Stealbird: ಅಗ್ಗದ ಬೆಲೆಗೆ ಗರಿಷ್ಟ ಸುರಕ್ಷತೆಯ ಸ್ಟೀಲ್ ಬರ್ಡ್ ಗಣೇಷನ ಹೆಲ್ಮೆಟ್ ಬಿಡುಗಡೆ
ಸ್ಟೀಲ್ ಬರ್ಡ್ ಹೈಟೆಕ್ ಇಂಡಿಯಾ, ಗಣೇಶ ಚತುರ್ಥಿಯ ಸಂದರ್ಭವಾಗಿ ಅತ್ಯಾಧುನಿಕ ಸುರಕ್ಷತೆ ಮತ್ತು ಡಿಸೈನ್‌ನೊಂದಿಗೆ ಹೊಸ ಎಸ್‌ಬಿಎಚ್ -34 ಗಣೇಶ ಆವೃತ್ತಿಯ ಹೆಲ್ಮೆಟ್ (SBH-34 Ganesh edition helmet) ಅನ್ನು ಪರಿಚಯಿಸಿದೆ. ಕಂಪನಿಯು ಎಸ್‌ಬಿಎಚ್ -34 ಗಣೇಶ ಆವೃತ್ತಿಯ ಹೆಲ್ಮೆಟ್ ಅನ್ನು 1,349 ರೂ.ಗಳಿಂದ ಪ್ರಾರಂಭವಾಗುವ ಸ್ಪರ್ಧಾತ್ಮಕ ಬೆಲೆಯಲ್ಲಿ ನೀಡುತ್ತಿದೆ. ಇದು ಸವಾರರಿಗೆ ಕೈಗೆಟುಕುವ ಮತ್ತು ಪ್ರೀಮಿಯಂ ಆಯ್ಕೆಯಾಗಿದೆ. ಹೆಲ್ಮೆಟ್ ಡಿಸೈನ್, ಸುರಕ್ಷತೆ, ಬಣ್ಣಗಳು ಸೇರಿದಂತೆ ಅದರ ಫೀಚರ್‌ಗಳ ಬಗ್ಗೆ ಇಲ್ಲಿ ತಿಳಿಯೋಣ.
ಸ್ಟೀಲ್ ಬರ್ಡ್ ಗಣೇಶ ಆವೃತ್ತಿಯ ಡಿಸೈನ್: ಹೆಲ್ಮೆಟ್ ಅನ್ನು ಸಂಪೂರ್ಣವಾಗಿ ಗಣೇಶನ ಚಿತ್ರಗಳೊಂದಿಗೆ ಡಿಸೈನ್ ಮಾಡಲಾಗಿದ್ದು, ಗ್ಲಾಸಿ ಮತ್ತು ಮ್ಯಾಟ್ ಫಿನಿಶ್ ಎರಡರಲ್ಲೂ ಬರುತ್ತದೆ. ಬ್ಲಾಕ್, ರೆಡ್, ಬ್ಲಾಕ್ ಬಣ್ಣದೊಂದಿಗೆ ಗೋಲ್ಡ್, ಬ್ಲಾಕ್ ಗ್ರೇ ಮತ್ತು ಬ್ಲಾಕ್ ಆರೆಂಜ್ ಬಣ್ಣದೊಂದಿಗೆ ಚಿಪ್ಪಿನ ಮೇಲೆ ಎಚ್ಚರಿಕೆಯಿಂದ ಕೆತ್ತಲಾದ ಗಣೇಶನ ಸಂಕೀರ್ಣ ಗುರುತುಗಳನ್ನು ನೀಡಲಾಗಿದೆ.

ಹೆಲ್ಮೆಟ್ ಸುರಕ್ಷತೆ: ವರ್ಧಿತ ರಕ್ಷಣೆ ಮತ್ತು ಆರಾಮಕ್ಕಾಗಿ ಉತ್ತಮ ಗುಣಮಟ್ಟದ ಥರ್ಮೋಪ್ಲಾಸ್ಟಿಕ್ ಶೆಲ್‌ನೊಂದಿಗೆ ಹೆಲ್ಮೆಟ್ ಅನ್ನು ವಿನ್ಯಾಸಗೊಳಿಸಲಾಗಿದೆ. ಅಲ್ಲದೇ ಪೆಟ್ಟು ಬಿದ್ದಾಗ ಸವಾರನ ತಲೆಗೆ ಹಾನಿಯಾಗದಿರಲು ಗರಿಷ್ಠ ಪರಿಣಾಮ ಹೆಲ್ಮೆಟ್ ಮಾತ್ರ ಹೀರಿಕೊಳ್ಳುವಂತೆ ಹೆಚ್ಚಿನ ಸಾಂದ್ರತೆಯ ಇಪಿಎಸ್ ಅನ್ನು ನೀಡಿರುವುದಾಗಿ ಕಂಪನಿ ತಿಳಿಸಿದೆ.
ಇದು ಸವಾರನ ಸುರಕ್ಷತೆಯನ್ನು ಖಚಿತಪಡಿಸುತ್ತದೆ. ಇದರ ಪಾಲಿಕಾರ್ಬೊನೇಟ್ (ಪಿಸಿ) ಆಂಟಿ-ಸ್ಕ್ರ್ಯಾಚ್ ಲೇಪಿತ ವೈಸರ್ ಸ್ಪಷ್ಟ ನೋಟವನ್ನು ಒದಗಿಸುತ್ತದೆ. ಇದರ ಹಿಂಭಾಗದಲ್ಲಿರುವ ರಿಫ್ಲೆಕ್ಟರ್ ಆಕರ್ಷಕ ಒಳಾಂಗಣದೊಂದಿಗೆ ಸವಾರರಿಗೆ ಗೋಚರತೆಯನ್ನು ಹೆಚ್ಚಿಸುತ್ತದೆ. ಒಟ್ಟಾರೆ ರಸ್ತೆ ಸುರಕ್ಷತೆ ಮತ್ತು ಆರಾಮವನ್ನು ಉತ್ತೇಜಿಸುತ್ತದೆ ಎಂದು ಸ್ಟೀಲ್ ಬರ್ಡ್ ತಿಳಿಸಿದೆ.

ಎಸ್‌ಬಿಎಚ್-34 ಗಣೇಶ ಆವೃತ್ತಿಯು ತ್ವರಿತ-ಬಿಡುಗಡೆಯ ಬಕಲ್ ಅನ್ನು ಸಹ ಒಳಗೊಂಡಿದೆ. ಇದರ ಒಳಗಿನ ಸನ್ ಶೀಲ್ಡ್ ವಿಭಿನ್ನ ಬೆಳಕಿನ ಪರಿಸ್ಥಿತಿಗಳಿಗೆ ಹೊಂದಿಕೊಳ್ಳುತ್ತದೆ. ಮಧ್ಯಮ (580 ಎಂಎಂ) ಮತ್ತು ದೊಡ್ಡ (600 ಎಂಎಂ) ಗಾತ್ರಗಳಲ್ಲಿ ಲಭ್ಯವಿರುವ ಈ ಹೆಲ್ಮೆಟ್ ಎಲ್ಲಾ ರೀತಿಯ ಸವಾರರ ಅವಶ್ಯಕತೆಗಳನ್ನು ಪೂರೈಸುತ್ತದೆ. ಎಲ್ಲರಿಗೂ ಅನುಕೂಲಕರ ಮತ್ತು ಸುರಕ್ಷಿತವಾಗಿ ಫಿಟ್ ಆಗುತ್ತದೆ.
ಸ್ಟೀಲ್ ಬರ್ಡ್‌ನ ವ್ಯವಸ್ಥಾಪಕ ನಿರ್ದೇಶಕ ರಾಜೀವ್ ಕಪೂರ್ ಮಾತನಾಡಿ, "ಈ ಹೆಲ್ಮೆಟ್ ಅದರ ಕ್ರಿಯಾತ್ಮಕ ಉದ್ದೇಶವನ್ನು ಮೀರಿದೆ. ಇದು ಭಾರತದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯ ಬಗ್ಗೆ ನಮ್ಮ ಭಕ್ತಿಯನ್ನು ಸಂಕೇತಿಸುತ್ತದೆ. ಗಣೇಶನ ಮುದ್ರೆಗಳು ಬುದ್ಧಿವಂತಿಕೆ ಮತ್ತು ರಕ್ಷಣೆಯ ಮಹತ್ವವನ್ನು ಪ್ರತಿಬಿಂಬಿಸುತ್ತವೆ ಎಂದರು.

ಗಣೇಶ ಆವೃತ್ತಿಯ ಎಸ್‌ಬಿಎಚ್ -34 ನಮ್ಮ ಪೋರ್ಟ್ ಫೋಲಿಯೊದ ಶಾಶ್ವತ ಭಾಗವಾಗಿ ಉಳಿಯಲಿದೆ. ಸವಾರರಿಗೆ ರಸ್ತೆಯಲ್ಲಿ ಅವರ ಸುರಕ್ಷತೆಯನ್ನು ಹೆಚ್ಚಿಸುವ ಜೊತೆಗೆ ಹಬ್ಬವನ್ನು ಆಚರಿಸಲು ಅರ್ಥಪೂರ್ಣ ಮಾರ್ಗವಾಗಿದೆ. ಅಲ್ಲದೇ ರಸ್ತೆಯಲ್ಲಿ ಗಣೇಶನ ಹೆಲ್ಮೆಟ್ ಧರಿಸಿ ಸವಾರಿ ಮಾಡುವುದು ನಮ್ಮ ಸಂಸ್ಕೃತಿಯನ್ನು ಎತ್ತಿತೋರುವಂತಿರುತ್ತದೆ ಎಂದರು.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications