ಎಲ್ಲ ಬೈಕ್‌ಗಳ ಮಾರಾಟ ತೀವ್ರ ಕುಸಿತ.. ಆದರೆ, ಹೀರೋ ಸ್ಪ್ಲೆಂಡರ್ ಸೇಲ್ಸ್ ಮಾತ್ರ ಗಾಬರಿ ಹುಟ್ಟಿಸುವ ಸಂಖ್ಯೆಯಲ್ಲಿ ಏರಿಕೆ!

ವಿಶ್ವದಲ್ಲಿಯೇ ಭಾರತವು ಅತಿದೊಡ್ಡ ದ್ವಿಚಕ್ರ ವಾಹನ (Two Wheeler) ಮಾರುಕಟ್ಟೆಯನ್ನು ಹೊಂದಿದೆ. ಸ್ಕೂಟರ್‌ಗಳಂತೆ ಬೈಕ್‌ಗಳು ಕೂಡ ಉತ್ತಮ ಸಂಖ್ಯೆಯಲ್ಲಿ ಮಾರಾಟವಾಗುತ್ತಿವೆ. ಕಳೆದ ತಿಂಗಳು (ನವೆಂಬರ್ - 2024), ಒಟ್ಟು 8,10,674 ಯುನಿಟ್ ಮೋಟಾರ್‌ಸೈಕಲ್‌ಗಳು ಮಾರಾಟಗೊಂಡಿವೆ. 2023ರ ಇದೇ ಅವಧಿಯಲ್ಲಿ ಮಾರಲ್ಪಟ್ಟ 8,45,424 ಯುನಿಟ್‌ಗಳಿಗೆ ಹೋಲಿಸಿದರೆ, ವರ್ಷದಿಂದ ವರ್ಷಕ್ಕೆ ಶೇಕಡ 4.11% ಕುಸಿತವಾಗಿದೆ. ಆದರೆ, ಜನಪ್ರಿಯ 'ಹೀರೋ ಸ್ಪ್ಲೆಂಡರ್' ಮಾಡೆಲ್‌ಗಳ ಮಾರಾಟ ಮಾತ್ರ ಹೆಚ್ಚಳಗೊಂಡಿದೆ. ಇದರೊಂದಿಗೆ ಅತಿಹೆಚ್ಚಿನ ಸಂಖ್ಯೆಯಲ್ಲಿ ಮಾರಾಟಗೊಂಡ ಟಾಪ್ 5 ಬೈಕ್‌ಗಳ ಪಟ್ಟಿಯಲ್ಲಿ ಸ್ಪ್ಲೆಂಡರ್ ಮೊದಲ ಸ್ಥಾನದಲ್ಲಿದೆ.

ಈ ನವೆಂಬರ್‌ನಲ್ಲಿ ಸರಿ ಸುಮಾರು 2,93,828 ಯುನಿಟ್ ಹೀರೋ ಸ್ಪ್ಲೆಂಡರ್ (Hero Splendor) ಬೈಕ್ ಮಾಡೆಲ್‌ಗಳು ಯಶಸ್ವಿಯಾಗಿ ಮಾರಾಟಗೊಂಡಿವೆ. 2023ರ ನವೆಂಬರ್‌ ತಿಂಗಳಲ್ಲಿ ಮಾರಾಟ ಮಾಡಲಾದ 2,50,786 ಯುನಿಟ್‌ಗಳಿಗೆ ಹೋಲಿಕೆ ಮಾಡಿದರೆ, ವರ್ಷದಿಂದ ವರ್ಷಕ್ಕೆ (YoY) ಶೇಕಡ 17.16% ಬೆಳವಣಿಗೆಯನ್ನು ಸಾಧಿಸಲಾಗಿದೆ.

Top 5 bike Sales Report November 2024 Hero Splendor Honda Shine Bajaj Pulsar To More

ನೂತನ ಹೀರೋ ಸ್ಪ್ಲೆಂಡರ್ ಮೋಟಾರ್‌ಸೈಕಲ್‌ ವಿವಿಧ ರೂಪದಲ್ಲಿ ಖರೀದಿಗೆ ದೊರೆಯುತ್ತದೆ. ಇದರ ಸ್ಪ್ಲೆಂಡರ್ ಪ್ಲಸ್ ರೂ.76,356 ದಿಂದ ರೂ.79,336, ಸ್ಪ್ಲೆಂಡರ್ ಪ್ಲಸ್ ಎಕ್ಸ್‌ಟೆಕ್ ರೂ.80,161 ರಿಂದ ರೂ.83,461 ಮತ್ತು ಸೂಪರ್ ಸ್ಪ್ಲೆಂಡರ್ ರೂ.82,298 ರಿಂದ ರೂ.86,298 ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ.

ಎರಡನೇ ಸ್ಥಾನದಲ್ಲಿ ಪ್ರಖ್ಯಾತ ಹೋಂಡಾ ಶೈನ್ (Honda Shine) ಬೈಕ್ ಇದ್ದು, ಹೋದ ತಿಂಗಳು (ನವೆಂಬರ್ - 2024) 1,45,530 ಯುನಿಟ್ ಶೈನ್ ಮೋಟಾರ್‌ಸೈಕಲ್‌ಗಳನ್ನು ಮಾರಾಟಗೊಳಿಸಲಾಗಿದೆ. 2023ರ ನವೆಂಬರ್‌ನಲ್ಲಿ ಮಾರಲ್ಪಟ್ಟ 1,55,943 ಯುನಿಟ್‌ಗಳಿಗೆ ಹೋಲಿಸಿದರೆ, ವರ್ಷದಿಂದ ವರ್ಷಕ್ಕೆ ಶೇಕಡ 6.68% ಇಳಿಮುಖವಾಗಿದೆ.

Top 5 bike Sales Report November 2024 Hero Splendor Honda Shine Bajaj Pulsar To More

ಹೋಂಡಾ ಶೈನ್ ಸಹ ಎರಡು ವಿಧದಲ್ಲಿ ಖರೀದಿಗೆ ದೊರೆಯುತ್ತದೆ. ಶೈನ್ 100 ಬೈಕ್ ರೂ.66,600 ದರವನ್ನು ಪಡೆದಿದೆ. ಇದು 98.98 ಸಿಸಿ ಸಾಮರ್ಥ್ಯದ ಪೆಟ್ರೋಲ್ ಎಂಜಿನ್ ಒಳಗೊಂಡಿದ್ದು, 55 ಕೆಎಂಪಿಎಲ್‌ವರೆಗೆ ಮೈಲೇಜ್ ನೀಡುತ್ತದೆ. ಶೈನ್ 125 ಮೋಟಾರ್‌ಸೈಕಲ್‌ ರೂ.82,551 ರಿಂದ 86,551 ಎಕ್ಸ್ ಶೋರೂಂ ಬೆಲೆಯಲ್ಲಿ ಗ್ರಾಹಕರಿಗೆ ಲಭ್ಯವಿದೆ. 123.94 ಸಿಸಿ ಪೆಟ್ರೋಲ್ ಎಂಜಿನ್ ಹೊಂದಿದ್ದು, 55 ಕೆಎಂಪಿಎಲ್‌ವರೆಗೆ ಮೈಲೇಜ್ ಕೊಡುತ್ತದೆ.

ಮೂರನೇ ಸ್ಥಾನದಲ್ಲಿ ಯುವಕರ ನೆಚ್ಚಿನ ಬಜಾಜ್ ಪಲ್ಸರ್ (Bajaj Pulsar) ಬೈಕ್‌ ಮಾಡೆಲ್‌ಗಳಿವೆ. ಈ ನವೆಂಬರ್‌ನಲ್ಲಿ 1,14,467 ಯುನಿಟ್ ಪಲ್ಸರ್ ಮೋಟಾರ್‌ಸೈಕಲ್‌ಗಳನ್ನು ಮಾರಾಟ ಮಾಡಲಾಗಿದೆ. 2023ರ ಇದೇ ಅವಧಿಯಲ್ಲಿ ಮಾರಾಟಗೊಳಿಸಿದ 1,30,403 ಯುನಿಟ್‌ಗಳಿಗೆ ಹೋಲಿಕೆ ಮಾಡಿದರೆ, ವರ್ಷದಿಂದ ವರ್ಷಕ್ಕೆ (YoY) ಶೇಕಡ 12.22% ಹಿನ್ನೆಡೆಯಾಗಿದೆ.

Top 5 bike Sales Report November 2024 Hero Splendor Honda Shine Bajaj Pulsar To More

ಶ್ರೀಸಾಮಾನ್ಯರು ಇಷ್ಟಪಟ್ಟು ಖರೀದಿ ಮಾಡುವ ಹೀರೋ ಹೆಚ್ಎಫ್ ಡಿಲಕ್ಸ್ (Hero HF Deluxe) ಮೋಟಾರ್‌ಸೈಕಲ್‌, ನಾಲ್ಕನೇ ಸ್ಥಾನದಲ್ಲಿದೆ. ಕಳೆದ ತಿಂಗಳು (ನವೆಂಬರ್ - 2024) 61,245 ಯುನಿಟ್ ಹೆಚ್ಎಫ್ ಡಿಲಕ್ಸ್ ಬೈಕ್‌ಗಳು ಮಾರಾಟಗೊಂಡಿವೆ. 2023ರ ನವೆಂಬರ್‌ನಲ್ಲಿ ಮಾರಲ್ಪಟ್ಟ 1,16,421 ಯುನಿಟ್‌ಗಳಿಗೆ ಹೋಲಿಸಿದರೆ, ವರ್ಷದಿಂದ ವರ್ಷಕ್ಕೆ 47.39% ಕುಸಿತವಾಗಿದೆ.

ಐದನೇ ಸ್ಥಾನದಲ್ಲಿ ಬಜಾಜ್ ಪ್ಲಾಟಿನಾ (Bajaj Platina) ಬೈಕ್ ಮಾಡೆಲ್‌ಗಳಿವೆ. ಈ ನವೆಂಬರ್‌ನಲ್ಲಿ 44,578 ಯುನಿಟ್ ಪ್ಲಾಟಿನಾ ಬೈಕ್‌ಗಳನ್ನು ಮಾರಾಟ ಮಾಡಲಾಗಿದೆ. 2023ರ ನವೆಂಬರ್‌ ತಿಂಗಳಲ್ಲಿ ಮಾರಲಾದ 60,607 ಯುನಿಟ್‌ಗಳಿಗೆ ಹೋಲಿಕೆ ಮಾಡಿದರೆ, ವರ್ಷದಿಂದ ವರ್ಷಕ್ಕೆ ಶೇಕಡ 26,45% ಮಾರಾಟ ಪ್ರಮಾಣ ಇಳಿಕೆಯಾಗಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Thursday, December 26, 2024, 12:28 [IST]
English summary
Top 5 bike sales report november 2024 hero splendor honda shine bajaj pulsar to more
Read more on auto news india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+