ಸ್ಕೂಟರ್‌ನಲ್ಲಿ ಕಾರಿನಂತಹ ಅತ್ಯಾಧುನಿಕ ಫೀಚರ್ ಪರಿಚಯಿಸಿದ ಯಮಹಾ
ಯಮಹಾ ಕಂಪನಿಯು ತನ್ನ 'ದಿ ಕಾಲ್ ಆಫ್ ದಿ ಬ್ಲೂ' ಬ್ರಾಂಡ್ ಅಭಿಯಾನಕ್ಕೆ ಅನುಗುಣವಾಗಿ, ತನ್ನ ರೇಝಡ್ಆರ್ (RayZR) ಸ್ಟ್ರೀಟ್ ರ್‍ಯಾಲಿ ಸ್ಕೂಟರ್‌ನಲ್ಲಿ 'ಆನ್ಸರ್ ಬ್ಯಾಕ್' ಫಂಕ್ಷನ್ ಮತ್ತು LED ಡೇಟೈಮ್ ರನ್ನಿಂಗ್ ಲೈಟ್ (DRL)ನಂತಹ ಹೊಸ ಫೀಚರ್‌ಗಳನ್ನು ಪರಿಚಯಿಸಿದೆ. RayZR ಸ್ಟ್ರೀಟ್ ರ್‍ಯಾಲಿ ಸ್ಕೂಟರ್ ಮೋಟಾರ್‌ಸೈಕಲ್ - ರೀತಿಯ ವಿನ್ಯಾಸದೊಂದಿಗೆ ಅಂತರಾಷ್ಟ್ರೀಯ ಮಟ್ಟದ ಸ್ಪೋರ್ಟಿ ಡಿಸೈನ್ ಒಳಗೊಂಡಿದೆ. ಈ ಹೊಸ ಪ್ರೀಮಿಯಂ ಸ್ಕೂಟರ್ ಮಾದರಿಯು ಯಮಹಾದ ಪೋರ್ಟ್‌ಫೋಲಿಯೊಗೆ ರೋಮಾಂಚಕ ಸೇರ್ಪಡೆಯಾಗಿದೆ ಎಂದು ಕಂಪನಿ ಹೇಳಿದೆ.
ಹೊಸ ಸೈಬರ್ ಗ್ರೀನ್ ಬಣ್ಣ ಸೇರಿದಂತೆ ಐಸ್ ಫ್ಲೂ-ವರ್ಮಿಲಿಯನ್ (ಬ್ಲೂ ಸ್ಕ್ವೇರ್ ಶೋ ರೂಂಗಳಲ್ಲಿ ಮಾತ್ರ) ಮತ್ತು ಮ್ಯಾಟ್ ಬ್ಲ್ಯಾಕ್ ಬಣ್ಣಗಳಲ್ಲಿ ಲಭ್ಯವಿದೆ. ಬೆಲೆಯ ವಿಷಯಕ್ಕೆ ಬಂದರೆ ರೂ. 98,130 (ಎಕ್ಸ್ ಶೋ ರೂಂ)ಕ್ಕೆ ಖರೀದಿಗೆ ಲಭ್ಯವಿದೆ. ಇದರಲ್ಲಿ ಅನುಕೂಲತೆ, ಸುಧಾರಿತ ತಂತ್ರಜ್ಞಾನ ಮತ್ತು ಸೌಕರ್ಯವನ್ನು ಸಂಪೂರ್ಣವಾಗಿ ಹೆಚ್ಚಿಸಲಾಗಿದೆ ಎಂದು ಕಂಪನಿ ತಿಳಿಸಿದೆ.

ಏನಿದು ಆನ್ಸರ್ ಬ್ಯಾಕ್ ಫೀಚರ್: ಮೊಬೈಲ್ ಅಪ್ಲಿಕೇಶನ್‌ನಲ್ಲಿನ 'ಆನ್ಸರ್ ಬ್ಯಾಕ್' ಬಟನ್‌ನ ಒಂದೇ ಒಂದು ಕ್ಲಿಕ್‌ನಲ್ಲಿ ತಮ್ಮ ಹೊಸ RayZR ಸ್ಟ್ರೀಟ್ ರ್‍ಯಾಲಿ ಸ್ಕೂಟರ್ ಅನ್ನು ಜನನಿಬಿಡ ಪ್ರದೇಶಗಳಲ್ಲಿ ಸುಲಭವಾಗಿ ಪತ್ತೆಹಚ್ಚಬಹುದು. ತನ್ನ ಬಜರ್‌ನಿಂದ ಮಿನುಗುವ ಬ್ಲಿಂಕರ್‌ಗಳು ಮತ್ತು ಬೀಪ್‌ಗಳೊಂದಿಗೆ ಪ್ರತಿಕ್ರಿಯಿಸುತ್ತದೆ ಎಂದು ಯಮಹಾ ಕಂಪನಿ ತಿಳಿಸಿದೆ.
ಎಲ್ಇಡಿ ಡಿಆರ್ಎಲ್ ಇತರ ರಸ್ತೆ ಬಳಕೆದಾರರಿಗೆ ಮತ್ತು ಪಾದಚಾರಿಗಳಿಗೆ ಸುಧಾರಿತ ಗೋಚರತೆಯನ್ನು ನೀಡುತ್ತದೆ. ಹೆಚ್ಚುವರಿಯಾಗಿ, ಎರಡು-ಹಂತದ ಆಸನದ ಸೌಕರ್ಯದ ಜೊತೆಗೆ, ಡ್ಯುಯಲ್-ಟೋನ್ ವಿನ್ಯಾಸವನ್ನು ಹೊಂದಿದೆ. ಹೊಸ ಸ್ಕೂಟರ್ ರಿಫ್ರೆಶ್ ಮಾಡಿದ ಸ್ಟೈಲಿಂಗ್ ಅಂಶಗಳನ್ನು ಸಹ ಪಡೆದಿದೆ, ಇದು ಸ್ಕೂಟರ್‌ನ ಒಟ್ಟಾರೆ ಆಕರ್ಷಣೆಯನ್ನು ಹೆಚ್ಚಿಸುತ್ತದೆ.

ಪರ್ಫಾಮೆನ್ಸ್: ಆರ್ಮರ್ಡ್ ಎನರ್ಜಿ ಪರಿಕಲ್ಪನೆಯ ಮೇಲೆ ನಿರ್ಮಿಸಲಾದ RayZR ಸ್ಟ್ರೀಟ್ ರ್‍ಯಾಲಿ ಸ್ಕೂಟರ್, ಸುಧಾರಿತ ಪರ್ಫಾಮೆನ್ಸ್ ಮತ್ತು ಮೈಲೇಜ್‌ಗಾಗಿ 125cc Fi ಬ್ಲೂ ಕೋರ್ ಎಂಜಿನ್ ಮತ್ತು ಹೈಬ್ರಿಡ್ ಪವರ್ ಅಸಿಸ್ಟ್ ಅನ್ನು ಒಳಗೊಂಡಿದೆ. ಏರ್ ಕೂಲ್ಡ್, ಫ್ಯುಯಲ್ ಇಂಜೆಕ್ಟೆಡ್ ಇಂಜಿನ್, ಸ್ಮಾರ್ಟ್ ಮೋಟಾರ್ ಜನರೇಟರ್ (SMG) ನೊಂದಿಗೆ ಬರುತ್ತದೆ.
ಹೆಚ್ಚುವರಿಯಾಗಿ, ಬ್ರಷ್ ಗಾರ್ಡ್, ನಯವಾದ ಸ್ಟೀಲ್ ಪ್ಯಾನಲ್‌ಗಳು ಮತ್ತು ಗುಣಮಟ್ಟದ ಟೈರ್‌ಗಳು ವಾಹನದ ಒರಟಾದ ನಿರ್ಮಾಣಕ್ಕೆ ಆಕರ್ಷಕವಾಗಿ ಕಾಣುತ್ತವೆ. ಇದು E20 ಇಂಧನವನ್ನು ಸಪೋರ್ಟ್ ಮಾಡುತ್ತದೆ. ಇನ್ನು RayZR ಸ್ಟ್ರೀಟ್ ರ್‍ಯಾಲಿ ಸ್ಕೂಟರ್ ಸೀಟಿನ ಕೆಳಗೆ 21 ಲೀಟರ್ ಸಂಗ್ರಹಣೆಯ ಸಾಮರ್ಥ್ಯವನ್ನು ಹೊಂದಿದೆ.

ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಸಸ್ಪೆನ್ಷನ್, ಸೈಡ್ ಸ್ಟ್ಯಾಂಡ್ ಎಂಜಿನ್ ಕಟ್-ಆಫ್ ಸ್ವಿಚ್, ಆಟೋ ಸ್ಟಾಪ್ - ಅಂಡ್ - ಸ್ಟಾರ್ಟ್ ಸಿಸ್ಟಮ್ ಮತ್ತು ವೈ - ಕನೆಕ್ಟ್ BT ಸಂಪರ್ಕದೊಂದಿಗೆ ಸಂಪೂರ್ಣ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಅನ್ನು ಹೊಂದಿದೆ. ಈ ಅತ್ಯಾಕರ್ಷಕ ಪರಿಷ್ಕರಣೆಗಳು, ವರ್ಧನೆಗಳೊಂದಿಗೆ ಯಮಹಾ ನಾವೀನ್ಯತೆ ಮತ್ತು ಗ್ರಾಹಕರಿಗೆ ತೃಪ್ತಿ ನೀಡಲಾಗಿದೆ ಎಂದು ಕಂಪನಿ ಭರವಸೆ ನೀಡಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








