟಿನೆಂಟಲ್ ಜಿಟಿ 650, ಸೂಪರ್ ಮೀಟಿಯರ್ 650 ಮತ್ತು ಶಾಟ್‌ಗನ್ 650 ಅದರ ಪ್ರೀಮಿಯಂ ಸರಣಿಯ ಮಾದರಿಗಳಾಗಿವೆ. ರಾಯಲ್ ಎನ್‌ಫೀಲ್ಡ್ ರಫ್ತುಗಳು ಮೇ ತಿಂಗಳಲ್ಲಿ 7,479 ಯುನಿಟ್‌ಗಳಷ್ಟಿದ್ದು, ಕಳೆದ ವರ್ಷ ಮೇ ತಿಂಗಳಲ್ಲಿ ಮಾರಾಟವಾದ 6,666 ಯುನಿಟ್‌ಗಳಿಗೆ ಹೋಲಿಸಿದರೆ ವರ್ಷದಿಂದ ವರ್ಷಕ್ಕೆ 12 ಶೇಕಡಾ ಬೆಳವಣಿಗೆಯನ್ನು ದಾಖಲಿಸಿದೆ.

Royal Enfield

2024ರ ಏಪ್ರಿಲ್ ಮತ್ತು ಮೇ ನಡುವೆ 1,52,880 ಯುನಿಟ್‌ಗಳನ್ನು ಮಾರಾಟ ಮಾಡುವುದರೊಂದಿಗೆ ರಾಯಲ್ ಎನ್‌ಫೀಲ್ಡ್ ವರ್ಷದಿಂದ ದಿನಾಂಕದ ಮಾರಾಟವು ಶೇಕಡಾ 2 ರಷ್ಟು ಹೆಚ್ಚಾಗಿದೆ, ಕಳೆದ ಹಣಕಾಸು ವರ್ಷದ ಇದೇ ಅವಧಿಯಲ್ಲಿ 1,50,597 ಯುನಿಟ್‌ಗಳು ಮಾರಾಟವಾಗಿವೆ. ಕಳೆದ ವರ್ಷ ಇದೇ ಅವಧಿಯಲ್ಲಿ ಮಾರಾಟವಾಗಿದ್ದ 133,766 ಯುನಿಟ್‌ಗಳಿಗೆ ಹೋಲಿಸಿದರೆ 350 ಸಿಸಿಗಿಂತ ಕಡಿಮೆ ಬೈಕ್‌ಗಳ ಮಾರಾಟವು 1,32,718 ಯುನಿಟ್‌ಗಳಿಗೆ ಇಳಿದಿದೆ.

ಈ ಹಣಕಾಸು ವರ್ಷದಲ್ಲಿ ಏಪ್ರಿಲ್ ಮತ್ತು ಮೇ ನಡುವಿನ ರಫ್ತು 14,311 ರಷ್ಟಿದೆ, FY2024 ರಲ್ಲಿ ಅದೇ ಅವಧಿಯಲ್ಲಿ ಮಾರಾಟವಾದ 10,921 ಯುನಿಟ್‌ಗಳಿಗಿಂತ 31 ಶೇಕಡಾ ಹೆಚ್ಚಳವಾಗಿದೆ. ಇನ್ನು ಈ ರಾಯಲ್ ಎನ್‌ಫೀಲ್ಡ್ ಕಂಪನಿಯು ತನ್ನಪೋರ್ಟ್‌ಫೋಲಿಯೊವನ್ನು ವಿಸ್ತರಿಸಲು ಮತ್ತು ಹೆಚ್ಚಿನ ಗ್ರಾಹಕರನ್ನು ಸೆಳೆಯಲು ಅತ್ಯುತ್ತಮ ಪ್ರಯತ್ನವನ್ನು ಮಾಡುತ್ತಿದೆ. ಇದಕ್ಕಾಗಿ ರಾಯಲ್ ಎನ್‌ಫೀಲ್ಡ್ ಹೊಸ ಹಿಮಾಲಯನ್ ಬೈಕಿನ ನೇಕೆಡ್ ಆವೃತ್ತಿಯನ್ನು ಭಾರತದಲ್ಲಿ ಅಭಿವೃದ್ಧಿಪಡಿಸುತ್ತಿದೆ.

Royal Enfield

ಮುಂಬರುವ ರಾಯಲ್ ಎನ್‌ಫೀಲ್ಡ್ ಹಿಮಾಲಯನ್ ಮೂಲದ ನೇಕೆಡ್ ಬೈಕಿಗೆ ಗೆರಿಲ್ಲಾ 450 ಎಂಬ ಹೆಸರನ್ನು ನೀಡಬಹುದು. ಈ ಹೊಸ ಬೈಕ್ ಅನ್ನು ಚೆನ್ನೈನಲ್ಲಿ ಟೆಸ್ಟ್ ಮಾಡಲಾಗುತ್ತಿದೆ. ರಾಯಲ್ ಎನ್‌ಫೀಲ್ಡ್ ಕಂಪನಿಯು ಈ ಹೊಸ ಬೈಕ್ ಹೆಚ್ಚಿನ ಗ್ರಾಹಕರನ್ನು ಸೆಳೆಯಲು ಮತ್ತು ಮಾರಾಟದ ಸಂಖ್ಯೆಯನ್ನು ಹೆಚ್ಚಿಸಲು ಈ ವರ್ಷದ ಹಬ್ಬದ ಸೀಸನ್ ನಲ್ಲಿ ಬಿಡುಗಡೆಗೊಳಿಸಬಹುದು ಎಂದು ನಿರೀಕ್ಷಿಸುತ್ತೇವೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Friday, June 21, 2024, 16:58 [IST]
English summary
Royal enfield sales decline by 8 percent in may 2024
Read more on royal enfield india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+