ವೇಗದ ಕುದುರೆ, ಅಲ್ಟ್ರಾವೈಲೆಟ್ F77 ಮ್ಯಾಕ್ 2 ರಿವ್ಯೂ ವಿಡಿಯೋ ನಿಮಗಾಗಿ!
ಹಿಂದಿನ ಮಾದರಿಗಿಂತ ಸಾಕಷ್ಟು ಬದಲಾವಣೆಯೇನೂ ಈ ಬೈಕ್‌ನಲ್ಲಿ ಇಲ್ಲವಾದರೂ, ಅಲ್ಟ್ರಾವೈಲೆಟ್ F77 ಗಿಂತ ಕೆಲವೊಂದು ಬದಲಾವಣೆಗಳೊಂದಿಗೆ ಮತ್ತು ಹೆಚ್ಚಿನ ಬಣ್ಣಗಳೊಂದಿಗೆ ಬಂದಿದ್ದು, ಖರೀದಿದಾರರಿಗೆ ಹೆಚ್ಚಿನ ಆಯ್ಕೆಯನ್ನು ನೀಡುತ್ತದೆ. ಅಲ್ಟ್ರಾವೈಲೆಟ್ F77 ಬೈಕ್ ಓಡಿಸಿದವರಿಗೆ ಗೊತ್ತು ಅದೆಷ್ಟು ಪವರ್ ಮತ್ತು ಟಾರ್ಕ್ ಆ ಬೈಕ್‌ನಲ್ಲಿ ಅಡಗಿದೆ ಎಂಬುದು. ಅದೇ ರೀತಿ ಈ ಹೊಸ ಅಲ್ಟ್ರಾವೈಲೆಟ್ F77 ಮ್ಯಾಕ್ 2 ಸಹ ಹೊಸ ಅಪ್‌ಡೇಟ್‌ಗಳೊಂದಿಗೆ ಬಂದಿದ್ದರೂ ಅದು ಮೊದಲ ಬೈಕ್ ರೀತಿಯಲ್ಲೇ ಪವರ್ ಮತ್ತು ಟಾರ್ಕ್ ಹಾಗೂ ವಿನ್ಯಾಸ ಶೈಲಿಗಳನ್ನು ಉಳಿಸಿಕೊಂಡಿದೆಯೇ ಎಂಬುದು ಎಲ್ಲರ ಕುತೂಹಲ.
ವಿನ್ಯಾಸ: ಮೊದಲ ನೋಟದಲ್ಲಿ, ಮ್ಯಾಕ್ 2 ಗೆ ಬದಲಾವಣೆಗಳನ್ನು ಗುರುತು ಹಿಡಿಯುವುದು ಅಷ್ಟೊಂದು ಸುಲಭವಲ್ಲ. ಆದರೆ ನೀವು ಹೊಸ F77 ಮ್ಯಾಕ್ 2 ಬೈಕ್ ಅನ್ನು ವಿವರವಾಗಿ ಅವಲೋಕಿಸಿದಾಗ ಮಾತ್ರ ಈ ಬೈಕ್‌ನಲ್ಲಿ ಆಗಿರುವ ನೀವು ಸೂಕ್ಷ್ಮ ಬದಲಾವಣೆಗಳನ್ನು ಗಮನಿಸಲು ಸಾಧ್ಯ.
ಬೈಕ್‌ನ ನೋಟದ ವಿಚಾರದಲ್ಲಿ ನೋಡುವುದಾದರೆ, ತನ್ನ ಫ್ಯೂಚರಿಸ್ಟಿಕ್ ಲುಕ್ ಅನ್ನು ಮುಂದುವರೆಸುತ್ತಿದೆ. ನಿಮಗೆಲ್ಲಾ ತಿಳಿದಿರುವಂತೆ ಅಲ್ಟ್ರಾವೈಲೆಟ್ ತನ್ನ ಮೊದಲ ಮಾದರಿಯಾದ ಎಫ್‌೭೭ ಬೈಕ್‌ಗೆ ಕೇವಲ ಮೂರು ಬಣ್ಣದ ಆಯ್ಕೆಗಳನ್ನಷ್ಟೇ ನೀಡುತ್ತಿತ್ತು. ಒಂದು ರೀತಿಯಲ್ಲಿ ಹೇಳುವುದಾದರೆ ಗ್ರಾಹಕರೂ ಸಹ ಅಧಿಕ ಬಣ್ಣಗಳ ಆಯ್ಕೆಗಳು ಇದ್ದಿದ್ದರೆ ಚೆನ್ನಾಗಿರುತ್ತಿತ್ತು ಎಂದು ಹೇಳುತ್ತಿದ್ದರು.
ಫೀಚರ್‌ಗಳು: ಇನ್ನು ಇತರ ಹೊಸ F77 ಮ್ಯಾಕ್ 2 ಬೈಕ್‌ನಲ್ಲಿರುವ ಇತರ ಬದಲಾವಣೆಗಳು ನಿಮಗೆ ತಿಳಿಯಬೇಕಾದರೆ ನೀವು ಈ ಬೈಕ್ ಅನ್ನು ಉಪಯೋಗಿಸಲು ಆರಂಭಿಸಬೇಕು. ಈ ಬೈಕ್‌ನ ಚಾರ್ಜಿಂಗ್ ಪೋರ್ಟ್‌ನಲ್ಲಿ ಹೊಸ ಅಲ್ಯುಮಿನಿಯಂ ಲಿಡ್ ಅನ್ನು ನೀಡಲಾಗಿದೆ. ಮತ್ತು ರೈಡರ್‌ಗಳ ರೈಡಿಂಗ್ ಅನುಭವವನ್ನು ಮತ್ತಷ್ಟು ಅಹ್ಲಾದಕರವಾಗಿಸಲು ಕೊಂಚ ಅಗ್ರೆಸಿವ್ ಪೊಸಿಷನ್ ಅನ್ನು ನೀಡಲಾಗಿದೆ. ಇದು ರೈಡರ್‌ಗಳುಬೈಕ್ ಓಡಿಸುವಾಗ ಹೆಚ್ಚಿನ ಬ್ಯಾಲೆನ್ಸ್ ಅನ್ನು ಹೊಂದಲು ನೆರವಾಗುತ್ತದೆ.

ಈ ಬೈಕ್‌ಗೆ ಹೊಸ 4 ಸ್ಟೆಪ್ ಟ್ರ್ಯಾಕ್ಷನ್ ಕಂಟ್ರೋಲ್ ಅನ್ನು ಸಹ ಪರಿಚಯಿಸಲಾಗುತ್ತಿದೆ. ಇದು ಬೈಕ್ ಅನ್ನು ಜಾರುವ ಪ್ರದೇಶ ಮತ್ತು ಹೆಚ್ಚು ಮರಳಿರುವ ಪ್ರದೇಶಗಳಲ್ಲಿ ಓಡಿಸುವಾಗ ಹೆಚ್ಚಿನ ಸಹಾಯ ಮಾಡುತ್ತದೆ. ಈ ಸಂಧರ್ಭದಲ್ಲಿ ನಿಮ್ಮ ಬೈಕ್‌ನ ಜಾರದಂತೆ ಮತ್ತು ವ್ಹೀಲ್ ಸ್ಪಿನ್ ಆಗದಂತೆ ಅಥವಾ ಅದನ್ನು ಕಡಿಮೆ ಮಾಡಲು F77 ಮ್ಯಾಕ್ 2 ಬೈಕ್‌ನ ಈ ಹೊಸ 4 ಸ್ಟೆಪ್ ಟ್ರ್ಯಾಕ್ಷನ್ ಕಂಟ್ರೋಲ್ ಸಹಾಯ ಮಾಡುತ್ತದೆ.
ಬ್ಯಾಟರಿಯು ಈಗ 40.23bhp (1.35bhp ಯಿಂದ) ಮತ್ತು 100Nm (5Nm ವರೆಗೆ) ಉತ್ಪಾದಿಸುವ ಸ್ವಲ್ಪ ಹೆಚ್ಚು ಶಕ್ತಿಯುತ ಮೋಟಾರ್‌ಗೆ ಸಂಪರ್ಕ ಹೊಂದಿದೆ. ಈ ನವೀಕರಣಗಳ ಪ್ರಕಾರ ಹೊಸ ಮ್ಯಾಕ್ 2 ಕೇವಲ 2.8 ಸೆಕೆಂಡ್‌ಗಳಲ್ಲಿ 0-60 ಕಿಮೀ/ಗಂ ವೇಗವನ್ನು ಪಡೆಯುತ್ತದೆ ಮತ್ತು 0-100 ಕಿಮೀ/ಗಂ ವೇಗವನ್ನು ಈಗ ಕೇವಲ 7.7 ಸೆಕೆಂಡುಗಳಲ್ಲಿ ತಲುಪುತ್ತದೆ. ಗರಿಷ್ಠ ವೇಗವು 8 ಕಿಮೀ ಹೆಚ್ಚಾಗಿದ್ದು ಈ ಬೈಕ್ 155 ಕಿಮೀ ಟಾಪ್ ಸ್ಪೀಡ್ ಅನ್ನು ಹೊಂದಿದೆ.


Click it and Unblock the Notifications








