TVS: ಹೊಸ ಟಿವಿಎಸ್ ಜುಪಿಟರ್ 110 ಸ್ಕೂಟರ್ ಖರೀದಿಸಬೇಕೇ.. ಆನ್-ರೋಡ್ ಬೆಲೆ ಎಷ್ಟು, EMI ಏನು?

ತಮಿಳುನಾಡು ಮೂಲದ ಟಿವಿಎಸ್ ಮೋಟಾರ್ (TVS Motor) ವಿಶ್ವಾಸಾರ್ಹ ದ್ವಿಚಕ್ರ ವಾಹನ (Two wheeler) ತಯಾರಕ ಕಂಪನಿಯಾಗಿ ಗುರುತಿಸಿಕೊಂಡಿದೆ. ಕಳೆದ ಆಗಸ್ಟ್‌ನಲ್ಲಿ ನವೀಕರಿಸಿದ ಜುಪಿಟರ್ 110 (Jupiter 110) ಸ್ಕೂಟರ್‌ನ್ನು ಅದ್ದೂರಿಯಾಗಿ ಬಿಡುಗಡೆ ಮಾಡಿತ್ತು. ಇದು ಆಕರ್ಷಕ ವೈಶಿಷ್ಟ್ಯಗಳೊಂದಿಗೆ ಕೈಗೆಟುಕುವ ಬೆಲೆಯಲ್ಲಿಯೂ ಖರೀದಿಗೆ ಲಭ್ಯವಿದೆ. ನೀವು ಈ ಸ್ಕೂಟರ್‌ನ್ನು ಖರೀದಿಸಲು ಆಲೋಚಿಸಿದ್ದೀರಾ.. ಇಲ್ಲಿ ನೂತನ 'ಜುಪಿಟರ್ 110'ನ ಆನ್-ರೋಡ್ ಬೆಲೆ (On-Road Price) ಹಾಗೂ ಇಎಂಐ (EMI) ಆಯ್ಕೆಯ ಬಗ್ಗೆ ಸಂಪೂರ್ಣವಾಗಿ ವಿವರಿಸಿದ್ದೇವೆ.

ಹೊಚ್ಚ ಹೊಸ ಟಿವಿಎಸ್ ಜುಪಿಟರ್ 110 (TVS Jupiter 110) ಸ್ಕೂಟರ್‌, ಹಲವು ರೂಪಾಂತರಗಳೊಂದಿಗೆ (ವೇರಿಯೆಂಟ್) ಗ್ರಾಹಕರಿಗೆ ಸಿಗುತ್ತದೆ. ಬೆಂಗಳೂರಿನಲ್ಲಿ ಇದರ ಡ್ರಮ್ (Drum) ರೂಪಾಂತರ ರೂ.93,901 ಆನ್-ರೋಡ್ ದರವನ್ನು ಪಡೆದಿದೆ. ನೀವೇನಾದರೂ ರೂ.10,000 ಡೌನ್-ಪೇಮೆಂಟ್ ಪಾವತಿಸಿ ಈ ಸ್ಕೂಟರ್‌ನ್ನು ಮನೆಗೆ ತಂದರೆ, ರೂ.83,901 ಸಾಲವಿರುತ್ತದೆ. ಶೇಕಡ 9.7% ಬಡ್ಡಿ ದರದಲ್ಲಿ 3 ವರ್ಷದ (36 ತಿಂಗಳು) ಅವಧಿಗೆ ಮಾಸಿಕ ರೂ.2,695 ಇಎಂಐ ಕಟ್ಟಬೇಕು.

TVS Jupiter 110 Scooter On-Road Price And Emi Details

ಟಿವಿಎಸ್ ಜುಪಿಟರ್ 110 ಸ್ಕೂಟರ್‌ನ ಡ್ರಮ್ ಅಲಾಯ್ (Drum Alloy) ರೂಪಾಂತರ, ರೂ.99,327 ಆನ್-ರೋಡ್ ಬೆಲೆಯನ್ನು ಹೊಂದಿದೆ. ರೂ.10,000 ಡೌನ್-ಪೇಮೆಂಟ್ ಕಟ್ಟಿ ಈ ಸ್ಕೂಟರ್‌ನ್ನು ತೆಗೆದುಕೊಂಡರೆ, ರೂ.89,327 ಸಾಲ ಉಳಿಯುತ್ತದೆ. ಇದಕ್ಕೆ ಶೇಕಡ 9.7% ಬಡ್ಡಿಯನ್ನು ಹಾಕಿ, 3 ವರ್ಷಗಳಿಗೆ ಪ್ರತಿ ತಿಂಗಳು 2,870 ಇಎಂಐ ಪಾವತಿಸಿಬೇಕು.

ನೂತನ ಟಿವಿಎಸ್ ಜುಪಿಟರ್ 110 ಸ್ಕೂಟರ್‌ನ ಡ್ರಮ್ ಸ್ಮಾರ್ಟ್-ಕನೆಕ್ಟ್ (SmartXonnect) ರೂಪಾಂತರ, ರೂ.1.10 ಲಕ್ಷ ಆನ್-ರೋಡ್ ದರವನ್ನು ಪಡೆದಿದೆ. ರೂ.10,000 ಡೌನ್-ಪೇಮೆಂಟ್ ಪಾವತಿಸಿ ಈ ಸ್ಕೂಟರ್‌ನ್ನು ಖರೀದಿಸಿದರೆ, ರೂ.1 ಲಕ್ಷ ಸಾಲವಿರುತ್ತದೆ. ಶೇಕಡ 9.7% ಬಡ್ಡಿ ದರದಲ್ಲಿ 3 ವರ್ಷದ ಅವಧಿಗೆ ಮಾಸಿಕ ರೂ.3,215 ಇಎಂಐ ಕಟ್ಟಬೇಕು.

ಈ ಟಿವಿಎಸ್ ಜುಪಿಟರ್ 110 ಸ್ಕೂಟರ್‌ನ ಡಿಸ್ಕ್ ಸ್ಮಾರ್ಟ್-ಕನೆಕ್ಟ್ (Disc SmartXonnect) ರೂಪಾಂತರ ರೂ.1.12 ಲಕ್ಷ ಆನ್-ರೋಡ್ ಬೆಲೆಯನ್ನು ಹೊಂದಿದೆ. ರೂ.10,000 ಡೌನ್-ಪೇಮೆಂಟ್ ಕಟ್ಟಿ ಈ ಸ್ಕೂಟರ್‌ನ್ನು ಮನೆ ತಂದರೆ, ರೂ.1 ಲಕ್ಷದಷ್ಟು ಸಾಲ ಉಳಿಯುತ್ತದೆ. ಶೇಕಡ 9.7% ಬಡ್ಡಿಯನ್ನು ಹಾಕಿ, 3 ವರ್ಷಗಳಿಗೆ ಪ್ರತಿ ತಿಂಗಳು ರೂ.3,273 ಪಾವತಿಸಬೇಕು.

ಹೊಸ ಟಿವಿಎಸ್ ಜುಪಿಟರ್ 110 ಸ್ಕೂಟರ್, 113 ಸಿಸಿ ಸಿಂಗಲ್-ಸಿಲಿಂಡರ್ ಏರ್-ಕೋಲ್ಡ್ ಪೆಟ್ರೋಲ್ ಎಂಜಿನ್ ಆಯ್ಕೆಯನ್ನು ಹೊಂದಿದೆ. ಸರಿ ಸುಮಾರು 60 ಕೆಎಂಪಿಎಲ್‌ವರೆಗೆ ಮೈಲೇಜ್ ಕೊಡಬಹುದು ಎಂದು ಅಂದಾಜಿಸಲಾಗಿದೆ. ಇದು 82 ಕೆಎಂಪಿಹೆಚ್ ಟಾಪ್ ಸ್ಪೀಡ್‌ನ್ನು ಒಳಗೊಂಡಿದೆ. ಡಾನ್ ಬ್ಲೂ, ಗ್ಯಾಲಕ್ಟಿಕ್ ಕಾಪರ್ ಮ್ಯಾಟ್ & ಸ್ಟಾರ್ಲೈಟ್ ಬ್ಲೂ ಗ್ಲೋಸ್ ಸೇರಿದಂತೆ ಹಲವು ಬಣ್ಣಗಳೊಂದಿಗೂ ಸಿಗುತ್ತದೆ.

ಈ ಟಿವಿಎಸ್ ಜುಪಿಟರ್ 110 ಸ್ಕೂಟರ್‌ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್‌, ಇಂಟಲಿಜೆಂಟ್ ಸ್ಟಾರ್ಟ್/ ಸ್ಟಾಪ್, ಯುಎಸ್‌‍ಬಿ ಚಾರ್ಜರ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಹೊಂದಿದೆ. ಸುರಕ್ಷತೆಗಾಗಿ ಡ್ರಮ್ & ಡಿಸ್ಕ್ ಬ್ರೇಕ್ ಆಯ್ಕೆಯನ್ನು ಹೊಂದಿದೆ. 12-ಇಂಚಿನ ಅಲಾಯ್ ವೀಲ್‌ಗಳು ಮತ್ತು 33 ಲೀಟರ್‌ನ ಅಂಡರ್ ಸೀಟ್ ಸೋರೇಜ್ ಕೂಡ ಇದರಲ್ಲಿದೆ.

ನಿಮ್ಮ ಗಮನಕ್ಕೆ.. ನಾವಿಲ್ಲಿ ವಿವರಿಸಲಾದ ಟಿವಿಎಸ್ ಜುಪಿಟರ್ 110 ಸ್ಕೂಟರ್‌ ಆನ್-ರೋಡ್ ಬೆಲೆ ಹಾಗೂ ಸಾಲದ ಆಯ್ಕೆಗಳು ರಾಜ್ಯದಿಂದ ರಾಜ್ಯಕ್ಕೆ ರೂಪಾಂತರಗಳನ್ನು (ವೇರಿಯೆಂಟ್) ಅವಲಂಭಿಸಿ ಬೇರೆಯಿರಲಿದೆ. ಹೆಚ್ಚಿನ ಮಾಹಿತಿಗೆ ನಿಮ್ಮ ಹತ್ತಿರದ ಶೋರೂಂಗೆ ಭೇಟಿ ನೀಡಿರಿ.

More from DriveSpark

Article Published On: Saturday, October 5, 2024, 12:00 [IST]
English summary
Tvs jupiter 110 scooter on road price and emi details
Read more on tvs motor india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+