TVS iQube: 78ನೇ ಸ್ವಾತಂತ್ರ್ಯ ದಿನದ ಸವಿನೆನಪಿಗಾಗಿ ಟಿವಿಎಸ್ ಐಕ್ಯೂಬ್ ಸೆಲೆಬ್ರೇಷನ್ ಎಡಿಷನ್ ಬಿಡುಗಡೆ.. ಬೆಲೆ ಎಷ್ಟು?

ದೇಶಾದ್ಯಂತ ನಾಳೆ (ಆಗಸ್ಟ್ 15) 78ನೇ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಗುತ್ತದೆ. ಈ ದಿನವನ್ನು ನೆನಪಿನಲ್ಲಿ ಉಳಿಯುವಂತೆ ಮಾಡಲು ಜನಪ್ರಿಯ ದ್ವಿಚಕ್ರ ವಾಹನ ತಯಾರಕ ಟಿವಿಎಸ್ ಮೋಟಾರ್ (TVS Motor) ಮುಂದಾಗಿದೆ. ಬುಧವಾರ ಐಕ್ಯೂಬ್ ಸೆಲೆಬ್ರೇಷನ್ ಎಡಿಷನ್ (iQube Celebration Edition) ಎಲೆಕ್ಟ್ರಿಕ್ ಸ್ಕೂಟರ್‌ನ್ನು ಅದ್ದೂರಿಯಾಗಿ ಬಿಡುಗಡೆ ಮಾಡಿದೆ. ಇದು ಐಕ್ಯೂಬ್ 3.4 ಕೆಡಬ್ಲ್ಯೂಹೆಚ್ (iQube 3.4 kWh) ಮತ್ತು ಐಕ್ಯೂಬ್ ಎಸ್ (iQube S) ಎಂಬ ರೂಪಾಂತರಗಳಲ್ಲಿ (Variants) ಖರೀದಿಗೆ ಲಭ್ಯವಿದೆ. ಪ್ರತಿ ರೂಪಾಂತರದಲ್ಲಿ ತಲಾ 1,000 ಯುನಿಟ್‌ನ್ನು ಮಾತ್ರ ಉತ್ಪಾದಿಸಲಾಗುತ್ತದೆ.

ಟಿವಿಎಸ್ ಐಕ್ಯೂಬ್ ಸೆಲೆಬ್ರೇಷನ್ ಎಡಿಷನ್ (TVS iQube Celebration Edition) ಎಲೆಕ್ಟ್ರಿಕ್ ಸ್ಕೂಟರ್ ವಿನ್ಯಾಸದಲ್ಲಿ ಕೆಲವೊಂದು ಕಾಸ್ಮೆಟಿಕ್ (ಸೌಂದರ್ಯಾತ್ಮಕ) ಬದಲಾವಣಿಗಳನ್ನು ಮಾಡಲಾಗಿದೆ. ಡುಯಲ್-ಟೋನ್ ಕಾಪರ್ & ಬ್ಲ್ಯಾಕ್ ಬಣ್ಣದ ಆಯ್ಕೆಯನ್ನು ಹೊಂದಿದೆ. ಈ ಸ್ಕೂಟರ್‌ನ್ನು ಫ್ಲೈಸ್ಕ್ರೀನ್‌ನ ಎಡಭಾಗದಲ್ಲಿ ತ್ರಿವರ್ಣದ ಸ್ಟಿಕ್ಕರ್ ಇದ್ದು, ನಮ್ಮ ದೇಶದ ಧ್ವಜದ ಬಣ್ಣಗಳನ್ನು ಪ್ರತಿನಿಧಿಸುತ್ತದೆ. ಜೊತೆಗೆ ಮುಂಭಾಗದ (ಫ್ರಂಟ್) ಏಪ್ರನ್‌ನಲ್ಲಿ 'ಸೆಲೆಬ್ರೇಷನ್ ಎಡಿಷನ್' ಡೆಕಾಲ್‌ನ್ನು ಪಡೆದಿದೆ.

TVS iQube Celebration Edition Launch In India Price And Features Details

ನೂತನ ಟಿವಿಎಸ್ ಐಕ್ಯೂಬ್ ಸೆಲೆಬ್ರೇಷನ್ ಎಡಿಷನ್ ಅತ್ಯಂತ ಕೈಗೆಟುಕುವ ಬೆಲೆಯಲ್ಲಿ ಖರೀದಿಗೆ ದೊರೆಯುತ್ತದೆ. ಐಕ್ಯೂಬ್ 3.4 ಕೆಡಬ್ಲ್ಯೂಹೆಚ್ ಸೆಲೆಬ್ರೇಷನ್ ಎಡಿಷನ್ ರೂಪಾಂತರ ರೂ.1,19,628 ಹಾಗೂ ಐಕ್ಯೂಬ್ ಎಸ್ ಸೆಲೆಬ್ರೇಷನ್ ಎಡಿಷನ್ ರೂಪಾಂತರ ರೂ.1,29,420 (ಎಕ್ಸ್ ಶೋರೂಂ - ನವದೆಹಲಿ) ಬೆಲೆಯನ್ನು ಹೊಂದಿದೆ. ಆಗಸ್ಟ್ 15ರಿಂದ ಬುಕ್ಕಿಂಗ್ ಶುರುವಾಗಲಿದ್ದು, ಆಗಸ್ಟ್ 26ರಿಂದ ವಿತರಣೆಗಳು ಆರಂಭವಾಗಲಿದೆ.

ಈ ಸೆಲೆಬ್ರೇಷನ್ ಎಡಿಷನ್ ರೂಪಾಂತರಗಳ ಪವರ್‌ಟ್ರೇನ್ ಬಗ್ಗೆ ಹೇಳುವುದಾದರೆ, ಇವು 3 ಕೆಡಬ್ಲ್ಯೂ ಸಾಮರ್ಥ್ಯದ ಮೋಟಾರ್ ಹೊಂದಿವೆ. 4.4 ಕೆಡಬ್ಲ್ಯೂ ಗರಿಷ್ಠ ಶಕ್ತಿ (ಪವರ್) ಉತ್ಪಾದಿಸುತ್ತವೆ. ಟಾಪ್ ಸ್ಪೀಡ್ 78 ಕೆಎಂಪಿಹೆಚ್ ಇದ್ದು, ಸಂಪೂರ್ಣ ಚಾರ್ಜ್‌ನಲ್ಲಿ 100 ಕಿಲೋಮೀಟರ್ ರೇಂಜ್ (ಮೈಲೇಜ್) ನೀಡುತ್ತವೆ. 650 ಡಬ್ಲ್ಯೂ ಚಾರ್ಜರ್ ಬಳಕೆಯಲ್ಲಿ ಈ ಸ್ಕೂಟರ್‌ಗಳ ಬ್ಯಾಟರಿ ಪ್ಯಾಕ್ 0-80% ಚಾರ್ಜ್ ಆಗಲು 4 ಗಂಟೆ 30 ನಿಮಿಷ ತೆಗೆದುಕೊಳ್ಳುತ್ತದೆ.

TVS iQube Celebration Edition Launch In India Price And Features Details

ಕಳೆದ ಮೇ ತಿಂಗಳು ಟಿವಿಎಸ್ ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್‌ನ ಹೊಸ ರೂಪಾಂತರಗಳನ್ನು ಬಿಡುಗಡೆ ಮಾಡಲಾಗಿತ್ತು. ಈ ನೂತನ ಸ್ಕೂಟರ್‌ಗಳನ್ನು 3.04 ಕೆಡಬ್ಲ್ಯೂಹೆಚ್ ಬ್ಯಾಟರಿ ಪ್ಯಾಕ್ ಹೊಂದಿರುವ ಐಕ್ಯೂಬ್ ಮತ್ತು ಐಕ್ಯೂಬ್ ಎಸ್ ರೂಪಾಂತರಗಳೊಂದಿಗೆ ಮಾರಾಟ ಮಾಡಲಾಗುತ್ತದೆ. 2.2 ಕೆಡಬ್ಲ್ಯೂಹೆಚ್ ಬ್ಯಾಟರಿ ಪ್ಯಾಕ್ ಹೊಂದಿರುವ ಐಕ್ಯೂಬ್ ಸ್ಕೂಟರ್ ಆರಂಭಿಕ ರೂಪಾಂತರ (ಎಂಟ್ರಿ ಲೆವೆಲ್ ವೇರಿಯೆಂಟ್) ಆಗಿದ್ದು, ರೂ.94,999 ಎಕ್ಸ್ ಶೋರೂಂ ದರವನ್ನು ಹೊಂದಿದೆ.

ಈ 2.2 ಕೆಡಬ್ಲ್ಯೂಹೆಚ್ ಬ್ಯಾಟರಿಯಿರುವ ಐಕ್ಯೂಬ್, ಭರ್ತಿ ಚಾರ್ಜ್‌ನಲ್ಲಿ 75 ಕಿಲೋಮೀಟರ್ ಓಡುತ್ತದೆ. 75 ಕೆಎಂಪಿಹೆಚ್ ಟಾಪ್ ಸ್ಪೀಡ್ ಹೊಂದಿದ್ದು, ವಾಲ್ನಟ್ ಬ್ರೌನ್, ಪರ್ಲ್ ವೈಟ್ ಬಣ್ಣಗಳೊಂದಿಗೆ ದೊರೆಯುತ್ತದೆ. 5-ಇಂಚಿನ ಟಿಎಫ್‌ಟಿ ಸ್ಕ್ರೀನ್, ಟರ್ನ್-ಬೈ-ಟರ್ನ್ ನ್ಯಾವಿಗೇಷನ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಇದರ ಬ್ಯಾಟರಿಯು ಫಾಸ್ಟ್ ಚಾರ್ಜರ್ ಆಯ್ಕೆಯಲ್ಲಿ 2 ಗಂಟೆಯಲ್ಲಿ ಶೇಕಡ 0-80% ಚಾರ್ಜ್ ಆಗುತ್ತದೆ.

TVS iQube Celebration Edition Launch In India Price And Features Details

ಹೊಸ ಟಿವಿಎಸ್ ಐಕ್ಯೂಬ್ ಎಸ್‌ಟಿ (TVS iQube ST) ಗರಿಷ್ಠ ಶ್ರೇಣಿ ರೂಪಾಂತರ (ಟಾಪ್ ಎಂಡ್ ವೇರಿಯೆಂಟ್) ಆಗಿದ್ದು, 2 ವಿಧದ ಬ್ಯಾಟರಿ ಪ್ಯಾಕ್ ಆಯ್ಕೆಯಲ್ಲಿ ಲಭ್ಯವಿದೆ. 5.1 ಕೆಡಬ್ಲ್ಯೂಹೆಚ್ ಮತ್ತು 3.4 ಕೆಡಬ್ಲ್ಯೂಹೆಚ್ ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಪಡೆದಿದೆ. ಕ್ರಮವಾಗಿ ರೂ.185,373 ಹಾಗೂ ರೂ.155,555 (ಎಕ್ಸ್ ಶೋರೂಂ) ಬೆಲೆಯನ್ನು ಹೊಂದಿದೆ. 100 ರಿಂದ 150 ಕಿಲೋಮೀಟರ್ ರೇಂಜ್ (ಮೈಲೇಜ್) ಕೊಡುತ್ತದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Wednesday, August 14, 2024, 17:17 [IST]
English summary
Tvs iqube celebration edition launch in india price and features details
Read more on tvs motor india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+