ಸುಜುಕಿ ಹಯಬುಸಾ 25ನೇ ಆನಿವರ್ಸರಿ ಎಡಿಷನ್ ಬಿಡುಗಡೆ: ಬೆಲೆ ಎಷ್ಟು?

ಜನಪ್ರಿಯ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಸುಜುಕಿ ಮೋಟಾರ್‌ಸೈಕಲ್ ಇಂಡಿಯಾವು ಹಯಬುಸಾ 25ನೇಆನಿವರ್ಸರಿ ಭಾಗವಾಗಿ ಎಡಿಷನ್ ಮಾದರಿಯನ್ನು ಬಿಡುಗಡೆಗೊಳಿಸಿದೆ. ಈ ಸುಜುಕಿ ಹಯಬುಸಾ 25ನೇ ಆನಿವರ್ಸರಿ ಎಡಿಷನ್ (Suzuki Hayabusa 25th Anniversary Edition) ಜಾಗತಿಕ ಪರಿಚಯದ ಒಂಬತ್ತು ತಿಂಗಳ ನಂತರ ಭಾರತಕ್ಕೆ ಬಂದಿದೆ.

ಸುಜುಕಿ ಹಯಬುಸಾ (Suzuki Hayabusa) 25ನೇ ಆನಿವರ್ಸರಿ ಎಡಿಷನ್ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.17.70 ಲಕ್ಷವಾಗಿದೆ. ಇದು ಕೇವಲ ಯಾವುದೇ ಹೊಸ ಬೈಕು ಅಲ್ಲ. ಇದು ಸುಜುಕಿ ಹಯಾಬುಸಾದ 25 ವರ್ಷಗಳ ಪ್ಯೂರೆಸಿದ ಗೌರವವಾಗಿದೆ. ಈ ಸುಜುಕಿ ಹಯಬುಸಾ ಅದರ ಸ್ಪೀಡ್ ಮತ್ತು ಪರ್ಫಾಮೆನ್ಸ್ಗೆ ಹೆಸರುವಾಸಿಯಾಗಿದೆ. ಈ ಹೊಸ ಮಾದರಿಗೆ ಸ್ಟ್ಯಾಂಡರ್ಡ್ ಮಾದರಿಗಿಂತ 80,000 ರೂ. ಹೆಚ್ಚು ಆಗಿದೆ.

Suzuki Hayabusa 25th Anniversary Edition

ಈ ಸುಜುಕಿ ಹಯಬುಸಾ 25ನೇ ಆನಿವರ್ಸರಿ ಎಡಿಷನ್ ಅನ್ನು ಪ್ರತ್ಯೇಕವಾಗಿ ಕಾಣಲು ಕ್ಯಾಚಿಂಗ್ ಅರೇಂಜ್ ಮತ್ತ್ ಬ್ಲ್ಯಾಕ್ ಡ್ಯುಯಲ್-ಟೋನ್ ಪೇಂಟ್ ಸ್ಕೀಮ್ ಅನ್ನು ಹೊಂದಿದೆ, ಡ್ರೈವ್ ಚೈನ್ ಅಡ್ಜಸ್ಟರ್ ರೋಟರ್ ಮತ್ತು ಫ್ರಂಟ್ ಬ್ರೇಕ್ ಡಿಸ್ಕ್‌ನ ಆಂತರಿಕ ಭಾಗದಲ್ಲಿ ಗೋಲ್ಡನ್ ಫಿನಿಶ್‌ನಿಂದ ಕೂಡಿದೆ. ಇನ್ನು ವಿಶಿಷ್ಟವಾದ 25ನೇ ಆನಿವರ್ಸರಿ ಲೋಗೋವು ಮಫ್ಲರ್ ಅನ್ನು ಅಲಂಕರಿಸುತ್ತದೆ ಮತ್ತು ಟ್ಯಾಂಕ್ ಹೊಸ 3D ಸುಜುಕಿ ಲೋಗೋವನ್ನು ಹೊಂದಿದೆ.

ಹೆಚ್ಚುವರಿಯಾಗಿ, ಇದು ಸಿಂಗಲ್-ಸೀಟ್ ಕೌಲಿಂಗ್‌ನೊಂದಿಗೆ ಬರುತ್ತದೆ, ಅದರ ವಿಶೇಷ ಆಕರ್ಷಣೆಯನ್ನು ಸೇರಿಸುತ್ತದೆ. ಈ ಬೈಕ್ ಫ್ಯೂಯಲ್ ಟ್ಯಾಂಕ್ ಅಡಿಯಲ್ಲಿ, ಹಯಬುಸಾ 25ನೇ ಆನಿವರ್ಸರಿ ಎಡಿಷನ್ ಅದರ ಸ್ಟ್ಯಾಂಡರ್ಡ್ ಪ್ರತಿರೂಪದಿಂದ ಬದಲಾಗದೆ ಉಳಿದಿದೆ. ಹಯಬುಸಾ ಬೈಕಿಗೆ ಸಖತ್ ಡಿಮ್ಯಾಂಡ್ ಪಡೆದುಕೊಂಡಿದೆ. ದೇಶೀಯ ಮಾರುಕಟ್ಟೆಯಲ್ಲಿ ಸೂಪರ್ ಬೈಕ್ ವಿಭಾಗದಲ್ಲಿ ಸುಜುಕಿ ಹಯಾಬುಸಾ ಮಾದರಿಯು ಹೊಸ ಸಂಚಲನವನ್ನು ಸೃಷ್ಟಿಸಿತು.

Suzuki Hayabusa 25th Anniversary Edition

ವಾಸ್ತವವಾಗಿ, ಮಾದರಿಯು 1,340cc, ಇನ್-ಲೈನ್ ನಾಲ್ಕು, ಇಂಧನ-ಇಂಜೆಕ್ಟೆಡ್, ಲಿಕ್ವಿಡ್-ಕೂಲ್ಡ್ DOHC ಎಂಜಿನ್‌ನಿಂದ ಚಾಲಿತವಾಗುವುದನ್ನು ಮುಂದುವರೆಸಿದೆ. ಈ ಎಂಜಿನ್ 187bhp ಮತ್ತು 150Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ ಮತ್ತು ಬೈ-ಡೈರೆಕ್ಷನಲ್ ಕ್ವಿಕ್‌ಶಿಫ್ಟರ್ ಅನ್ನು ಒಳಗೊಂಡಿರುವ 6-ಸ್ಪೀಡ್ ಟ್ರಾನ್ಸ್‌ಮಿಷನ್‌ನೊಂದಿಗೆ ಜೋಡಿಸಲಾಗಿದೆ, ಬೈಕ್‌ನ ಪೌರಾಣಿಕ ಕಾರ್ಯಕ್ಷಮತೆಯು ಹಾಗೇ ಉಳಿಯುತ್ತದೆ ಎಂದು ಖಚಿತಪಡಿಸುತ್ತದೆ.

ಸುಜುಕಿ ಹಯಬುಸಾ ಬೈಕಿನಲ್ಲಿ 1,340cc, ಇನ್-ಲೈನ್ ನಾಲ್ಕು, ಫ್ಯೂಯಲ್ ಇಂಜೆಕ್ಟೆಡ್, ಲಿಕ್ವಿಡ್-ಕೂಲ್ಡ್ DOHC ಎಂಜಿನ್‌ ಅನ್ನು ಹೊಂದಿದೆ. ಈ ಎಂಜಿನ್ 9,700 ಆರ್‌ಪಿಎಂನಲ್ಲಿ 187.7 ಬಿಹೆಚ್‌ಪಿ ಪವರ್ ಮತ್ತು 7,000 ಆರ್‌ಪಿಎಂನಲ್ಲಿ 150 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು 6-ಸ್ಪೀಡ್ ಗೇರ್‌ಬಾಕ್ಸ್‌ಗೆ ಸ್ಲಿಪ್ ಮತ್ತು ಅಸಿಸ್ಟ್ ಕ್ಲಚ್ ಮತ್ತು ಬೈ-ಡೈರಕ್ಷನಲ್ ಕ್ವಿಕ್‌ಶಿಫ್ಟರ್‌ನೊಂದಿಗೆ ಜೋಡಿಸಲಾಗಿದೆ.

Suzuki Hayabusa 25th Anniversary Edition

ಈ ಸೂಪರ್ ಬೈಕ್ ಹೆಚ್ಚು ಅಗ್ರೇಸಿವ್ ವಿನ್ಯಾಸದೊಂದಿಗೆ ಅಗ್ರೇಸಿವ್ ಲೈನ್ ಗಳು ಮತ್ತು ಹೊಸ ಫಾಸಿಕದೊಂದಿಗೆ ಆಕರ್ಷಕವಾಗಿದೆ. ಹಯಾಬುಸಾ ಸೂಪರ್ ಬೈಕ್ ಎಲ್ಇಡಿ ಲೈಟ್ ಗಳನ್ನು ಹೊಂದಿವೆ. ಇದು ಹೆಡ್ ಲ್ಯಾಂಪ್ ಮತ್ತು ಟೈಲ್ ಗಳನ್ನು ಒಳಗೊಂಡಿದೆ. ಮುಂಭಾಗದಲ್ಲಿ ಇಂಡಿಕೇಟರ್ ಸ್ಥಾನ ಲೈಟ್ ಗಳೊಂದಿಗೆ ಸಂಯೋಜಿಸಲಾಗಿದೆ, ಮುಂಭಾಗದ ಏರ್ ಟೆಕ್ ಹೊರಭಾಗದಲ್ಲಿ ಇರಿಸಲಾಗಿದ್ದು, ದೊಡ್ಡ ಡ್ಯುಯಲ್ ಕ್ರೋಮ್-ಲೇಪಿತ ಎಕ್ಸಾಸ್ಟ್ ಪೈಪ್ಸ್ ಅನ್ನು ಹೊಂದಿದೆ.

ಈ ಬೈಕಿನಲ್ಲಿ ಎಲೆಕ್ಟ್ರಾನಿಕ್ ರೈಡರ್ ಅಸಿಸ್ಟ್ ಅನ್ನು ಹೊಂದಿದ್ದು, ಇದರಲ್ಲಿ ಅನಲಾಗ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್‌ನಲ್ಲಿ ಹೊಸ ಟಿಎಫ್‌ಟಿ ಡಿಸ್ ಪ್ಲೇಯನ್ನು ಕೂಡ ನೀಡಲಾಗಿದೆ. ಇದು ಹೊಸ ಸ್ವಿಚ್‌ಗಿಯರ್ ಜೊತೆಗೆ ರೈಡರಿಗೆ ವಿವಿಧ ರೈಡರ್ ಅಸಿಸ್ಟ್ ಆಯ್ಕೆಗಳ ನಡುವೆ ನ್ಯಾವಿಗೇಟ್ ಅನ್ನು ಹೊಂದಿದೆ. ಇನ್ನು ಹೊಸ ಸುಜುಕಿ ಹಯಾಬುಸಾದಲ್ಲಿ ಕೆಲವು ಸ್ಟ್ಯಾಂಡರ್ಡ್ ಎಲೆಕ್ಟ್ರಾನಿಕ್ ಏಡ್ಸ್, ಮೂರು ಪವರ್ ಮೋಡ್‌ಗಳು, ಲಾಂಚ್ ಕಂಟ್ರೋಲ್ ಮತ್ತು ಕ್ರೂಸ್ ಕಂಟ್ರೋಲ್ ಕೂಡ ಹೊಂದಿವೆ.

Article Published On: Wednesday, April 17, 2024, 20:21 [IST]
English summary
Suzuki hayabusa 25th anniversary edition launched price details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+