ನಿಮ್ಮ ತಲೆಗೆ ಶ್ರೀರಾಮನ ರಕ್ಷೆ: 'ಜೈ ಶ್ರೀರಾಮ್' ವಿಶೇಷ ಹೆಲ್ಮೆಟ್ ಬಿಡುಗಡೆ

ಅಯೋಧ್ಯಾ ರಾಮಮಂದಿರ (Ram Mandir) ಉದ್ಘಾಟನೆ ಕಾರ್ಯಕ್ರಮ ಸೋಮವಾರ ನೆರವೇರಿತು. ಮಧ್ಯಾಹ್ನ 12.30ಕ್ಕೆ ರಾಮಮಂದಿರದ ಪ್ರಾಣಪ್ರತಿಷ್ಠೆ (Pran Pratishtha) ಕಾರ್ಯಕ್ರಮವನ್ನು ಪೂರ್ಣಗೊಳಿಸಲಾಗಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಪ್ರಾಣಪ್ರತಿಷ್ಠೆ ವಿಧಾನವಿಧಾನ ನೆರವೇರಿಸಿದರು. ರಾಮಮಂದಿರದ ಬಾಗಿಲುಗಳು ಮಂಗಳವಾರ ಸಾರ್ವಜನಿಕರಿಗೆ ತೆರೆದುಕೊಳ್ಳುತ್ತಿದ್ದಂತೆ ಭಕ್ತರ ಪ್ರವಾಹವೇ ಹರಿದು ಬರುತ್ತಿದೆ.

ರಾಮಮಂದಿರ ನಿರ್ಮಾಣಕ್ಕಾಗಿ ದೇಶದ ಮೂಲೆ ಮೂಲೆಯಿಂದಲೂ ಭಕ್ತರು ಕಾಣಿಕೆ ಅರ್ಪಿಸಿದ್ದಾರೆ. ಸೋಮವಾರ ಇಡೀ ದೇಶಕ್ಕೆ ದೇಶವೇ ಕೇಸರೀಮಯವಾಗಿತ್ತು. ರಾಮಮಂದಿರ ಬಹಳಷ್ಟು ಭಾರತೀಯರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಅಯೋಧ್ಯೆಯಲ್ಲಿ ಭವ್ಯವಾಗಿ ನಿರ್ಮಾಣಗೊಂಡಿರುವ ರಾಮನ ದೇಗುಲಕ್ಕೆ ಹೋಗಿ ಬಾಲರಾಮನನ್ನು ಕಣ್ತುಂಬಿಸಿಕೊಳ್ಳಬೇಕೆಂದು ಹಪಹಪಿಸುತ್ತಿರುವವರ ಸಂಖ್ಯೆ ಬಹಳ ದೊಡ್ಡದಿದೆ. ಪ್ರತಿದಿನ ಲಕ್ಷಾಂತರ ಭಕ್ತರು ದರ್ಶನ ಪಡೆಯುತ್ತಿದ್ದಾರೆ.

Jai Shree Ram Helmet

ಅಯೋಧ್ಯೆಯ ಐತಿಹಾಸಿಕ ರಾಮಮಂದಿರ ಪ್ರಾಣ ಪ್ರತಿಷ್ಠಾ ಸಮಾರಂಭದ ಅಂಗವಾಗಿ ದೇಶದ ಪ್ರಮುಖ ಹೆಲ್ಮೆಟ್ (Helmet) ತಯಾರಕ ಸ್ಟೀಲ್‌ಬರ್ಡ್ ಹೈಟೆಕ್ ಇಂಡಿಯಾ ಲಿಮಿಟೆಡ್ ಜೈ ಶ್ರೀ ರಾಮ್ ಎಡಿಷನ್ (Jai Shree Ram Edition) ಎಸ್‌ಬಿಹೆಚ್-34 ಎಂಬ ಮಾದರಿಯನ್ನು ಬಿಡುಗಡೆ ಮಾಡಿದೆ. ರಾಮಮಂದಿರದ ಪ್ರಾಣಪ್ರತಿಷ್ಠೆ ಕಾರ್ಯಕ್ರಮ ಮತ್ತು ಸಾಂಸ್ಕೃತಿಕ ಮಹತ್ವವನ್ನು ಗಮನದಲ್ಲಿಟ್ಟುಕೊಂಡು ಈ ವಿಶೇಷ ಆವೃತ್ತಿಯ ಹೆಲ್ಮೆಟ್ ಅನ್ನು ವಿನ್ಯಾಸಗೊಳಿಸಲಾಗಿದೆ.

ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಆಧ್ಯಾತ್ಮಿಕತೆಯನ್ನು ಮಿಶ್ರಣ ಮಾಡುವ ಮೂಲಕ ಪ್ರಾಣಪ್ರತಿಷ್ಠೆ ಕಾರ್ಯಕ್ರಮದ ಸಾಂಸ್ಕೃತಿಕ ಮಹತ್ವವನ್ನು ಸಾರುವಂತಿದೆ. ಈ ಹೆಲ್ಮೆಟ್ ಕೇವಲ ಉತ್ಪನ್ನವಲ್ಲ, ಇದು ನಮ್ಮ ಸಾಂಸ್ಕೃತಿಕ ನೀತಿಯ ಸಾಕಾರವಾಗಿದೆ ಎಂದು ಸ್ಟೀಲ್‌ಬರ್ಡ್ ವ್ಯವಸ್ಥಾಪಕ ನಿರ್ದೇಶಕ ರಾಜೀವ್ ಕಪೂರ್ ಹೆಲ್ಮೆಟ್ ಅನ್ನು ಬಿಡುಗಡೆ ಮಾಡುವಾಗ ಹೇಳಿದ್ದಾರೆ.

Jai Shree Ram Helmet

ಈ ಹೆಲ್ಮೆಟ್ ಮೇಲೆ ಭಗವಾನ್ ರಾಮ ಮತ್ತು ಅಯೋಧ್ಯೆಯ ಚಿತ್ರಗಳು ಆಕರ್ಷಕವಾಗಿದೆ. ಜೈ ಶ್ರೀ ರಾಮ್ ಆವೃತ್ತಿ SBH-34 ಸ್ಟೀಲ್ಬರ್ಡ್ ಉತ್ಪನ್ನಗಳ ಸಾಲಿನಲ್ಲಿ ಶಾಶ್ವತವಾಗಿ ಉಳಿಯುತ್ತದೆ ಎಂದು ಅವರು ಹೇಳಿದರು. ಜೈ ಶ್ರೀ ರಾಮ್ ಆವೃತ್ತಿಯ SBH-34 ವಿಶೇಷ ಆವೃತ್ತಿಯ ಹೆಲ್ಮೆಟ್‌ಗಳು ಸಂಪ್ರದಾಯ, ಸುರಕ್ಷತೆ ಮತ್ತು ಶೈಲಿಯ ಮಿಶ್ರಣವನ್ನು ಬಯಸುವ ಗ್ರಾಹಕರಿಗೆ ಉತ್ತಮ ಆಯ್ಕೆಯಾಗಿದೆ ಎಂದು ಕಂಪನಿ ಹೇಳಿದೆ.

ಈ ಹೆಲ್ಮೆಟ್ ಕೇಸರಿ ಮತ್ತು ಕಪ್ಪು ಬಣ್ಣದ ಮಿಶ್ರಣವನ್ನು ಹೊಂದಿದೆ. ಆರಾಮ ಮತ್ತು ರಕ್ಷಣೆಗಾಗಿ ಥರ್ಮೋಪ್ಲಾಸ್ಟಿಕ್ ಶೆಲ್‌ನೊಂದಿಗೆ ಜೈ ಶ್ರೀ ರಾಮ್ ಆವೃತ್ತಿ SBH-34 ಹೆಲ್ಮೆಟ್ ಅನ್ನು ನಿರ್ಮಿಸಲಾಗಿದೆ ಎಂದು ಸ್ಟೀಲ್‌ಬರ್ಡ್ ಹೇಳಿಕೊಂಡಿದೆ. ಇನ್ನು ಆಪ್ಟಿಕಲ್ ಇಂಪ್ಯಾಕ್ಟ್ ಹೀರಿಕೊಳ್ಳುವಿಕೆಗಾಗಿ ಹೆಲ್ಮೆಟ್‌ನಲ್ಲಿ ಹೆಚ್ಚಿನ ಸಾಂದ್ರತೆಯ ಇಪಿಎಸ್ ಅನ್ನು ಸೇರಿಸುವುದು ಸಹ ಗಮನಾರ್ಹವಾಗಿದೆ.

Jai Shree Ram Helmet

ಇನ್ನು ಸ್ಕ್ರಾಚ್ ಲೇಪಿತ ವಿಸರ್ ಮತ್ತು ಹಿಂಭಾಗದ ಪ್ರತಿಫಲಕವು ಸ್ಪಷ್ಟತೆ, ಉತ್ತಮ ಗೋಚರತೆ ಮತ್ತು ಒಟ್ಟಾರೆ ರಸ್ತೆ ಸುರಕ್ಷತೆಯನ್ನು ಹೆಚ್ಚಿಸುವ ವೈಶಿಷ್ಟ್ಯಗಳಾಗಿವೆ. ಈ ಹೆಲ್ಮೆಟ್ ಸೂರ್ಯನ ಶಾಕದ ರಕ್ಷಣೆಯ ಕವಚವನ್ನು ಹೊಂದಿದ್ದು, ಸುರಕ್ಷತೆಯಲ್ಲಿ ರಾಜಿ ಮಾಡಿಕೊಳ್ಳದೆ ವಿವಿಧ ಬೆಳಕಿನ ಪರಿಸ್ಥಿತಿಗಳಿಗೆ ಹೊಂದಿಕೊಳ್ಳುವಂತೆ ತಯಾರಿಸಲಾಗಿದೆ. ಈ ಹೆಲ್ಮೆಟ್ ಮಾದರಿಯ ಮೀಡಿಯಂ 580 ಮಿಮೀ ಮತ್ತು ಲಾರ್ಜ್ 600 ಮಿಮೀ ಎಂಬ ವಿವಿಧ ಗಾತ್ರಗಳಲ್ಲಿ ಲಭ್ಯವಿದೆ.

ಈ ಮೂಲಕ ಬ್ರ್ಯಾಂಡ್ ವ್ಯಾಪಕ ಶ್ರೇಣಿಯ ಗ್ರಾಹಕರನ್ನು ಗುರಿಯಾಗಿಸಿಕೊಂಡಿದೆ. ಸ್ಟೀಲ್ ಬರ್ಡ್ SBH-34 ಜೈ ಶ್ರೀರಾಮ್ ಆವೃತ್ತಿಯು ರೂ.1349 ರ ಆರಂಭಿಕ ಬೆಲೆಯಲ್ಲಿ ಲಭ್ಯವಿದೆ. ಸ್ಟೀಲ್‌ಬರ್ಡ್ ಹೈಟೆಕ್ ಇಂಡಿಯಾ ಲಿಮಿಟೆಡ್ ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ರಾಮಮಂದಿರ ಪ್ರಾಣ ಪ್ರತಿಷ್ಠೆಯ ಶುಭ ದಿನದಂದು ವಿಶೇಷ ಆವೃತ್ತಿಯ ಹೆಲ್ಮೆಟ್ ಅನ್ನು ಬಿಡುಗಡೆ ಮಾಡುವ ಮೂಲಕ ತನ್ನ ಉತ್ಪನ್ನಗಳನ್ನು ಪ್ರಚಾರ ಮಾಡಲು ಉತ್ತಮ ಮಾರ್ಗವನ್ನು ಕಂಡುಕೊಂಡಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Wednesday, January 24, 2024, 14:59 [IST]
English summary
Steelbird jai shree ram edition helmet launched in india details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+