ಅಪ್ಪಂದಿರ ದಿನ:.. ನಿಮ್ಮ ತಂದೆಗೆ ಉಡೊಗೊರೆ ನೀಡಬೇಕೇ.. ಈ ಮೊಪೆಡ್‌ಗಳು ಬೆಸ್ಟ್, ರೂ.44,999 ಆರಂಭಿಕ ದರ
'ಜಗತ್ತಿಗೆ ನಮ್ಮನ್ನು ಪರಿಚಯಿಸುವವಳು ತಾಯಿ. ಜಗತ್ತನೇ ನಮಗೆ ಪರಿಚಯಿಸುವವನು ತಂದೆ..' ಅಂತಹ ಮೇರು ವ್ಯಕ್ತಿಗೆ ಗೌರವ ಸಲ್ಲಿಸಲು ಪ್ರತಿವರ್ಷ ಜೂನ್ ತಿಂಗಳ 3ನೇ ಭಾನುವಾರ ಅಪ್ಪಂದಿರ ದಿನವನ್ನು ಆಚರಿಸಲಾಗುತ್ತದೆ. ಇಂದು (ಜೂನ್ 16) ಆ ದಿನ ಬಂದಿದ್ದು, ನಿಮ್ಮ ತಂದೆಗೆ ದ್ವಿಚಕ್ರ ವಾಹನನೊಂದನ್ನು ಉಡುಗೊರೆಯಾಗಿ ನೀಡಬೇಕು ಅಂದುಕೊಂಡರೆ, ಟಿವಿಎಸ್ ಎಕ್ಸ್ಎಲ್100 (TVS XL100) ಹಾಗೂ ಕೈನೆಟಿಕ್ ಇ-ಲೂನಾ (Kinetic E-Luna) ಉತ್ತಮ ಆಯ್ಕೆಯಾಗಬಲ್ಲವು. ಇಲ್ಲಿ ನೂತನ ಮೊಪೆಡ್‌ಗಳ ಎಕ್ಸ್ ಶೋರೂಂ ಬೆಲೆ ಹಾಗೂ ವಿಶೇಷತೆಗಳ ಬಗ್ಗೆ ಸಂಪೂರ್ಣವಾಗಿ ವಿವರಿಸಿದ್ದೇವೆ.
ಮೊದಲಿಗೆ ಕೈನೆಟಿಕ್ ಇ-ಲೂನಾದ ಬಗ್ಗೆ ಮಾತನಾಡೋಣ. ಇದೊಂದು ಎಲೆಕ್ಟ್ರಿಕ್ ಮೊಪೆಡ್ ಆಗಿದೆ. ಎಕ್ಸ್1 ಹಾಗೂ ಎಕ್ಸ್2 ಎಂಬ ಎರಡು ರೂಪಾಂತರ (ವೇರಿಯೆಂಟ್)ಗಳ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದೆ. ಎಕ್ಸ್1 ಮಾದರಿಯು ರೂ.69,990 ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದ್ದು, 1.7 ಕೆಡಬ್ಲ್ಯೂಹೆಚ್ (kWh) ಸಾಮರ್ಥ್ಯದ ಬ್ಯಾಟರಿಯನ್ನು ಪಡೆದಿದೆ. ಸಂಪೂರ್ಣ ಚಾರ್ಜ್‌ನಲ್ಲಿ 90 ಕಿಲೋಮೀಟರ್ ರೇಂಜ್ (ಮೈಲೇಜ್) ಕೊಡುತ್ತದೆ. 50 ಕೆಎಂಪಿಹೆಚ್ ಟಾಪ್ ಸ್ಪೀಡ್ ಕೂಡ ಒಳಗೊಂಡಿದೆ.

ಕೈನೆಟಿಕ್ ಇ-ಲೂನಾ ಎಕ್ಸ್2 ಆವೃತ್ತಿಯು ರೂ.74,990 (ಎಕ್ಸ್ ಶೋರೂಂ) ದರವನ್ನು ಪಡೆದಿದೆ. 2 ಕೆಡಬ್ಲ್ಯೂಹೆಚ್ (kWh) ಬ್ಯಾಟರಿ ಪ್ಯಾಕ್‌ನ್ನು ಒಳಗೊಂಡಿದ್ದು, ಭರ್ತಿ ಚಾರ್ಜ್‌ನಲ್ಲಿ 110 ಕಿ.ಮೀ ಕ್ರಮಿಸುತ್ತದೆ. 50 ಕೆಎಂಪಿಹೆಚ್ ಟಾಪ್ ಸ್ಪೀಡ್ ಹೊಂದಿದೆ. ಇದರ ಬ್ಯಾಟರಿಯು 4 ಗಂಟೆಯಲ್ಲಿ ಸಂಪೂರ್ಣವಾಗಿ ಚಾರ್ಜ್ ಆಗುತ್ತದೆ.
ಈ ಕೈನೆಟಿಕ್ ಇ-ಲೂನಾ ಮೊಪೆಡ್ ಪರ್ಲ್ ಯೆಲ್ಲೋ, ಮಲ್ಬೆರಿ ರೆಡ್, ಓಷನ್ ಬ್ಲೂ, ಸ್ಪಾರ್ಕ್ಲಿಂಗ್ ಗ್ರೀನ್ ಒಳಗೊಂಡಂತೆ 5 ಆಕರ್ಷಕ ಬಣ್ಣಗಳ ಆಯ್ಕೆಯಲ್ಲಿಯೂ ಸಿಗುತ್ತದೆ. 16-ಇಂಚಿನ ವೀಲ್‌ಗಳು, ಟೆಲಿಸ್ಕೊಪಿಕ್ ಫ್ರಂಟ್ ಸಸ್ಪೆನ್ಷನ್ ಸೆಟಪ್, ಡಿಜಿಟಲ್ ಮೀಟರ್, ಸ್ಯಾರಿ ಗಾರ್ಡ್, ಸೇಫ್ಟಿ ಲಾಕ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಹೊಂದಿದೆ. ಸುರಕ್ಷತೆಗಾಗಿ ಡ್ರಮ್ ಬ್ರೇಕ್ ಅನ್ನು ಒಳಗೊಂಡಿದೆ.

ಟಿವಿಎಸ್ ಎಕ್ಸ್ಎಲ್100 (TVS XL100) ಮೊಪೆಡ್ ಕುರಿತು ಹೇಳುವುದಾದರೆ, ಇದು ರೂ.44,999 ದಿಂದ ರೂ.58,724 ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ. 99.7 ಸಿಸಿ, ಸಿಂಗಲ್ ಸಿಲಿಂಡರ್ ಏರ್ ಕೋಲ್ಡ್ ಪೆಟ್ರೋಲ್ ಎಂಜಿನ್ ಒಳಗೊಂಡಿದ್ದು, 4.4 ಪಿಎಸ್ ಗರಿಷ್ಠ ಪವರ್ (ಶಕ್ತಿ) ಮತ್ತು 6.5 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಪಡೆದಿದೆ. ಜೊತೆಗೆ 80 ಕೆಎಂಪಿಎಲ್‌ವರೆಗೆ ಮೈಲೇಜ್ ನೀಡುತ್ತದೆ.
ಈ ಟಿವಿಎಸ್ ಎಕ್ಸ್ಎಲ್100 ಮುಂಭಾಗ (ಫ್ರಂಟ್) ಟೆಲಿಸ್ಕೋಪಿಕ್ ಫೋರ್ಕ್ ಹಾಗೂ ಹಿಂಭಾಗ (ರೇರ್) ಡುಯಲ್ ಶಾಕ್ ಅಬ್ಸಾರ್ಬರ್ ಸಸ್ಪೆಷನ್ ಸೆಟಪ್ ಹೊಂದಿದೆ. ಸುರಕ್ಷತೆಗಾಗಿ ಡ್ರಮ್ ಬ್ರೇಕ್ ಅನ್ನು ಒಳಗೊಂಡಿದೆ. 16-ಇಂಚಿನ ಸ್ಪೋಕ್ ವೀಲ್‌ಗಳನ್ನು ಪಡೆದಿದೆ. 89 ಕೆಜಿ ತೂಕವಿದ್ದು, 4 ಲೀಟರ್ ಸಾಮರ್ಥ್ಯದ ಫ್ಯುಯೆಲ್ (ಇಂಧನ) ಟ್ಯಾಂಕ್‌ನ್ನು ಪಡೆದಿದೆ.
ನೂತನ ಎಕ್ಸ್ಎಲ್100 ಅನಲಾಗ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಯುಎಸ್‌ಬಿ ಚಾರ್ಜಿಂಗ್ ಪೋರ್ಟ್ ಮತ್ತು ಎಂಜಿನ್ ಕಿಲ್ ಸ್ವಿಚ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ. ಈ ಮೊಪೆಡ್‌ಗೆ ಯಾವುದೇ ನೇರ ಪ್ರತಿಸ್ಪರ್ಧಿಗಳು ಇಲ್ಲದಿದ್ದರೂ ಹೀರೋ ಹೆಚ್ಎಫ್ 100, ಬಜಾಜ್ ಪ್ಲಾಟಿನಾ 100 ಮತ್ತು ಹೋಂಡಾ ಶೈನ್ 100 ಬೈಕ್‌ಗಳ ಪ್ರಬಲ ಪೈಪೋಟಿಯನ್ನು ಎದುರಿಸಬೇಕಾಗಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋ ಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications