ಹೊಸ ಸುಜುಕಿ V-Strom 800 DE ಬೈಕ್ ಬಿಡುಗಡೆ: ಬೆಲೆ ರೂ.10.30 ಲಕ್ಷ
ಜನಪ್ರಿಯ ದ್ವಿಚಕ್ರ ತಯಾರಕ ಕಂಪನಿಯಾದ ಸುಜುಕಿ ಮೋಟಾರ್‌ಸೈಕಲ್ ಇಂಡಿಯಾ ತನ್ನ ಸುಜುಕಿ V-Strom 800 DE (Suzuki V-Strom 800 DE) ಬೈಕ್ ಅನ್ನು ಬಿಡುಗಡೆಗೊಳಿಸಿದೆ. ಈ ಹೊಸ ಸುಜುಕಿ V-Strom 800 DE ಬೈಕ್ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.10.30 ಲಕ್ಷವಾಗಿದೆ. ಇದು ಪರಿಚಯಾತ್ಮಕ ಬೆಲೆಯಾಗಿದೆ.
ಸುಜುಕಿ V-Strom 800 DE ಬೈಕ್ ಈಗಾಗಲೇ ಅಂತರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ತನ್ನ ಛಾಪು ಮೂಡಿಸಿದ್ದು, ಭಾರತೀಯ ಸವಾರರಲ್ಲಿ ನಿರೀಕ್ಷೆಯನ್ನು ಹುಟ್ಟುಹಾಕಿದೆ. ಈ ಹೊಸ ಸುಜುಕಿ V-Strom 800 DE ಬೈಕ್ ಅನ್ನು GSX-8S ನಿಂದ ಪಡೆದ ಹೊಸ ಪ್ಲಾಟ್‌ಫಾರ್ಮ್‌ನಲ್ಲಿ ನಿರ್ಮಿಸಲಾಗಿದೆ. ಈ ಹೊಸ ಮಾದರಿಯು V-Strom 650 XT ಸ್ಥಾನವನ್ನು ತೆಗೆದುಕೊಳ್ಳುತ್ತದೆ, ಇದು ಭಾರತದಲ್ಲಿ ಸುಜುಕಿಯ ಅಡ್ವೆಂಚರ್ ಬೈಕ್ ವಿಭಾಗದಲ್ಲಿ ಗಮನಾರ್ಹವಾದ ನವೀಕರಣವಾಗಿದೆ.

ಹೊಸದಾಗಿ ಬಿಡುಗಡೆಯಾದ, ಸುಜುಕಿ V-Strom 800 DE ಬೈಕಿನಲ್ಲಿ 776cc ಪ್ಯಾರಲಲ್-ಟ್ವಿನ್ ಎಂಜಿನ್‌ನಿಂದ ಚಾಲಿತವಾಗಿದೆ. ಈ ಲಿಕ್ವಿಡ್-ಕೂಲ್ಡ್ ಎಂಜಿನ್, 270-ಡಿಗ್ರಿ ಕ್ರ್ಯಾಂಕ್ ಅನ್ನು ಹೊಂದಿದ್ದು, 8,500 rpm ನಲ್ಲಿ 83bhp ಮತ್ತು 6,800 rpm ನಲ್ಲಿ 78Nm ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ನೊಂದಿಗೆ 6-ಸ್ಪೀಡ್ ಗೇರ್‌ಬಾಕ್ಸ್ ಅನ್ನು ನೀಡಲಾಗಿದೆ.
ಸುಜುಕಿ V-Strom 800 DE ಬೈಕ್ ಭಾರತೀಯ ಮಾರುಕಟ್ಟೆಯಲ್ಲಿ ಟ್ರಯಂಫ್ ಟೈಗರ್ 900 ಮತ್ತು BMW F 850 GS ಬೈಕ್ ಗಳಿಗೆ ಪೈಪೋಟಿ ನೀಡುತ್ತದೆ. ಹೊಸ ಸುಜುಕಿ V-Strom 800 DE ಬೈಕಿನಲ್ಲಿ ಡ್ರೈವ್ ಮೋಡ್ ಸೆಲೆಕ್ಟರ್ (SDMS) ನೊಂದಿಗೆ ಬರುತ್ತದೆ, ವಿವಿಧ ಸವಾರಿ ಅನುಭವಗಳಿಗಾಗಿ ಮೂರು ರೈಡ್ ಮೋಡ್‌ಗಳನ್ನು ನೀಡುತ್ತದೆ.

ಈ ಸುಜುಕಿ V-Strom 800 DE ಬೈಕ್ ಟ್ರಾಕ್ಷನ್ ಕಂಟ್ರೋಲ್ ಸಿಸ್ಟಮ್ (STCS) ಮತ್ತು ABS, ಆಯ್ಕೆ ಮಾಡಬಹುದಾದ ಮೋಡ್‌ಗಳೊಂದಿಗೆ, ರೈಡರ್‌ಗೆ ಸುರಕ್ಷತೆ ಮತ್ತು ಕಂಟ್ರೋಲ್ ಡಿಸ್ ಪ್ಲೇಯನ್ನು ಹೊಂದಿದೆ. ಇದಲ್ಲದೆ, ಈ ಮಾದರಿಯು ಬೈ-ಡೈರೆಕ್ಷನಲ್ ಕ್ವಿಕ್-ಶಿಫ್ಟರ್ ಅನ್ನು ಸ್ಟ್ಯಾಂಡರ್ಡ್ ಆಗಿ ಹೊಂದಿದ್ದು, ಒಟ್ಟಾರೆ ಸವಾರಿ ಅನುಭವವನ್ನು ಹೆಚ್ಚಿಸುತ್ತದೆ.
ಈ ಹೊಸ ಅಡ್ವೆಂಚರ್ ಬೈಕ್ ಸಂಪೂರ್ಣವಾಗಿ ಹೊಂದಾಣಿಕೆ ಮಾಡಬಹುದಾದ ಶೋವಾ USD ಅನ್ನು 220mm ಟ್ರವ್ಯೂಲ್ ನೊಂದಿಗೆ ಮುಂಭಾಗದಲ್ಲಿ ಮತ್ತು ಹಿಂಭಾಗದಲ್ಲಿ 260 mm ಡಿಸ್ಕ್ ಅನ್ನು ಹೊಂದಿದೆ. ಇದರೊಂದಿಗೆ 21-ಇಂಚಿನ ಸ್ಪೋಕ್ಡ್ ಫ್ರಂಟ್ ವೀಲ್ ಮತ್ತು 17-ಇಂಚಿನ ಹಿಂದಿನ ಸ್ಪೋಕ್ಡ್ ವೀಲ್ ಮೇಲೆ ಸವಾರಿ ಮಾಡುತ್ತದೆ.

ಇದರೊಂದಿಗೆ 230 ಕೆಜಿ ತೂಕದ ಹೊರತಾಗಿಯೂ, ಅದರ ವೈಶಿಷ್ಟ್ಯಗಳು ವಿವಿಧ ಭೂಪ್ರದೇಶಗಳಲ್ಲಿ ಆರಾಮದಾಯಕ ಮತ್ತು ನಿಯಂತ್ರಿತ ಸವಾರಿಯನ್ನು ಒದಗಿಸುವ ಗುರಿಯನ್ನು ಹೊಂದಿವೆ. ಭಾರತಕ್ಕೆ ಸಂಪೂರ್ಣವಾಗಿ ನಿರ್ಮಿಸಲಾದ ಯುನಿಟ್ (CBU) ಆಗಮಿಸುವ ನಿರೀಕ್ಷೆಯಿದೆ. ಈ ಹೊಸ ಸುಜುಕಿ V-Strom 800 DE ಬೈಕ್ ಪವರ್ ಫುಲ್ ಮತ್ತು ತಂತ್ರಜ್ಞಾನವನ್ನು ಒಳಗೊಂಡ ಬಹುಮುಖ ಬೈಕ್ ಆಗಿದೆ. ಪವರ್ ಪುಲ್ ಬೈಕ್ ಖರೀದಿಸಲು ಬಯಸುವ ಗ್ರಾಹಕರಿಗೆ ಉತ್ತಮ ಆಯ್ಕೆಯಾಗಿದೆ.
ಭಾರತೀಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಮಾರಾಟ ಮಾಡುವ ಜನಪ್ರಿಯ ದ್ವಿಚಕ್ರ ತಯಾರಕ ಕಂಪನಿಗಳು ಹೀರೋ ಮೋಟೋಕಾರ್ಪ್, ಟಿವಿಎಸ್ ಮತ್ತು ಬಜಾಜ್ ಆಗಿದೆ. ಇನ್ನು 2024ರಲ್ಲಿ ಎರಡು ಹೊಸ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಬಿಡುಗಡೆ ಮಾಡುವುದಾಗಿ ಹೋಂಡಾ ದೃಢಪಡಿಸಿದೆ. ಯಮಹಾ ಸಹ ಭಾರತೀಯ ಮಾರುಕಟ್ಟೆಗೆ ಇ-ಸ್ಕೂಟರ್ ಅನ್ನು ಸಿದ್ಧಪಡಿಸುತ್ತಿದೆ. ಇನ್ನು ಸುಜುಕಿ ಭಾರತೀಯ ರಸ್ತೆಗಳಲ್ಲಿ ಬರ್ಗ್‌ಮ್ಯಾನ್ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಸಹ ಪರೀಕ್ಷಿಸಿತು.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








