TVS Motor: ಟಿವಿಎಸ್ ದ್ವಿಚಕ್ರ ವಾಹನಗಳ ಅಬ್ಬರ: ಹಿಂದೆಂದಿಗಿಂತ ಅತ್ಯಧಿಕ ಲಾಭ ಗಳಿಸಿದ ಕಂಪನಿ!
TVS ಮೋಟಾರ್ ಕಂಪನಿಯು ಈವೆರೆಗೆ ಎಂದೂ ಕಾಣದ ಅತ್ಯಧಿಕ ಲಾಭವನ್ನು ದಾಖಲು ಮಾಡಿರುವುದಾಗಿ ತಿಳಿಸಿದೆ. ಸೆಪ್ಟೆಂಬರ್ 2024ರ ತ್ರೈಮಾಸಿಕದಲ್ಲಿ ರೂ. 9,228 ಕೋಟಿ ಆದಾಯದೊಂದಿಗೆ ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ13 ರಷ್ಟು ಬೆಳವಣಿಗೆಯನ್ನು ದಾಖಲಿಸಿದೆ. ಕಳೆದ ವರ್ಷ ಸೆಪ್ಟೆಂಬರ್ (2023) ತ್ರೈಮಾಸಿಕದಲ್ಲಿ 8,145 ಕೋಟಿ ಆದಯ ಗಳಿಸಿತ್ತು. ರಫ್ತು ಸೇರಿದಂತೆ ಒಟ್ಟಾರೆ ದ್ವಿಚಕ್ರ ವಾಹನ ಮತ್ತು ತ್ರಿಚಕ್ರ ವಾಹನಗಳ ಮಾರಾಟವು ಶೇ14 ರಷ್ಟು ಏರಿಕೆಯಾಗಿದೆ ಎಂದು ಟಿವಿಎಸ್ ಮೋಟಾರ್ ಕಂಪನಿ ತಿಳಿಸಿದೆ.
ಸೆಪ್ಟೆಂಬರ್ 2023ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ ಮಾರಾಟವಾಗಿದ್ದ 10.74 ಲಕ್ಷ ಯುನಿಟ್ ವಾಹನಗಳಿಗೆ ಹೋಲಿಸಿದರೆ ಈ ಬಾರಿ (2024) 12.28 ಲಕ್ಷ ಯುನಿಟ್ ವಾಹನಗಳ ತ್ರೈಮಾಸಿಕ ಮಾರಾಟವನ್ನು ದಾಖಲಿಸಿದೆ. ಸೆಪ್ಟೆಂಬರ್ 2023ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ ಮೋಟಾರ್‌ಸೈಕಲ್ ಮಾರಾಟವು 4.93 ಲಕ್ಷ ಯುನಿಟ್ ಇದ್ದು, ಸೆಪ್ಟೆಂಬರ್ 2024 ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ ಈ ಮಾರಾಟ ಹೆಚ್ಚಾಗಿ 5.60 ಲಕ್ಷ ಯುನಿಟ್ ವಾಹನಗಳನ್ನು ನೋಂದಾಯಿಸಿದೆ.

ಸೆಪ್ಟೆಂಬರ್ 2024 ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ ಸ್ಕೂಟರ್ ಮಾರಾಟವು ಶೇ17 ರಷ್ಟು ಬೆಳವಣಿಗೆಯನ್ನು ದಾಖಲಿಸಿದೆ. ಎರಡನೇ ತ್ರೈಮಾಸಿಕದಲ್ಲಿ 4.20 ಲಕ್ಷ ಯೂನಿಟ್‌ಗಳ ಮಾರಾಟಕ್ಕಿಂತ ಹೆಚ್ಚಾಗಿ 4.90 ಲಕ್ಷ ಯುನಿಟ್‌ಗಳನ್ನು ದಾಖಲಿಸಿದೆ. ದ್ವಿಚಕ್ರ ವಾಹನ ರಫ್ತುಗಳು 2024 ರ ಸೆಪ್ಟೆಂಬರ್‌ಗೆ ಕೊನೆಗೊಂಡ ತ್ರೈಮಾಸಿಕದಲ್ಲಿ 2.78 ಲಕ್ಷ ಯೂನಿಟ್‌ಗಳನ್ನು ದಾಖಲಿಸುವ ಮೂಲಕ ಶೇ16 ರಷ್ಟು ಬೆಳವಣಿಗೆಯನ್ನು ದಾಖಲಿಸಿದೆ.
EV ಮಾರಾಟ: ಪರಿಶೀಲನೆಯಲ್ಲಿರುವ ತ್ರೈಮಾಸಿಕದಲ್ಲಿ, ಕಂಪನಿಯ EV ಮಾರಾಟವು ಸೆಪ್ಟೆಂಬರ್ 2023 ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ 0.58 ಲಕ್ಷ ಯುನಿಟ್ ವಾಹನಗಳು ಮಾರಾಟವಾಗಿದ್ದವು. ಸೆಪ್ಟೆಂಬರ್ 2024 ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ 0.75 ಲಕ್ಷ ಯುನಿಟ್ ವಾಹನಗಳ ಅತ್ಯಧಿಕ ತ್ರೈಮಾಸಿಕ ಮಾರಾಟವನ್ನು ಕಂಡಿದ್ದು, ಶೇ31 ರಷ್ಟು ಹೆಚ್ಚಿನ ಬೆಳವಣಿಗೆ ಕಂಡಿದೆ.

ಅರ್ಧ - ವರ್ಷದ ಫಲಿತಾಂಶಗಳು: ಸೆಪ್ಟೆಂಬರ್ 2024 ರ ಅರ್ಧ ವರ್ಷದಲ್ಲಿ ಕಂಪನಿಯ ಒಟ್ಟು ದ್ವಿಚಕ್ರ ವಾಹನಗಳ ಮಾರಾಟವು ಶೇ15 ರಷ್ಟು ಬೆಳೆದು 22.47 ಲಕ್ಷ ಯೂನಿಟ್ ವಾಹನಗಳ ಮಾರಾವನ್ನು ನೋಂದಾಯಿಸಿದೆ. ಆದರೆ ಕಳೆದ ಸೆಪ್ಟೆಂಬರ್ 2023 ರ ಅರ್ಧ ವರ್ಷದಲ್ಲಿ 19.50 ಲಕ್ಷ ಯುನಿಟ್ ವಾಹನಗಳ ಮಾರಾಟವನ್ನು ದಾಖಲಿಸಿತ್ತು.
ಒಟ್ಟು ತ್ರಿಚಕ್ರ ವಾಹನ ಸೆಪ್ಟೆಂಬರ್ 2024 ರ ಅರ್ಧ ವರ್ಷದ ಮಾರಾಟವು 0.69 ಲಕ್ಷ ಯುನಿಟ್‌ಗಳಾಗಿದ್ದು, ಸೆಪ್ಟೆಂಬರ್ 2023 ರ ಅರ್ಧ ವರ್ಷದಲ್ಲಿ 0.78 ಲಕ್ಷ ಯುನಿಟ್‌ಗಳು ನೋಂದಾಯಿಸಲಾಗಿದೆ. ಸೆಪ್ಟೆಂಬರ್ 2024 ರ ಅರ್ಧ ವರ್ಷದಲ್ಲಿ ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳ ಒಟ್ಟು ರಫ್ತು ಶೇ11 ರಷ್ಟು ಹೆಚ್ಚಾಗಿದೆ. ಸೆಪ್ಟೆಂಬರ್ 2023ಕ್ಕೆ ಅಂತ್ಯಗೊಂಡ ಅರ್ಧ ವರ್ಷದಲ್ಲಿ 5.04 ಲಕ್ಷ ಯೂನಿಟ್‌ಗಳಿಗೆ ಹೋಲಿಸಿದರೆ 5.62 ಲಕ್ಷ ಯೂನಿಟ್‌ಗಳು ಹೆಚ್ಚಾಗಿವೆ.

ಸೆಪ್ಟೆಂಬರ್ 2024 ರ ತ್ರೈಮಾಸಿಕದಲ್ಲಿ ಕೊನೆಗೊಂಡ ತ್ರೈಮಾಸಿಕದಲ್ಲಿ, ಕಂಪನಿಯು ಹೊಸ TVS ಜುಪಿಟರ್ 110 ಅನ್ನು ಸಾಟಿಯಿಲ್ಲದ ವಿನ್ಯಾಸ, ಕಾರ್ಯಕ್ಷಮತೆ, ಸೌಕರ್ಯ ಮತ್ತು ಅನುಕೂಲತೆಯೊಂದಿಗೆ ಬಿಡುಗಡೆ ಮಾಡಿತು. ಇದು ಮೊದಲ ಮತ್ತು ಅತ್ಯುತ್ತಮ-ವಿಭಾಗದ ವೈಶಿಷ್ಟ್ಯಗಳೊಂದಿಗೆ ಬರುತ್ತಿದ್ದು, ಗ್ರಾಹಕರಿಂದ ಹೊಸ TVS ಜುಪಿಟರ್ 110 ಹೆಚ್ಚು ಬೇಡಿಕೆ ಸ್ವೀಕರಿಸುತ್ತಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








