TVS: ಟಿವಿಎಸ್ ಬೈಕ್ - ಸ್ಕೂಟರ್‌ಗಳಿಗೆ ಸಖತ್ ಡಿಮ್ಯಾಂಡ್.. ಐಕ್ಯೂಬ್‌ಗಾಗಿ ಕ್ಯೂ ನಿಂತ ಜನರು!

ಟಿವಿಎಸ್ ಮೋಟಾರ್ (TVS Motor) ವಿಶ್ವಾಸಾರ್ಹ ದ್ವಿಚಕ್ರ ವಾಹನ ತಯಾರಕ ಕಂಪನಿಯಾಗಿ ಗುರುತಿಸಿಕೊಂಡಿದೆ. ದೇಶೀಯ ಮಾರುಕಟ್ಟೆಯಲ್ಲಿ ಆಕರ್ಷಕ ವೈಶಿಷ್ಟ್ಯಗಳನ್ನು ಹೊಂದಿರುವ ವಿವಿಧ ಮೋಟಾರ್‌ಸೈಕಲ್ ಹಾಗೂ ಸ್ಕೂಟರ್‌ಗಳನ್ನು ಮಾರಾಟ ಮಾಡುತ್ತಿದೆ. ಇವುಗಳು ಅತ್ಯಂತ ಕೈಗೆಟುಕುವ ಬೆಲೆಯಲ್ಲಿ ಖರೀದಿಗೆ ದೊರೆಯುವುದರಿಂದ ಮಧ್ಯಮ ವರ್ಗದ ಜನರು ಇಷ್ಟಪಟ್ಟು ಖರೀದಿಸುತ್ತಿದ್ದಾರೆ. ಕಂಪನಿಯು ಭಾನುವಾರ ಆಗಸ್ಟ್ ತಿಂಗಳ (2024) ಮಾರಾಟದ ಅಂಕಿಅಂಶಗಳನ್ನು ಪ್ರಕಟಿಸಿದ್ದು, ನಿರೀಕ್ಷೆಗೂ ಮೀರಿದ ಪ್ರಗತಿ ಸಾಧಿಸಿದೆ. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

ಟಿವಿಎಸ್ ಮೋಟಾರ್ ಕಳೆದ ತಿಂಗಳು (ಆಗಸ್ಟ್ 2024) ಒಟ್ಟು 391,588 ಯುನಿಟ್ ವಾಹನಗಳನ್ನು (ದ್ವಿಚಕ್ರ & ತ್ರಿಚಕ್ರ) ಮಾರಾಟಗೊಳಿಸಿದೆ. 2023ರ ಆಗಸ್ಟ್‌ನಲ್ಲಿ ಮಾರಾಟ ಮಾಡಿದ 345,848 ಯುನಿಟ್‌ಗೆ ಹೋಲಿಸಿದರೆ, ವರ್ಷದಿಂದ ವರ್ಷಕ್ಕೆ ಶೇಕಡ 13% ಪ್ರಗತಿ ಸಾಧಿಸಿದೆ. ದ್ವಿಚಕ್ರ (Two-Wheeler) ವಾಹನ ವಿಭಾಗದಲ್ಲಿ ಈ ಆಗಸ್ಟ್‌ನಲ್ಲಿ 378,841 ಯುನಿಟ್ ಬೈಕ್ ಮತ್ತು ಸ್ಕೂಟರ್‌ಗಳನ್ನು ಮಾರಾಟ ಮಾಡಿದೆ. ಅದೇ 2023ರ ಆಗಸ್ಟ್‌ಗೆ ಹೋಲಿಸಿದರೆ (332,110 ಯುನಿಟ್) ಶೇಕಡ 14% ಬೆಳವಣಿಗೆ ಕಂಡಿದೆ.

TVS Sales Report 13 Growth In August 2024 iQube Become Game Changer

ಆದಾಗ್ಯೂ ತ್ರಿಚಕ್ರ ವಾಹನ (Three-Wheeler) ಮಾರಾಟದಲ್ಲಿ ಮಾತ್ರ ಸ್ವಲ್ಪ ಮಟ್ಟಿಗೆ ಹಿನ್ನಡೆಯಾಗಿದೆ. 2023ರಲ್ಲಿ ಮಾರಾಟ ಮಾಡಿದ 13,738 ಯುನಿಟ್‌ಗೆ ಹೋಲಿಸಿದರೆ, ಈ ಆಗಸ್ಟ್‌ನಲ್ಲಿ 12,747 ಯುನಿಟ್‌ಗೆ ಕುಸಿತವಾಗಿದೆ. ವಿದೇಶಗಳಿಗೆ ರಫ್ತು ಮಾಡುವ ವಾಹನಗಳ ಸಂಖ್ಯೆಯೂ ಹೆಚ್ಚಳವಾಗಿದೆ. 2024ರ ಆಗಸ್ಟ್‌ ತಿಂಗಳಲ್ಲಿ 99,976 ಯುನಿಟ್‌ ರಫ್ತು ಮಾಡಲಾಗಿದೆ. 2023ರ ಆಗಸ್ಟ್‌ನಲ್ಲಿ ರಫ್ತು ಮಾಡಿದ 87,515 ಯುನಿಟ್‌ಗೆ ಹೋಲಿಕೆ ಮಾಡಿದರೆ 14% ಪ್ರಗತಿಯಾಗಿದೆ.

ಟಿವಿಎಸ್ ಮೋಟಾರ್, ಇವಿ (ಎಲೆಕ್ಟ್ರಿಕ್ ವಾಹನ) ಮಾರಾಟದಲ್ಲಿಯೂ ಉತ್ತಮವಾದ ಬೆಳವಣಿಗೆ ಕಂಡಿದೆ. ಕಳೆದ ತಿಂಗಳು (ಆಗಸ್ಟ್ 2024) 24,779 ಇವಿಗಳನ್ನು ಮಾರಾಟ ಮಾಡಿದೆ. 2023ರ ಆಗಸ್ಟ್‌ನಲ್ಲಿ ಮಾರಾಟಗೊಳಿಸಿದ 23,887 ಯುನಿಟ್‌ಗೆ ಹೋಲಿಸಿದರೆ ಶೇಕಡ 4% ಪ್ರಗತಿ ಸಾಧಿಸಿದೆ. ಇವಿ ವಿಭಾಗದಲ್ಲಿ ಟಿವಿಎಸ್ ಕಂಪನಿ ಈ ಪರಿಪ್ರಮಾಣದಲ್ಲಿ ಬೆಳವಣಿಗೆ ಕಾಣಲು 'ಐಕ್ಯೂಬ್' ಎಲೆಕ್ಟ್ರಿಕ್ ಸ್ಕೂಟರ್ ಪ್ರಮುಖ ಕಾರಣವಾಗಿದೆ.

TVS Sales Report 13 Growth In August 2024 iQube Become Game Changer

ಸದ್ಯ ದೇಶೀಯವಾಗಿ ಖರೀದಿಗೆ ದೊರೆಯುವ ಟಿವಿಎಸ್ ಐಕ್ಯೂಬ್ (TVS iQube) ಎಲೆಕ್ಟ್ರಿಕ್ ಸ್ಕೂಟರ್, ರೂ.94,999 ದಿಂದ ರೂ.185,373 ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ. 2.2 ಕೆಡಬ್ಲ್ಯೂಹೆಚ್, 3.4 ಕೆಡಬ್ಲ್ಯೂಹೆಚ್ ಹಾಗೂ 5.1 ಕೆಡಬ್ಲ್ಯೂಹೆಚ್ ಬ್ಯಾಟರಿಯನ್ನು ಪಡೆದಿದೆ. ಪೂರ್ತಿ ಚಾರ್ಜ್‌ನಲ್ಲಿ 75 ರಿಂದ 150 ಕಿಲೋಮೀಟರ್ ರೇಂಜ್ (ಮೈಲೇಜ್) ಕೊಡುತ್ತದೆ. 7-ಇಂಚಿನ ಫುಲ್ ಕಲರ್ ಟಿಎಫ್‌ಟಿ ಸ್ಕ್ರೀನ್ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಒಳಗೊಂಡಿದೆ.

ಈಚೆಗೆ 2024ರ ನವೀಕರಿಸಿದ ಟಿವಿಎಸ್ ಜುಪಿಟರ್ 110 (TVS Jupiter 110) ಸ್ಕೂಟರ್‌ನ್ನು ಬಿಡುಗಡೆ ಮಾಡಲಾಗಿತ್ತು. ಇದು ರೂ.73,700 ದಿಂದ ರೂ.87,250 (ಎಕ್ಸ್ ಶೋರೂಂ) ದರದಲ್ಲಿ ಗ್ರಾಹಕರಿಗೆ ಲಭ್ಯವಿದೆ. 113 ಸಿಸಿ ಸಿಂಗಲ್-ಸಿಲಿಂಡರ್ ಏರ್-ಕೋಲ್ಡ್ ಪೆಟ್ರೋಲ್ ಎಂಜಿನ್‌ನ್ನು ಹೊಂದಿದ್ದು, 82 ಕೆಎಂಪಿಹೆಚ್ ಟಾಪ್ ಸ್ಪೀಡ್‌ನ್ನು ಪಡೆದಿದೆ.

ನೂತನ ಟಿವಿಎಸ್ ಜುಪಿಟರ್ 110 ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್‌, ಇಂಟಲಿಜೆಂಟ್ ಸ್ಟಾರ್ಟ್/ ಸ್ಟಾಪ್, ಇಂಟಿಗ್ರೇಟೆಡ್ ಸ್ಟಾರ್ಟರ್ ಜನರೇಟರ್, ಯುಎಸ್‌‍ಬಿ ಚಾರ್ಜರ್, 2-ಲೀಟರ್ ಗ್ಲೋವ್ ಬಾಕ್ಸ್, 33-ಲೀಟರ್ ಸಾಮರ್ಥ್ಯದ ಅಂಡರ್ ಸೀಟ್ ಸೋರೇಜ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಹೊಂದಿದೆ. ಸುರಕ್ಷತೆಯ ದೃಷ್ಟಿಯಿಂದ ಡಿಸ್ಕ್ ಮತ್ತು ಡ್ರಮ್ ಬ್ರೇಕ್‌ನ್ನು ಒಳಗೊಂಡಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Monday, September 2, 2024, 12:43 [IST]
English summary
Tvs sales report 13 percent growth august 2024 iqube become game changer
Read more on tvs motor india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+