TVS: 70 ಕಿ.ಮೀ ಮೈಲೇಜ್.. ಅಗ್ಗದ ಟಿವಿಎಸ್ ಸ್ಪೋರ್ಟ್ ಬೈಕ್ ಖರೀದಿಸಬೇಕೇ.. ಆನ್-ರೋಡ್ ಬೆಲೆ ಎಷ್ಟು, EMI ಏನು?

ಟಿವಿಎಸ್ ಮೋಟಾರ್ (TVS Motor) ವಿಶ್ವಾಸಾರ್ಹ ದ್ವಿಚಕ್ರ ವಾಹನ ತಯಾರಕ ಕಂಪನಿಯಾಗಿ ಹಳ್ಳಿಯಿಂದ ದಿಲ್ಲಿವರೆಗೆ ಮನೆ ಮಾತಾಗಿದೆ. ದೇಶೀಯ ಮಾರುಕಟ್ಟೆಯಲ್ಲಿ ಕಂಪನಿ ಮಾರಾಟಗೊಳಿಸುವ 'ಸ್ಪೋರ್ಟ್' ಜನಪ್ರಿಯ ಬೈಕ್ ಆಗಿದ್ದು, ಉತ್ತಮ ಸಂಖ್ಯೆಯಲ್ಲಿ ಮಾರಾಟವಾಗುತ್ತಿದೆ. ನೀವು ಹೊಚ್ಚ ಹೊಸ ಮೋಟಾರ್‌ಸೈಕಲ್‌ವೊಂದನ್ನು ಖರೀದಿ ಮಾಡಲು ಆಲೋಚಿಸಿದ್ದೀರಾ.. ಹಾಗಾದರೆ 'ಟಿವಿಎಸ್ ಸ್ಪೋರ್ಟ್' ಉತ್ತಮ ಆಯ್ಕೆಯಾಗಲಿದೆ. ನಾವಿಲ್ಲಿ ಈ ನೂತನ ಬೈಕ್‌ನ ಆನ್-ರೋಡ್ ಬೆಲೆ (On-Road Price) ಹಾಗೂ ಇಎಂಐ (EMI) ಆಯ್ಕೆಯ ಬಗ್ಗೆ ಸಂಕ್ಷಿಪ್ತವಾಗಿ ವಿವರಿಸಿದ್ದೇವೆ.

ಬೆಂಗಳೂರಿನಲ್ಲಿ ಟಿವಿಎಸ್ ಸ್ಪೋರ್ಟ್ (TVS Sport) ಮೋಟಾರ್‌ಸೈಕಲ್‌, ಎರಡು ರೂಪಾಂತರಗಳ (ವೇರಿಯೆಂಟ್) ಆಯ್ಕೆಯಲ್ಲಿ ಸಿಗುತ್ತದೆ. ಇದರ ಸೆಲ್ಫ್ ಸ್ಟಾರ್ಟ್ (ಇಎಸ್) ಅಲಾಯ್ ವೀಲ್ಸ್ ರೂಪಾಂತರ, ರೂ.85,300 ವರೆಗೆ ಆನ್-ರೋಡ್ ಬೆಲೆಯನ್ನು ಒಳಗೊಂಡಿದೆ. ರೂ.20,000 ಡೌನ್ ಪೇಮೆಂಟ್ ಪಾವತಿಸಿ ಈ ಮೋಟಾರ್‌ಸೈಕಲ್‌ನ್ನು ಖರೀದಿ ಮಾಡಿದರೆ, 65,000 ವರೆಗೆ ಸಾಲವಿರುತ್ತದೆ. ಅದಕ್ಕೆ ಶೇಕಡ 8% ಬಡ್ಡಿ ದರದಲ್ಲಿ 3 ವರ್ಷಕ್ಕೆ ತಿಂಗಳಿಗೆ ರೂ.2,250 ವರೆಗೆ ಇಎಂಐ ಕಟ್ಟಬೇಕು.

Tvs Sport Bike Mileage Down Payment On-Road Price And Emi Details

ಈ ಬೈಕ್‌ನ ಸೆಲ್ಫ್ ಸ್ಟಾರ್ಟ್ (ಇಎಲ್‌ಸಿ) ಅಲಾಯ್ ವೀಲ್ಸ್ ರೂಪಾಂತರ, ರೂ.92,000 ವರೆಗೆ ಆನ್-ರೋಡ್ ದರವನ್ನು ಹೊಂದಿದೆ. ಇದನ್ನು ರೂ.20,000 ಡೌನ್ ಪೇಮೆಂಟ್ ಕಟ್ಟಿ ಮನೆ ತಂದರೆ, ರೂ.71,000 ವರೆಗೆ ಸಾಲ ಬಾಕಿಯಿರುತ್ತದೆ. ಶೇಕಡ 8% ಬಡ್ಡಿ ಹಾಕಿ, 3 ವರ್ಷಗಳ ಅವಧಿಗೆ ಮಾಸಿಕ ರೂ.2,000 ವರೆಗೆ ಇಎಂಐ ಪಾವತಿ ಮಾಡಬೇಕು.

ನೂತನ ಟಿವಿಎಸ್ ಸ್ಪೋರ್ಟ್ ಮೋಟಾರ್‌ಸೈಕಲ್‌, 109.7 ಸಿಸಿ ಸಿಂಗಲ್-ಸಿಲಿಂಡರ್ ಏರ್-ಕೋಲ್ಡ್ ಪೆಟ್ರೋಲ್ ಎಂಜಿನ್ ಒಳಗೊಂಡಿದೆ. 7350 ಆರ್‌ಪಿಎಂನಲ್ಲಿ 8.19 ಪಿಎಸ್ ಅಶ್ವ ಶಕ್ತಿ (ಹಾರ್ಸ್ ಪವರ್) ಮತ್ತು 4500 ಆರ್‌ಪಿಎಂನಲ್ಲಿ 8.7 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 4-ಸ್ಪೀಡ್ ಗೇರ್‌ಬಾಕ್ಸ್‌ ಆಯ್ಕೆಯನ್ನು ಹೊಂದಿದೆ.

ಈ ಟಿವಿಎಸ್ ಸ್ಪೋರ್ಟ್ ಬೈಕ್ 70 ಕೆಎಂಪಿಎಲ್‌ವರೆಗೆ ಮೈಲೇಜ್ ನೀಡುತ್ತದೆ. 90 ಕೆಎಂಪಿಹೆಚ್ ಟಾಪ್ ಸ್ಪೀಡ್‌ನ್ನು ಒಳಗೊಂಡಿದೆ. ಟೂ-ಪಾಡ್ ಅನಲಾಗ್ ಇನ್‌ಸ್ಟ್ರುಮೆಂಟ್ ಪ್ಯಾನೆಲ್‌, ಬಲ್ಬ್ ಆಕಾರಕ್ಕೆ ಹೋಲಿಕೆಯಾಗುವ ಹೆಡ್‌ಲೈಟ್‌, ಮತ್ತು ಎಲ್ಇಡಿ ಡಿಆರ್‌ಎಲ್‌ಗಳು ಮತ್ತು ಸೆಲ್ಫ್ ಸ್ಟಾರ್ಟ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ.

ಹೊಸ ಟಿವಿಎಸ್ ಸ್ಪೋರ್ಟ್ ಮೋಟಾರ್‌ಸೈಕಲ್‌ ಬ್ಲ್ಯಾಕ್ ಬ್ಲ್ಯೂ, ಬ್ಲ್ಯಾಕ್ ರೆಡ್ ಮತ್ತು ವೈಟ್ ಪರ್ಪಲ್ ಒಳಗೊಂಡಂತೆ ಹಲವು ಬಣ್ಣಗಳೊಂದಿಗೂ ಸಿಗುತ್ತದೆ. 17-ಇಂಚಿನ ಅಲಾಯ್ ವೀಲ್‌ಗಳನ್ನು ಹೊಂದಿದೆ. 112 ಕೆಜಿ ತೂಕವಿದ್ದು, 10 ಲೀಟರ್ ಸಾಮರ್ಥ್ಯದ ಫ್ಯುಯೆಲ್ ಟ್ಯಾಂಕ್‌ನ್ನು ಪಡೆದಿದೆ. 175 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಅನ್ನು ಹೊಂದಿದೆ.

ನೂತನ ಬೈಕ್ ಮುಂಭಾಗ (ಫ್ರಂಟ್) ಟೆಲಿಸ್ಕೋಪಿಕ್ ಫೋರ್ಕ್ ಹಾಗೂ ಹಿಂಭಾಗ (ರೇರ್) 5-ಸ್ಟೆಪ್ ಪ್ರಿ ಲೋಡ್ ಟ್ವಿನ್ ಶಾಕ್ ಅಬ್ಸಾರ್ಬರ್‌ ಸಸ್ಪೆನ್ಷನ್ ಸೆಟಪ್ ಪಡೆದಿದೆ. ಸುರಕ್ಷತೆಗಾಗಿ ಮುಂದೆ 30 ಎಂಎಂ ಮತ್ತು ಹಿಂದೆ 110 ಎಂಎಂ ಡ್ರಮ್ ಬ್ರೇಕ್ ಆಯ್ಕೆಯನ್ನು ಒಳಗೊಂಡಿದೆ.

ಇನ್ನು, ಟಿವಿಎಸ್ ಸ್ಪೋರ್ಟ್ ಮೋಟಾರ್‌ಸೈಕಲ್‌ಗೆ ಹೀರೋ ಹೆಚ್ಎಫ್ ಡಿಲಕ್ಸ್, ಬಜಾಜ್ ಸಿಟಿ 110ಎಕ್ಸ್, ಹೋಂಡಾ ಶೈನ್ 100, ಬಜಾಜ್ ಪ್ಲಾಟಿನಾ 110 ಮತ್ತು ಹೀರೋ ಸ್ಪ್ಲೆಂಡರ್ ಪ್ಲಸ್ ಬೈಕ್‌ಗಳು ಪ್ರಬಲವಾದ ಎದುರಾಳಿಯಾಗಲಿವೆ. ನಿಮ್ಮ.. ಗಮನಕ್ಕೆ ಈ 'ಸ್ಪೋರ್ಟ್' ಮೋಟಾರ್‌ಸೈಕಲ್‌ ಆನ್-ರೋಡ್ ಬೆಲೆ ಹಾಗೂ ಸಾಲದ ಆಯ್ಕೆಗಳು ನಗರದಿಂದ ನಗರಕ್ಕೆ ಬೇರೆಯಿರಲಿದ್ದು, ಹೆಚ್ಚಿನ ಮಾಹಿತಿಗೆ ಸಮೀಪದ ಶೋರೂಂಗೆ ಭೇಟಿ ನೀಡಿರಿ.

More from DriveSpark

Article Published On: Sunday, December 22, 2024, 12:25 [IST]
English summary
Tvs sport bike mileage down payment on road price and emi details
Read more on tvs motor india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+