TVS: ಕಂಪನಿಗೆ ಚಿನ್ನದ ಮೊಟ್ಟೆಯಾದ ರೈಡರ್ 125... ಜನಪ್ರಿಯ ಅಪಾಚಿಯನ್ನೇ ಹಿಂದಿಕ್ಕಿದೆ!

ಬಿಡುಗಡೆಯಾದ ಅತಿ ಕಡಿಮೆ ಅವಧಿಯಲ್ಲೆ TVS ರೈಡರ್ 125 ಮೋಟಾರ್‌ಸೈಕಲ್ ದಾಖಲೆಯ ಮಾರಾಟವನ್ನು ಕಂಡಿದೆ. ದೇಶೀಯ ಮಾರುಕಟ್ಟೆಯಲ್ಲಿ ಈವೆರೆಗೆ ಬರೋಬ್ಬರಿ 7 ಲಕ್ಷ ವಾಹನಗಳನ್ನು ಮಾರಾಟ ಮಾಡುವ ಮೂಲಕ ಟಿವಿಎಸ್ ಮೋಟಾರ್ ಕಂಪನಿಯ ಮೊದಲ 125 ಸಿಸಿ ವಿಭಾಗದಲ್ಲಿ ಚಿನ್ನದ ಮೊಟ್ಟೆಯಾಗಿ ಹೊರಹೊಮ್ಮಿದೆ.

2024 ರ ಹಣಕಾಸು ವರ್ಷದ ಮೊದಲ 10 ತಿಂಗಳಲ್ಲಿ 3,98,354 ಯುನಿಟ್ ವಾಹನ ಮಾರಾಟ ಮಾಡಿದೆ. ಇದು ಕಂಪನಿಯ ಜನಪ್ರಿಯ ಮಾದರಿ ಅಪಾಚೆಗಿಂತ ಹೆಚ್ಚು ಮುಂದಿದ್ದು, ಕಂಪನಿಯ ಅತಿ ಹೆಚ್ಚು ಮಾರಾಟ ಕಾಣುವ ಜೂಪಿಟರ್ ಸ್ಕೂಟರ್ (699,613 ಯುನಿಟ್‌ಗಳು) ಮತ್ತು ಎಕ್ಸ್ಎಲ್ ಮೊಪೆಡ್ (399,877 ಯುನಿಟ್‌ಗಳು) ನಂತರ ಕಂಪನಿಯ ಮೂರನೇ ಹೆಚ್ಚು ಮಾರಾಟವಾದ ದ್ವಿಚಕ್ರ ವಾಹನವಾಗಿ ಗುರ್ತಿಸಿಕೊಂಡಿದೆ.

tvs-rider-125-motorcycle-achieves-7-lakh-sales-milestone

TVS ರೈಡರ್ 125 ಮೋಟಾರ್‌ಸೈಕಲ್ 2021 ಸೆಪ್ಟೆಂಬರ್ 16 ರಂದು ಭಾರತದಲ್ಲಿ ಬಿಡುಗಡೆಯಾಗಿತ್ತು. ಅಂದಿನಿಂದ ತನ್ನ ನಿಲ್ಲದ ಬೇಡಿಕೆಯೊಂದಿಗೆ ಈವರೆಗೆ (29 ತಿಂಗಳಲ್ಲಿ) ಬರೋಬ್ಬರಿ 7,14,484 ವಾಹನಗಳನ್ನು ಮಾರಾಟ ಮಾಡಿದೆ. ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ಟಿವಿಎಸ್‌ನ ಒಟ್ಟಾರೆ ಬೆಳವಣಿಗೆಗೆ ಪ್ರಮುಖ ಕೊಡುಗೆ ನೀಡಿದೆ. ಟೆಕ್-ಲೋಡ್ ರೈಡರ್ ಜೆನ್-ಝಡ್ ಮೋಟಾರ್ ಸೈಕಲ್ ಖರೀದಿದಾರರಿಂದ ಗ್ರಾಹಕರ ಸ್ವೀಕಾರದ ವೇಗವನ್ನು ಹೆಚ್ಚಿಸುತ್ತಿದೆ.

ಪ್ರಸಕ್ತ ಹಣಕಾಸು ವರ್ಷ 2024ರ ಮೊದಲ 10 ತಿಂಗಳಲ್ಲಿ 3,98,354 ವಾಹನ ಮಾರಾಟದ ಮೂಲಕ ಶೇ 124 ರಷ್ಟು ಬೆಳವಣಿಗೆ ಕಂಡಿದ್ದು, ತೀವ್ರ ಪೈಪೋಟಿಯಿರುವ 125 ಸಿಸಿ ವಿಭಾಗದ ಹೀರೋ ಗ್ಲಾಮರ್ ಮತ್ತು ಸೂಪರ್ ಸ್ಪ್ಲೆಂಡರ್, ಬಜಾಜ್ ಪಲ್ಸರ್ ಮತ್ತು ಹೋಂಡಾ ಶೈನ್ ನಂತಹ ಅತ್ಯಂತ ಸ್ಪರ್ಧಾತ್ಮಕ ಬೈಕ್‌ಗಳ ಎದರು, ರೈಡರ್ 125ನ ನಿರಂತರ ಮಾರಾಟದ ವೇಗವು ಪ್ರಶಂಸನೀಯವಾಗಿದೆ.

tvs-rider-125-motorcycle-achieves-7-lakh-sales-milestone

TVS ರೈಡರ್ 125 ವಿಶೇಷತೆಗಳು: ಅದರ ಅಥ್ಲೆಟಿಕ್ ಲುಕ್ ಹಾಗೂ ಸ್ಟೈಲ್, ಮಸ್ಕ್ಯುಲರ್ ಟ್ಯಾಂಕ್, ಆಕರ್ಷಕ ಹೆಡ್‌ಲೈಟ್, ಸ್ಪ್ಲಿಟ್ ಸೀಟ್ ಹಾಗೂ ಆಕರ್ಷಕ ಟೈಲ್-ಲ್ಯಾಂಪ್ ಎಂಥವರನ್ನೂ ಸೆಳೆಯುತ್ತದೆ. ಜೊತೆಗೆ ಅಕ್ಟೋಬರ್ 2022ರಲ್ಲಿ ಈ ಬೈಕ್ ಅನ್ನು ಅತ್ಯಾಧುನಿಕ TFT ಕ್ಲಸ್ಟರ್ ನೊಂದಿಗೆ ನವೀಕರಿಸಲಾಯಿತು. ಇದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಯುವ ಗ್ರಾಹಕರನ್ನು ಆಕರ್ಷಿಸಲು ಸಾಧ್ಯವಾಗಿದೆ.

ಟಿವಿಎಸ್ ರೈಡರ್ 125 ಬೈಕ್ ಎಂಜಿನ್ ಬಗ್ಗೆ ತಿಳಿಯುವುದಾದರೆ, ಇದು 124.8ಸಿಸಿ, ಏರ್ ಕೂಲ್ಡ್, ಫ್ಯೂಯಲ್ ಇಂಜೆಕ್ಟ್ದ್ ಎಂಜಿನ್ ಹೊಂದಿದ್ದು, 11.38 PS ಗರಿಷ್ಠ ಪವರ್ ಹಾಗೂ 11.2 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. 5 ಸ್ವೀಡ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದ್ದು, 67kmpl ಮೈಲೇಜ್ ನೀಡಲಿದೆ.

tvs-rider-125-motorcycle-achieves-7-lakh-sales-milestone

ಈ ಬೈಕ್, ಇಕೋ ಹಾಗೂ ಸ್ಪೋರ್ಟ್ಸ್ ಎಂಬ ಎರಡು ರೈಡಿಂಗ್ ಮೋಡ್ ಹೊಂದಿದ್ದು, ಐಡಲಿಂಗ್ ಸ್ಟಾಪ್-ಸ್ಟಾರ್ಟ್ ಬಟನ್ ಪಡೆದಿದೆ. ಜೊತೆಗೆ ಫ್ರಂಟ್ ಟೆಲಿಸ್ಕೋಪಿಕ್ ಫೋರ್ಕ್ ಮತ್ತು ರೇರ್ 5 ಸ್ಟೆಪ್ ಪ್ರಿಲೋಡ್ ಅಡ್ಜಸ್ಟೆಬಲ್ ಮೊನೊಶಾಕ್ ಸಸ್ಪೆಷನ್ ಸೆಟಪ್ ಹೊಂದಿದೆ. ಬ್ರೇಕಿಂಗ್ ಸಿಸ್ಟಮ್ ಬಗ್ಗೆ ಹೇಳುವುದಾದರೆ, ಫ್ರಂಟ್, 240ಎಂಎಂ ಡಿಸ್ಕ್/ 130ಎಂಎಂ ಡ್ರಮ್, ರೇರ್ 130ಎಂಎಂ ಡ್ರಮ್ ಬ್ರೇಕ್ ಹೊಂದಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Sunday, February 25, 2024, 11:00 [IST]
English summary
Tvs rider 125 motorcycle achieves 7 lakh sales milestone
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+