Yamaha RX100 ಅಭಿಮಾನಿಗಳಿಗೆ ಸಿಹಿಸುದ್ದಿ: ಬಿಡುಗಡೆ ಮಾಹಿತಿ ಸೋರಿಕೆ!
ಯಮಹಾ ಕಂಪನಿಯ ಯಾವೊಂದು ವಾಹನಕ್ಕೂ ಸಿಗದ ಕ್ರೇಜ್ Yamaha RX100 ಪಡೆದುಕೊಂಡಿದೆ. 90ರ ದಶಕದಲ್ಲಿ ಕಿರೀಟವಿಲ್ಲದ ರಾಜನಂತೆ ಮೆರೆದ ಈ ಐಕಾನಿಕ್ ಬೈಕ್ ಅನ್ನು ಮರಳಿ ಭಾರತಕ್ಕೆ ತರಲು ಕಂಪನಿ ಸಜ್ಜಾಗುತ್ತಿದೆ. ಈ ಕ್ಲಾಸಿಕ್ ಬೈಕ್‌ನ ಸಂಭಾವ್ಯ ಪುನರಾಗಮನದ ಬಗ್ಗೆ ಕೆಲವು ವಿವರಗಳನ್ನು ನಾವು ನಿಮಗಾಗಿ ತಂದಿದ್ದೇವೆ.
Yamaha RX100 ವಿಷಯದಲ್ಲಿ ಒಂದು ವಿಷಯವಂತೂ ಖಚಿತ' ನಿರೀಕ್ಷೆಯು ನಿರೀಕ್ಷೆಯ ಕಿಡಿಯನ್ನೇ ಹೊತ್ತಿಸಿದೆ. ಏಕೆಂದರೆ ಯಾವುದೇ ವಾಹನ ತಯಾರಕರಾಗಲಿ ತಮ್ಮ ಬ್ರಾಂಡ್‌ಗೆ ಹೆಸರು ತಂದುಕೊಟ್ಟ ವಾಹನಗಳನ್ನು ಅಷ್ಟು ಸುಲಭವಾಗಿ ಬಿಡುವುದಿಲ್ಲ. ಹಾಗಾಗಿ ಯಮಹಾ ಈ ಬಾರಿ ದೊಡ್ಡ ಎಂಜಿನ್‌ನೊಂದಿಗೆ ಆರ್ಎಕ್ಸ್ 100ನ ಪರಂಪರೆಯನ್ನು ಮುಂದುವರಿಸಲು ಸಜ್ಜಾಗಿದೆ ಎಂದು ವರದಿಗಳು ಹೇಳಿವೆ.

ಲಕ್ಷಾಂತರ ಭಾರತೀಯರ ಹೃದಯಗಳನ್ನು ಗೆದ್ದಿರುವ ಈ ಐಕಾನಿಕ್ ಮೋಟಾರ್‌ಸೈಕಲ್ ಗತ್ತನ್ನು ಹಾಗೆಯೇ ಉಳಿಸಿಕೊಳ್ಳಲು ಕಂಪನಿ ನೋಡುತ್ತಿದೆ. ಜೊತೆಗೆ RX100 ಸ್ಥಗಿತಗೊಂಡು ದಶಕಗಳೇ ಕಳೆದರೂ ತನ್ನ ಬೇಡಿಕೆಯನ್ನು ದುಪ್ಪಟ್ಟುಗೊಳಿಸುತ್ತಲೇ ಬಂದಿರುವ ಕಾರಣ ಭಾರತಕ್ಕೆ ರೀ ಎಂಟ್ರಿ ಕೊಡುವ ಬಗ್ಗೆ ನಿರೀಕ್ಷೆಗಳು ಹೆಚ್ಚಾಗಿವೆ. ಆದರೆ ಈ ಬಾರಿ ಭಾರತದಲ್ಲಿ ಬಿಡುಗಡೆಯಾದರೆ ಈಗಿನ BS6 ಹಂತ-2 ಹೊರಸೂಸುವಿಕೆಯ ಮಾನದಂಡಗಳಿಗೆ ಒಳಗೊಂಡಿರುತ್ತದೆ.
ಹೊಸ ಮಾನದಂಡಗಳಿಗೆ ಅನುಗುಣವಾಗಿ ಬೈಕ್ ನಿರ್ಮಾಣವಾಗಬೇಕಿರುವ ಕಾರಣ, 100 ಸಿಸಿ ಎಂಜಿನ್ ಮೂಲಕ ತನ್ನ ಹಳೆಯ ಪರ್ಫಾಮೆನ್ಸ್ ಹಾಗೂ ಅದೇ ಎಕ್ಸಾಸ್ಟ್ ಅನ್ನು ನೀಡಲು ಸಾಧ್ಯವಿಲ್ಲ. ಏಕೆಂದರೆ ಆಗಿನ ಕಾಲಕ್ಕೆ 2-ಸ್ಟ್ರೋಕ್ 100 ಸಿಸಿ ಎಂಜಿನ್‌ನಲ್ಲಿ ಬೈಕ್ ಆ ಮೋಡಿ ಮಾಡಿತ್ತು. ಆದರೆ ಈಗ 2-ಸ್ಟ್ರೋಕ್ ಎಂಜಿನ್‌ಗಳನ್ನು ಬ್ಯಾನ್ ಮಾಡಲಾಗಿರುವುದರಿಂದ ಅದು ಅಸಾಧ್ಯ.

ಹಾಗೆಂದು ಕಂಪನಿ ಸುಮ್ಮನೆ ಕೂತಿಲ್ಲ, 225.9 ಸಿಸಿ ಎಂಜಿನ್ ಮೂಲಕ ಅದೇ ಮೋಡಿಯನ್ನು ಮರಳಿ ಸೃಷ್ಟಿಸಲು ಕೆಲಸ ಮಾಡುತ್ತಿದೆ ಎಂದು ಹೇಳಲಾಗುತ್ತಿದೆ. ಹಾಗಾಗಿ ದೊಡ್ಡ 225 ಸಿಸಿ ಎಂಜಿನ್ ಬಂದಲ್ಲಿ ಬೈಕ್ ಹೆಸರಿನಲ್ಲಿ ಬದಲಾವಣೆಯಾಗಬಹುದು. ಕಂಪನಿಯು ಬೈಕ್‌ಗೆ ಹೊಸ ನಾಮಕರಣ ಮಾಡುವ ಸಾಧ್ಯತೆಗಳಿವೆ. ಈ ಐಕಾನಿಕ್ ಬೈಕ್ ಅನ್ನು ಮರಳಿ ತರುವ ಪ್ರಯತ್ನದಲ್ಲಿ ಕೊಂಚ ಎಡವಿದರೂ ಬೈಕ್ ಫ್ಲಾಪ್ ಆಗುವುದು ಖಚಿತ.
ಹಾಗಾಗಿಯೇ ಯಮಹಾ ಕಂಪನಿಯು ತನ್ನ ಆರ್‌ಎಕ್ಸ್ 100 ನಿಂದ ಕೆಲವು ಕ್ಲಾಸಿಕ್ ಡಿಸೈನ್ ಅಂಶಗಳನ್ನು ಹಾಗೆಯೇ ಉಳಿಸಿ ಹೊಸ ಬೈಕ್‌ಗೆ ನೀಡಲಿದೆ. ಇದರ ಜೊತೆಗೆ ಈಗಿನ ಇತರ ಬೈಕ್‌ಗಳ ಪೈಪೋಟಿಯನ್ನು ಎದುರಿಸಲು ಇಂಧನ ಇಂಜೆಕ್ಷನ್, ಎಬಿಎಸ್, ಸಂಪೂರ್ಣ ಡಿಜಿಟಲ್ ಇನ್ಸ್ಟ್ರುಮೆಂಟ್ ಕನ್ಸೋಲ್‌ನಂತಹ ಆಧುನಿಕ ವೈಶಿಷ್ಟ್ಯಗಳೊಂದಿಗೆ ಬಿಡುಗಡೆ ಮಾಡುವ ಸಾಧ್ಯತೆಗಳಿವೆ.

ಯಮಹಾ ಅಧಿಕೃತವಾಗಿ ಬಿಡುಗಡೆಯನ್ನು ದೃಢಪಡಿಸಿಲ್ಲವಾದರೂ ಹೆಚ್ಚಿನ ಬೆಳವಣಿಗೆಗಳಿಗಾಗಿ ಅಭಿಮಾನಿಗಳು ಉಸಿರು ಬಿಗಿಹಿಡಿದು ಕಾಯುತ್ತಿದ್ದಾರೆ. ಯಮಹಾ ಆರ್‌ಎಕ್ಸ್ 100 ಬೈಕ್ ಮತ್ತೆ ಭಾರತದಲ್ಲಿ ಬಿಡುಗಡೆಯಾಗಲಿದೆಯೇ? ಎಂಬುದಕ್ಕೆ ಕಾಲವೇ ಉತ್ತರಿಸಲಿದೆ. ಆದರೆ ನಮಗಿರುವ ಮಾಹಿತಿಯಂತೆ 4-ಸ್ಟ್ರೋಕ್ 225.9 ಸಿಸಿನ ಎಂಜಿನ್ 20 ಬಿಹೆಚ್‌ಪಿ ಪವರ್ ಮತ್ತು 19.9 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸಲಿದೆ. ಆದರೆ ಹಳೆಯ RX100 ಮಾದರಿಯು 98.2 ಸಿಸಿ 2-ಸ್ಟ್ರೋಕ್ ಎಂಜಿನ್ ಹೊಂದಿತ್ತು.
ಭಾರತದಲ್ಲಿ ಈ ಪಾಕೆಟ್ ರಾಕೆಟ್ ಮರಳಿ ಬರುವುದರ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಮೆಂಟ್‌ನಲ್ಲಿ ತಿಳಿಸಿ. ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ.


Click it and Unblock the Notifications








