ತಿಂಗಳಿಗೆ 4.8 ಲಕ್ಷ ವಾಹನಗಳ ಮಾರಾಟ: ಈ ಬ್ರಾಂಡ್‌ನ ದ್ವಿಚಕ್ರ ವಾಹನಗಳಿಗೆ ಫುಲ್ ಡಿಮ್ಯಾಂಡ್
ಭಾರತದ ಪ್ರಮುಖ ದ್ವಿಚಕ್ರ ವಾಹನ ತಯಾರಕರಾದ ಟಿವಿಎಸ್ ಮೋಟಾರ್ ಕಂಪನಿಯು, ಕಳೆದ ತಿಂಗಳು ಸೆಪ್ಟೆಂಬರ್‌ನಲ್ಲಿ ಬರೋಬ್ಬರಿ 4,82,495 ಯುನಿಟ್ ವಾಹನಗಳನ್ನು ಮಾರಾಟ ಮಾಡಿರುವುದಾಗಿ ಘೋಷಿಸಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ (ಸೆಪ್ಟೆಂಬರ್ 2023) ಮಾರಾಟವಾಗಿದ್ದ 4,02,553 ಯುನಿಟ್ ವಾಹನಗಳಿಗೆ ಹೋಲಿಸಿದರೆ ಶೇ20 ರಷ್ಟು ಬೆಳವಣಿಗೆ ಕಂಡಿದೆ. ಇದು ಕಂಪನಿಯ ದ್ವಿಚಕ್ರ ವಾಹನ, ತ್ರಿಚಕ್ರ ವಾಹನ, ಎಲೆಕ್ಟ್ರಿಕ್ ವಾಹಗಳನ್ನು ಒಳಗೊಂಡಂತೆ ಎಲ್ಲಾ ವಾಹನಗಳ ಒಟ್ಟು ಮಾರಾಟ ಅಂಕಿಅಂಶಗಳಾಗಿವೆ. ಸ್ಕೂಟರ್, ಬೈಕ್, ಆಟೋ, ಇವಿಗಳ ಪ್ರತ್ಯೇಕ ಮಾರಾಟ ಅಂಕಿ ಅಂಶಗಳು ಕೆಳಗಿನಂತಿವೆ.
ದ್ವಿಚಕ್ರ ವಾಹನ: ಸೆಪ್ಟೆಂಬರ್ 2024 ರಲ್ಲಿ ಒಟ್ಟು (ರಫ್ತು ಸೇರಿದಂತೆ) 4,71,792 ಯೂನಿಟ್ ದ್ವಿಚಕ್ರ ವಾಹನಗಳು (ಸ್ಕೂಟರ್ ಹಾಗೂ ಬೈಕ್) ಮಾರಾಟವಾಗಿವೆ. ಕಳೆದ ವರ್ಷ ಇದೇ ಅವಧಿಯಲ್ಲಿ ಮಾರಾವಾಗಿದ್ದ (ಸೆಪ್ಟೆಂಬರ್ 2023) 3,86,955 ಯುನಿಟ್ ವಾಹನಗಳಿಗೆ ಹೋಲಿಸಿಕೊಂಡರೆ ಶೇ 22 ರಷ್ಟು ಬೆಳವಣಿಗೆಯನ್ನು ದಾಖಲಿಸಿವೆ.

ದೇಶೀಯ ಮಾರಾಟವನ್ನು ನೋಡುವುದಾದ್ರೆ, ಸೆಪ್ಟೆಂಬರ್ 2024 ರಲ್ಲಿ ಬರೋಬ್ಬರಿ 3,69,138 ಯುನಿಟ್ ದ್ವಿಚಕ್ರ ವಾಹನಗಳು ಮಾರಾಟವಾಗಿವೆ. ಕಳೆದ ವರ್ಷ ಇದೇ ಅವಧಿಯಲ್ಲಿ (ಸೆಪ್ಟೆಂಬರ್ 2023) 3,00,493 ಯುನಿಟ್ ವಾಹನಗಳನ್ನು ಭಾರತದಲ್ಲಿ ಮಾರಾಟ ಮಾಡಲಾಗಿತ್ತು. ಈ ಮೂಲಕ ದೇಶಿಯವಾಗಿ ಶೇ23 ರಷ್ಟು ಬೆಳವಣಿಗೆಯನ್ನು ದಾಖಲಿಸಿದೆ.
ಬೈಕ್ ಮಾರಾಟ: ಸೆಪ್ಟೆಂಬರ್ 2024 ರಲ್ಲಿ 2,29,268 ಯುನಿಟ್ ಟಿವಿಎಸ್ ಬೈಕ್‌ಗಳು ಮಾರಾಟವಾಗಿದ್ದು, ಕಳೆದ ವರ್ಷ ಇದೇ ಅವಧಿಯಲ್ಲಿ (ಸೆಪ್ಟೆಂಬರ್ 2023) ಮಾರಾಟವಾಗಿದ್ದ 1,86,438 ಯುನಿಟ್ ಟಿವಿಎಸ್ ಬೈಕ್‌ಗಳಿಗೆ ಹೋಲಿಸಿಕೊಂಡರೆ ಶೇ23 ರಷ್ಟು ಬೆಳವಣಿಗೆಯನ್ನು ದಾಖಲಿಸಿದೆ ಎಂದು ಟಿವಿಎಸ್ ಮೋಟಾರ್ ತಿಳಿಸಿದೆ.

ಸ್ಕೂಟರ್ ಮಾರಾಟ: ಸೆಪ್ಟೆಂಬರ್ 2024 ರಲ್ಲಿ 1,86,751 ಸ್ಕೂಟರ್‌ಗಳು ಮಾರಾಟವಾಗಿದ್ದು, ಕಳೆದ ವರ್ಷ ಇದೇ ಅವಧಿಯಲ್ಲಿ (ಸೆಪ್ಟೆಂಬರ್ 2023) ಮಾರಾಟವಾಗಿದ್ದ 1,55,526 ಯುನಿಟ್ ಸ್ಕೂಟರ್‌ಗಳಿಗೆ ಹೋಲಿಸಿಕೊಂಡರೆ ಶೇ 20% ರಷ್ಟು ಬೆಳವಣಿಗೆಯನ್ನು ದಾಖಲಿಸಿದೆ. ಇವಿ ಸ್ಕೂಟರ್ ವಿಷಯಕ್ಕೆ ಬಂದರೆ ಸೆಪ್ಟೆಂಬರ್ 2024 ರಲ್ಲಿ 28,901 ಸ್ಕೂಟರ್‌ಗಳ ಮಾರಾಟದೊಂದಿಗೆ ಶೇ42 ರಷ್ಟು ಬೆಳವಣಿಗೆಯನ್ನು ದಾಖಲಿಸಿದೆ.
ತ್ರಿಚಕ್ರ ವಾಹನ: ಸೆಪ್ಟೆಂಬರ್ 2023 ರಲ್ಲಿ ಮಾರಾಟವಾಗಿದ್ದ 15,598 ತ್ರಿಚಕ್ರ ವಾಹನಗಳಿಗೆ ಹೋಲಿಸಿದರೆ 2024 ರ ಸೆಪ್ಟೆಂಬರ್‌ನಲ್ಲಿ 10,703 ಯುನಿಟ್‌ಗಳ ಮಾರಾಟವನ್ನು ದಾಖಲಿಸಿದೆ. ಎಲ್ಲಾ ವಾಹನಗಳ ರಫ್ತು ವಿಚಾರಕ್ಕೆ ಬಂದರೆ, ಕಳೆದ ವರ್ಷ ಇದೇ ಅವಧಿಯಲ್ಲಿ 1,00,294 ಯುನಿಟ್ ವಾಹನಗಳಿಂದ ಸೆಪ್ಟೆಂಬರ್ 2024 ರಲ್ಲಿ 1,11,007 ಯೂನಿಟ್ ವಾಹನಗಳು ಮಾರಾಟವಾಗುವುದರೊಂದಿಗೆ ಕಂಪನಿಯ ಒಟ್ಟು ರಫ್ತುಗಳು ಶೇ11 ರಷ್ಟು ಬೆಳವಣಿಗೆಯನ್ನು ದಾಖಲಿಸಿದೆ.

ಹಣಕಾಸು ವರ್ಷದ 2024-25 ರ ಎರಡನೇ ತ್ರೈಮಾಸಿಕದಲ್ಲಿ, ಕಂಪನಿಯ ದ್ವಿಚಕ್ರ ವಾಹನವು ಮಾರಾಟವು ಶೇ15 ರಷ್ಟು ಬೆಳವಣಿಗೆಯನ್ನು ದಾಖಲಿಸಿದೆ. 2023-24 ರ ಆರ್ಥಿಕ ವರ್ಷದ ಎರಡನೇ ತ್ರೈಮಾಸಿಕದಲ್ಲಿ 10.31 ಲಕ್ಷ ಯುನಿಟ್‌ಗಳಿಂದ ಮಾರಾಟವು ಎರಡನೇ ತ್ರೈಮಾಸಿಕದಲ್ಲಿ 11.90 ಲಕ್ಷ ಯುನಿಟ್‌ಗಳಿಗೆ ಏರಿಕೆಯಾಗಿದೆ ಎಂದು ಟಿವಿಎಸ್ ಮೋಟಾರ್ಸ್ ತಿಳಿಸಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








