TVS iQube: ಬೆಂಗಳೂರಿನಲ್ಲಿ ಟಿವಿಎಸ್ ಐಕ್ಯೂಬ್ ಹೊಸ ರೂಪಾಂತರಗಳು ಬಿಡುಗಡೆ.. ಬೆಲೆ ಎಷ್ಟು, ರೇಂಜ್ ಏನು?
ಹೊಸೂರು ಮೂಲದ ಟಿವಿಎಸ್ ಮೋಟಾರ್ (TVS Motor) ಜನಪ್ರಿಯ ದ್ವಿಚಕ್ರ ವಾಹನ ತಯಾರಕ ಕಂಪನಿಯಾಗಿದೆ. ಬೆಂಗಳೂರಿನಲ್ಲಿ ಬುಧವಾರ ಆಯೋಜಿಸಿದ್ದ ಅದ್ದೂರಿ ಸಮಾರಂಭದಲ್ಲಿ ಐಕ್ಯೂಬ್ (iQube) ಎಲೆಕ್ಟ್ರಿಕ್ ಸ್ಕೂಟರ್‌ನ ಹೊಸ ರೂಪಾಂತರ (ವೇರಿಯೆಂಟ್)ಗಳನ್ನು ಬಿಡುಗಡೆಗೊಳಿಸಿದೆ. ಆ ಬಗ್ಗೆ ಸಂಪೂರ್ಣವಾದ ವಿವರ ಇಲ್ಲಿದೆ.
ಹೊಚ್ಚ ಹೊಸ ಟಿವಿಎಸ್ ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್ (TVS iQube Electric Scooter), ಇನ್ಮುಂದೆ ಐಕ್ಯೂಬ್, ಐಕ್ಯೂಬ್ ಎಸ್ ಹಾಗೂ ಐಕ್ಯೂಬ್ ಎಸ್‌ಟಿ ರೂಪಾಂತರಗಳ ಆಯ್ಕೆಯಲ್ಲಿ ಗ್ರಾಹಕರಿಗೆ ಲಭ್ಯವಿರಲಿದೆ. ಈ ನೂತನ ಮಾದರಿ (ಮಾಡೆಲ್)ಗಳನ್ನು 3.04 ಕೆಡಬ್ಲ್ಯೂಹೆಚ್ ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಹೊಂದಿರುವ ಐಕ್ಯೂಬ್ ಹಾಗೂ ಐಕ್ಯೂಬ್ ಎಸ್ ಆವೃತ್ತಿಗಳೊಂದಿಗೆ ಮಾರಾಟ ಮಾಡಲಾಗುತ್ತದೆ.

ಮೊದಲಿಗೆ ದೇಶೀಯ ಮಾರುಕಟ್ಟೆಗೆ ಕೈಗೆಟುಕುವ ಬೆಲೆಯಲ್ಲಿ ಬಂದಿರುವ ಎಂಟ್ರಿ ಲೆವೆಲ್ ಮಾಡೆಲ್ (ಆರಂಭಿಕ ಆವೃತ್ತಿ) 2.2 ಕೆಡಬ್ಲ್ಯೂಹೆಚ್ ಬ್ಯಾಟರಿಯನ್ನು ಪಡೆದಿರುವ ಐಕ್ಯೂಬ್ ಇ-ಸ್ಕೂಟರ್ ಬಗ್ಗೆ ಮಾತನಾಡೋಣ. ಇದು ರೂ.94,999 ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ. ಭರ್ತಿ ಚಾರ್ಜ್ ನಲ್ಲಿ 75 ಕಿ.ಮೀ ರೇಂಜ್ (ಮೈಲೇಜ್) ನೀಡುತ್ತದೆ. 75 ಕೆಎಂಪಿಹೆಚ್ ಟಾಪ್ ಸ್ಪೀಡ್ (ಗರಿಷ್ಠ ವೇಗ) ಅನ್ನು ಹೊಂದಿದ್ದು, ವಾಲ್ನಟ್ ಬ್ರೌನ್, ಪರ್ಲ್ ವೈಟ್ ಬಣ್ಣಗಳೊಂದಿಗೆ ದೊರೆಯುತ್ತದೆ.
ಈ ಟಿವಿಎಸ್ ಐಕ್ಯೂಬ್ (2.2 ಕೆಡಬ್ಲ್ಯೂಹೆಚ್) ಕಡಿಮೆ ಬೆಲೆಯನ್ನು ಹೊಂದಿದ್ದರೂ ಸಾಕಷ್ಟು ಅತ್ಯಾಧುನಿಕ ವೈಶಿಷ್ಟ್ಯಗಳನ್ನು ಪಡೆದಿದೆ. 5-ಇಂಚಿನ ಟಿಎಫ್‌ಟಿ ಸ್ಕ್ರೀನ್, ಟರ್ನ್-ಬೈ-ಟರ್ನ್ ನ್ಯಾವಿಗೇಷನ್, ವೆಹಿಕಲ್ ಕ್ರ್ಯಾಶ್ & ಟೌ ಅಲರ್ಟ್ ಅನ್ನು ತನ್ನದಾಗಿಸಿಕೊಂಡಿದ್ದು, 30 ಲೀಟರ್ ಸಾಮರ್ಥ್ಯದ ಸೀಟ್ ಬೂಟ್ ಸ್ಪೇಸ್ ಕೂಡ ಹೊಂದಿದೆ. ಇದರ ಬ್ಯಾಟರಿಯು ಫಾಸ್ಟ್ ಚಾರ್ಜರ್ ಆಯ್ಕೆಯಲ್ಲಿ 2 ಗಂಟೆಯಲ್ಲಿ ಶೇಕಡ 0-80% ಚಾರ್ಜ್ ಆಗಿಬಿಡುತ್ತದೆ.

ಹೊಸ ಟಿವಿಎಸ್ ಐಕ್ಯೂಬ್ ಎಸ್‌ಟಿ (TVS iQube ST) ರೂಪಾಂತರವು 2 ವಿಧದ ಬ್ಯಾಟರಿ ಪ್ಯಾಕ್ ಆಯ್ಕೆಯಲ್ಲಿ ಬಿಡುಗಡೆಗೊಂಡಿದೆ. 5.1 ಕೆಡಬ್ಲ್ಯೂಹೆಚ್ ಬ್ಯಾಟರಿಯನ್ನು ಪಡೆದಿರುವ ಮಾದರಿಯು ರೂ.185,373 ಎಕ್ಸ್ ಶೋರೂಂ ದರದಲ್ಲಿ ಖರೀದಿಗೆ ಲಭ್ಯವಿದೆ. ಸಂಪೂರ್ಣ ಚಾರ್ಜ್ ನಲ್ಲಿ 150 ಕಿಲೋಮೀಟರ್ ಓಡುತ್ತದೆ. 82 ಕೆಎಂಪಿಹೆಚ್ ಟಾಪ್ ಸ್ಪೀಡ್‌ನ್ನು ಕೂಡ ಹೊಂದಿದೆ. ಜೊತೆಗೆ 950ಡಬ್ಲ್ಯೂ ಚಾರ್ಜರ್ ಪಡೆದಿದ್ದು, ಇದರ ಬ್ಯಾಟರಿಯು 4 ಗಂಟೆ 18 ನಿಮಿಷಗಳಲ್ಲಿ ಶೇಕಡ 0-80% ಚಾರ್ಜ್ ಆಗುತ್ತದೆ.
ನೂತನ ಐಕ್ಯೂಬ್ ಎಸ್‌ಟಿ (5.1 ಕೆಡಬ್ಲ್ಯೂಹೆಚ್) ರೂಪಾಂತರವು 7-ಇಂಚಿನ ಫುಲ್ - ಕಲರ್ ಟಿಎಫ್‌ಟಿ ಸ್ಕ್ರೀನ್, ವಾಯ್ಸ್ ಅಸಿಸ್ಟ್ - ಅಲೆಕ್ಸಾ ಸ್ಕಿಲ್‌ಸೆಟ್, TPMS (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್), ಡಿಜಿಟಲ್ ಡಾಕ್ಯುಮೆಂಟ್ ಸ್ಟೋರೇಜ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ. 32-ಲೀಟರ್ ಸಾಮರ್ಥ್ಯದ ಸೀಟ್ ಬೂಟ್ ಸ್ಪೇಸ್ ಅನ್ನು ಹೊಂದಿದ್ದು, ಟೈಟಾನಿಯಂ ಗ್ರೇ ಮ್ಯಾಟ್, ಸ್ಟಾರ್‌ಲೈಟ್ ಬ್ಲೂ ಬಣ್ಣಗಳೊಂದಿಗೂ ಸಿಗುತ್ತದೆ.

ಮತ್ತೊಂದು ಟಿವಿಎಸ್ ಐಕ್ಯೂಬ್ ಎಸ್‌ಟಿ ಮಾದರಿಯು 3.4 ಕೆಡಬ್ಲ್ಯೂಹೆಚ್ ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಪಡೆದಿದ್ದು, ರೂ.155,555 ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ. ಪೂರ್ತಿ ಚಾರ್ಜ್ ನಲ್ಲಿ 100 ಕಿಲೋಮೀಟರ್ ಕ್ರಮಿಸುತ್ತದೆ. 78 ಕೆಎಂಪಿಹೆಚ್ ಟಾಪ್ ಸ್ಪೀಡ್‌ನ್ನು ಪಡೆದಿದೆ. ಕೋರಲ್ ಸ್ಯಾಂಡ್ ಸ್ಯಾಟಿನ್, ಸ್ಟಾರ್‌ಲೈಟ್ ಬ್ಲೂ, ಟೈಟಾನಿಯಂ ಗ್ರೇ ಮ್ಯಾಟ್ ಒಳಗೊಂಡಂತೆ ವಿವಿಧ ಬಣ್ಣಗಳೊಂದಿಗೂ ಸಿಗುತ್ತದೆ.
ಈ ಐಕ್ಯೂಬ್ ಎಸ್‌ಟಿ (3.4 ಕೆಡಬ್ಲ್ಯೂಹೆಚ್) ರೂಪಾಂತರವು 7-ಇಂಚಿನ ಫುಲ್ ಕಲರ್ ಟಿಎಫ್‌ಟಿ ಸ್ಕ್ರೀನ್, ವಾಯ್ಸ್ ಅಸಿಸ್ಟ್ ಮತ್ತು ಅಲೆಕ್ಸಾ ಸ್ಕಿಲ್‌ಸೆಟ್, TPMS (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್) ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿದೆ. ಪ್ರಸುತ್ತ ಖರೀದಿಗೆ ಲಭ್ಯವಿರುವ 3.04 ಕೆಡಬ್ಲ್ಯೂಹೆಚ್ ಬ್ಯಾಟರಿಯನ್ನು ಪಡೆದಿರುವ ಐಕ್ಯೂಬ್ ಹಾಗೂ ಐಕ್ಯೂಬ್ ಎಸ್ ಆವೃತ್ತಿಗಳು, ಸಂಪೂರ್ಣ ಚಾರ್ಜ್ ನಲ್ಲಿ 100 ಕಿ.ಮೀ ರೇಂಜ್ ಕೊಡುತ್ತವೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








