ಮತ್ತೆ ಭಾರತದ ಹೆದ್ದಾರಿಗಳಲ್ಲಿ RD350 & RX100?... ಯಮಹಾದ ಮುಂದಿನ ನಡೆ ಏನು ಗೊತ್ತಾ?

ಯಮಹಾ ಭಾರತದಲ್ಲಿ ಎಸ್ಕೋರ್ಟ್ಸ್‌ ಎಂಬ ಕಂಪನಿ ಜೊತೆ ಸಹಭಾಗಿತ್ವದೊಂದಿಗೆ ಬೈಕ್‌ಗಳನ್ನು ಭಾರತೀಯ ಮಾರುಕಟ್ಟೆಗೆ ಪರಿಚಯಿಸಿದಾಗ ಅದು ಮುಂದೊಂದು ದಿನ ಭಾರತೀಯ ಬೈಕ್‌ ಮಾರುಕಟ್ಟೆಯನ್ನೇ ಆಳಲಿದೆ ಎಂದು ಯಾರೂ ಸಹ ಅಂದುಕೊಂಡಿರಲಿಲ್ಲ. ಆದರೆ ಈಗ ಯಮಹಾ ಭಾರತೀಯ ಮಾರುಕಟ್ಟೆಯಲ್ಲಿ ಪ್ರಸಿದ್ದ ಬೈಕ್‌ ನಿರ್ಮಾಣ ಕಂಪನಿಯಾಗಿ ಬದಲಾಗಿದೆ.

ಯಮಹಾ ಭಾರತದಲ್ಲಿ ಮೊದಲು ಪರಿಚಯಿಸಿದ ಬೈಕ್‌ಗಳು ಎಂದರೆ ಯಮಹಾ RD350 ಮತ್ತು RX100. ಈ ಎರಡು ಬೈಕ್‌ ಮಾಡೆಲ್‌ಗಳು ಭಾರತದಲ್ಲಿ ಯಮಹಾ ತನ್ನ ಅಸ್ತಿತ್ವನ್ನು ಕಂಡುಕೊಳ್ಳುವಲ್ಲಿ ಬಹುಪಾಲು ಪಾತ್ರವನ್ನು ವಹಿಸಿದಂತಹ ಬೈಕ್‌ಗಳು. 1970 ರ ದಶಕದಿಂದ 2000 ದವರೆಗೂ ಭಾರತೀಯ ಮಾರುಕಟ್ಟೆಯನ್ನು ಈ ಬೈಕ್‌ಗಳು ಆಳಿ, ಎಲ್ಲರ ನೆಚ್ಚಿನ ಬೈಕ್‌ಗಳಾಗಿ ಹೆಸರು ಮಾಡಿತ್ತು.

Will Yamaha Launch RD350 And Yamaha RX100 In India

ಆನಂತರದಲ್ಲಿ ಪೋರ್‌ ಸ್ಟ್ರೋಕ್‌ ಎಂಜಿನ್‌ಗಳ ಹವಾ ಹೆಚ್ಚಾದಾಗ ಈ ಬೈಕ್‌ಗಳು ನಿಧಾನವಾಗಿ ತೆರೆ ಮರೆಗೆ ಸರಿದಿದ್ದವು. ಸದ್ಯಕ್ಕೆ ಯಮಹಾ RD350 ಮತ್ತು RX100 ಬೈಕ್‌ಗಳ ಸೆಕೆಂಡ್‌ ಹ್ಯಾಂಡ್‌ ಮಾಡೆಲ್‌ಗಳಿಗೆ ಭರ್ಜರಿ ಬೇಡಿಕೆಯಿದೆ. ಮಾತ್ರವಲ್ಲದೇ ಯಾರೂ ಸಹ ಈಗಿರುವ ಅವರ ಯಮಹಾ RD350 ಮತ್ತು RX100 ಬೈಕ್‌ಗಳನ್ನು ಮಾರಾಟ ಮಾಡಲೂ ಮುಂದಾಗುತ್ತಿಲ್ಲ.

ಆದರೆ ಇದೀಗ ಯಮಹಾ ಕಂಪನಿಯು ತನ್ನ ಐಕಾನಿಕ್‌ ಬೈಕ್‌ಗಳಾದ ಯಮಹಾ RD350 ಮತ್ತು RX100 ಅನ್ನು ಮತ್ತೆ ಮಾರುಕಟ್ಟೆಗೆ ತರಲಿದೆ ಎಂಬ ಮಾಹಿತಿಗಳು ಲಭ್ಯವಾಗಿದೆ. ಈ ಹಿಂದೆ ಯಮಹಾ ಈ ಸುದ್ದಿಯನ್ನು ನಿರಾಕರಿಸಿತ್ತು. ಆದರೆ ಈಗ RX ಎಂಬ ಹೆಸರನ್ನು ಬಳಸಿಕೊಂಡು ಬೈಕ್ ಅನ್ನು ಅಭಿವೃದ್ದಿಪಡಿಸುತ್ತಿದೆ ಎಂದು ತಿಳಿದು ಬಂದಿದೆ. ಇದು ಭಾರತೀಯ ಬೈಕ್‌ ಪ್ರೇಮಿಗಳ ಆಶಾಗೋಪುರಕ್ಕೆ ಬೆಳಕು ಚೆಲ್ಲಿದಂತಾಗಿದೆ.

Will Yamaha Launch RD350 And Yamaha RX100 In India

ಮಾಹಿತಿಗಳ ಪ್ರಕಾರ ಯಮಹಾ RD350 ಮತ್ತು RX100 ಎರಡೂ ಬೈಕ್‌ಗಳು ಸಹ ಹೊಸ ಮಾಡರ್ನ್‌ ಟಚ್‌ ಜೊತೆ ಬರಲಿದೆ. ಹಿಂದಿನ ದಿನಗಳಲ್ಲಿ ಭಾರತೀಯ ರೋಡ್‌ಗಳನ್ನು ಆಳಿದ್ದ ಈ ಬೈಕ್‌ಗಳು ಇದೀಗ ಮತ್ತೊಮ್ಮೆ ಭಾರತದ ಹೆದ್ದಾರಿಯಲ್ಲಿ ಹಾರಾಡಲಿ ಎಂಬುವುದು ಎಲ್ಲರ ಆಶಯವಾಗಿದೆ. ಅದಕ್ಕಾಗಿ ಕೋಟ್ಯಾಂತರ ಭಾರತೀಯ ಬೈಕ್‌ ಪ್ರೇಮಿಗಳು ಸಹ ಕಾಯುತ್ತಿದ್ದಾರೆ.

ಕಾಲೇಜು ಯುವಕರಂತೂ ಯಮಹಾ ಆರ್‌ಎಕ್ಸ್100 (Yamaha RX) ಬೈಕ್​ ಖರೀದಿಸಲು ಹಾತೊರೆಯುತ್ತಿದ್ದರು. ಆದರೆ 2003ರ ತನಕ ಮಾರಾಟ ವಾಗುತ್ತಿದ್ದ ಆರ್‌ಎಕ್ಸ್100 ಬೈಕ್​ ಉತ್ಪಾದನೆಯನ್ನು ಸ್ಥಗಿತ ಮಾಡಲಾಗಿತ್ತು. 'ಯಮಹಾ RX100' ಹೆಸರಿಗೆ ಸಂಬಂಧಿಸಿದಂತೆ ಭಾವನಾತ್ಮಕ ಪ್ರಾಮುಖ್ಯತೆಯನ್ನು ಅರ್ಥಮಾಡಿಕೊಂಡಿದೆ ಎಂದು ತೋರುತ್ತದೆ, ಅದಕ್ಕಾಗಿಯೇ ಅವರು ಅದೇ ಹೆಸರಿನೊಂದಿಗೆ ಆಧುನಿಕ ನಾಲ್ಕು-ಸ್ಟ್ರೋಕ್ ಮೋಟಾರ್‌ಸೈಕಲ್ ಅನ್ನು ಪರಿಚಯಿಸದಿರಲು ನಿರ್ಧರಿಸಿದ್ದಾರೆ.

ಅನೇಕ ಜನರು ಯಮಹಾ RX100 ನಂತಹ ಐಕಾನಿಕ್ ಹೆಸರುಗಳಿಗೆ ಬಲವಾದ ಭಾವನೆಗಳನ್ನು ಹೊಂದಿದ್ದಾರೆ. ಇದರಿಂದ ಆ ಹೆಸರಿನಲ್ಲಿ ಹೊಸ ಬೈಕ್ ಬಿಡುಗಡೆಗೊಳಿಸುವುದು ಒಂದು ಸವಾಲಾಗಿದೆ. ಯಮಹಾ ಆರ್‌ಎಕ್ಸ್100 ಬೈಕ್ ಬಗ್ಗೆ ಹೇಳುವುದಾದರೆ, ಇದು ಭಾರತದಲ್ಲಿ 1996 ರವರೆಗೆ ಉತ್ಪಾದನೆಯಲ್ಲಿ ಮುಂದುವರೆಯಿತು. ಆದರೆ ಯಮಹಾ RX100 ಅನ್ನು 1985 ರಿಂದ 1987 ರವರೆಗೆ ಸಿಕಿಡಿ ಯುನಿಟ್ ಆಗಿ ಭಾರತಕ್ಕೆ ತರಲಾಗಿತ್ತು.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Thursday, February 8, 2024, 16:25 [IST]
English summary
Will yamaha launch rd350 and yamaha rx100 in india
Read more on ಯಮಹಾ yamaha
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+