ಕೂಲಿ ಕೆಲಸಕ್ಕೆ ಹೋಗುವವರೂ ಖರೀದಿಸಬಹುದು ಈ ಬೈಕ್: ಕಡಿಮೆ ಬೆಲೆಯಾದರೂ 70ಕಿಮೀ ಮೈಲೇಜ್!
ಭಾರತದ ಪ್ರಖ್ಯಾತ ದ್ವಿಚಕ್ರ ಮತ್ತು ತ್ರಿಚಕ್ರ ವಾಹನ ನಿರ್ಮಾಣ ಕಂಪನಿಯಾದ ಟಿವಿಎಸ್ ಭಾರತೀಯ ಮಾರುಕಟ್ಟೆಯಲ್ಲಿ ಹಲವಾರು ಬೈಕ್‌ಗಳನ್ನು ಲಾಂಚ್ ಮಾಡಿದ್ದೂ ಎಲ್ಲಾ ವರ್ಗದ ಜನರೂ ಸಹ ಇವುಗಳನ್ನು ಖರೀದಿ ಮಾಡಬಹುದಾಗಿದೆ. ಇದರಲ್ಲಿ ಸಾಮಾನ್ಯ ಜನರೂ ಸಹ ಯಾವುದೇ ಮುಲಾಜಿಲ್ಲದೆ ಖರೀದಿ ಮಾಡಬಹುದಾದ ಬೈಕ್ ಒಂದಿದೆ. ಅದುವೇ ಟಿವಿಎಸ್‌ನ ಸ್ಪೋರ್ಟ್ ಎಂಬ ಬೈಕ್ ಬಹಳ ಕಡಿಮೆ ಸಿಗುವ ಈ ಬೈಕ್ ಉತ್ತಮ ಮೈಲೇಜ್ ಅನ್ನು ನೀಡುತ್ತದೆ. ಇಂದಿನ ಲೇಖನದಲ್ಲಿ ನಾವು ಈ ಬೈಕ್ ಅನ್ನು ಯಾಕೆ ಖರೀದಿಸಬೇಕು ಎಂದು ನೋಡೋಣ.
ಟಿವಿಎಸ್ ಸ್ಪೋರ್ಟ್ (TVS Sport) ಮೋಟಾರ್‌ಸೈಕಲ್ ಎರಡು ರೂಪಾಂತರ (ವೇರಿಯೆಂಟ್)ಗಳೊಂದಿಗೆ ಖರೀದಿಗೆ ಲಭ್ಯವಿದೆ. ಬೆಂಗಳೂರಿನಲ್ಲಿ ಇದರ ಸೆಲ್ಫ್ ಸ್ಟಾರ್ಟ್ (ಇಎಸ್) ಮಾದರಿಯು ರೂ.86,079 ಆನ್-ರೋಡ್ ಬೆಲೆಯನ್ನು ಹೊಂದಿದೆ. ನೀವು ರೂ.10,000 ಡೌನ್ ಪೇಮೆಂಟ್ ಪಾವತಿಸಿ ಈ ಬೈಕ್‌ನ್ನು ಕೊಂಡುಕೊಂಡರೆ, ರೂ.76,079 ಸಾಲದ ಮೊತ್ತಕ್ಕೆ 3 ವರ್ಷಗಳಿಗೆ ಶೇಕಡ 10% ಬಡ್ಡಿ ದರದಲ್ಲಿ ಮಾಸಿಕ ರೂ.2,747 ಇಎಂಐ (EMI) ಕಟ್ಟಬೇಕು.

ಮತ್ತೊಂದು ಸೆಲ್ಫ್ ಸ್ಟಾರ್ಟ್ (ಇಎಲ್ಎಸ್) ಆವೃತ್ತಿಯು ರೂ.91,529 ಆನ್-ರೋಡ್ ದರದಲ್ಲಿ ಸಿಗುತ್ತದೆ. ರೂ.10,000 ಡೌನ್ ಪೇಮೆಂಟ್ (Down Payment) ಕಟ್ಟಿ ಈ ಮೋಟಾರ್‌ಸೈಕಲ್‌ನ್ನು ಖರೀದಿಸಿದರೆ, ರೂ.81,529 ಸಾಲದ ಹಣಕ್ಕೆ 3 ವರ್ಷದ ಅವಧಿಗೆ ಶೇಕಡ 10% ಬಡ್ಡಿ ದರದಲ್ಲಿ ತಿಂಗಳಿಗೆ ರೂ.2,944 ಇಎಂಐ ಪಾವತಿಸಬೇಕು.
ಈಗ ಈ ಬೈಕ್‌ನ ಎಂಜಿನ್ ಮತ್ತು ಇತರ ಪರ್ಫಾಮೆನ್ಸ್ ವಿಷಯಗಳಿಗೆ ಬರೋಣ. ಈ ಬೈಕ್ ಅನ್ನು ಕೊಳ್ಳುವವರು ಹೆಚ್ಚಾಗಿ ಈ ಬೈಕ್‌ನ ಮೈಲೇಜ್ ಅನ್ನು ಇಷ್ಟ ಪಡುತ್ತಾರೆ. ಈ ಬೈಕ್ 70 ಕೆಎಂಪಿಎಲ್ ಮೈಲೇಜ್ ನೀಡಲಿದ್ದು, ಬಲ್ಬ್ ಹೆಡ್‌ಲೈಟ್, ಎಲ್ಇಡಿ ಡಿಆರ್‌ಎಲ್, ಅನಲಾಗ್ ಇನ್‌ಸ್ಟ್ರುಮೆಂಟ್ ಪ್ಯಾನೆಲ್ (Analogue Instrument Panel), 17-ಇಂಚಿನ ಅಲಾಯ್ ವೀಲ್ಸ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಪಡೆದಿದೆ. 112 ಕೆಜಿ ತೂಕವಿರುವ ಈ ಬೈಕ್, 10 ಲೀಟರ್ ಸಾಮರ್ಥ್ಯದ ಫ್ಯುಯೆಲ್ (ಇಂಧನ) ಟ್ಯಾಂಕ್‌ನ್ನು ಒಳಗೊಂಡಿದೆ.

ಟಿವಿಎಸ್ ಸ್ಪೋರ್ಟ್ ಮೋಟಾರ್‌ಸೈಕಲ್ 109.7 ಸಿಸಿ ಸಿಂಗಲ್ ಸಿಲಿಂಡರ್ ಏರ್ ಕೂಲ್ಡ್ ಪೆಟ್ರೋಲ್ ಎಂಜಿನ್ ಹೊಂದಿದ್ದು, 8.19 ಪಿಎಸ್ ಗರಿಷ್ಠ ಪವರ್ (ಶಕ್ತಿ) ಹಾಗೂ 8.7 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಪಡೆದಿದೆ. ಜೊತೆಗೆ 4-ಸ್ಪೀಡ್ ಗೇರ್ ಬಾಕ್ಸ್‌ನ್ನು ಒಳಗೊಂಡಿದ್ದು, 90 ಕೆಎಂಪಿಹೆಚ್ ಟಾಪ್ ಸ್ಪೀಡ್ ಅನ್ನು ಹೊಂದಿದೆ.
ಟಿವಿಎಸ್ ಸ್ಪೋರ್ಟ್ ಮೋಟಾರ್‌ಸೈಕಲ್ ಸಸ್ಪೆನ್ಷನ್ ಸೆಟಪ್ ಬಗ್ಗೆ ಮಾತನಾಡುವುದಾದರೆ, ಮುಂಭಾಗ (ಫ್ರಂಟ್) ಟೆಲಿಸ್ಕೋಪಿಕ್ ಫೋರ್ಕ್ ಹಾಗೂ ಹಿಂಭಾಗ (ರೇರ್) ಟ್ವಿನ್ ಶಾಕ್ ಅಬ್ಸಾರ್ಬರ್ ಸಸ್ಪೆನ್ಷನ್ ಸೆಟಪ್ ಹೊಂದಿದೆ. ಬ್ರೇಕಿಂಗ್ ಸಿಸ್ಟಮ್ ವಿಚಾರವಾಗಿ ಹೇಳುವುದಾದರೆ, ಮುಂದೆ 130 ಎಂಎಂ ಮತ್ತು ಹಿಂದೆ 110 ಎಂಎಂ ಡ್ರಮ್ ಬ್ರೇಕ್ ಆಯ್ಕೆಯನ್ನು ಪಡೆದಿದೆ.

ಈ ಬೈಕ್‌ಗೆ ಹೀರೋ ಹೆಚ್‌ಎಫ್ ಡಿಲಕ್ಸ್, ಬಜಾಜ್ ಸಿಟಿ 110 ಎಕ್ಸ್, ಹೋಂಡಾ ಶೈನ್ 100, ಬಜಾಜ್ ಪ್ಲಾಟಿನಾ 110, ಹೀರೋ ಸ್ಪ್ಲೆಂಡರ್ ಪ್ಲಸ್ ಹಾಗೂ ಹೋಂಡಾ ಸಿಡಿ 110 ಡ್ರಿಮ್ ಪ್ರಬಲ ಪ್ರತಿಸ್ಪರ್ಧಿಯಾಗಿವೆ. ನಿಮ್ಮ ಗಮನಕ್ಕೆ.. ಟಿವಿಎಸ್ ಸ್ಪೋರ್ಟ್ ಮೋಟಾರ್‌ಸೈಕಲ್ ಆನ್-ರೋಡ್ ಬೆಲೆಗಳು ಹಾಗೂ ಸಾಲದ ಆಯ್ಕೆಗಳು ರಾಜ್ಯದಿಂದ ರಾಜ್ಯಕ್ಕೆ ಬೇರೆಯಿರಲಿದ್ದು, ಹೆಚ್ಚಿನ ಮಾಹಿತಿಗೆ ಸಮೀಪದ ಶೋರೂಂಗೆ ಭೇಟಿ ನೀಡಿರಿ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








