Ola: ಶೀಘ್ರದಲ್ಲೇ ಬರಲಿದೆ ಓಲಾ ಎಲೆಕ್ಟ್ರಿಕ್ ಬೈಕ್: ಪೇಟೆಂಟ್‌ ಸೋರಿಕೆ!

ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಓಲಾ ಎಲೆಕ್ಟ್ರಿಕ್, ಮೋಟಾರ್‌ಸೈಕಲ್ ನಿರ್ಮಾಣದಲ್ಲಿ ತೊಡಗಿದೆ. ಕಂಪನಿಯು ಒಂದು ವರ್ಷದ ಹಿಂದೆಯೇ ಈ ಬಗ್ಗೆ ಪ್ರಕಟಣೆಗಳನ್ನು ನೀಡಿತ್ತು. ಅವುಗಳಲ್ಲಿ ಕೆಲವು ಕಾನ್ಸೆಪ್ಟ್ ಮಾಡಲ್‌ಗಳನ್ನು ಕೂಡ ಅನಾವರಣಗೊಳಿಸಿತ್ತು. ಆದರೆ ಈವರೆಗೆ ಅವುಗಳ ಬಗ್ಗೆ ನಿಖರ ಮಾಹಿತಿ ಲಭ್ಯವಾಗಿರಲಿಲ್ಲ. ಇದೀಗ ಎಲೆಕ್ಟ್ರಿಕ್ ಮೋಟಾರ್ ಸೈಕಲ್‌ಗಳಲ್ಲಿ ಒಂದರ ವಿನ್ಯಾಸ ಬಹಿರಂಗವಾಗಿದೆ. ಈ ಓಲಾ ಎಲೆಕ್ಟ್ರಿಕ್ ಬಿಡುಗಡೆ ಯಾವಾಗ ಎಂಬುದರ ಬಗ್ಗೆ ಖಚಿತ ಮಾಹಿತಿ ಹೊರಬಿದ್ದಿಲ್ಲ. ಆದ್ರೆ 2026ರ ವೇಳೆಗೆ ಮೊದಲ ಎಲೆಕ್ಟ್ರಿಕ್ ಮೋಟಾರ್‌ಸೈಕಲ್‌ ಅನ್ನು ಪರಿಚಯಿಸಲಾಗುವುದು ಎಂದು ಹೇಳಲಾಗುತ್ತಿದೆ.

ಸೋರಿಕೆಯಾದ ಪೇಟೆಂಟ್‌ ಚಿತ್ರಗಳ ಪ್ರಕಾರ, ಇದರ ಗಾತ್ರವು ಸಾಮಾನ್ಯ ಇಂಧನ ಚಾಲಿತ ಪ್ರಯಾಣಿಕ ವಾಹನಗಳಂತೆಯೇ ಕಾಣುತ್ತಿದೆ. ಈ ಎಲೆಕ್ಟ್ರಿಕ್ ಬೈಕ್ 17 - ಇಂಚಿನ ಅಲಾಯ್ ವೀಲ್‌ಗಳಂತೆ ಕಾಣುವ ಟೈರ್‌ಗಳನ್ನು ಹೊಂದಿದೆ. ಎಲೆಕ್ಟ್ರಿಕ್ ವಾಹನಗಳಲ್ಲಿ ವಿಶೇಷವಾಗಿ ದಕ್ಷತೆ(Efficiency)ಯು ಅತ್ಯಂತ ಮಹತ್ವದ ಪಾತ್ರ ವಹಿಸುವುದರಿಂದ ಇದಕ್ಕೆ ನೀಡಲಾದ ಕಿರಿದಾದ ಟೈರ್‌ಗಳು ಹೆಚ್ಚಿನ ರೇಂಜ್ ನೀಡಲು ಸಹಕರಿಸಬಹುದು.

upcoming-ola-electric-bike-design-features-launch-details

ಕನಿಷ್ಠ 100 ಕಿ.ಮೀ ವೇಗವನ್ನು ತಲುಪುವ ಸಾಮರ್ಥ್ಯದೊಂದಿಗೆ ಬರಲಿದೆ ಎಂದು ನಿರೀಕ್ಷಿಸಲಾಗಿದೆ. ಬ್ಯಾಟರಿಯು ಯೋಗ್ಯ ರೇಂಜ್ ನೀಡಬೇಕು ಮತ್ತು ಅದನ್ನು ವೇಗವಾಗಿ ಚಾರ್ಜ್ ಮಾಡುವ ಅವಕಾಶವೂ ಇರಬಹುದು. ಈ ಬೈಕ್ ಹಿಂಭಾಗದಲ್ಲಿ ಸಾಂಪ್ರದಾಯಿಕ ಟೆಲಿಸ್ಕೋಪಿಕ್ ಫೋರ್ಕ್ ಮತ್ತು ಟ್ವಿನ್ ಶಾಕ್ ಅಬ್ಸಾರ್ಬರ್‌ಗಳನ್ನು ಹೊಂದಿದೆ. ಸರಳವಾದ ಬಾಕ್ಸ್ - ಸೆಕ್ಷನ್ ಸ್ವಿಂಗ್ ಆರ್ಮ್ ಅನ್ನು ಸಹ ಇಲ್ಲಿ ಕಾಣಬಹುದು.

ಓಲಾ ಎಲೆಕ್ಟ್ರಿಕ್ ಬೈಕಿನ ವಿನ್ಯಾಸ ಕೂಡ ಫ್ಯೂಚಿರಿಸ್ಟಿಕ್ ಆಗಿ ಕಾಣುತ್ತಿದ್ದು, ಹೆಚ್ಚಾಗಿ ಫ್ಲಾಟ್ ಪ್ಯಾನೆಲ್‌ಗಳು ಮತ್ತು ತೀಕ್ಷ್ಣವಾದ ಕ್ರೀಸ್ ಲೈನ್‌‌ಗಳೊಂದಿಗೆ ಕಾಣುತ್ತಿದೆ. ಬೈಕಿನ ಪರ್ಫಾಮೆನ್ಸ್ ಮತ್ತು ರೇಂಜ್ ಬಗ್ಗೆ ಇನ್ನೂ ಮಾಹಿತಿ ತಿಳಿದಿಲ್ಲ. ಆದರೆ ಓಲಾ ಎಸ್ 1 ಪ್ರೊ ಎಲೆಕ್ಟ್ರಿಕ್ ಸ್ಕೂಟರ್ ಹೋಗುವ ಅದೇ ವೇಗದ ಸಾಮರ್ಥ್ಯವನ್ನು ಈ ಎಲೆಕ್ಟ್ರಿಕ್ ಬೈಕ್ ಹೊಂದಿರಬಹುದು ಎನ್ನಲಾಗುತ್ತಿದೆ.

upcoming-ola-electric-bike-design-features-launch-details

ಎರ್ಗೊನಾಮಿಕ್ಸ್‌ಗೆ ಸಂಬಂಧಿಸಿದಂತೆ, ಇದು ಸಿಂಗಲ್ ಪೀಸ್ ಸೀಟ್ ಮತ್ತು ನೇರವಾದ ಸವಾರಿ ಸ್ಥಾನವನ್ನು ಹೊಂದಿದೆ. ಬ್ಯಾಟರಿ ಮತ್ತು ಮೋಟರ್ ಅನ್ನು ಒಂದೇ ಘಟಕದಲ್ಲಿ ಇರಿಸಲಾಗಿದ್ದು, ಮೋಟಾರ್‌ಸೈಕಲ್‌ನಲ್ಲಿ ತೂಕವನ್ನು ಓಲಾ ಹೇಗೆ ಸರಿದೂಗಿಸುತ್ತದೆ ಎಂಬುದನ್ನು ಕಾದು ನೋಡಬೇಕಿದೆ. ಇದಕ್ಕಾಗಿ ಹೊಸ ಅತ್ಯಾಧುನಿಕ ತಂತ್ರಜ್ಞಾನವನ್ನು ಅಭಿವೃದ್ದಿಪಡಿಸುತ್ತಿರುವುದು ತಿಳಿದುಬಂದಿದೆ.

ಸಾಮಾನ್ಯವಾಗಿ ಇಂಧನ ಚಾಲಿತ ವಾಹನಗಳಲ್ಲಿ ಕಾಣುವ ಎಂಜಿನ್ ಜಾಗದಲ್ಲಿ ಓಲಾ ಬ್ಯಾಟರಿಯನ್ನು ಇಡಬಹುದು. ಈ ಎಲೆಕ್ಟ್ರಿಕ್ ಮೋಟಾರ್‌ಸೈಕಲ್‌ನಲ್ಲಿ ಓಲಾ ಹೊಸ ಎಲೆಕ್ಟ್ರಿಕ್ ಮೋಟರ್ ಮತ್ತು ಬ್ಯಾಟರಿಯನ್ನು ಅಳವಡಿಸುವ ನಿರೀಕ್ಷೆಯಿದೆ. ಮುಂಬರುವ ದಿನಗಳಲ್ಲಿ ಓಲಾ ಇವಿ ಬೈಕ್ ಬಗ್ಗೆ ಇನ್ನಷ್ಟು ಮಾಹಿತಿ ಹೊರಬರಬಹುದು ಎಂದು ನಿರೀಕ್ಷಿಸಲಾಗಿದೆ.

upcoming-ola-electric-bike-design-features-launch-details

ಒಟ್ಟಾರೆ ಓಲಾ ಎಲೆಕ್ಟ್ರಿಕ್ ಬೈಕ್ ಇವಿ ರಂಗದಲ್ಲಿ ಹೊಸ ಅಲೆ ಎಬ್ಬಿಸುವ ಸಾಧ್ಯತೆಗಳು ಹೆಚ್ಚಾಗಿವೆ. ಇದು ಬಿಡುಗಡೆಯಾದ್ರೆ, ಪ್ರಸ್ತುತ ಮಾರಾಟದಲ್ಲಿರುವ ಟಾರ್ಕ್ ಕ್ರಾಟೋಸ್ ಆರ್ (Tork Kratos R) ಮತ್ತು ರಿವೋಲ್ಟ್ ಆರ್‌ವಿ 400 (Revolt RV400)ಗೆ ಪೈಪೋಟಿ ನೀಡಲಿದೆ. ಈ ಈ ಬೈಕ್ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಮೆಂಟ್‌ನಲ್ಲಿ ತಿಳಿಸಿ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.

More from DriveSpark

Article Published On: Wednesday, June 12, 2024, 11:55 [IST]
English summary
Upcoming ola electric bike design features launch details
Read more on ola electric india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+