TVS Apache: ಟಿವಿಎಸ್ ಅಪಾಚೆ ಆರ್‌ಟಿಆರ್ 160 ರೇಸಿಂಗ್ ಎಡಿಷನ್ ಬೈಕ್ ಬಿಡುಗಡೆ.. ಬೆಲೆ ಎಷ್ಟು?

ಹೊಸೂರು ಮೂಲದ ಟಿವಿಎಸ್ ಮೋಟಾರ್ (TVS Motor) ಜನಪ್ರಿಯ ದ್ವಿಚಕ್ರ ವಾಹನ ತಯಾರಕ ಸಂಸ್ಥೆಯಾಗಿ ಗುರುತಿಸಿಕೊಂಡಿದೆ. ದೇಶೀಯ ಮಾರುಕಟ್ಟೆಯಲ್ಲಿ ಕಂಪನಿಯು ಸ್ಪರ್ಧಾತ್ಮಕ ದರದಲ್ಲಿ ಹಲವು ಬೈಕ್ ಹಾಗೂ ಸ್ಕೂಟರ್‌ಗಳನ್ನು ಮಾರಾಟ ಮಾಡುತ್ತಿದೆ. ಯುವ ಗ್ರಾಹಕರನ್ನು ಗಮನದಲ್ಲಿಟ್ಟುಕೊಂಡು ಬುಧವಾರ 'ಅಪಾಚೆ ಆರ್‌ಟಿಆರ್ ರೇಸಿಂಗ್ ಎಡಿಷನ್' ಮೋಟಾರ್‌ಸೈಕಲ್‌ನ್ನು ಬಿಡುಗಡೆ ಮಾಡಿದೆ. ಬನ್ನಿ.. ನೂತನ ಬೈಕ್‌ನ ಬೆಲೆ, ಕಾರ್ಯಕ್ಷಮತೆ ಹಾಗೂ ವಿಶೇಷತೆಗಳ ಕುರಿತಂತೆ ಸಂಪೂರ್ಣವಾದ ಮಾಹಿತಿಯನ್ನು ತಿಳಿಯೋಣ.

ಬೆಲೆ (Price): ಹೊಚ್ಚ ಹೊಸ ಟಿವಿಎಸ್ ಅಪಾಚೆ ಆರ್‌ಟಿಆರ್ 160 ರೇಸಿಂಗ್ ಎಡಿಷನ್ (TVS Apache RTR 160 Racing Edition) ಮೋಟಾರ್‌ಸೈಕಲ್‌, ರೂ.1,28,720 ಎಕ್ಸ್ ಶೋರೂಂ ದರದಲ್ಲಿ ಖರೀದಿಗೆ ಸಿಗುತ್ತದೆ. ಇದು ಈ ಬೈಕ್‌ನ ಅತ್ಯಂತ ದುಬಾರಿ ಮಾದರಿಯಾಗಿದೆ. ಹಿಂದಿನ ಅಪಾಚೆ ಮೋಟಾರ್‌ಸೈಕಲ್‌ನ ಗರಿಷ್ಠ ಶ್ರೇಣಿ ಮಾದರಿ (ಟಾಪ್ ಎಂಡ್ ಮಾಡೆಲ್) ರೂ.1,27,220 (ಎಕ್ಸ್ ಶೋರೂಂ) ದರವನ್ನು ಪಡೆದಿದೆ.

TVS Apache RTR 160 Racing Edition Launch In India Rs 1 28 Lakh Price Details

ವಿನ್ಯಾಸ (Design): ಈ ಬೈಕ್‌ನ ವಿನ್ಯಾಸದಲ್ಲಿ ಅಲ್ಪಸ್ವಲ್ಪ ಬದಲಾವಣೆಗಳನ್ನು ಮಾಡಲಾಗಿದೆ. ಸಂಪೂರ್ಣವಾಗಿ ಮ್ಯಾಟ್ ಬ್ಲ್ಯಾಕ್ (Matte Black-ತೀಕ್ಷ್ಣ ಕಪ್ಪು) ಬಣ್ಣವನ್ನು ಹೊಂದಿದೆ. ಫ್ಯುಯೆಲ್ (Fuel-ಇಂಧನ) ಟ್ಯಾಂಕ್ ಮತ್ತು ಟೈಲ್ ಸೆಕ್ಷನ್‌ನಲ್ಲಿ ರೆಡ್ (Red-ಕೆಂಪು) ಹಾಗೂ ಗ್ರೇ (Grey-ಬೂದು) ಬಣ್ಣದ ಗೆರೆಗಳ (Streaks) ರಚನೆಯನ್ನು ಪಡೆದಿದ್ದು, ಆಕರ್ಷಕವಾದ 'ರೇಸಿಂಗ್ ಎಡಿಷನ್' ಲೋಗೋವನ್ನು ಒಳಗೊಂಡಿದೆ.

ಕಾರ್ಯಕ್ಷಮತೆ (Performance): ಟಿವಿಎಸ್ ಅಪಾಚೆ ಆರ್‌ಟಿಆರ್ 160 ರೇಸಿಂಗ್ ಎಡಿಷನ್ ಮೋಟಾರ್‌ಸೈಕಲ್‌ ಶಕ್ತಿಯುತ ಪವರ್‌ಟ್ರೇನ್ ಹೊಂದಿದೆ. 159.7 ಸಿಸಿ ಸಿಂಗಲ್-ಸಿಲಿಂಡರ್ ಪೆಟ್ರೋಲ್ ಎಂಜಿನ್ ಪಡೆದಿದೆ. 15.82 ಪಿಎಸ್ ಗರಿಷ್ಠ ಶಕ್ತಿ (ಪವರ್) ಹಾಗೂ 13.85 ಎನ್ಎಂ ಪೀಕ್ ಟಾರ್ಕ್ ಹೊರಹಾಕುತ್ತದೆ. ಜೊತೆಗೆ 5-ಸ್ಪೀಡ್ ಗೇರ್‌ಬಾಕ್ಸ್‌ನ್ನು ತನ್ನದಾಗಿಸಿಕೊಂಡಿದೆ.

TVS Apache RTR 160 Racing Edition Launch In India Rs 1 28 Lakh Price Details

ವೈಶಿಷ್ಟ್ಯಗಳು (Features): ಈ ಬೈಕ್ ಯುವ ಗ್ರಾಹಕರನ್ನು ಆಕರ್ಷಿಸುವ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿದೆ. ಎಲ್‌ಸಿಡಿ ಕನ್ಸೋಲ್ (LCD console), ಬ್ಲೂಟೂತ್ ಕನೆಕ್ಟಿವಿಟಿ, ವಾಯ್ಸ್ ಅಸಿಸ್ಟ್, ಟರ್ನ್-ಬೈ-ಟರ್ನ್ ನ್ಯಾವಿಗೇಷನ್, ಗ್ಲೈಡ್ ಥ್ರೂ ಟೆಕ್ನಾಲಜಿ (GTT), ಎಲ್ಇಡಿ ಹೆಡ್‌ಲ್ಯಾಂಪ್ ಹಾಗೂ ಟೈಲ್ ಲ್ಯಾಂಪ್ ಅನ್ನು ಹೊಂದಿದೆ.

ರೈಡಿಂಗ್ ಮೋಡ್‌ಗಳು (Riding Modes): ಟಿವಿಎಸ್ ಅಪಾಚೆ ಆರ್‌ಟಿಆರ್ 160 ರೇಸಿಂಗ್ ಎಡಿಷನ್ ಮೋಟಾರ್‌ಸೈಕಲ್‌ ಸ್ಪೋರ್ಟ್ (Sport), ಅರ್ಬನ್ (Urban) ಹಾಗೂ ರೈನ್ (Rain) ಎಂಬ ರೈಡಿಂಗ್ ಮೋಡ್‌ನ್ನು ಹೊಂದಿದೆ. ಮುಂಭಾಗ (ಫ್ರಂಟ್) ಟೆಲಿಸ್ಕೋಪಿಕ್ ಪೋರ್ಕ್ಸ್, ಹಿಂಭಾಗ (ರೇರ್) ಡುಯಲ್ ಸ್ಪ್ರಿಂಗ್‌ ಸಸ್ಪೆನ್ಷನ್ ಸೆಟಪ್ ಪಡೆದಿದ್ದು, ಸುರಕ್ಷತೆಗಾಗಿ ಡಿಸ್ಕ್ ಬ್ರೇಕ್‌ನ್ನು ಒಳಗೊಂಡಿದೆ. ಟ್ಯೂಬ್‌ಲೆಸ್ ಟೈರ್‌ಗಳು ಮತ್ತು ಕೆಂಪು (ರೆಡ್) ಬಣ್ಣದಲ್ಲಿರುವ 17-ಇಂಚಿನ ಅಲಾಯ್ ವೀಲ್‌ಗಳನ್ನು ತನ್ನದಾಗಿಸಿಕೊಂಡಿದೆ.

ಇತ್ತೀಚೆಗೆ ಟಿವಿಎಸ್ ಮೋಟಾರ್ (TVS Motor), ಕಳೆದ ತಿಂಗಳ (ಜೂನ್ 2024) ಮಾರಾಟದ ಅಂಕಿಅಂಶಗಳನ್ನು ಪ್ರಕಟಿಸಿದೆ. ಒಟ್ಟು 333,646 ಯುನಿಟ್ (ದ್ವಿಚಕ್ರ ಹಾಗೂ ತ್ರಿಚಕ್ರ) ವಾಹನಗಳನ್ನು ಮಾರಾಟ ಮಾಡಿದೆ. 2023ರ ಜೂನ್‌ನಲ್ಲಿ ಮಾರಿದ 316,411 ಯುನಿಟ್‌ಗೆ ಹೋಲಿಸಿದರೆ ಶೇಕಡ 5% ಬೆಳವಣಿಗೆ ಕಂಡಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Wednesday, July 10, 2024, 18:04 [IST]
English summary
Tvs apache rtr 160 racing edition launch in india rs 1 28 lakh price details
Read more on tvs motor india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+