ದಲೈಲಾಮನ ಪಕ್ಕದ ನಾಡಿನಲ್ಲಿ ಕನ್ನಡಿಗರ ಅಬ್ಬರ: ನೇಪಾಳದಲ್ಲಿ ಅಲ್ಟ್ರಾವೈಲೆಟ್ ಬೈಕ್‌ ಶೋರೂಮ್‌ ಆರಂಭ

ಬೆಂಗಳೂರು ಮೂಲದ ಜನಪ್ರಿಯ ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ತಯಾರಕರಾದ ಅಲ್ಟ್ರಾವೈಲೆಟ್ ಆಟೋಮೋಟಿವ್ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಎಲೆಕ್ಟ್ರಿಕ್‌ ದ್ವಿಚಕ್ರ ವಾಹನ ತಯಾರಿಕೆಯಲ್ಲಿ ಕ್ರಾಂತಿಯನ್ನೇ ಉಂಟು ಮಾಡುತ್ತಿದೆ ಈ ಕಂಪನಿ. ಸಖತ್‌ ಸ್ಪೀಡ್‌ ಮತ್ತು ಅಗ್ರೆಸಿವ್‌ ಲುಕ್‌ ಹಾಗು ಸಾಕಷ್ಟು ಫೀಚರ್‌ಗಳಿಂದ ಕೂಡಿದ ಈ ಬೈಕ್‌ ಸದ್ಯಕ್ಕೆ ಟ್ರೆಂಡಿಂಗ್‌ನಲ್ಲಿದೆ. ಇದೀಗ ಕಂಪನಿ ವಿದೇಶಗಳಲ್ಲೂ ತನ್ನ ಶೋ ರೂಮ್‌ ಅನ್ನು ಆರಂಭಿಸಿದ್ದು, ಭಾರತದ ಕೀರ್ತಿ ಪತಾಕೆಯನ್ನು ಹಾರಿಸುತ್ತಿದೆ.

ಕಂಪನಿ ಇದೀಗ ತನ್ನ ಮೊದಲ ಶೋರೂಮ್ ಅನ್ನು ನೇಪಾಳದಲ್ಲಿ ಕೆಡಿಯಾ ಗ್ರೂಪ್ ಸಹಭಾಗಿತ್ವದಲ್ಲಿ ಪ್ರಾರಂಭಿಸಿದೆ. ಕಂಪನಿಯು ಐದು ಭಾರತೀಯ ನಗರಗಳಲ್ಲಿ ತನ್ನ ಅಸ್ತಿತ್ವವನ್ನು ಬೆಳೆಸಿದ ನಂತರ ಇತ್ತೀಚೆಗೆ ಯುರೋಪ್‌ ದೇಶಗಳಿಗೂ ಸಹ ತನ್ನ ಬೈಕ್‌ ರಫ್ತು ಮಾಡಿತ್ತು. ಇದೀಗ ಕಂಪನಿ ನೇಪಾಳದಲ್ಲೂ ಶೋ ರೂಮ್‌ ಆರಂಭಿಸಿ ಹೊಸ ಮೈಲುಗಲ್ಲನ್ನು ಸ್ಥಾಪಿಸಿದೆ.

Ultraviolette broadens its reach by launching operations in Nepal

ಕಠ್ಮಂಡುವಿನ ನಾರಾಯಣ್ ಚೌರ್‌ನಲ್ಲಿರುವ ಹೊಸ ಶೋ ರೂಮ್‌. ಮಾರಾಟ, ಸೇವೆ ಮತ್ತು ಬಿಡಿಭಾಗಗಳನ್ನು ನಿರ್ವಹಿಸುತ್ತದೆ. ಇದಕ್ಕೆ ಬೇಕಾದ ವ್ಯವಸ್ಥೆಗಳನ್ನೆಲ್ಲಾ ಬೆಂಗಳೂರಿನಲ್ಲಿರುವ ಅಲ್ಟ್ರಾವೈಲೆಟ್‌ನ (Ultraviolette) ಪ್ರಧಾನ ಕಛೇರಿಯಿಂದ ಒದಗಿಸಲಾಗುತ್ತಿದೆ ಎಂದು ತಿಳಿದು ಬಂದಿದೆ.

ಕಳೆದ ಕೆಲ ವಾರಗಳ ಹಿಂದೆಯಷ್ಟೇ ಕಂಪನಿ ಯೂರೋಪ್‌ ದೇಶಗಳಿಗೆ ತನ್ನ ಬೈಕ್‌ ಅನ್ನು ರಫ್ತು ಮಾಡಲು ಆರಂಭಿಸಿತ್ತು. ಇದೇ ಸಮಾರಂಭದಲ್ಲಿ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಅವರು ಕೂಡ ಹಾಜರಿದ್ದರು. ಆ ಬಳಿಕ, ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ರಫ್ತು ಮಾಡಲಾಗುತ್ತಿರುವ ಈ ಅಲ್ಟ್ರಾವೈಲೆಟ್ ಎಫ್77 ಎಲೆಕ್ಟ್ರಿಕ್ ಮೋಟಾರ್‌ಸೈಕಲ್‌ಗಳನ್ನು ಯುರೋಪ್ ಒಕ್ಕೂಟಕ್ಕೆ ಸೇರಿರುವ ಜರ್ಮನಿ, ಇಟಲಿ, ಟರ್ಕಿ ಹಾಗೂ ಸ್ಪೇನ್ ದೇಶಗಳಲ್ಲಿ ಮಾರಾಟ ಮಾಡಲಾಗುತ್ತದೆ ಎಂದು ವರದಿಯಾಗಿದೆ.

Ultraviolette broadens its reach by launching operations in Nepal

ನೂತನ ಅಲ್ಟ್ರಾವೈಲೆಟ್ ಎಫ್77 (Ultraviolette F77) ಎಲೆಕ್ಟ್ರಿಕ್ ಬೈಕ್ ಸ್ಪರ್ಧಾತ್ಮಕ ಬೆಲೆಯಲ್ಲಿ ಖರೀದಿಗೆ ದೊರೆಯುತ್ತದೆ. ಇದರ ಸ್ಟ್ಯಾಂಡರ್ಡ್ ಎಫ್77 ರೂಪಾಂತರ ರೂ.2,99,000 ಹಾಗೂ ಎಫ್77 ರೆಕಾನ್ ರೂಪಾಂತರ (ವೇರಿಯೆಂಟ್) ರೂ.3,99,000 ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ. ಇವುಗಳು ಏರ್‌ಸ್ಟ್ರೈಕ್, ಲೇಸರ್ ಮತ್ತು ಶ್ಯಾಡೋ ಎಂಬ 3 ಬಣ್ಣದ ಆಯ್ಕೆಯಲ್ಲಿಯೂ ಲಭ್ಯವಿವೆ.

ಹೊಸ ಅಲ್ಟ್ರಾವೈಲೆಟ್ ಎಫ್77 ಸ್ಟ್ಯಾಂಡರ್ಡ್ ರೂಪಾಂತರ, 7.1 ಕೆಡಬ್ಲ್ಯೂಹೆಚ್ ಬ್ಯಾಟರಿ ಪ್ಯಾಕ್‌ನ್ನು ಒಳಗೊಂಡಿದೆ. ಇದರ ಮೋಟಾರ್ 36.7 ಪಿಎಸ್ ಅಶ್ವ ಶಕ್ತಿ (ಹಾರ್ಸ್ ಪವರ್) ಮತ್ತು ಎನ್ಎಂ (ನ್ಯೂಟನ್ ಮೀಟರ್) ಉತ್ಪಾದಿಸುತ್ತದೆ. 155 ಕೆಎಂಪಿಹೆಚ್ ಟಾಪ್ ಸ್ಪೀಡ್‌ನ್ನು ಹೊಂದಿದೆ. ಕೇವಲ 7.8 ಸೆಕೆಂಡುಗಳಲ್ಲಿ 0-100 ಕೆಎಂಪಿಹೆಚ್ ವೇಗವನ್ನು ಪಡೆಯಲಿದೆ. ಸಂಪೂರ್ಣ ಚಾರ್ಜ್‌ನಲ್ಲಿ 211 ಕಿಲೋಮಿಟರ್ ರೇಂಜ್ (ಮೈಲೇಜ್) ನೀಡುತ್ತದೆ.

ಅಲ್ಟ್ರಾವೈಲೆಟ್ ಎಫ್77 ರೆಕಾನ್ ರೂಪಾಂತರ, 10.3 ಕೆಡಬ್ಲ್ಯೂಹೆಚ್ ಬ್ಯಾಟರಿ ಪ್ಯಾಕ್‌ ಆಯ್ಕೆಯನ್ನು ಪಡೆದಿದೆ. ಭರ್ತಿ ಚಾರ್ಜ್‌ನಲ್ಲಿ 323 ಕಿಲೋಮೀಟರ್ ಓಡುತ್ತದೆ. ಈ ಎಲೆಕ್ಟ್ರಿಕ್ ಬೈಕ್ ಒಳಗೊಂಡಿರುವ ಎಲೆಕ್ಟ್ರಿಕ್ ಮೋಟಾರ್, 36.7 ಪಿಎಸ್ ಅಶ್ವ ಶಕ್ತಿ ಹಾಗೂ 100 ಎನ್ಎಂ ಟಾರ್ಕ್ ಹೊರಹಾಕುತ್ತದೆ. 155 ಕೆಎಂಪಿಹೆಚ್ ಟಾಪ್ ಸ್ಪೀಡ್‌ನ್ನು ಹೊಂದಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Wednesday, October 9, 2024, 13:07 [IST]
English summary
Ultraviolette broadens its reach by launching operations in nepal
Read more on ultraviolette india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+