ಯಮಹಾದ ಈ ಸ್ಕೂಟರ್‌ನಲ್ಲಿ ಎಲೆಕ್ಟ್ರಿಕ್ ಸಿವಿಟಿ ಗಿಯರ್‌ಬಾಕ್ಸ್: ಯಾವ ಬೈಕ್‌ಗೂ ಕಮ್ಮಿಯಿಲ್ಲ ಈ ಗೂಳಿ!
ದ್ವಿಚಕ್ರ ವಾಹನ ನಿರ್ಮಾಣ ಕಂಪನಿಯಾದ ಯಮಹಾ ಭಾರತದಲ್ಲಿ ನಾನಾ ರೀತಿಯ ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡುತ್ತಿದೆ. ಯಮಹಾದ ಪ್ರಸಿದ್ದ ಬೈಕ್‌ಗಳಲ್ಲಿ ಎಲ್ಲರಿಗೂ ತಿಳಿದಿರುವ ಬೈಕ್ ಯಾವುದೆಂದು ಕೇಳಿದರ ಒಂದು ಆರ್‌ಎಕ್ಸ್ ೧೦೦ ಹಾಗೂ ಯಮಹಾ R15. ಪ್ರಸಿದ್ದ R15 ಎಂಜಿನ್ ಅನ್ನು ಬಳಸಿಕೊಂಡು ಯಮಹಾ ಕಂಪನಿ ಮ್ಯಾಕ್ಸಿ ಸ್ಕೂಟರ್ ಅನ್ನು ಮಾರುಕಟ್ಟೆಗೆ ತಂದಿದ್ದು ಇದರ ಕುರಿತಾಗಿಯೂ ನಿಮಗೆಲ್ಲಾ ತಿಳಿದೆ ಇದೆ. ಯಮಹಾ ಮ್ಯಾಕ್ಸಿ ಸ್ಕೂಟರ್‌ಗಳು ಸಖತ್ ಪರ್ಫಾಮೆನ್ಸ್ ಮತ್ತು ಅಗ್ರೆಸಿವ್ ಸ್ಟೈಲಿಂಗ್‌ಗೆ ಸಾಕಷ್ಟು ಹೆಸರುವಾಸಿಯಾಗಿರುತ್ತದೆ ಎಂಬುದನ್ನು ಇಲ್ಲಿ ಬಿಡಿಸಿ ಹೇಳಬೇಕಿಲ್ಲ.
ಹೌದು, ಯಮಹಾ ಕಂಪನಿಯ ಎನ್ ಮ್ಯಾಕ್ಸ್ ಎಂಬ ಸ್ಕೂಟರ್ ಈಗಾಗಲೇ ಹಲವಾರು ಎಕ್ಸ್ಪೋಗಳಲ್ಲಿ ಈ ಸ್ಕೂಟರ್ ಅನ್ನು ಕಂಪನಿ ಪ್ರದರ್ಶನಕ್ಕೆ ಇಟ್ಟಿತ್ತು. ಇತ್ತೀಚೆಗಷ್ಟೇ ಭಾರತದಲ್ಲಿ ನಡೆದ ಭಾರತ್ ಮೊಬಿಲಿಟಿ ಶೋ ನಲ್ಲಿ ಯಮಹಾ ತನ್ನ ಹೊಸ ಮ್ಯಾಕ್ಸಿ ಸ್ಕೂಟರ್ NMax 155 ಅನ್ನು ಅನಾವರಣಗೊಳಿಸಿತ್ತು.

NMax 155 ಮ್ಯಾಕ್ಸಿ ಸ್ಕೂಟರ್‌ನ ಡಿಸೈನ್ ಮತ್ತು ಫೀಚರ್‌ಗಳನ್ನು ಕಂಡ ಗ್ರಾಹಕರು ಈಗಾಗಲೇ ಇದಕ್ಕೆ ಫಿಧಾ ಆಗಿದ್ದು, ಮಾರುಕಟ್ಟೆಗೆ ಬರುವುದನ್ನೇ ಕಾಯುತ್ತಿದ್ದಾರೆ. ಯಮಹಾದ ಏರೋಕ್ಸ್ 155 ಮ್ಯಾಕ್ಸಿ ಸ್ಕೂಟರ್‌ನಿಂದ ಸ್ಪೂರ್ತಿಗೊಂಡು ಈ ಸ್ಕೂಟರ್ ಅನ್ನು ತಯಾರಿಸಿದೆ ಎಂಬುದನ್ನು ಈ ಸಂಧರ್ಭದಲ್ಲಿ ತಿಳಿಸಿದ್ದೇವೆ.
NMax 155 ಸ್ಕೂಟರ್‌ನಲ್ಲಿ 155 ಸಿಸಿ ಸಿಂಗಲ್ ಸಿಲಿಂಡರ್ ಇಂಜಿನ್ ದೊರೆಯಲಿದ್ದು, ಇದರ ಸಹಾಯದಿಂದ ಈ ಸ್ಕೂಟರ್ ಸುಮಾರು 15 ಬಿಹೆಚ್‌ಪಿ ಮತ್ತು 14 ಎನ್‌ಎಮ್ ಟಾರ್ಕ್ ಅನ್ನು ಉತ್ಪಾದಿಸಲಿದೆ. ಇದರ ಜೊತೆಗೆ ಇದರ ಎಂಜಿನ್ ಕಾರ್ಯಗಳನ್ನು ಮತ್ತಷ್ಟು ಸುಗಮಗೊಳಿಸಲು ಐಡಲ್ ಸ್ಟಾರ್ಟ್ ಆ್ಯಂಡ್ ಸ್ಟಾಪ್ ಫಂಕ್ಷನ್ ಅನ್ನು ಸಹ ಈ ಸ್ಕೂಟರ್‌ನಲ್ಲಿ ಯಮಾಹ ಅಳವಡಿಸಿದೆ.

ಇದೀಗ ಈ NMax 155 ಸ್ಕೂಟರ್‌ನ ಟರ್ಬೋ (Yamaha NMAX Turbo) ಮಾದರಿಯನ್ನು ಯಮಹಾ ಇದೀಗ ರಿವೀಲ್ ಮಾಡಿದೆ. ಸದ್ಯಕ್ಕೆ ಈ ಸ್ಕೂಟರ್ ಅನ್ನು ಇಂಡೋನೇಷ್ಯಾದಲ್ಲಿ ಬಿಡುಗಡೆಗೆ ಸಿದ್ದವಾಗಿದ್ದು, ಆ ನಂತರದಲ್ಲಿ ಜಾಗತಿಕವಾಗಿ ಬಿಡುಗಡೆ ಮಾಡಿದರೂ ಮಾಡಬಹುದು ಎಂಬುದು ಮೂಲಗಳಿಂದ ತಿಳಿದು ಬಂದಿದೆ. ಈ ಸ್ಕೂಟರ್‌ನಲ್ಲಿ ಎಲೆಕ್ಟ್ರಿಕ್ ಸಿವಿಟಿ ಗಿಯರ್ ಬಾಕ್ಸ್ ಅನ್ನು ಸಹ ಕಂಪನಿ ಆಫರ್ ಮಾಡಿದೆ.
NMax ಟರ್ಬೋದಲ್ಲಿ
ಇನ್ನು ಯಮಹಾ ಈ ಹಿಂದೆ ಭಾರತೀಯ ಮಾರುಕಟ್ಟೆಯಲ್ಲಿ ಏರೋಕ್ಸ್ ಎಂಬ ಮ್ಯಾಕ್ಸಿ ಸ್ಕೂಟರ್ ಅನ್ನು ಸಹ ಬಿಡುಗಡೆ ಗೊಳಿಸಿದ್ದರು. ಬಹುಬೇಗ ಬಹಳಷ್ಟು ಪ್ರಸಿದ್ದಿಯನ್ನು ಪಡೆದ ಈ ಸ್ಕೂಟರ್ 15೦ ಸಿಸಿಯ ಸ್ಕೂಟರ್ ಸೆಗ್ಮೆಂಟ್‌ನಲ್ಲಿ ಯಮಹಾ ಏರೋಕ್ಸ್ ತನ್ನದೇ ಆದ ದೊಡ್ಡ ಛಾಪನ್ನು ಮೂಡಿಸಿದೆ.
ಯಮಹಾ AEROX 155 ರ 2023 ಆವೃತ್ತಿಯು ಟ್ರಾಕ್ಷನ್ ಕಂಟ್ರೋಲ್ ಸಿಸ್ಟಮ್ (TCS) ನೊಂದಿಗೆ ಸುಸಜ್ಜಿತವಾಗಿದ್ದು, ಯಾವುದೇ ಸವಾರಿ ಸ್ಥಿತಿಯಲ್ಲಿ ವೀಲ್‌ಸ್ಪಿನ್ ಮತ್ತು ಉತ್ತಮ ನಿಯಂತ್ರಣವನ್ನು ಕಡಿಮೆ ಮಾಡುವ ಮೂಲಕ ಕಾರ್ಯಕ್ಷಮತೆಯನ್ನು ಮತ್ತಷ್ಟು ಹೆಚ್ಚಿಸಲು ಸಹಾಯ ಮಾಡುತ್ತದೆ. ಇದರೊಂದಿಗೆ, AEROX 155 ನ ಇತ್ತೀಚಿನ ಆವೃತ್ತಿಯು E20 ಇಂಧನ ಕಂಪ್ಲೈಂಟ್ ಆಗಿದೆ.
ಹೊಸ ತಲೆಮಾರಿನ 155cc ಬ್ಲೂ ಕೋರ್ ಎಂಜಿನ್‌ನಿಂದ ವೇರಿಯೇಬಲ್ ವಾಲ್ವ್ ಆಕ್ಚುಯೇಶನ್ (VVA) ಅನ್ನು ಹೊಂದಿದೆ. CVT ಟ್ರಾನ್ಸ್‌ಮಿಷನ್‌ಗೆ ಸಂಯೋಜಿತವಾಗಿದ್ದು, ಲಿಕ್ವಿಡ್-ಕೂಲ್ಡ್, 4-ಸ್ಟ್ರೋಕ್, SOHC, 4-ವಾಲ್ವ್ ಮೋಟಾರ್ 8,000rpm ನಲ್ಲಿ 15 PS ನ ಗರಿಷ್ಠ ಪವರ್ ಉತ್ಪಾದಿಸುತ್ತದೆ. ಹಾಗೆಯೇ 6,500rpm ನಲ್ಲಿ 13.9 Nm ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಹೆಚ್ಚುವರಿಯಾಗಿ, Aerox 155 ಈಗ ಹಜಾರ್ಡ್ ವ್ಯವಸ್ಥೆಯನ್ನು ಪ್ರಮಾಣಿತ ವೈಶಿಷ್ಟ್ಯವಾಗಿ ಮತ್ತು ಹೊಚ್ಚಹೊಸ ಬೆಳ್ಳಿಯ ಬಣ್ಣವನ್ನು ಪಡೆಯುತ್ತದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








