TVS iQube: ಲಕ್ಷಾಂತರ ಭಾರತೀಯರ ನೆಚ್ಚಿನ ಸ್ಕೂಟರ್‌ನ ಡೌನ್‌ಪೇಮೆಂಟ್, ಇಎಂಐ, ಲೋನ್ ವಿವರ!
ಭಾರತೀಯ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಕ್ಷೇತ್ರದಲ್ಲಿ ಓಲಾ ಏಥರ್ ಸದ್ದು ಮಾಡುತ್ತಿದ್ದರೂ, ಸದ್ದಿಲ್ಲದಂತೆ ಸದ್ದು ಮಾಡುತ್ತಿರುವ ಕಂಪನಿ ಟಿವಿಎಸ್. ಈಗಾಗಲೇ ಮಾರುಕಟ್ಟೆಯಲ್ಲಿ ಟಿವಿಎಸ್ ಐಕ್ಯೂಬ್, ಚೇತಕ್‌ನಂತಹ ಸ್ಕೂಟರ್‌ಗಳನ್ನು ಪರಿಚಯಿಸಿದ್ದರೂ, ಜನಪ್ರಿಯವಾಗುತ್ತಿರುವುದು ಟಿವಿಎಸ್‌ನ ಐಕ್ಯೂಬ್. ಇಂದಿನ ಲೇಖನದಲ್ಲಿ ಈ ಸ್ಕೂಟರ್‌ನ ಇಎಂಐ, ಲೋನ್, ಡೌನ್‌ಪೇಮೆಎಂಟ್ ಕುರಿತಾಹಿ ನೋಡೋಣ ಬನ್ನಿ.
ಮೊದಲಿಗೆ ಟಿವಿಎಸ್ ಐಕ್ಯೂಬ್ ಸ್ಕೂಟರ್ ಕುರಿತಾಗಿ ನೋಡುವುದಾದರೆ, ಪ್ರಸ್ತುತ, ಭಾರತದ ಮಾರುಕಟ್ಟೆಯಲ್ಲಿ ಖರೀದಿಗೆ ಸಿಗುವ ಟಿವಿಎಸ್ ಐಕ್ಯೂಬ್ (TVS iQube), ಎರಡು ರೂಪಾಂತರದ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದೆ. ರೂ.1,13 ಲಕ್ಷ ಆರಂಭಿಕ ಬೆಲೆಯನ್ನು ಹೊಂದಿದೆ. 3.04 kWh ಲಿಥಿಯಂ - ಐಯಾನ್ ಬ್ಯಾಟರಿ ಪ್ಯಾಕ್ ಪಡೆದಿದ್ದು, ಸಂಪೂರ್ಣ ಚಾರ್ಜಿನಲ್ಲಿ 100 ಕಿಲೋಮೀಟರ್ ರೇಂಜ್ ನೀಡುವ ಸಾಮರ್ಥ್ಯ ಒಳಗೊಂಡಿದೆ.

ಇವೆರಡು ಟಿವಿಎಸ್ ಐಕ್ಯೂಬ್ ರೂಪಾಂತರಗಳು, 3.04 kWh ಸಾಮರ್ಥ್ಯದ ಲಿಥಿಯಂ ಐಯಾನ್ ಬ್ಯಾಟರಿ ಪ್ಯಾಕ್ ಅನ್ನು ಹೊಂದಿವೆ. 140 Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ 4.4 kW ಹಬ್ - ಮೌಂಟೆಡ್ BLDC ಮೋಟಾರ್ ಪಡೆದಿದ್ದು, ಸಂಪೂರ್ಣ ಚಾರ್ಜ್ ನಲ್ಲಿ 100 km ರೇಂಜ್ ನೀಡಲಿವೆ. ಅದರಲ್ಲೂ ನಗರ ಸಂಚಾರಕ್ಕೆ ಹೆಚ್ಚು ಸೂಕ್ತವಾಗಿವೆ.
ಈ ಟಿವಿಎಸ್ ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್, 75 km/h ಟಾಪ್ ಸ್ವೀಡ್ ಹೊಂದಿದ್ದು, ಇದರ 0 - 80% ಬ್ಯಾಟರಿ ಚಾರ್ಜ್ ಆಗಲು 4 ಗಂಟೆ 30 ನಿಮಿಷ ಸಾಕು. ಜೊತೆಗೆ ಯುವ ಗ್ರಾಹಕರನ್ನು ಆಕರ್ಷಿಸುವ ಹಲವು ವೈಶಿಷ್ಟ್ಯಗಳನ್ನು ಪಡೆದಿದೆ. ಫುಲ್-ಕಲರ್ TFT ಇನ್ಸ್ಟ್ರುಮೆಂಟ್ ಕ್ಲಸ್ಟರ್, ರೈಡಿಂಗ್ ಅಂಕಿಅಂಶಗಳು ಒಳಗೊಂಡಂತೆ ವಿವಿಧ ಮಾಹಿತಿಯಾಗಿ ಬ್ಲೂಟೂತ್ ಮೂಲಕ ಸ್ಮಾರ್ಟ್‌ಫೋನ್‌ನೊಂದಿಗೆ ಡಿಸ್‌ಪ್ಲೇ ಕನೆಕ್ಟ್ ಮಾಡಬಹುದು.

ಮೊಬೈಲ್ ಚಾರ್ಜ್ ಮಾಡಲು ಯುಎಸ್‌ಬಿ ಸಾಕೆಟ್, 32 ಲೀಟರ್ ಸಾಮರ್ಥ್ಯದ ಸ್ಟೋರೇಜ್, ಇಕೋ, ಸ್ಪೋರ್ಟ್ ಎಂಬ ರೈಡಿಂಗ್ ಮೋಡ್ ಆಯ್ಕೆಯನ್ನು ಈ ಸ್ಕೂಟರ್ ಒಳಗೊಂಡಿದೆ. ಸ್ಪೋರ್ಟ್ ಮೋಡ್ ನಲ್ಲಿ ಕೇವಲ 4.2 ಸೆಕೆಂಡುಗಳಲ್ಲಿ 0 - 40 kmph ವೇಗವನ್ನು ಪಡೆಯಲಿದೆ.
ಟಿವಿಎಸ್ ಐಕ್ಯೂಬ್ ಭಾರತೀಯ ಮಾರುಕಟ್ಟೆಯಲ್ಲಿ ಎಕ್ಸ್ ಶೋ ರೂಮ್1,28,422 ರಿಂದ ಆರಂಭವಾಗುತ್ತದೆ. ಇದಕ್ಕೆ ಆರ್‌ಟಿಒ ಟ್ಯಾಕ್ಸ್ ಮತ್ತು ಇನ್ಸುರೆನ್ಸ್ ಸೇರಿಸಿ ಬೆಂಗಳೂರಿನಲ್ಲಿ ಆನ್ ರೋಡ್ ಬೆಲೆ ಸುಮಾರು 1,59,644 ರೂಗಳು. ಇದಕ್ಕೆ ನೀವು ಸುಮಾರು 25000 ರೂ ಡೌನ್ ಪೇಮೆಂಟ್ ಮಾಡಿದರೆ 9.7% ಬಡ್ಡಿದರಲ್ಲಿ 5 ವರ್ಷಗಳಿಗೆ ನೀವು ಲೋನ್ ಮಾಡಬಹುದು.
9.7% ಬಡ್ಡಿದರಲ್ಲಿ 5 ವರ್ಷಗಳಿಗೆ ನೀವು ಲೋನ್ ಮಾಡಿದರೆ ಐದು ವರ್ಷಗಳ ಕಾಲಾವಧಿಗೆ ನೀವು ಪ್ರತಿ ತಿಂಗಳು 2,841 ರೂಗಳಷ್ಟು ಇಎಂಐ ಅನ್ನು ಕಟ್ಟಬೇಕಾಗುತ್ತದೆ. ಹೀಗೆ ಕಟ್ಟುವಾಗ ನೀವು ಸುಮಾರು 35,816 ರೂಗಳನ್ನು ಅಧಿಕವಾಗಿ ಕಟ್ಟಬೇಕಾಗುತ್ತದೆ. ಇನ್ನು ಆಯಾ ರಾಜ್ಯದ ಸಬ್ಸಿಡಿಗೆ ಅನುಸಾರವಾಗಿಯೂ ಈ ಸ್ಕೂಟರ್ ಬೆಲೆ ಏರುಪೇರಾಗುತ್ತದೆ.
ಟಿವಿಎಸ್ ಕಂಪನಿಯ ಪ್ರೀಮಿಯಂ ಎಲೆಕ್ಟ್ರಿಕ್ ಸ್ಕೂಟರ್ 'ಎಕ್ಸ್' ಹೋದ ವರ್ಷದ ಆಗಸ್ಟ್ ತಿಂಗಳಲ್ಲಿ ರೂ.2.50 ಲಕ್ಷ ಎಕ್ಸ್ ಶೋರೂಂ ಬೆಲೆಗೆ ಬಿಡುಗಡೆಯಾಗಿತ್ತು. ಈ ಎಲೆಕ್ಟ್ರಿಕ್ ಸ್ಕೂಟರ್, 4.44 kWh ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಆಯ್ಕೆಯನ್ನು ಒಳಗೊಂಡಿದ್ದು, ಭರ್ತಿ ಚಾರ್ಜ್ ನಲ್ಲಿ 140 ಕಿ.ಮೀ ರೇಂಜ್ ನೀಡುತ್ತದೆ. 105 kmph ಟಾಪ್ ಸ್ವೀಡ್ ಪಡೆದಿದ್ದು, ಕೇವಲ 2.6 ಸೆಕೆಂಡುಗಳಲ್ಲಿ 0-40 kmph ವೇಗವನ್ನು ಹೊಂದಲಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications