ಹೊಸ ಯಮಹಾ FZ-X ಕ್ರೋಮ್ ಎಡಿಷನ್, ಮೆಟಾಲಿಕ್ ಬ್ಲ್ಯಾಕ್ ಆವೃತ್ತಿಯ ವಿಶೇಷತೆಗಳು!

ಯಮಹಾ ಇತ್ತೀಚೆಗೆ ತನ್ನ FZ-X ಅನ್ನು ಆಕರ್ಷಕ ಕ್ರೋಮ್ ಹಾಗೂ ಮೆಟಾಲಿಕ್ ಬ್ಲ್ಯಾಕ್ ಆವೃತ್ತಿಗಳಲ್ಲಿ ಬಿಡುಗಡೆ ಮಾಡಿದೆ. ಇವೆರಡರಲ್ಲಿ ಒಂದನ್ನು ಇತ್ತೀಚೆಗೆ ಮುಕ್ತಾಯಗೊಂಡ ಭಾರತ್ ಮೊಬಿಲಿಟಿ ಶೋ 2024 ರಲ್ಲೂ ಪ್ರದರ್ಶಿಸಲಾಗಿತ್ತು. ಅದೇ ಆಕರ್ಷಕ ಕ್ರೋಮ್ ಎಡಿಷನ್ ಇದರ ವಿಶೇಷತೆಗಳನ್ನು ಇಲ್ಲಿ ನೋಡೋಣ.

ಹೊಸ FZ-X ಮೆಟಾಲಿಕ್ ಬ್ಲ್ಯಾಕ್ ಎಡಿಷನ್ ರೂ. 1,36,200 (ಎಕ್ಸ್ ಶೋರೂಮ್, ದೆಹಲಿ) ಬೆಲೆಯಲ್ಲಿ ಖರೀದಿಗೆ ಲಭ್ಯವಿದ್ದು, ಕ್ರೋಮ್ ಆವೃತ್ತಿಯು 1.40 ಲಕ್ಷ ರೂ. (ಎಕ್ಸ್ ಶೋ ರೂಂ) ಬೆಲೆಗೆ ಲಭ್ಯವಿದೆ. ಹೊಸ ಯಮಹಾ FZ-X ಕ್ರೋಮ್ ರೂಪಾಂತರವನ್ನು ಬುಕ್ ಮಾಡುವ ಆರಂಭಿಕ ನೂರು ಗ್ರಾಹಕರು ಕ್ಯಾಸಿಯೊ ಜಿ-ಶಾಕ್ ವಾಚ್ ಅನ್ನು ಪಡೆಯಬಹುದು. ಆರಂಭಿಕವಾಗಿ ಬುಕ್‌ ಮಾಡುವ ಗ್ರಾಹಕರಿಗೆ ಕಂಪನಿಯು ವಿಶೇಷ ಪ್ರೋತ್ಸಾಹ ನೀಡುತ್ತಿದೆ.

yamaha-fz-x-chrome-and-metallic-black-edition-price-specs-details

ಈಗಾಗಲೇ ಯಮಹಾದ ಮಧ್ಯಮ 150 ಸಿಸಿ ವಿಭಾಗದಲ್ಲಿ, FZ ಸಿರೀಸ್ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆಯನ್ನು ಪಡೆದಿದೆ. ಇದೀಗ ಹೊಸ ರೂಪಾಂತರಗಳೊಂದಿಗೆ ಗ್ರಾಹಕರನ್ನು ಸೆಳೆಯುವ ಯೋಜನೆಯನ್ನು ಕಂಪನಿ ಹೊಂದಿದೆ. ಹಾಗಾಗಿಯೇ ಕ್ರೋಮ್ ರೂಪಾಂತರಕ್ಕಾಗಿ ಮೊದಲ 100 ಆನ್‌ಲೈನ್ ಬುಕಿಂಗ್‌ಗಳು ವಾಹನ ವಿತರಣೆಯ ನಂತರ ಕ್ಯಾಸಿಯೊ ಜಿ-ಶಾಕ್ ವಾಚ್ ಅನ್ನು ಗಿಫ್ಟ್ ಆಗಿ ಸ್ವೀಕರಿಸಬಹುದು ಎಂದು ಹೇಳಿದೆ.

ವಾಹನ ವಿಶೇಷತೆಗಳಿಗೆ ಬಂದರೆ, ಸ್ಟ್ಯಾಂಡರ್ಡ್ ಯಮಹಾ FZ-X ನಲ್ಲಿ ನೀಡಲಾಗುವ ಟ್ರಾಕ್ಷನ್ ಕಂಟ್ರೋಲ್ ಸಿಸ್ಟಮ್, ಎಬಿಎಸ್, ಎಲ್ಇಡಿ ಹೆಡ್ಲೈಟ್ ಮತ್ತು ಬ್ಲೂಟೂತ್-ಸಕ್ರಿಯಗೊಳಿಸಿದ ವೈ-ಕನೆಕ್ಟ್ ಅಪ್ಲಿಕೇಶನ್ ಹಾಗೂ ಮೋಟಾರ್ಸೈಕಲ್ ವಿನ್ಯಾಸ, ವೈಶಿಷ್ಟ್ಯಗಳು ಮತ್ತು ಆಯಾಮಗಳನ್ನು ಹಾಗೆಯೇ ಉಳಿಸಿಕೊಂಡಿದ್ದು, ಕೇವಲ ಬಣ್ಣ ಮಾತ್ರ ಬದಲಾಗಿದೆ.

yamaha-fz-x-chrome-and-metallic-black-edition-price-specs-details

ಹೊಸ ವಿಶೇಷತೆಗಳೇನು?: ಹೊಸ ಯಮಹಾ FZ-X ಕ್ರೋಮ್ ಎಡಿಷನ್ ಮಾದರಿಯು ಈಗ E20 ಇಂಧನದೊಂದಿಗೆ ಸಹ ಹೊಂದಿಕೊಳ್ಳುತ್ತದೆ. ಅಂದರೆ ಇದು ಶೇ 80 ರಷ್ಟು ಪೆಟ್ರೋಲ್ ಹಾಗೂ ಶೇ 20 ಎಥೆನಾಲ್ ಮಿಶ್ರಣದಲ್ಲಿ ಚಲಿಸುವ ಸಾಮರ್ಥ್ಯವನ್ನು ಹೊಂದಿದೆ. ಈ E20 ಇಂಧನವು ಪರಿಸರ ಮಾಲೀನ್ಯವನ್ನು ತಡೆಯುವ ಗುಣವನ್ನು ಹೊಂದಿರುತ್ತದೆ.

ಹೊಸ ಯಮಹಾ FZ-X ಕ್ರೋಮ್ ಎಡಿಷನ್ ಮಾದರಿಯು ಅದೇ 149 cc, ಸಿಂಗಲ್-ಸಿಲಿಂಡರ್ ಎಂಜಿನ್ ಹೊಂದಿದ್ದು, 12.4 hp ಪವರ್ ಮತ್ತು 13.3 Nm ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ 5-ಸ್ಪೀಡ್ ಗೇರ್‌ಬಾಕ್ಸ್‌ಗೆ ಜೋಡಿಸಲ್ಪಟ್ಟಿದೆ. ಪರ್ಫಾಮೆನ್ಸ್ ವಿಷಯದಲ್ಲೂ ಅದೇ ಸ್ಟ್ಯಾಂಡರ್ಡ್ ಆವೃತ್ತಿಯಂತೆ ಇರಲಿದ್ದು, ಪವರ್‌ ಔಟ್‌ಪುಟ್‌ ಒಂದೇ ಆಗಿರುವುದರಿಂದ ಯಾವುದೇ ಹೆಚ್ಚಿನ ಪರ್ಫಾಮೆನ್ಸ್ ಇರುವುದಿಲ್ಲ.

ಇದಲ್ಲದೆ, FZ-X ಟ್ರಾಕ್ಷನ್ ಕಂಟ್ರೋಲ್ ಸಿಸ್ಟಮ್ (TCS), ಹಿಂದಿನ ಡಿಸ್ಕ್ ಬ್ರೇಕ್‌ನೊಂದಿಗೆ ಮುಂಭಾಗದಲ್ಲಿ ಸಿಂಗಲ್-ಚಾನೆಲ್ ABS, ಮಲ್ಟಿ-ಫಂಕ್ಷನ್ ಫುಲ್ಲಿ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ರೌಂಡ್ LED ಹೆಡ್‌ಲೈಟ್, ಹಿಂಭಾಗದ ಮಡ್‌ಗಾರ್ಡ್ ಸೇರಿದಂತೆ ಅದರ ಪ್ರಸ್ತುತ ವೈಶಿಷ್ಟ್ಯಗಳನ್ನು ಮುಂದುವರೆಸಿದೆ. ಕಡಿಮೆ ಎಂಜಿನ್ ಗಾರ್ಡ್ ಮತ್ತು ಬ್ಲೂಟೂತ್-ಸಕ್ರಿಯಗೊಳಿಸಿದ ವೈ-ಕನೆಕ್ಟ್ ಅಪ್ಲಿಕೇಶನ್ ಇತರ ವೈಶಿಷ್ಟ್ಯಗಳನ್ನು ಹಾಗೇ ಉಳಿಸಲಾಗಿದೆ.

ಸಸ್ಪೆನ್ಷನ್ ವಿಷಯಕ್ಕೆ ಬಂದರೆ, ಹೊಸ ಯಮಹಾ FZ-X ಕ್ರೋಮ್ ಎಡಿಷನ್ ಮುಂಭಾಗ ಟೆಲಿಸ್ಕೋಪಿಕ್ ಫ್ರಂಟ್ ಫೋರ್ಕ್‌ಗಳು ಮತ್ತು ಹಿಂಭಾಗದಲ್ಲಿ 7-ಸ್ಟೆಪ್ ಅಡ್ಜಸ್ಟಬಲ್ ಮೊನೊಕ್ರಾಸ್ ಘಟಕವನ್ನು ಪಡೆದಿದೆ. ಬ್ರೇಕಿಂಗ್ ವಿಷಯಕ್ಕೆ ಬಂದರೆ ಇದು ABS ಜೊತೆಗೆ 282 mm ಮುಂಭಾಗದ ಡಿಸ್ಕ್ ಮತ್ತು ಹಿಂದಿನ ಚಕ್ರದಲ್ಲಿ 220 mm ಡಿಸ್ಕ್ ಅನ್ನು ಹೊಂದಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Friday, February 9, 2024, 11:51 [IST]
English summary
Yamaha fz x chrome and metallic black edition price specs details
Read more on ಯಮಹಾ yamaha
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+