Bajaj: ಬಜಾಜ್ ಚೇತಕ್ ಹೊಸ ರೂಪಾಂತರ ಜ.9ಕ್ಕೆ ಬಿಡುಗಡೆ.. ನಿರೀಕ್ಷೆಗೂ ಮೀರಿದ ವಿಶೇಷತೆಗಳಿವೆ!
ದೇಶದಲ್ಲಿ ಬಜಾಜ್ ಆಟೋ (Bajaj Auto) ಜನಪ್ರಿಯ ದ್ವಿಚಕ್ರ ವಾಹನ ತಯಾರಕ ಕಂಪನಿಯಾಗಿ ಗುರುತಿಸಿಕೊಂಡಿದೆ. ಹೊಸ ನವೀಕರಣದೊಂದಿಗೆ ಚೇತಕ್ (Chetak) ಎಲೆಕ್ಟ್ರಿಕ್ ಸ್ಕೂಟರ್‌ನ್ನು ಜನವರಿ 9 ರಂದು ಬಿಡುಗಡೆಗೊಳಿಸಲು ತಯಾರಿಸಿ ನಡೆಯುತ್ತಿದೆ ಎಂದು ವರದಿಯಾಗಿದೆ. ನೂತನ ಇ-ಸ್ಕೂಟರ್ ವಿನ್ಯಾಸ ಹಾಗೂ ವೈಶಿಷ್ಟ್ಯದಲ್ಲಿ ಸಾಕಷ್ಟು ಬದಲಾವಣೆಯನ್ನು ಹೊಂದಿರುವ ನೀರಿಕ್ಷೆಯಿದೆ.
ಚೇತಕ್ ಅರ್ಬೇನ್ (Urbane) ಮತ್ತು ಪ್ರೀಮಿಯಂ (Premium) ರೂಪಾಂತರಗಳಿಗೆ ಹೋಲಿಸಿದರೆ, ನೂತನ ರೂಪಾಂತರ ಹೆಚ್ಚು ಅತ್ಯಾಧುನಿಕವಾಗಿರಲಿದೆ. ಸೋರಿಕೆಯಾದ ದಾಖಲೆಗಳ ಪ್ರಕಾರ, ಹೊಸ ಎಲೆಕ್ಟ್ರಿಕ್ ಸ್ಕೂಟರ್, ದೊಡ್ಡದಾದ 3.2 kWh ಸಾಮರ್ಥ್ಯ ಬ್ಯಾಟರಿ ಪ್ಯಾಕ್ ಹೊಂದಿರಲಿದ್ದು, ಸಂಪೂರ್ಣ ಚಾರ್ಜ್‌ನಲ್ಲಿ 127 ಕಿ.ಮೀ (IDC) ರೇಂಜ್ ನೀಡುತ್ತದೆ.

ಇದರ ಬ್ಯಾಟರಿ ಪ್ಯಾಕ್ ಶೇಕಡ 0-100% ಚಾರ್ಜ್ ಆಗಲು 4.30 ಗಂಟೆ ಸಾಕು. ಪ್ರಸ್ತುತ ಖರೀದಿಗೆ ದೊರೆಯುವ ಬಜಾಜ್ ಚೇತಕ್, 63 kmph ಟಾಪ್ ಸ್ವೀಡ್ ಹೊಂದಲಿದ್ದು, ನೂತನ ರೂಪಾಂತರ 73 kmph ಟಾಪ್ ಸ್ವೀಡ್ ಪಡೆಯಲಿದೆ ಎನ್ನಲಾಗಿದೆ. ವೈಶಿಷ್ಟ್ಯದ ವಿಚಾರದಲ್ಲಿ ಹಲವು ಬದಲಾವಣೆಗಳನ್ನು ಹೊಂದಿರಲಿದ್ದು, ಎಲ್‌ಸಿಡಿ ಸ್ಕ್ರೀನ್ ಬದಲಿಗೆ ಟಿಎಫ್‌ಟಿ (TFT) ಸ್ಕ್ರೀನ್ ಒಳಗೊಂಡಿರುವ ನೀರಿಕ್ಷೆಯಿದೆ.
ಟರ್ನ್ - ಬೈ - ಟರ್ನ್ ನ್ಯಾವಿಗೇಶನ್ (Turn - By -Tturn Navigation), TPMS (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್), ರಿಮೋಟ್ ಲಾಕ್/ ಅನ್‌ಲಾಕ್, ಬ್ಲೂಟೂತ್ ಕನೆಕ್ಟಿವಿಟಿ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿರಲಿದೆ. ಸ್ಟೋರೇಜ್ ಸಾಮರ್ಥ್ಯ ಕೂಡ ಹೆಚ್ಚಿರಲಿದ್ದು, ಹೀಗಿರುವ ಮಾದರಿಯ 18 ಲೀಟರ್‌ಗೆ ಹೋಲಿಕೆ ಮಾಡಿದರೆ, ಅದು 21 ಲೀಟರ್‌ಗೆ ಹೆಚ್ಚಿಸಿರುವ ಸಾಧ್ಯತೆಯಿದೆ.

ಕಳೆದ ತಿಂಗಳು, ಬಜಾಜ್ ತನ್ನ ಅಗ್ಗದ ಬೆಲೆಯ ಹೊಸ ಎಲೆಕ್ಟ್ರಿಕ್ ಸ್ಕೂಟರ್ 'ಚೇತಕ್ ಅರ್ಬೇನ್' ರೂಪಾಂತರವನ್ನು ರೂ.1.15 ಲಕ್ಷ ಬೆಲೆಗೆ ಬಿಡುಗಡೆಗೊಳಿಸಿತ್ತು. ಇದು ಎಲ್‌ಸಿಡಿ ಡಿಸ್ಪ್ಲೇ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ. 2.9 kWh ಬ್ಯಾಟರಿ ಸಾಮರ್ಥ್ಯ ಬ್ಯಾಟರಿ ಪ್ಯಾಕ್ ಹೊಂದಿರುವ ಈ ಎಲೆಕ್ಟ್ರಿಕ್ ಸ್ಕೂಟರ್, ಪೂರ್ತಿ ಚಾರ್ಜ್ ನಲ್ಲಿ 113 ಕಿ.ಮೀ ರೇಂಜ್ ನೀಡುತ್ತದೆ.
ಬಜಾಜ್ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ (Bajaj Chetak Electric Scooter), ಪ್ರೀಮಿಯಂ ರೂಪಾಂತರ ಹೆಚ್ಚು-ಕಮ್ಮಿ ಅರ್ಬೇನ್ ದರದಲ್ಲಿ ಸಿಗುತ್ತದೆ. ಲಿಥಿಯಂ ಐಯಾನ್ ಬ್ಯಾಟರಿ ಪ್ಯಾಕ್ ಹೊಂದಿದ್ದು, ಇಕೋ ಮೋಡ್ ನಲ್ಲಿ 90 ಕಿ.ಮೀ ಮತ್ತು ಸ್ಪೋರ್ಟ್ ಮೋಡ್ ನಲ್ಲಿ 80 ಕಿ.ಮೀ ರೇಂಜ್ ನೀಡುತ್ತದೆ. ಇದರಲ್ಲಿ 3 - ಫೇಸ್ ಪರ್ಮನೇಟ್ ಮ್ಯಾಗ್ನೆಟ್ ಸಿಂಕ್ರೊನಸ್ ಮೋಟಾರ್ ಬಳಕೆ ಮಾಡಲಾಗಿದ್ದು, 20 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ.

ಬಜಾಜ್ ಚೇತಕ್ ಇ-ಸ್ಕೂಟರ್, ಬಾಡಿಯನ್ನು ಸಂಪೂರ್ಣವಾಗಿ ಉಕ್ಕಿನಿಂದ (steel) ಮಾಡಲಾಗಿದ್ದು, ಇದರ ಬ್ಯಾಟರಿ ಪ್ಯಾಕ್, ಕೇವಲ 5 ಗಂಟೆಯಲ್ಲಿ ಪೂರ್ತಿ ಚಾರ್ಜ್ ಆಗುತ್ತದೆ. ಇದು ಎಲ್‌ಸಿಡಿ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಬಾಡಿ -ಕಲರ್ಡ್ ರೇರ್ ವ್ಯೂ ಮಿರರ್ಸ್, ಡುಯಲ್ -ಟೋನ್ ಸೀಟ್, ವೀಲ್ ರಿಮ್‌ಗಳಲ್ಲಿ ಡೆಕಾಲ್ ಬ್ರ್ಯಾಂಡಿಂಗ್, ಪಿಲಿಯನ್ ಫುಟ್‌ರೆಸ್ಟ್, 4ಜಿ ಕನೆಕ್ಟಿವಿಟಿ ಸೇರಿದಂತೆ ಹಲವು ಫೀಚರ್ಸ್ ಇವೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








