ವಿಶ್ವದ ಮೊದಲ ಸಿಎನ್‌ಜಿ ಬೈಕ್: ಸ್ಪ್ಲೆಂಡರ್‌ಗಿಂತ ಹೆಚ್ಚು ಮೈಲೇಜ್, ಲಾರಿ ಗುದ್ದಿದ್ರೂ ಏನೂ ಆಗಲ್ಲ!

ಬಜಾಜ್ ವಿಶ್ವದ ಮೊದಲ ಸಿಎನ್‌ಜಿ ಬೈಕ್ ಬಿಡುಗಡೆ ಮಾಡಿದೆ. ಈ ಬೈಕ್ ಭಾರತದಲ್ಲಿ ಹೊಸ ಅಲೆ ಎಬ್ಬಿಸಿದ್ದು, ಒಂದು ಕೆ.ಜಿ ಸಿಎನ್‌ಜಿನಲ್ಲಿ ಬರೋಬ್ಬರಿ 100 ಕಿ.ಮೀ ಮೈಲೇಜ್ ನೀಡುವುದಾಗಿ ಕಂಪನಿ ಹೇಳಿಕೊಂಡಿದೆ. ಅಷ್ಟಕ್ಕೂ ಈ ಬೈಕ್ ಅನ್ನು ಏಕೆ ಖರೀದಿಸಬೇಕು? ಈ ಬೈಕ್ ಪೆಟ್ರೋಲ್ ಚಾಲಿತ ಮೋಟಾರ್‌ಸೈಕಲ್‌ಗಳಿಗಿಂತ ಹೆಚ್ಚು ಮೈಲೇಜ್ ನೀಡುತ್ತದೆ. ಜೊತೆಗೆ ಸಿಎನ್‌ಜಿ ಬೆಲೆಯು ಪೆಟ್ರೋಲ್‌ಗಿಂತ ಕಡಿಮೆ ಬೆಲೆಯನ್ನು ಹೊಂದಿದ್ದು, ಗ್ರಾಹಕರಿಗೆ ಕಡಿಮೆ ಬೆಲೆಯಲ್ಲಿ ಹೆಚ್ಚಿನ ದೂರ ಪ್ರಯಾಣಿಸಲು ಅನುವು ಮಾಡಿಕೊಡುತ್ತದೆ. ಈ ಸಿಎನ್‌ಜಿ ಮೋಟಾರ್‌ಸೈಕಲ್ ಕುರಿತ ಹೆಚ್ಚಿನ ಮಾಹಿತಿಯನ್ನು ಇಲ್ಲಿ ತಿಳಿಯೋಣ.

ಈ ಬೈಕ್ ಏಕೆ ಖರೀದಿಸಬೇಕು?: ಅತ್ಯಧಿಕ ಮೈಲೇಜ್ ಹಾಗೂ ಆಧುನಿಕ ವೈಶಿಷ್ಟ್ಯಗಳನ್ನು ಹೊಂದಿರುವ ಬೈಕ್ ಖರೀದಿಸಲು ಬಯಸುತ್ತಿದ್ದರೆ, ಬಜಾಜ್ ಸಿಎನ್‌ಜಿ ಬೈಕ್ ಅನ್ನು ನೋಡಬಹುದು. ಇದು ಇತರ ಪೆಟ್ರೋಲ್ ಚಾಲಿತ ಬೈಕ್‌ಗಳಿಗೆ ಹೋಲಿಸಿದರೆ, ಹೆಚ್ಚಿನ ಮೈಲೇಜ್ ಹಾಗೂ ನಿರ್ವಹಣಾ ವೆಚ್ಚವನ್ನು ಗಣನೀಯವಾಗಿ ತಗ್ಗಿಸುತ್ತದೆ. ಹಾಗೆಯೇ ಡಿಸೈನ್‌ನಲ್ಲಿಯೂ ಸ್ಪೋರ್ಟಿ ಲುಕ್ ಹೊಂದಿದೆ.

why-should-we-buy-bajaj-cng-bike-here-is-reason

ಭಾರತದಲ್ಲಿ ಬಜಾಜ್ ಫ್ರೀಡಂ 125 ಸಿಎನ್‌ಜಿ ಬೈಕ್, ಎನ್‌ಜಿ04 ಡ್ರಮ್, ಎನ್‌ಜಿ04 ಡ್ರಮ್ ಎಲ್ಇಡಿ ಮತ್ತು ಎನ್‌ಜಿ04 ಡಿಸ್ಕ್ ಎಲ್ಇಡಿ ಎಂಬ ಮೂರು ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿದೆ. ಇದರ ಬೆಲೆಗಳು 95,000 ರೂ.ಗಳಿಂದ ಪ್ರಾರಂಭವಾಗಿ ಟಾಪ್‌ ವೆರಿಯೆಂಟ್‌ಗೆ 1,10,000 ರೂ.ಗಳವರೆಗೆ (ಎಕ್ಸ್‌ ಶೋರೂಂ ಬೆಲೆಗಳು) ಇದೆ.

ಬಜಾಜ್ ಸಿಎನ್‌ಜಿ ಬೈಕ್, ಪ್ರತಿ ಕಿ.ಮೀಗೆ ಸುಮಾರು 80 ಪೈಸೆಯಿಂದ 1 ರೂ. ಖರ್ಚು ಬೀಳುತ್ತದೆ. ಇದು ಪೆಟ್ರೋಲ್ ಚಾಲಿತ ಬೈಕ್ ಗಳಿಗಿಂತ ಅಗ್ಗವಾಗಿದೆ. ಹೆಚ್ಚುವರಿಯಾಗಿ, 5-6 ವರ್ಷಗಳ ನಂತರ, ಎಲೆಕ್ಟ್ರಿಕ್ ಬೈಕ್ ಬ್ಯಾಟರಿಗಳು ಕ್ಷೀಣಿಸುತ್ತವೆ, ಅವುಗಳ ಚಾರ್ಜ್ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತವೆ. ಆದರೆ ಬಜಾಜ್ ಸಿಎನ್‌ಜಿ ಬೈಕ್ ಹಾಗಲ್ಲ ಸಾಮಾನ್ಯ ಇಂಧನ ಚಾಲಿತ ಬೈಕ್‌ಗಳಂತಯೇ ಉತ್ತಮ ನಿರ್ವಹಣಾ ವೆಚ್ಚವನ್ನು ಹೊಂದಿರುತ್ತವೆ.

why-should-we-buy-bajaj-cng-bike-here-is-reason

ಗ್ರಾಹಕರ ಸುರಕ್ಷತೆಗಾಗಿ ಬಜಾಜ್ ಫ್ರೀಡಂ 125 ಸಿಎನ್‌ಜಿ ಬೈಕ್ ಅನ್ನು ಬಜಾಜ್ ಸಂಪೂರ್ಣ ಪರೀಕ್ಷೆಗೆ ಒಳಪಡಿಸಿದೆ. ಸ್ಟ್ಯಾಂಡರ್ಡ್ ರೆಗ್ಯುಲೇಟರಿ ಪರೀಕ್ಷೆಗಳ ಜೊತೆಗೆ, ಬಜಾಜ್ ಸಿಎನ್‌ಜಿ ಬೈಕ್ 11 ಹೆಚ್ಚುವರಿ ಸುರಕ್ಷತಾ ಪರೀಕ್ಷೆಗಳಲ್ಲಿ ಉತ್ತೀರ್ಣವಾಗಿದೆ. ಎಲ್ಲಾ ಪರೀಕ್ಷೆಗಳಲ್ಲಿಯೂ ಪಾಸ್ ಆದ ಬಳಿಕವಷ್ಟೇ ಮೋಟಾರ್‌ಸೈಕಲ್ ಅನ್ನು ಮಾರಾಟಕ್ಕೆ ತರಲಾಗಿದೆ ಎಂದು ಕಂಪನಿ ಹೇಳಿದೆ.

ಸಿಎನ್‌ಜಿ ಟ್ಯಾಂಕ್ ತಡೆದುಕೊಳ್ಳಬಹುದಾದ ಗರಿಷ್ಠ ಒತ್ತಡವನ್ನು ಪರೀಕ್ಷಿಸುವುದು, ಬೈಕ್ ಅನ್ನು ಎತ್ತರದಿಂದ ಬೀಳಿಸುವುದು, ಗಂಟೆಗೆ 60 ಕಿ.ಮೀ ವೇಗದಲ್ಲಿ ಬೈಕ್ ಅನ್ನು ತಡೆಗೋಡೆಗೆ ಡಿಕ್ಕಿ ಹೊಡೆಸುವುದು, 10 ಟನ್ ಟ್ರಕ್ ರನ್-ಓವರ್ ಪರೀಕ್ಷೆ ಇವುಗಳಲ್ಲಿ ಸೇರಿವೆ. ಈ ಎಲ್ಲಾ ಪರೀಕ್ಷೆಗಳಲ್ಲಿ, ಸಿಎನ್‌ಜಿ ಟ್ಯಾಂಕ್ ಯಾವುದೇ ಸೋರಿಕೆಯಿಲ್ಲದೆ ತನ್ನ ಆಕಾರ ಮತ್ತು ಒತ್ತಡವನ್ನು ಸಂಪೂರ್ಣವಾಗಿ ತಡೆದುಕೊಂಡಿದೆ.

why-should-we-buy-bajaj-cng-bike-here-is-reason

ಬಜಾಜ್ ಸಿಎನ್‌ಜಿ ಬೈಕ್ ಪ್ರತಿ ಕೆ.ಜಿ ಸಿಎನ್‌ಜಿಗೆ 102 ಕಿ.ಮೀ ಮತ್ತು ಪೆಟ್ರೋಲ್‌ಗೆ 65 ಕಿ.ಮೀ ಮೈಲೇಜ್ ನೀಡುತ್ತದೆ. ಅಂದರೆ ಎರಡೂ ಟ್ಯಾಂಕ್‌ಗಳಲ್ಲಿ ಸುಮಾರು 330 ಕಿ.ಮೀ (ಕ್ಲೈಮ್) ಮೈಲೇಜ್ ಒದಗಿಸುತ್ತದೆ ಎಂದು ಕಂಪನಿ ಹೇಳಿಕೊಂಡಿದೆ. ಆದರೆ ನಿಜವಾಗಿ ಈ ಬೈಕ್ ಸಿಎನ್‌ಜಿಯಿಂದ ಸುಮಾರು 85 ಕಿ.ಮೀ ಮತ್ತು ಪೆಟ್ರೋಲ್‌ನಲ್ಲಿ ಸುಮಾರು 56 ಕಿ.ಮೀ ಮೈಲೇಜ್ ನೀಡುತ್ತದೆ, ಒಟ್ಟಾರೆ ಫುಲ್‌ಟ್ಯಾಂಕ್‌ನಲ್ಲಿ 280 ಕಿ.ಮೀ ಮೈಲೇಜ್ ನೀಡುತ್ತದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Monday, November 11, 2024, 22:27 [IST]
English summary
Why should we buy bajaj cng bike here is reason
Read more on bajaj auto india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+