ಟಿವಿಎಸ್ ಅಪಾಚೆ ಆರ್‌ಆರ್‌ 310 ಬೈಕ್ ಕುರಿತ ಪ್ರಮುಖಾಂಶಗಳು: ಕೆಲವೇ ಗಂಟೆಗಳ ಹಿಂದೆ ಬಿಡುಗಡೆ.. ಹೇಗಿದೆ?

ಟಿವಿಎಸ್ ಮೋಟಾರ್ (TVS Motor), ಇಂದು ಕೆಲವೊಂದು ನವೀಕರಣಗಳನ್ನು ಪಡೆದುಕೊಂಡಿರುವ ಹೊಚ್ಚ ಹೊಸ ಅಪಾಚೆ ಆರ್‌ಆರ್‌ 310 (TVS Apache RR 310) ಮೋಟಾರ್‌ಸೈಕಲ್‌ನ್ನು ಅದ್ದೂರಿಯಾಗಿ ಬಿಡುಗಡೆ ಮಾಡಿದೆ. ಈ ಬೈಕ್ ಅತ್ಯಾಧುನಿಕ ವಿನ್ಯಾಸ ಹಾಗೂ ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ. ಈಗಾಗಲೇ, ಬುಕ್ಕಿಂಗ್ ಪ್ರಾರಂಭವಾಗಿದೆ. ಆಸಕ್ತ ಗ್ರಾಹಕರು ಕಂಪನಿಯ ಅಧಿಕೃತ ವೆಬ್‌ಸೈಟ್‌ ಅಥವಾ ಸಮೀಪದ ಡೀಲರ್‌ಶಿಪ್‌ಗೆ ಭೇಟಿ ನೀಡಿ ಕಾಯ್ದಿರಿಬಹುದು. ನಾವಿಲ್ಲಿ ನೂತನ ಮೋಟಾರ್‌ಸೈಕಲ್‌ನ ಬೆಲೆ (Price) ಹಾಗೂ ವಿಶೇಷತೆ (Specification) ವೈಶಿಷ್ಟ್ಯಗಳು ಸೇರಿದಂತೆ 5 ಪ್ರಮುಖಾಂಶಗಳ ಕುರಿತಂತೆ ಸಂಪೂರ್ಣವಾಗಿ ವಿವರಿಸಿದ್ದೇವೆ.

ಬೆಲೆ (Price): ಹೊಸ ಟಿವಿಎಸ್ ಅಪಾಚೆ ಆರ್‌ಆರ್‌ 310 (TVS Apache RR 310) ಬೈಕ್ ಸ್ಪರ್ಧಾತ್ಮಕ ಬೆಲೆಗೆ ಖರೀದಿಗೆ ಲಭ್ಯವಿದೆ. ಕ್ವಿಕ್‌ಶಿಫ್ಟರ್ ಇಲ್ಲದ ರೆಡ್ (ಕೆಂಪು) ಬಣ್ಣದ ರೂಪಾಂತರ (ವೇರಿಯೆಂಟ್) ರೂ.2,75,000, ಕ್ವಿಕ್‌ಶಿಫ್ಟರ್‌ವಿರುವ ರೆಡ್ ಬಣ್ಣದ ರೂಪಾಂತರ ರೂ.2,92,000 ಹಾಗೂ ಬಾಂಬರ್ ಗ್ರೇ (ಸಾಧಾರಣ ಬೂದು) ಬಣ್ಣದ ರೂಪಾಂತರ ರೂ. 2,92,000 (ಎಕ್ಸ್ ಶೋರೂಂ) ಬೆಲೆಯನ್ನು ಹೊಂದಿದೆ.

TVS Apache RR 310 Bike Top 5 Things

ವಿನ್ಯಾಸ (Design): ಈ ಅಪಾಚೆ ಆರ್‌ಆರ್‌ 310 ಮೋಟಾರ್‌ಸೈಕಲ್‌ಗೆ ಒಂದಷ್ಟು ಸೂಕ್ಷ್ಮ ಬದಲಾವಣೆಗಳನ್ನು ಮಾಡಿರುವುದು ಬಿಟ್ಟರೆ, ಒಟ್ಟಾರೆ ವಿನ್ಯಾಸದಲ್ಲಿ (ಡಿಸೈನ್) ಅಷ್ಟಾಗಿ ಯಾವುದೇ ಮಾರ್ಪಾಡುಗಳನ್ನು ಮಾಡಲಾಗಿಲ್ಲ. ಇದನ್ನು ಗರಿಷ್ಠ ಹಾರ್ಸ್ ಪವರ್ ಮತ್ತು ಟಾರ್ಕ್ ಉತ್ಪಾದಿಸುವಂತೆ ತಯಾರಿಸಲಾಗಿದೆ. ಜೊತೆಗೆ ಹೊಸದಾಗಿರುವ ವಿಂಗ್‌ಲೆಟ್ಸ್‌ನ್ನು ಒಳಗೊಂಡಿದ್ದು, ಬೈಕ್ ಚಲಿಸುವಾಗ ಗಾಳಿಯ ಒತ್ತಡವನ್ನು ಕಡಿಮೆಗೊಳಿಸುತ್ತದೆ.

ಕಾರ್ಯಕ್ಷಮತೆ (Performance): 2024ರ ಟಿವಿಎಸ್ ಅಪಾಚೆ ಆರ್‌ಆರ್‌ 310 ಮೋಟಾರ್‌ಸೈಕಲ್‌, 312 ಸಿಸಿ ಲಿಕ್ವಿಡ್ ಕೋಲ್ಡ್ ಸಿಂಗಲ್ ಸಿಲಿಂಡರ್ ಪೆಟ್ರೋಲ್ ಎಂಜಿನ್‌ನ್ನು ಪಡೆದಿದೆ. 38 ಬಿಹೆಚ್‍ಪಿ ಅಶ್ವ ಶಕ್ತಿ (ಹಾರ್ಸ್ ಪವರ್) ಹಾಗೂ 29 ಎನ್ಎಂ (ನ್ಯೂಟನ್ ಮೀಟರ್) ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.

TVS Apache RR 310 Bike Top 5 Things

ಈ ಬೈಕ್ 6-ಸ್ಪೀಡ್ ಗೇರ್‌ಬಾಕ್ಸ್‌ ಆಯ್ಕೆಯನ್ನು ಪಡೆದಿದೆ. 164 ಕೆಎಂಪಿಹೆಚ್ ಟಾಪ್ ಸ್ಪೀಡ್‌ನ್ನು ಒಳಗೊಂಡಿದೆ. ಕೇವಲ 6.74 ಸೆಕೆಂಡುಗಳಲ್ಲಿ 0 - 100 ಕೆಎಂಪಿಹೆಚ್ ವೇಗವನ್ನು ಪಡೆಯಲಿದೆ. ಅದೇ ರೀತಿಯಲ್ಲಿ 2.82 ಸೆಕೆಂಡುಗಳಲ್ಲಿ 0 - 60 ಕೆಎಂಪಿಹೆಚ್ ವೇಗವನ್ನು ಹೊಂದಲಿದೆ.

ವೈಶಿಷ್ಟ್ಯಗಳು (Features): ನೂತನ ಟಿವಿಎಸ್ ಅಪಾಚೆ ಆರ್‌ಆರ್‌ 310 ಮೋಟಾರ್‌ಸೈಕಲ್‌ ಬ್ಲೂಟೂತ್ ಕನೆಕ್ಟಿವಿಟಿ & ನ್ಯಾವಿಗೇಷನ್‌ನೊಂದಿಗೆ ಟಿಎಫ್‌ಟಿ ಡಿಸ್ಪ್ಲೇ, ಹೀಟೇಡ್ & ಕೋಲ್ಡ್ ಸೀಟ್, ಬೈ ಡೈರೆಕ್ಷನಲ್ ಕ್ವಿಕ್‌ಶಿಫ್ಟರ್, ಕಾರ್ನರಿಂಗ್ ಟ್ರಾಕ್ಷನ್ ಕಂಟ್ರೋಲ್, ಕ್ರೂಸ್ ಕಂಟ್ರೋಲ್, ಎಬಿಎಸ್ (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್) ಹಾಗೂ ಟಿಪಿಎಂಎಸ್ (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್) ಒಳಗೊಂಡಂತೆ ಹತ್ತಾರು ವೈಶಿಷ್ಟ್ಯಗಳನ್ನು ಒಳಗೊಂಡಿದೆ.

ಸಸ್ಪೆನ್ಷನ್ ಸೆಟಪ್ & ಬ್ರೇಕಿಂಗ್ ಸಿಸ್ಟಮ್ (Suspension & Braking System): ಈ ಬೈಕ್ ಮುಂಭಾಗ (ಫ್ರಂಟ್) ಯುಎಸ್‌ಡಿ ಫೋರ್ಕ್ ಹಾಗೂ ಹಿಂಭಾಗ (ರೇರ್) ಪ್ರಿಲೋಡ್ ಅಡ್ಜಸ್ಟಬಲ್ ಸಸ್ಪೆನ್ಷನ್ ಸೆಟಪ್ ಪಡೆದಿದೆ. ಹ್ಯಾಂಡಲ್ ಬಾರ್‌ನ ಎರಡು ತುದಿಗಳಲ್ಲಿ ಡಿಸ್ಕ್ ಬ್ರೇಕ್‌ ಆಯ್ಕೆಯನ್ನು ಹೊಂದಿದೆ. ನೂತನ ಮೋಟಾರ್‌ಸೈಕಲ್‌ಗೆ ಕೆಟಿಎಂ ಆರ್‌ಸಿ390, ಎಪ್ರಿಲಿಯಾ ಆರ್‌ಎಸ್ 457, ಕವಾಸಕಿ ನಿಂಜಾ 300 ಹಾಗೂ ಬಿಎಂಡಬ್ಲ್ಯೂ ಜಿ 310 ಆರ್‌ಆರ್‌ ಬೈಕ್‌ಗಳು ಪ್ರಬಲವಾದ ಪ್ರತಿಸ್ಪರ್ಧಿಯಾಗಿವೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Monday, September 16, 2024, 20:01 [IST]
English summary
Tvs apache rr 310 bike top 5 things
Read more on tvs motor india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+