ಲಾಂಚ್‌ ಆದಾಗ ಸುನಾಮಿ ಗ್ಯಾರಂಟಿ: ಹೊಸ YAMAHA NMax 155 ವಿಶೇಷತೆಗಳೇನು ಗೊತ್ತಾ?

ಎಲ್ಲರಿಗೂ ತಿಳಿದಿರುವಂತೆ ಯಮಹಾ, ಈ ಬಾರಿಯ ಭಾರತ್‌ ಮೊಬಿಲಿಟಿ ಎಕ್ಸ್‌ಪೋದಲ್ಲಿ ಹೊಸ ಸ್ಕೂಟರ್‌ ಒಂದನ್ನು ಅನಾವರಣ ಮಾಡಿತ್ತು. NMax 155 ಎಂಬ ಸ್ಕೂಟರ್‌ ಅನ್ನು ಭಾರತ್‌ ಮೊಬಿಲಿಟಿ ಎಕ್ಸ್‌ಪೋದಲ್ಲಿ ಅನಾವರಣ ಮಾಡಿದ್ದು, ಅತೀ ಶೀಘ್ರದಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಲಾಂಚ್‌ ಮಾಡಲಿದೆ ಎಂದು ತಿಳಿದು ಬಂದಿದೆ.

ಇನ್ನು ಯಮಹಾ NMax 155 ಸ್ಕೂಟರ್‌ ಅನ್ನು ವಾಹನ ಪ್ರೇಮಿಗಳು ಬರುವಿಕೆಗಾಗಿ ಕಾಯುತ್ತಿದ್ದಾರೆ ಎಂಬುದು ಹಗಲಿನಷ್ಟೇ ಸತ್ಯ. ಈಗಾಗಲೇ ಮ್ಯಾಕ್ಸಿ ಸ್ಕೂಟರ್‌ ಸೆಗ್ಮೆಂಟ್‌ ಭಾರತದಲ್ಲಿ ಬೆಳೆಯುತ್ತಿದ್ದು, ಹಲವಾರು ಕಂಪನಿಗಳು ಇದರ ಮೇಲೆ ಕಣ್ಣಿಟ್ಟಿದೆ. ಯಮಹಾ ಈಗಾಗಲೇ ಮ್ಯಾಕ್ಸಿ ಸ್ಕೂಟರ್‌ ಸೆಗ್ಮೆಂಟ್‌ನಲ್ಲಿ ಯಮಹಾ ಏರೋಕ್ಸ್‌ ಎಂಬ ಸ್ಕೂಟರ್‌ ಲಾಂಚ್‌ ಮಾಡಿದ್ದು, ಇದು ಹಲವರ ನೆಚ್ಚಿನದ್ದಾಗಿದೆ.

YAMAHA NMax 155 Expected Top Features Engine Power And More

ಈಗಾಗಲೇ ಇದರ ಕೆಲವೊಂದು ಫೀಚರ್‌ಗಳು ಮತ್ತು ಸ್ಪೆಸಿಫಿಕೇಷನ್‌ಗಳು ಹೊರ ಬಿದ್ದಿದ್ದು, ಇದನ್ನು ನಾವು ಈಗಾಗಲೇ ನಿಮ್ಮ ಮುಂದಿಟ್ಟಿದ್ದೇವೆ. ಇಂದಿನ ಈ ಲೇಖನದಲ್ಲಿ ಹೊಸ ಯಮಹಾ NMax 155 ಸ್ಕೂಟರ್‌ನಲ್ಲಿ ಇರಬಹುದಾದ ಮುಖ್ಯವಾದ ಅಂಶಗಳೇನು ಎಂಬುದನ್ನು ನೋಡೋಣ. ಸಂಪೂರ್ಣ ಮಾಹಿತಿಗಾಗಿ ಲೇಖನವನ್ನು ಕೊನೆಯವರೆಗೆ ಓದಿ.

ಎಂಜಿನ್‌: NMax 155 ಸ್ಜೂಟರ್‌ನಲ್ಲಿ (YAMAHA NMax 155) 155 ಸಿಸಿ ಸಿಂಗಲ್‌ ಸಿಲಿಂಡರ್‌ ಇಂಜಿನ್‌ ದೊರೆಯಲಿದೆ. ಈ ಎಂಜಿನ್‌ ಸಹಾಯದಿಂದ NMax 155 ಸ್ಕೂಟರ್‌ ಸುಮಾರು 15 ಬಿಹೆಚ್‌ಪಿ ಮತ್ತು 14 ಎನ್‌ಎಮ್‌ ಟಾರ್ಕ್‌ ಅನ್ನು ಉತ್ಪಾದಿಸಲಿದೆ. ಇದರ ಎಂಜಿನ್‌ ಕಾರ್ಯಗಳನ್ನು ಮತ್ತಷ್ಟು ಸುಗಮಗೊಳಿಸಲು ಐಡಲ್‌ ಸ್ಟಾರ್ಟ್‌ ಆ್ಯಂಡ್‌ ಸ್ಟಾಪ್‌ ಫಂಕ್ಷನ್‌ ಅನ್ನು ಸಹ ಈ ಸ್ಕೂಟರ್‌ನಲ್ಲಿ ಯಮಾಹ ಅಳವಡಿಸಿದೆ.

ಡಿಸೈನ್‌: NMax 155 ಸ್ಜೂಟರ್‌ನ ಡಿಸೈನ್ ನೋಡುವುದಾದರೆ, ಅಗ್ರೆಸಿವ್‌ ಸ್ಟೈಲಿಶ್‌ ಡಿಸೈನ್‌ ಮತ್ತು ಫೀಚರ್‌ನೊಂದಿಗೆ ಬಂದಿರುವ ಈ NMax 155 ಭಾರತದಲ್ಲಿ ಹೆಚ್ಚಿನ ಜನಪ್ರಿಯತೆಯನ್ನು ಪಡೆಯುವುದರಲ್ಲಿ ಎರಡು ಮಾತಿಲ್ಲ ಎಂದು ಕಂಪನಿ ಈಗಾಗಲೆ ಭವಿಷ್ಯ ನುಡಿದಿದೆ. ಹೆಚ್ಚಿನ ಸ್ಥಳಾವಕಾಶ ಮತ್ತು ಉತ್ತಮ ಆಕಾರ ಹೊಂದಿರುವ ಈ ಸ್ಕೂಟರ್‌, ರೈಡ್‌ ಮಾಡುವಾಗ ಹೆಚ್ಚು ಕಂಫರ್ಟ್‌ ಒದಗಿಸುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ.

ಟ್ರಾನ್ಸ್ಮಿಷನ್‌: ವಿ ಬೆಲ್ಟ್‌ ಆಟೋಮ್ಯಾಟಿಕ್‌ ಗೇರ್‌ಬಾಕ್ಸ್‌ ಈ ಹೊಸ NMax 155 ಮ್ಯಾಕ್ಸಿ ಸ್ಕೂಟರ್‌ನ ಪ್ರಯಾಣವನ್ನು ಮತ್ತಷ್ಟು ಆಹ್ಲಾದಗೊಳಿಸಲಿದೆ. ಸ್ಮೂತ್‌ ರೆಸ್ಪಾನ್ಸ್‌ ರೈಡ್‌ ಫೀಲ್‌ ನೀಡುವ ಮೂಲಕ ಈ ಸ್ಕೂಟರ್ ಸಿಟಿ ಮತ್ತು ಹೆದ್ದಾರಿಗಳಲ್ಲಿ ಪ್ರಯಾಣ ಮಾಡುವವರ ಪಾಲಿಗೆ ಒಂದು ರೀತಿಯ ವರದಾನವಾಗಲಿದೆ. ಯಮಹಾ ಕಂಪನಿಯ ಮೈ ರೈಡ್‌ ಆ್ಯಪ್‌ ಸಹ ಇದರಲ್ಲಿ ಸಿಗಲಿದ್ದು, ಕನೆಕ್ಟಿವಿಟಿ ಪೀಚರ್‌ಗಳು ನಿಮ್ಮ ಪ್ರಯಾಣವನ್ನು ಆಹ್ಲಾದಕರವಾಗಿಸುತ್ತದೆ.

ಇನ್ನು ಯಮಹಾ ಈ ಹಿಂದೆ ಭಾರತೀಯ ಮಾರುಕಟ್ಟೆಯಲ್ಲಿ ಎಂಬ ಮ್ಯಾಕ್ಸಿ ಸ್ಕೂಟರ್‌ ಅನ್ನು ಸಹ ಬಿಡುಗಡೆ ಗೊಳಿಸಿದ್ದರು. ಬಹುಬೇಗ ಬಹಳಷ್ಟು ಪ್ರಸಿದ್ದಿಯನ್ನು ಪಡೆದ ಈ ಸ್ಕೂಟರ್‌ 15೦ ಸಿಸಿಯ ಸ್ಕೂಟರ್‌ ಸೆಗ್ಮೆಂಟ್‌ನಲ್ಲಿ ಯಮಹಾ ಏರೋಕ್ಸ್‌ ತನ್ನದೇ ಆದ ದೊಡ್ಡ ಛಾಪನ್ನು ಮೂಡಿಸಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Thursday, February 29, 2024, 16:19 [IST]
English summary
Yamaha nmax 155 expected top features engine power and more
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+