ಭಾರತದಲ್ಲಿ 80 ಲಕ್ಷ ಸ್ಕೂಟರ್‌ ಮಾರಿದ ಜಪಾನ್‌ ಕಂಪನಿ: ವಿಶ್ವಗುರು ಭಾರತದಲ್ಲಿ ಎಲ್ಲವೂ ಸಾಧ್ಯ!

ಭಾರತದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪ್ರಮುಖ ದ್ವಿಚಕ್ರ ವಾಹನ ನಿರ್ಮಾಣ ಕಂಪನಿಯಲ್ಲಿ ಸುಜುಕಿ ಸಹ ಒಂದು. ಜಪಾನ್‌‌ ಕಂಪನಿಯಾಗಿದ್ದರೂ, ಭಾರತದಲ್ಲಿ ಸುಜುಕಿ ವಾಹನಗಳೆಂದರೆ ಅಚ್ಚು ಮೆಚ್ಚು. ಭಾರತೀಯ ಮಾರುಕಟ್ಟೆಯಲ್ಲಿ ಸುಜುಕಿಯು ಮಾರುತಿಯ ಜೊತೆಗೂಡಿ, ಮಾರುತಿ ಸುಜುಕಿ ಕಾರುಗಳನ್ನು ಮಾರಾಟ ಮಾಡುತ್ತಿರುವುದು ಗೊತ್ತೇ ಇದೆ.

ಇದೀಗ ಸುಜುಕಿ ಕಂಪನಿಯು ಭಾರತದಲ್ಲಿ ಬಹುದೊಡ್ಡ ಮೈಲಿಗಲ್ಲನ್ನು ಸ್ಥಾಪಿಸಿದೆ. ಮಾಹಿತಿಗಳ ಪ್ರಕಾರ ಇಲ್ಲಿಯವರೆಗೆ ಭಾರತೀಯ ಮಾರುಕಟ್ಟೆಯಲ್ಲಿ ಸುಜುಕಿಯು (Suzuki) ಸುಮಾರು ಎಂಟು ಮಿಲಿಯನ್‌ ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡುವ ಮೂಲಕ ಬಹುದೊಡ್ಡ ಸಾಧನೆ ಮಾಡಿದೆ ಎಂದು ತಿಳಿದು ಬಂದಿದೆ. ಅಂದರೆ ಸುಜುಕಿ 2006 ರಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ದ್ವಿಚಕ್ರ ವಾಹನವನ್ನು ಮಾರಾಟ ಮಾಡಲು ಆರಂಭ ಮಾಡಿತ್ತು.

Suzuki Sold 8 Million Two Wheelers In Indian Market

ಅಲ್ಲಿಂದ ಇಲ್ಲಿಯವರೆಗೆ ಸುಜುಕಿ ಎಂಬತ್ತು ಲಕ್ಷ ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿದೆ. ಕಂಪನಿಯ ಮಾರಾಟದ ವೇಗವನ್ನು ಗಮನಿಸಿದರೆ 2006 ರಿಂದ 2019 ರ ಅವಧಿಯಲ್ಲಿ ಸುಜುಕಿ ಸುಮಾರು 4 ಮಿಲಿಯನ್‌ ವಾಹನಗಳನ್ನು ಮಾರಾಟ ಮಾಡಿತ್ತು. ಅದಾದ ಮುಂದಿನ 5 ವರ್ಷದ ಅವಧಿಯಲ್ಲಿ ಉಳಿದ 4 ಮಿಲಿಯನ್ ದ್ವಿಚಕ್ರಗಳನ್ನು ಮಾರಾಟ ಮಾಡಿದೆ. ಸುಜುಕಿಯ ದ್ವಿತಿಯಾರ್ಧದ ಮಾರಾಟವಂತೂ ಕ್ಷಿಪ್ರಗತಿಯಲ್ಲಿತ್ತು ಎಂದು ಕಂಪನಿ ತಿಳಿಸಿದೆ.

ಸುಜುಕಿಯು ಭಾರತದಲ್ಲಿ ಹಯಾಬುಸಾ, ಜಿಕ್ಸರ್‌ ರೀತಿಯ ಸೂಪರ್‌ಬೈಕ್‌ನಿಂದ ಹಿಡಿದು ಸುಜುಕಿ ಅವೆನಿಸ್‌, ಆಕ್ಸೆಸ್‌ ಮಾದರಿಯ ಸ್ಕೂಟರ್‌ಗಳನ್ನೂ ಮಾರಾಟ ಮಾಡುತ್ತಿದೆ. ಇತ್ತೀಚೆಗಷ್ಟೇ ಸುಜುಕಿ ತನ್ನ ಹಯಾಬುಸಾ ಸೂಪರ್‌ಬೈಕ್‌ನ 25 ನೇ ವರ್ಷದ ಆನಿವರ್ಸರಿಯನ್ನು ಅದ್ದೂರಿಯಾಗಿ ಆಚರಣೆ ಮಾಡಿತ್ತು. ಹಯಬುಸಾ 25ನೇಆನಿವರ್ಸರಿ ಭಾಗವಾಗಿ ಎಡಿಷನ್ ಮಾದರಿಯನ್ನು ಬಿಡುಗಡೆಗೊಳಿಸಿದೆ. ಈ ಸುಜುಕಿ ಹಯಬುಸಾ 25ನೇ ಆನಿವರ್ಸರಿ ಎಡಿಷನ್ (Suzuki Hayabusa 25th Anniversary Edition) ಜಾಗತಿಕ ಪರಿಚಯದ ಒಂಬತ್ತು ತಿಂಗಳ ನಂತರ ಭಾರತಕ್ಕೆ ಬಂದಿದೆ.

Suzuki Sold 8 Million Two Wheelers In Indian Market

ಸುಜುಕಿ ಹಯಬುಸಾ (Suzuki Hayabusa) 25ನೇ ಆನಿವರ್ಸರಿ ಎಡಿಷನ್ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.17.70 ಲಕ್ಷವಾಗಿದೆ. ಇದು ಕೇವಲ ಯಾವುದೇ ಹೊಸ ಬೈಕು ಅಲ್ಲ. ಇದು ಸುಜುಕಿ ಹಯಾಬುಸಾದ 25 ವರ್ಷಗಳ ಪ್ಯೂರೆಸಿದ ಗೌರವವಾಗಿದೆ. ಈ ಸುಜುಕಿ ಹಯಬುಸಾ ಅದರ ಸ್ಪೀಡ್ ಮತ್ತು ಪರ್ಫಾಮೆನ್ಸ್ಗೆ ಹೆಸರುವಾಸಿಯಾಗಿದೆ. ಈ ಹೊಸ ಮಾದರಿಗೆ ಸ್ಟ್ಯಾಂಡರ್ಡ್ ಮಾದರಿಗಿಂತ 80,000 ರೂ. ಹೆಚ್ಚು ಆಗಿದೆ.

ಈ ಸುಜುಕಿ ಹಯಬುಸಾ 25ನೇ ಆನಿವರ್ಸರಿ ಎಡಿಷನ್ ಅನ್ನು ಪ್ರತ್ಯೇಕವಾಗಿ ಕಾಣಲು ಕ್ಯಾಚಿಂಗ್ ಅರೇಂಜ್ ಮತ್ತ್ ಬ್ಲ್ಯಾಕ್ ಡ್ಯುಯಲ್-ಟೋನ್ ಪೇಂಟ್ ಸ್ಕೀಮ್ ಅನ್ನು ಹೊಂದಿದೆ, ಡ್ರೈವ್ ಚೈನ್ ಅಡ್ಜಸ್ಟರ್ ರೋಟರ್ ಮತ್ತು ಫ್ರಂಟ್ ಬ್ರೇಕ್ ಡಿಸ್ಕ್‌ನ ಆಂತರಿಕ ಭಾಗದಲ್ಲಿ ಗೋಲ್ಡನ್ ಫಿನಿಶ್‌ನಿಂದ ಕೂಡಿದೆ. ಇನ್ನು ವಿಶಿಷ್ಟವಾದ 25ನೇ ಆನಿವರ್ಸರಿ ಲೋಗೋವು ಮಫ್ಲರ್ ಅನ್ನು ಅಲಂಕರಿಸುತ್ತದೆ ಮತ್ತು ಟ್ಯಾಂಕ್ ಹೊಸ 3D ಸುಜುಕಿ ಲೋಗೋವನ್ನು ಹೊಂದಿದೆ.

ಸುಜುಕಿ ಆಕ್ಸಿಸ್‌ ಬಗ್ಗೆ ಮಾತನಾಡುವುದಾದರೆ, ದೇಶೀಯ ಮಾರುಕಟ್ಟೆಯಲ್ಲಿ ಸುಜುಕಿ ಆಕ್ಸೆಸ್ 125 (Suzuki Access 125) ಸಹ ಜನಪ್ರಿಯ ಸ್ಕೂಟರ್ ಆಗಿದೆ. ವೇರಿಯೆಂಟ್ಸ್ ಅನ್ವಯ ರೂ.79,899 ದಿಂದ ರೂ.90,500 ಎಕ್ಸ್ ಶೋರೂಂ ಬೆಲೆಯಲ್ಲಿ ಸಿಗುತ್ತದೆ. ಇದು 124 ಸಿಸಿ, ಸಿಂಗಲ್ ಸಿಲಿಂಡರ್ ಏರ್ ಕೋಲ್ಡ್ ಎಂಜಿನ್ ಪಡೆದಿದ್ದು, 8.5 bhp ಪವರ್, 10 Nm ಪೀಕ್ ಟಾರ್ಕ್ ಹೊರಹಾಕುತ್ತದೆ. 45 kmpl ವರೆಗೆ ಮೈಲೇಜ್ ಕೊಡುತ್ತದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Saturday, April 20, 2024, 17:00 [IST]
English summary
Suzuki sold 8 million two wheelers in indian market
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+