Yamaha RX100: ಯಮಹಾ RX100 ಮರಳಿ ಬರಲಿದೆ! 225.9 cc ಎಂಜಿನ್... ಈ ವರದಿ ನೋಡಿ!

ಯಮಹಾ RX100 ಲಕ್ಷಾಂತರ ಭಾರತೀಯರ ಹೃದಯಗಳನ್ನು ಗೆದ್ದಿರುವ ಐಕಾನಿಕ್ ಮೋಟಾರ್‌ಸೈಕಲ್‌ಗಳಲ್ಲಿ ಒಂದಾಗಿದೆ. ಒಂದು ಕಾಲದಲ್ಲಿ ಅದರ ಪರ್ಫಾಮೆನ್ಸ್‌ನೊಂದಿಗೆ ಅಂದಿನ ಯುವ ಪೀಳಿಗೆಯನ್ನು ಹುಚ್ಚೆಬ್ಬಿಸಿದ್ದ RX100, ಇಂದಿಗೂ ಆ ಮೋಡಿಯನ್ನು ಮುಂದುವರೆಸಿದೆ. ಅಂತಹ ಈ ಬೈಕ್ ಮರಳಿ ಮಾರುಕಟ್ಟೆಗೆ ಎಂಟ್ರಿ ಕೊಡುವುದಾಗಿ ವರದಿಯಾಗಿದೆ.

ಜಪಾನಿನ ಈ ದ್ವಿಚಕ್ರ ವಾಹನ ಕಂಪನಿಯು ಮಾರ್ಚ್ 1996 ರಲ್ಲಿ ಮೋಟಾರ್‌ಸೈಕಲ್‌ನ ಉತ್ಪಾದನೆಯನ್ನು ಕೊನೆಗೊಳಿಸಿತು. ಯಮಹಾ RX100 ಸ್ಥಗಿತಗೊಂಡು ದಶಕಗಳೇ ಕಳೆದರೂ ತನ್ನ ಬೇಡಿಕೆಯನ್ನು ದುಪ್ಪಟ್ಟುಗೊಳಿಸುತ್ತಲೇ ಬಂದಿದೆ. ಇದೇ ಕಾರಣಕ್ಕೆ ಈ ಐಕಾನಿಕ್ ಮೋಟಾರ್‌ಸೈಕಲ್ ಭಾರತಕ್ಕೆ ರೀ ಎಂಟ್ರಿ ಕೊಡುವ ಬಗ್ಗೆ ಲೈವ್‌ಮಿಂಟ್‌ನಲ್ಲಿ ವರದಿಯಾಗಿದೆ. ಆದರೆ ಈ ಬಾರಿ ಭಾರತದಲ್ಲಿ ಬಿಡುಗಡೆಯಾದರೆ ಈಗಿನ BS6 ಹಂತ-2 ಹೊರಸೂಸುವಿಕೆಯ ಮಾನದಂಡಗಳಿಗೆ ಅನುಗುಣವಾಗಿರಲಿದೆ.

yamaha-rx100-re-launch-soon-in-india-likely-to-get-200-cc-engine

ಮೊದಲೇ ಹೇಳಿದಂತೆ RX100 ಅದೇ ಎಂಜಿನೀಯರಿಂಗ್ ಅನ್ನು ಹೊಂದಿರಲು ಸಾಧ್ಯವಿಲ್ಲ. ಆದ್ರೆ ಕಂಪನಿಗೆ ಹೆಸರು ತಂದುಕೊಟ್ಟ ಅದೇ RX100 ನಾಮಕರಣವನ್ನು ಹೊಸ ವಾಹನಕ್ಕೆ ಇಡಬಹುದು ಅಥವಾ RX100 ಗಿಂತ ಭಿನ್ನವಾಗಿರಬಹುದು. ಅಲ್ಲದೆ, BS6 ಮಾನದಂಡಗಳಿಗೆ ಅನುಗುಣವಾಗಿ ಮೋಟಾರ್‌ಸೈಕಲ್‌ ಪವರ್‌ಫುಲ್ 225.9 cc ಎಂಜಿನ್‌ನೊಂದಿಗೆ ಬರುತ್ತದೆ ಎಂದು ವರದಿಯಾಗಿದೆ. ಈ ಎಂಜಿನ್ 20.1 bhp ಪವರ್ ಮತ್ತು 19.93 Nm ನ ಗರಿಷ್ಠ ಟಾರ್ಕ್ ಹೊರಹಾಕುವ ಸಾಮರ್ಥ್ಯವನ್ನು ಹೊಂದಿರಲಿದೆ.

ಈ ಎಲ್ಲಾ ಹೊಸ ಬದಲಾವಣೆಗಳು ಕಂಪನಿಗೆ ಸವಾಲಾಗಿರಬಹುದು, ಏಕೆಂದರೆ ಈ ಐಕಾನಿಕ್ ಬೈಕ್‌ಗೆ ಇರುವ ಕ್ರೇಜ್ ಅನ್ನು ಬಳಸಿಕೊಂಡು ಕೊಂಚ ಎಡವಿದರೂ ಫ್ಲಾಪ್ ಆಗುವುದರಲ್ಲಿ ಅನುಮಾನವಿಲ್ಲ. ಹಾಗಾಗಿ ಹಳೆಯ RX100 ಅನ್ನು ಆಧರಿಸಿ ಮೂಲ ಮೋಟಾರ್‌ಸೈಕಲ್‌ನಿಂದ ಕೆಲವು ಸಿಗ್ನೇಚರ್ ಸ್ಟೈಲಿಂಗ್ ಅಂಶಗಳನ್ನು ಹಾಗೆಯೇ ಉಳಿಸಲಿದ್ದಾರೆ. ಇದರ ಬೆಲೆ ರೂ.1.25 ಲಕ್ಷದಿಂದ ರೂ.1.50 ಲಕ್ಷ (ಎಕ್ಸ್‌ ಶೋರೂಂ) ನಡುವೆ ಇರಬಹುದು ಎಂದು ವರದಿ ಹೇಳುತ್ತಿದೆ.

yamaha-rx100-re-launch-soon-in-india-likely-to-get-200-cc-engine

ಈ ಬೆಲೆಯು ಕೈಗೆಟುಕುವಿಕೆ ಮತ್ತು ಪ್ರೀಮಿಯಂ ನಡುವೆ ಇರುವಂತೆ ನೋಡಿಕೊಂಡರೆ ಗ್ರಾಹಕರನ್ನು ಸೆಳೆಯಬಹುದು ಎಂದು ಕಂಪನಿ ನಂಬಿದೆ. ಆದ್ರೆ ಯಮಹಾ ಕಂಪನಿಯು ಇನ್ನೂ RX100 ನ ಮುಂಬರುವ ಹೊಸ ಬೈಕ್ ಬಗ್ಗೆ ಯಾವುದೇ ವಿವರಗಳನ್ನು ಬಹಿರಂಗಪಡಿಸಿಲ್ಲ. ಈ ಬಗ್ಗೆ ಕೆಲವೇ ದಿನಗಳಲ್ಲಿ ಕಂಪನಿ ಅಧಿಕೃತ ಮಾಹಿತಿ ನೀಡಿದ್ರೂ ಆಶ್ಚರ್ಯವೇನಿಲ್ಲ.

225.9 cc ಎಂಜಿನ್ ಏಕೆ?: ಎಲ್ಲರಿಗೂ ತಿಳಿದಂತೆ ಯಮಹಾ RX100 ಅದರ ಸಣ್ಣ ದೇಹ, ಹುಚ್ಚೆಬ್ಬಿಸುವ ಎಕ್ಸಾಸ್ಟ್ ನೋಟ್‌ನಿಂದಲೇ ತುಂಬಾ ಜನಪ್ರಿಯತೆ ಪಡೆದಿದೆ. ಆದ್ರೆ ಇದೆಲ್ಲವೂ ಆಗಿನ ಕಾಲಕ್ಕೆ 2-ಸ್ಟ್ರೋಕ್ ಎಂಜಿನ್‌ನೊಂದಿಗೆ ಮಾತ್ರ ಸಾಧ್ಯವಾಗಿದೆ. ಆದ್ರೆ ಈಗಿರುವ ಹೊಸ ನಿಯಮಗಳ ಪ್ರಕಾರ 2-ಸ್ಟ್ರೋಕ್ ಎಂಜಿನ್‌ ಅನ್ನು ಸಂಪೂರ್ಣವಾಗಿ ಭಾರತದಲ್ಲಿ ನಿಲ್ಲಿಸಲಾಗಿದೆ.

yamaha-rx100-re-launch-soon-in-india-likely-to-get-200-cc-engine

ಹಾಗಾಗಿ BS6 ಹೊಸ ಮಾನದಂಡಗಳ ಪ್ರಕಾರ, 4-ಸ್ಟ್ರೋಕ್ ಎಂಜಿನ್‌ನೊಂದಿಗೆ RX100 ನ ಅದೇ ಪವರ್, ಪರ್ಫಾಮೆನ್ಸ್, ಎಕ್ಸಾಸ್ಟ್ ಅನ್ನು ಮರುಸೃಷ್ಟಿಸಲು ಮೋಟಾರ್‌ಸೈಕಲ್ ಕನಿಷ್ಠ 200 ಸಿಸಿ ಎಂಜಿನ್ ಬೇಕು. ಇದನ್ನು ಗಮನದಲ್ಲಿಟ್ಟುಕೊಂಡು ಯಮಹಾ ಕಂಪನಿಯು ಮೋಟಾರ್‌ಸೈಕಲ್‌ನ ಉನ್ನತ- ಪರ್ಫಾಮೆನ್ಸ್ ಮತ್ತು ಹಗುರವಾದ ದೇಹ ದೊಡ್ಡ ಎಂಜಿನ್‌ ನಿರ್ಮಾಣದಲ್ಲಿ ಕೆಲಸ ಮಾಡುತ್ತಿದೆ.

ಹಾಗೆ ನೊಡಿಕೊಂಡರೆ ಮೋಟಾರ್‌ಸೈಕಲ್ ತನ್ನ ಮೂಲ 100 cc ವಿಭಾಗದಿಂದ ಹೊರಬಂದಂತಾಗುತ್ತದೆ. ಏಕೆಂದರೆ ಮೂಲ RX100 ಬೈಕ್ 98.2 cc 2-ಸ್ಟ್ರೋಕ್‌ನಿಂದ ಪವರ್ ಪಡೆಯುತ್ತದೆ. ಹಾಗಾಗಿಯೇ ಮೇಲೆ ಹೇಳಿದಂತೆ RX100 ನ ಮುಂಬರುವ ಬೈಕ್‌ಗೆ ಹೊಸ ನಾಮಕರಣವಾಗುವ ಸಾಧ್ಯತೆಯೂ ಇದೆ. ಮುಂಬರುವ ಈ ಬೈಕ್ ಮೇಲೆ ನಿಮ್ಮ ಅಭಿಪ್ರಾಯಗಳನ್ನು ಕಮೆಂಟ್‌ನಲ್ಲಿ ತಿಳಿಸಿ.

More from DriveSpark

Article Published On: Tuesday, February 20, 2024, 16:47 [IST]
English summary
Yamaha rx100 re launch soon in india likely to get 200 cc engine
Read more on ಯಮಹಾ yamaha
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+