ಯೂರೋಪ್‌ಗೆ ಲಗ್ಗೆಯಿಟ್ಟ ಈ ಮೇಡ್-ಇನ್-ಇಂಡಿಯಾ ಬೈಕ್: 650ಸಿಸಿ, ಸಖತ್ ಪವರ್‌ಫುಲ್
ಇತ್ತೀಚೆಗಷ್ಟೇ ರಾಯಲ್ ಎನ್‌ಫೀಲ್ಡ್ ಆಕರ್ಷಕವಾದ ಬೈಕ್ ಒಂದನ್ನು ಬಿಡುಗಡೆ ಮಾಡಿತ್ತು. ರಾಯಲ್ ಎನ್‌ಫೀಲ್ಡ್ ಶಾಟ್‌ಗನ್ ೬೫೦ ಎಂಬ ಪ್ಯಾರಲಲ್ ಟ್ವಿನ್ ಸಿಲಿಂಡರ್ ಎಂಜಿನ್ ಬೆಂಬಲವುಳ್ಳ ಬೈಕ್ ಒಂದನ್ನು ಬಿಡುಗಡೆ ಮಾಡಿತ್ತು. ಅತ್ಯಾಕರ್ಷಕ ನೋಟ ಮತ್ತು ಚಿರತೆಯ ವೇಗ ಪಡೆದಿರುವ ಈ ಬೈಕ್ ಸೀಮಿತ ಸಂಖ್ಯೆಯಲ್ಲಿ ಮಾತ್ರ ನಿರ್ಮಾಣ ಮಾಡಲಾಗಿತ್ತು.
ಇದೀಗ ಈ ಬೈಕ್ ಮತ್ತೊಮ್ಮೆ ಸುದ್ದಿಯಲ್ಲಿದೆ. ಹೊಸ ರಾಯಲ್ ಎನ್‌ಫೀಲ್ಡ್ ಶಾಟ್‌ಗನ್ 650 ಯನ್ನು ಕಂಪನಿಯು ಯೂರೋಪ್‌ನಲ್ಲಿ ಲಾಂಚ್ ಮಾಡಿದೆ. ಮೇಡ್ ಇನ್ ಇಂಡಿಯಾ ಬೈಕ್ ಅನ್ನು ಅಲ್ಲಿ ಲಾಂಚ್ ಮಾಡಲಾಗುತ್ತಿದ್ದು, ಯೂರೋಪಿಗರಿಂದ ಭಾರೀ ಪ್ರತಿಕ್ರಿಯೆ ವ್ಯಕ್ತವಾಗುವ ನಿರೀಕ್ಷೆಯಿದೆ. ಇದೀಗ ಈ ಬೈಕ್ ಪ್ಯಾರಿಸ್, ಲಂಡನ್, ಮಾಡ್ರಿಡ್,ಬರ್ಲಿನ್ ಮತ್ತು ಮಿಲಾನ್‌ನಲ್ಲಿ ಲಭ್ಯವಾಗಲಿದೆ.

ಅಂದರೆ ಇನ್ನು ಮುಂದೆ ಹೊಸ ರಾಯಲ್ ಎನ್‌ಫೀಲ್ಡ್ ಶಾಟ್‌ಗನ್ 650 (Royal Enfield Shotgun 650) ಫ್ರಾನ್ಸ್, ಯುನೈಟೆಡ್ ಕಿಂಗ್‌ಡಮ್, ಸ್ಪೇನ್, ಜರ್ಮನಿ ಮತ್ತು ಮಿಲಾನ್‌ನಲ್ಲಿ ಲಭ್ಯವಾಗಲಿದ್ದು, ಯೂರೋಪಿಗರ ನೆಚ್ಚಿನ ಬೈಕ್ ಆಗಿರಲಿದೆ ಎಂದು ಭವಿಷ್ಯವಾಣಿಗಳು ಕೇಳಿ ಬರುತ್ತಿವೆ. ಬಣ್ಣಗಳು ಮತ್ತು ಫೀಚರ್‌ಗಳು ಭಾರತದಲ್ಲಿ ಲಭ್ಯವಾಗುವ ರೀತಿಯದ್ದೇ ಆಗಿರಲಿದೆ ಎಂದು ತಿಳಿದು ಬಂದಿದೆ.
ಇನ್ನು ಈ ಹೊಸ ಶಾಟ್‌ಗನ್ 650 ಬಗ್ಗೆ ನೋಡುವುದಾದರೆ, ಹೊಸ ರಾಯಲ್ ಎನ್‌ಫೀಲ್ಡ್ ಕಂಪನಿಯು ಶಾಟ್‌ಗನ್ 650 ಬೈಕ್ ಸೂಪರ್ ಮೀಟಿಯರ್ 650, ಇಂಟರ್‌ಸೆಪ್ಟರ್ 650 ಮತ್ತು ಕಾಂಟಿನೆಂಟಲ್ ಜಿಟಿ 650 ಅನ್ನು ಆಧಾರವಾಗಿರುವ RE 650-ಟ್ವಿನ್ ಪ್ಲಾಟ್‌ಫಾರ್ಮ್‌ನಲ್ಲಿ ನಿರ್ಮಿಸಲಾಗಿದೆ. ಇದು ಮೂಲತಃ SG650 ಕಾನ್ಸೆಪ್ಟ್‌ನ ಉತ್ಪಾದನಾ ಆವೃತ್ತಿಯಾಗಿದೆ, ಇದನ್ನು EICMA 2021 ನಲ್ಲಿ ಪ್ರದರ್ಶಿಸಲಾಯಿತು.

ಬೈಕ್ ಸೂಪರ್ ಮೀಟಿಯರ್‌ನಂತೆಯೇ ವೈಶಿಷ್ಟ್ಯಗಳನ್ನು ಹೊಂದಿದೆ. ಇನ್ನು ಈ ಬೈಕ್ ಎಲ್‌ಇಡಿ ಹೆಡ್‌ಲೈಟ್ ಮತ್ತು ಟ್ರಿಪ್ಪರ್ ನ್ಯಾವಿಗೇಷನ್ ಪಾಡ್ ಅನ್ನು ಒಳಗೊಂಡಿದೆ. ಗ್ರಾಹಕರು ಸಿಂಗಲ್ ಸೀಟರ್ ಅಥವಾ ಪಿಲಿಯನ್ ಸೀಟನ್ನು ಆಯ್ಕೆ ಮಾಡಬಹುದು. ಮೋಟಾರ್‌ಸೈಕಲ್ ಹೆಚ್ಚು ನೇರವಾದ ಸೀಟುಗಳೊಂದಿಗೆ ಫ್ಲಾಟರ್ ಹ್ಯಾಂಡಲ್‌ಬಾರ್ ಮತ್ತು ಹೆಚ್ಚು ಮಧ್ಯ-ಸೆಟ್ ಫುಟ್‌ಪೆಗ್‌ಗಳೊಂದಿಗೆ ಬರುತ್ತದೆ.
ಹೊಸ ರಾಯಲ್ ಎನ್‌ಫೀಲ್ಡ್ ಶಾಟ್‌ಗನ್ 650 ಬೈಕಿನಲ್ಲಿ 648cc, ಪ್ಯಾರಲಲ್ ಟ್ವಿನ್, 4-ಸ್ಟ್ರೋಕ್, SOHC, ಏರ್ ಕೂಲ್ಡ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 7250rpm ನಲ್ಲಿ 46.3hp ಮತ್ತು 5,650rpm ನಲ್ಲಿ 52.3Nm ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ನೊಂದಿಗೆ ಸ್ಪೀಡ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ. ಇನ್ನು ಈ ಬೈಕ್ 22 ಕಿ.ಮೀ ಮೈಲೇಜ್ ನೀಡುತ್ತದೆ.

ಹೊಸ ರಾಯಲ್ ಎನ್‌ಫೀಲ್ಡ್ ಕಂಪನಿಯು ಶಾಟ್‌ಗನ್ 650 ಬೈಕ್ ಸಸ್ಪೆಕ್ಷನ್ ಬಗ್ಗೆ ಹೇಳುವುದಾದರೆ, USD ಫ್ರಂಟ್ ಫೋರ್ಕ್‌ನೊಂದಿಗೆ 120mm ಟ್ರ್ಯಾವೆಲ್ ನೊಂದಿಗೆ ಮತ್ತು ಹಿಂಭಾಗದಲ್ಲಿ ಟ್ವಿನ್ ಶಾಕ್ ಅಬ್ಸಾರ್ಬರ್ ಅನ್ನು ಒಳಗೊಂಡಿದೆ. ಇನ್ನು ಹೊಸ ರಾಯಲ್ ಎನ್‌ಫೀಲ್ಡ್ ಶಾಟ್‌ಗನ್ 650 ರೈಡ್‌ಗಳು 18-ಇಂಚಿನ ಮುಂಭಾಗದ ಚಕ್ರ ಮತ್ತು 17-ಇಂಚಿನ ಹಿಂದಿನ ಚಕ್ರ ಕ್ರಮವಾಗಿ 100/90 ಮತ್ತು 150/70 ವಿಭಾಗದ ಟೈರ್‌ಗಳಲ್ಲಿ ಒಳಗೊಂಡಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








