ಯುವಕರಿಗೆ ಸಿಹಿಸುದ್ದಿ: ಆಕರ್ಷಕ ಬೆಲೆಯಲ್ಲಿ ಬಿಡುಗಡೆಯಾಗಲಿರುವ ಹೊಸ ಅಡ್ವೆಂಚರ್ ಬೈಕ್‌ಗಳಿವು
ಭಾರತದಲ್ಲಿ ಅಡ್ವೆಂಚರ್ ಬೈಕುಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ. ರಾಯಲ್ ಎನ್‌ಫೀಲ್ಡ್ ಹಿಮಾಲಯನ್ ಮತ್ತು ಹೀರೋ ಎಕ್ಸ್‌ಪಲ್ಸ್‌ನಂತಹ ದೈತ್ಯ ಕಂಪನಿಗಳ ಮಾರಾಟವೇ ಇದಕ್ಕೆ ಸಾಕ್ಷಿ. ಅಡ್ವೆಂಚರ್ ಬೈಕ್‌ಗಳನ್ನು ಹಿಟ್ ಮಾಡಿದ್ದು ಎನ್‌ಫೀಲ್ಡ್ ಆಗಿದ್ದರೂ, ಹೀರೋ ಈ ವಿಭಾಗವನ್ನು ಹೆಚ್ಚು ಜನಪ್ರಿಯಗೊಳಿಸಿತು ಎಂದು ಹೇಳಬೇಕು. ಕಡಿಮೆ ಬೆಲೆಯಲ್ಲಿ ಹೀರೋ ಕಂಪನಿಯು ಅಡ್ವೆಂಚರ್ ವಿಭಾಗದಲ್ಲಿ ಎಕ್ಸ್‌ಪಲ್ಸ್ ಎಂಬ ಬೈಕ್ ಅನ್ನು ಬಿಡುಗಡೆಗೊಳಿಸಿ ಹೊಸ ಸಂಚಲನವನ್ನು ಸೃಷ್ಟಿಸಿತು. ಹೀರೋ ತನ್ನ ಹೊಸ ಎಕ್ಸ್‌ಪಲ್ಸ್‌ನ 210ಸಿಸಿ ಆವೃತ್ತಿಯನ್ನು ಬಿಡುಗಡೆಗೊಳಿಸಲು ಸಜ್ಜಾಗಿದೆ. ಇದರ ಜೊತೆ ಹೊಸ ಅಡ್ವೆಂಚರ್ ಬೈಕುಗಳು (Adventure Bikes) ಕೂಡ ಬರುತ್ತಿದ್ದು, ಈ ಬೈಕುಗಳ ಬಗ್ಗೆ ಮಾಹಿತಿ ಇಲ್ಲಿದೆ.
ಕವಾಸಕಿ KLX 230: ಕವಾಸಕಿ ತನ್ನ ಕವಾಸಕಿ KLX 230 ಭಾರತೀಯ ಮಾರುಕಟ್ಟೆಯಲ್ಲಿ ಇತ್ತೀಚೆಗೆ ಅಧಿಕೃತವಾಗಿ ಅನಾವರಣಗೊಳಿಸಿತು. ಈ ಕವಾಸಕಿ KLX 230 ಎಂಬ ಡ್ಯುಯಲ್ ಸ್ಪೋರ್ಟ್ ಬೈಕ್ ಅನ್ನು ಸ್ಥಳೀಯವಾಗಿ ಅಸೆಂಬ್ಲಿ ಮಾಡುವ ಸಾಧ್ಯತೆಯಿದೆ. ಇದರಿಂದ ಈ ಹೊಸ ಕವಾಸಕಿ ಡ್ಯುಯಲ್ ಸ್ಪೋರ್ಟ್ ಬೈಕಿಗೆ ಸ್ಪರ್ಧಾತ್ಮಕ ಬೆಲೆಯನ್ನು ಹೊಂದಿರುತ್ತದೆ.

ಕವಾಸಕಿ ತನ್ನ ಕವಾಸಕಿ KLX 230 (Kawasaki KLX 230) ಬೈಕ್ ಅನ್ನ್ನು ಇಂಡಿಯಾ ಬೈಕ್ ವೀಕ್ 2024 ನಲ್ಲಿ ಬಿಡುಗಡೆಗೊಳಿಸಬಹುದು ಎಂದು ಹೇಳಲಾಗುತ್ತಿದೆ. ಡಿಸೆಂಬರ್ ತಿಂಗಳಿನ ಬಿಡುಗಡೆಗೆ ಮುಂಚಿತವಾಗಿ, ಈ ಕವಾಸಕಿಯು ಹೊಚ್ಚ ಹೊಸ KLX 230 ಡ್ಯುಯಲ್ ಸ್ಪೋರ್ಟ್ ಮಾದರಿಯ ಬುಕಿಂಗ್ ಅನ್ನು ಪ್ರಾರಂಭಿಸಿದೆ. ಈ ಕವಾಸಕಿ KLX 230 ಬೈಕ್ 233cc, ಏರ್ ಕೂಲ್ಡ್, ಸಿಂಗಲ್ ಸಿಲಿಂಡರ್ ಎಂಜಿನ್ ಅನ್ನು ಹೊಂದಿದೆ.
ಹೀರೊ ಎಕ್ಸ್‌ಪಲ್ಸ್ 210: ಈ ಮುಂಬರುವ ಈ ಅಡ್ವೆಂಚರ್ ಬೈಕ್‌ನ ಟೀಸರ್ ಅನ್ನು ಬಿಡುಗಡೆಗೊಳಿಸಲಿದ್ದು, ಈ ಟೀಸರ್ ಎಕ್ಸಾಸ್ಟ್ ನೋಟ್ ಅನ್ನು ಸ್ಪಷ್ಟವಾಗಿ ಕಾಣಬಹುದು. ಟೀಸರ್‌ನಲ್ಲಿ ಪ್ರಮುಖ ಹೈಲೈಟ್ ಮಾಡೆಲ್‌ನ ಹೆಡ್‌ಲೈಟ್ ಆಗಿದೆ. ಮುಂಭಾಗದಲ್ಲಿ ಟಾಪ್ ಶೈಲಿಯ ಮಡ್‌ಗಾರ್ಡ್ ಅನ್ನು ಕಾಣಬಹುದು ಜೊತೆಗೆ LED ಹೆಡ್‌ಲ್ಯಾಂಪ್ ಅನ್ನು ಗ್ರಿಲ್‌ನಿಂದ ರಕ್ಷಿಸಲಾಗಿದೆ, ಇದು ಆಫ್-ರೋಡಿಂಗ್ ಸಮಯದಲ್ಲಿ ಸೂಕ್ತವಾಗಿದೆ.
ಈ ಹೊಸ ಹೀರೊ ಎಕ್ಸ್‌ಪಲ್ಸ್ 210 (Hero XPulse) ಬೈಕ್ ಇತ್ತೀಚೆಗೆ ಲಡಾಖ್‌ನ ಖರ್ದುಂಗ್ ಲಾ ಬಳಿ ಕಾಣಿಸಿಕೊಂಡಿದೆ. ಕರಿಷ್ಮಾ XMR 210 ಸ್ಪೋರ್ಟ್ಸ್ ಬೈಕ್‌ನಿಂದ ಲಿಕ್ವಿಡ್-ಕೂಲ್ಡ್ ಎಂಜಿನ್ ಅನ್ನು ಎರವಲು ಪಡೆಯುತ್ತದೆ ಎಂದು ಹೇಳಲಾಗುತ್ತದೆ. ಡ್ಯುಯಲ್ ಉದ್ದೇಶದ ಅಡ್ವೆಂಚರ್ ಟೂರರ್ ಬೈಕ್ ಆಗಿದೆ. ಈ ಬೈಕಿನಲ್ಲಿ ಕರಿಷ್ಮಾವು 210cc ಲಿಕ್ವಿಡ್-ಕೂಲ್ಡ್, ಸಿಂಗಲ್ ಸಿಲಿಂಡರ್ ಫ್ಯೂಯಲ್ ಇಂಜೆಕ್ಟೆಡ್ ಎಂಜಿನ್ ಅನ್ನು ಹೊಂದಿರಲಿದೆ.
ಈ ಎಂಜಿನ್ 25 bhp ಪವರ್ ಮತ್ತು 20.4 Nm ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ನೊಂದಿಗೆ 6-ಸ್ಪೀಡ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ. ಸದ್ಯ್ ಮಾರುಕಟ್ಟೆಯಲ್ಲಿ ಮಾರಾಟವಾಗುವ ಎಕ್ಸ್‌ಪಲ್ಸ್ ಬೈಕಿನಲ್ಲಿ 199.6 cc 4V ಏರ್-ಕೂಲ್ಡ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 6.1 bhp ಪವರ್ ಮತ್ತು 3.1 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.
2025ರ ಕೆಟಿಎಂ 390 ಅಡ್ವೆಂಚರ್: ಈ ಹೊಸ ಕೆಟಿಎಂ ಅಡ್ವೆಂಚರ್ ಬೈಕ್ ಹೊಚ್ಚ ಹೊಸ ವಿನ್ಯಾಸವನ್ನು ಹೊಂದಿರುತ್ತದೆ. ವಿನ್ಯಾಸ ನವೀಕರಣಗಳ ಜೊತೆ ಹೊಸ ವೈಶಿಷ್ಟ್ಯಗಳು ಮತ್ತು ಎಲೆಕ್ಟ್ರಾನಿಕ್ ಸಾಧನಗಳನ್ನು ಪರಿಚಯಿಸುತ್ತದೆ. ಈ ಬೈಕ್ 399 cc ಸಿಂಗಲ್-ಸಿಲಿಂಡರ್, ಲಿಕ್ವಿಡ್-ಕೂಲ್ಡ್ DOHC ಎಂಜಿನ್ ಅನ್ನು ಹೊಂದಿರುತ್ತದೆ. ಈ ಎಂಜಿನ್ 45 bhp ಮತ್ತು 39 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.
ರಾಯಲ್ ಎನ್‌ಫೀಲ್ಡ್ ಹಿಮಾಲಯನ್ 450 ರ್‍ಯಾಲಿ: ಈ ರಾಯಲ್ ಎನ್‌ಫೀಲ್ಡ್ ಹಿಮಾಲಯನ್ 450 ಬೈಕ್ ಹೆಚ್ಚು ಒರಟಾದ, ಆಫ್-ರೋಡ್-ಕೇಂದ್ರಿತ ಮಾದರಿಯಾಗಿದೆ. ಗೋ-ಎನೀವೇರ್ ಸಾಮರ್ಥ್ಯವಿರುವ ಮಾದರಿಯಾಗಿದೆ. ಈ ಬೈಕ್ ರ್‍ಯಾಲಿ-ಸ್ಪೆಕ್ ಟೈಲ್ ಕೌಲ್, ಕ್ರಾಸ್-ಸ್ಪೋಕ್ ಟ್ಯೂಬ್‌ಲೆಸ್ ವೀಲ್‌ಗಳು, ನಕಲ್ ಗಾರ್ಡ್‌ಗಳು, , ಹೈ-ಮೌಂಟೆಡ್ ಎಕ್ಸಾಸ್ಟ್, ಮತ್ತು ಇತ್ಯಾದಿ ಸೇರಿದಂತೆ ಹಲವಾರು ಪ್ರಮುಖ ಅಂಶಗಳನ್ನು ಹೊಂದಿರಲಿವೆ. ಈ ಬೈಕ್ 452 ಸಿಸಿ ಲಿಕ್ವಿಡ್-ಕೂಲ್ಡ್ ಎಂಜಿನ್ ಹೊಂದಿರಲಿದೆ.


Click it and Unblock the Notifications