Bajaj: ಮುಂಬರಲಿರುವ ಬಜಾಜ್ ಪಲ್ಸರ್ NS 400 ನಿರೀಕ್ಷಿತ ಬೆಲೆ, ವಿಶೇಷತೆಗಳು!
ಇತ್ತೀಚೆಗೆ ನಡೆದ ಸಂದರ್ಷನವೊಂದರಲ್ಲಿ ಬಜಾಜ್ ಅಧ್ಯಕ್ಷ ರಾಜೀವ್ ಬಜಾಜ್ ಅವರು, 2024 ರಲ್ಲಿ ಅತಿದೊಡ್ಡ ಪಲ್ಸರ್ ಬರಲಿದೆ ಎಂದು ಬಹಿರಂಗಪಡಿಸಿದ್ದರು. ಈ ಘೋಷಣೆಯು 400 ಸಿಸಿ ಪಲ್ಸರ್ ಬಗ್ಗೆ ನಿರೀಕ್ಷೆಗಳನ್ನು ಹೆಚ್ಚಿಸಿವೆ. ಒಂದು ವೇಳೆ ಅದು ಪಲ್ಸರ್ NS 400 ಆಗಿದ್ದರೆ ಏನೆಲ್ಲಾ ನಿರೀಕ್ಷಿಸಬಹುದು ಎಂಬುದನ್ನು ಇಲ್ಲಿ ನೋಡೋಣ.
ಯಾವುದೇ ಅಧಿಕೃತ ತಾಂತ್ರಿಕ ವಿಶೇಷಣಗಳನ್ನು ಬಹಿರಂಗಪಡಿಸದಿದ್ದರೂ, ಸಾಕಷ್ಟು ಊಹಾಪೋಹಗಳು ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿವೆ. ಬಜಾಜ್ ಕಂಪನಿಯು ಸದ್ಯ ಯುವಕರ ಹಾಟ್ ಫೇವರೆಟ್ ಬೈಕ್ ಆಗಿ ತನ್ನ ಪಲ್ಸರ್ NS200 ಅನ್ನು ನೀಡುತ್ತಿದೆ. ಇದು ಅಗ್ಗದ ಬೆಲೆಗೆ ಉತ್ತಮ ಪರ್ಫಾಮೆನ್ಸ್ ಹಾಗೂ ಫೀಚರ್ಸ್ ಒಳಗೊಂಡಿರುವ ಬೈಕ್ ಆಗಿ ಜನಪ್ರಿಯತೆ ಪಡೆದಿದೆ. ಇದಲ್ಲದೇ ಇತ್ತೀಚೆಗಷ್ಟೇ ತನ್ನ ಪಲ್ಸರ್ ಸರಣಿಯನ್ನು ನವೀಕರಿಸುವ ಭಾಗವಾಗಿ ಪರಿಷ್ಕೃತ ಪಲ್ಸರ್ N250 ಅನ್ನು ಪರಿಚಯಿಸಿತು. ಇದೀಗ ಬಜಾಜ್, ಪಲ್ಸರ್ NS 400 ಅನ್ನು ಕೂಡ ಬಿಡುಗಡೆ ಮಾಡಲು ನೋಡುತ್ತಿದೆ.

ಮೂಲಗಳ ಪ್ರಕಾರ ಕಂಪನಿಯು, ಅತಿದೊಡ್ಡ ಸಾಮರ್ಥ್ಯದ ಪಲ್ಸರ್ ಅನ್ನು ಮೇ 3, 2024 ರಂದು ಭಾರತದಲ್ಲಿ ಬಿಡುಗಡೆ ಮಾಡುವುದಾಗಿ ಹೇಳಲಾಗುತ್ತಿದೆ. ಇದು ಅಗ್ಗದ ಬೆಲೆಯನ್ನು ಹೊಂದಿರುತ್ತದೆ ಎಂದು ಸಹ ಈ ಹಿಂದೆ ಕಂಪನಿ ಹೇಳಿಕೊಂಡಿತ್ತು. ಇವೆಲ್ಲದರ ಜೊತೆಗೆ ಬಜಾಜ್ ಕಂಪನಿಯು ಭಾರತದಲ್ಲಿ ಕೆಟಿಎಂ, ಟ್ರಯಂಫ್ ಮತ್ತು ಹಸ್ಕ್‌ವರ್ನಾ ಕೊಡುಗೆಗಳ ಶ್ರೇಣಿಯನ್ನು ಸಕ್ರಿಯವಾಗಿ ವಿಸ್ತರಿಸುತ್ತಿರುವುದಾಗಿ ಹೇಳಿದೆ.
ಏನೆಲ್ಲಾ ಇರಬಹುದು?: ಈ ಬೈಕಿನಲ್ಲಿ ನಯವಾಗಿ ಕಾಣುವ ಬಾಡಿವರ್ಕ್, ಮುಂಭಾಗ-ಹಿಂಭಾಗ ಡಿಸ್ಕ್ ಬ್ರೇಕ್, ಪ್ರಿಲೋಡ್ ಅಡ್ಜಸ್ಟ್ ಮೊನೊಶಾಕ್ ರಿಯರ್ ಸಸ್ಪೆಂಷನ್, USD ಫೋರ್ಕ್‌ಗಳು, ಡ್ಯುಯಲ್-ಚಾನೆಲ್ ಎಬಿಎಸ್ ಸಿಸ್ಟಮ್, ಸ್ಪ್ಲಿಟ್ ಸೀಟ್ ವ್ಯವಸ್ಥೆ, ಸ್ಪ್ಲಿಟ್ ಗ್ರಾಬ್ ರೈಲ್‌ಗಳು, ಸ್ಪ್ಲಿಟ್ ಹ್ಯಾಂಡಲ್ ಬಾರ್, ಬಜಾಜ್ ಪಾರ್ಟ್ಸ್ ಬಿನ್ ನಿಂದ ಸ್ವಿಚ್ ಗೇರ್, ಸ್ಪೋರ್ಟಿ ಬಾಡಿ ಗ್ರಾಫಿಕ್ಸ್, ಅಲಾಯ್ ವೀಲ್‌ಗಳು, ಅಗಲವಾದ ಸೆಕ್ಷನ್ ಟೈರ್‌ಗಳನ್ನು ಪಡೆಯುವ ನಿರೀಕ್ಷೆಯಿದೆ.

ಬಜಾಜ್ ಪಲ್ಸರ್ NS 400 ಎಂಜಿನ್: ಬಜಾಜ್ ಪಲ್ಸರ್ NS 400 ಬೈಕಿನಲ್ಲಿ ಡೊಮಿನಾರ್ 400 ಬೈಕಿನಲ್ಲಿದ್ದಂತೆಯೇ 373.2 ಸಿಸಿ ಲಿಕ್ವಿಡ್ ಕೂಲ್ಡ್ ಎಂಜಿನ್ ಅನ್ನು ಹೊಂದಿರಬಹುದು ಅಥವಾ ಹೊಸ 390 ಡ್ಯೂಕ್ ಬೈಕಿನಲ್ಲಿ ಅಳವಡಿಸಲಾದ ಇತ್ತೀಚಿನ 399 ಸಿಸಿ ಎಂಜಿನ್ ಅನ್ನು ಹೊಂದಿರಬಹುದು ಎಂಬ ಊಹಾಪೋಹಗಳು ಹೆಚ್ಚಾಗಿವೆ. ಪವರ್ ಔಟ್‌ಪುಟ್‌ಗಳಲ್ಲಿ ಸ್ವಲ್ಪ ಹೊಂದಾಣಿಕೆ ನಿರೀಕ್ಷಿಸಲಾಗಿದ್ದು, ಇದನ್ನು 6 - ಸ್ಪೀಡ್ ಟ್ರಾನ್ಸ್‌ಮಿಷನ್, ಸ್ಲಿಪ್ಪರ್ ಮತ್ತು ಅಸಿಸ್ಟ್ ಕ್ಲಚ್ ಜೊತೆಗೆ ನೀಡುವ ಸಾಧ್ಯತೆಗಳು ಹೆಚ್ಚಾಗಿವೆ. ಆದರೆ ಕಂಪನಿ ಇನ್ನೂ ಯಾವುದೇ ಅಧಿಕೃತ ಮಾಹಿತಿಯನ್ನು ಹೊರಬಿಟ್ಟಿಲ್ಲ.
ಬ್ಲೂಟೂತ್ ಕನೆಕ್ಟಿವಿಟಿ ಮತ್ತು ಟರ್ನ್ - ಬೈ - ಟರ್ನ್ ನ್ಯಾವಿಗೇಷನ್ ಹೊಂದಿರುವ ಆಲ್-ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಎಲ್ಇಡಿ ಡೇಟೈಮ್ ರನ್ನಿಂಗ್ ಲೈಟ್‌ಗಳೊಂದಿಗೆ ಎಲ್ಇಡಿ ಹೆಡ್ಲೈಟ್, ಟ್ವಿನ್ ಎಲ್ಇಡಿ ಟೈಲ್ ಲ್ಯಾಂಪ್ ಗಳು ಮತ್ತು ಎಲ್ಇಡಿ ಟರ್ನ್ ಸಿಗ್ನಲ್ ಗಳನ್ನು ಒಳಗೊಂಡಿರಲಿದೆ.
ಹೆಚ್ಚಿನ ನಿರೀಕ್ಷೆಗಳು: ಬಜಾಜ್ ಸರಣಿಯಲ್ಲಿ ಡೊಮಿನಾರ್ 400 ಬೈಕಿಗಿಂತ ಕೆಳಗಿರುವ ಪಲ್ಸರ್ NS 400 ಬೈಕಿನ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ರೂ.2 ಲಕ್ಷವಿರಬಹುದು ಎಂದು ನಿರೀಕ್ಷಿಸಲಾಗಿದೆ. NS 400 ಪಲ್ಸರ್ NS 200 ನ ಸ್ಟೈಲಿಂಗ್ ನಿಂದ ಹೆಚ್ಚು ಸ್ಫೂರ್ತಿ ಪಡೆಯಲಿದೆ. ಜೊತೆಗೆ ಪಲ್ಸರ್ N ಸೀರೀಸ್ ನಿಂದಲೂ ಕೆಲವು ಡಿಸೈನ್ ಎಲಿಮೆಂಟ್‌ಗಳನ್ನು ಪಡೆಯುವ ಸಾಧ್ಯತೆಯಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








