ಬೈಕ್‌ಗಳಲ್ಲಿ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಪರಿಚಯಿಸಲಿದೆ ಯಮಹಾ: ವಿಡಿಯೋ ಬಿಡುಗಡೆ
ಇತ್ತೀಚಿನ ವರ್ಷಗಳಲ್ಲಿ, ಪ್ರೀಮಿಯಂ ಮೋಟಾರ್ ಸೈಕಲ್‌ಗಳಲ್ಲಿ AMT (ಸ್ವಯಂಚಾಲಿತ ಗೇರ್ ಬಾಕ್ಸ್) ಮತ್ತು ಸೆಮಿ-AMT ಗೇರ್ ಬಾಕ್ಸ್‌ಗಳನ್ನು ನೀಡಲು ದ್ವಿಚಕ್ರ ವಾಹನ ಕಂಪನಿಗಳ ನಡುವೆ ಸ್ಪರ್ಧೆ ನಡೆಯುತ್ತಿದೆ. ಯಮಹಾ ಇದೀಗ Y-AMT ನೊಂದಿಗೆ ಪ್ರವೇಶಿಸಿದೆ. ಅಂದಹಾಗೆ ದ್ವಿಚಕ್ರ ವಾಹನಗಳಲ್ಲಿ AMT ಗೇರ್ ಬಾಕ್ಸ್‌ಗಳು ಹೊಸತೇನಲ್ಲ. ಬಹುತೇಕ ಎಲ್ಲಾ ಸ್ಕೂಟರ್‌ಗಳು CVT ಟ್ರಾನ್ಸ್ ಮಿಷನ್‌ನಲ್ಲಿ ಚಲಿಸುತ್ತವೆ, ಇದು ಕೂಡ ಸ್ವಯಂಚಾಲಿತ ಗೇರ್‌ಬಾಕ್ಸ್ ಆಗಿದೆ. ಹಾಗೆಯೇ ಮೋಟಾರ್ ಸೈಕಲ್‌ಗಳಲ್ಲಿಯೂ ಸ್ವಯಂಚಾಲಿತ ಗೇರ್ ಬಾಕ್ಸ್‌ಗಳು ಹೊಸತೇನಲ್ಲ. ಹೋಂಡಾ ಕಂಪನಿ ದೀರ್ಘಕಾಲದಿಂದ ತನ್ನ ಅಡ್ವೆಂಚರ್ ಬೈಕ್‌ಗಳಲ್ಲಿ DCT (ಡ್ಯುಯಲ್ ಕ್ಲಚ್ ಟ್ರಾನ್ಸ್‌ಮಿಷನ್)ಗಳನ್ನು ನೀಡುತ್ತಿದೆ.
ಹಾಗೆಯೇ ಬಿಎಂಡಬ್ಲ್ಯು ASA (ಆಟೋಮೇಟೆಡ್ ಶಿಫ್ಟ್ ಅಸಿಸ್ಟೆಂಟ್) ತಂತ್ರಜ್ಞಾನ, ಕೆಟಿಎಂ AMT ಗೇರ್‌ಬಾಕ್ಸ್ ತಂತ್ರಜ್ಞಾನವನ್ನು ಹೊಂದಿರುವ ಮೋಟಾರ್‌ಸೈಕಲ್‌ಗಳನ್ನು ನೀಡುತ್ತಿವೆ. ಈ ಸಾಲಿನಲ್ಲಿ ಯಮಹಾ ಕೂಡ ಈಗಾಗಲೇ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಅನ್ನು ನೀಡುತ್ತಿದ್ದು, ಇದು YCC-S (ಯಮಹಾ ಚಿಪ್ ಕಂಟ್ರೋಲ್ಡ್ ಶಿಫ್ಟ್) ತಂತ್ರಜ್ಞಾನವನ್ನು ಹೊಂದಿತ್ತು. ಇದರಲ್ಲಿ ವಾಹನ ಚಾಲನೆಗಾಗಿ ಹೈಡ್ರಾಲಿಕ್ಸ್ ಮತ್ತು ಬೆರಳುಗಳ ಮೂಲಕ ಗೇರ್ ಲಿವರ್ ಬಳಸಬೇಕಿತ್ತು.

ಆದರೆ ಈಗ ಮುನ್ನಲಗೆ ಬಂದಿರುವುದು ಹೊಸ ಯಮಹಾ Y-AMT (ಯಮಹಾ ಎಎಂಟಿ) ತಂತ್ರಜ್ಞಾನ. ಭವಿಷ್ಯದಲ್ಲಿ ಮುಂದಿನ ತಲೆಮಾರಿನ ಯಮಹಾ ಮೋಟಾರ್ ಸೈಕಲ್‌ಗಳ ಸವಾರರಿಗೆ ವಿಶ್ರಾಂತಿ ಅನುಭವವನ್ನು ನೀಡುವ ಗುರಿಯೊಂದಿಗೆ ಈ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲಾಗಿದೆ. ಸವಾರ ಥ್ರೋಟಲ್, ಬ್ರೇಕ್, ಬಾಡಿ ಪೊಸಿಷನ್, ತೂಕದ ಶಿಫ್ಟಿಂಗ್, ಕಾರ್ನರಿಂಗ್ ಕಡೆಗೆ ಗಮನವನ್ನು ಬದಲಾಯಿಸಬಹುದು.
ವೈ-ಎಎಂಟಿ ಸಿಸ್ಟಮ್ ಕೇವಲ 2.8 ಕೆ.ಜಿ ತೂಕವನ್ನು ಹೊಂದಿದ್ದು, ಹೆಚ್ಚಾಗಿ ಬೈಕಿನ ಅಗಲವನ್ನು ಬದಲಾಯಿಸುವ ಅಗತ್ಯವಿರುವುದಿಲ್ಲ ಎಂದು ವರದಿಯಾಗಿದೆ. ವೈ-ಎಎಂಟಿ ಎಲೆಕ್ಟ್ರಾನಿಕ್ ಆಗಿರುವುದರಿಂದ, ಇದು ಬೈಕಿನ ರೈಡ್-ಬೈ-ವೈರ್ ಥ್ರೋಟಲ್ ನೊಂದಿಗೆ ಜೊತೆಯಾಗಿ ಕಾರ್ಯನಿರ್ವಹಿಸುತ್ತದೆ ಎಂದು ಹೇಳಬಹುದು. ಏಕೆಂದರೆ ಯಮಹಾದ ಬಿಡುಗಡೆ ಮಾಡಿರುವ ಅಧಿಕೃತ ವೀಡಿಯೊದಲ್ಲಿ, ಕ್ಲಚ್ ಲಿವರ್ ಮತ್ತು ಕಾಲುಗಳ ಮೂಲಕ ಹಾಕುವ ಗೇರ್ ಸೆಲೆಕ್ಟರ್ ಇರಲಿಲ್ಲ.

ಸಂಪೂರ್ಣ ಗೇರ್-ಶಿಫ್ಟಿಂಗ್ ಪ್ರಕ್ರಿಯೆಯನ್ನು ವೈ-ಎಎಂಟಿ ವ್ಯವಸ್ಥೆಯಿಂದ ಮಾಡಲಾಗುತ್ತದೆ. ಅಂದರೆ ಸ್ವಿಚ್ ಗೇರ್ - ಮೌಂಟೆಡ್ ಪ್ಯಾಡಲ್‌ಗಳ ಸಹಾಯದಿಂದ ಕೈಗಳ ಮೂಲಕ ಮಾಡಲಾಗುತ್ತದೆ. ಇದು ಬೆರಳುಗಳು ಮತ್ತು ಹೆಬ್ಬೆರಳಿನಿಂದ ಆಪರೇಟೆಡ್ ಮಾಡುವ ಸಿಸ್ಟಮ್ ಆಗಿದ್ದು, ಇದನ್ನು ಬೈಕಿನ ಎಡಭಾಗದ ಹ್ಯಾಂಡಲ್ ಬಾರ್ ಸ್ವಿಚ್‌ಗೇರ್‌ನಲ್ಲಿ ನೀಡಿರುವುದನ್ನು ವಿಡಿಯೋದಲ್ಲಿ ನೋಡಬಹುದು.
ಇಲ್ಲಿ AT / MT ಎಂದು ಬರೆದಿರುವ ಟಾಗಲ್ ಇದ್ದು, ಎಟಿಗೆ ಬದಲಾಯಿಸುವುದರಿಂದ, ಗೇರ್ ಶಿಫ್ಟ್‌ಗಳನ್ನು ವೈ-ಎಎಂಟಿ ಸಿಸ್ಟಮ್ ನೋಡಿಕೊಳ್ಳುತ್ತದೆ. ಇದನ್ನು ಎಂಟಿಗೆ ಬದಲಾಯಿಸುವುದರಿಂದ, ಸವಾರರು ಗೇರ್ ಶಿಫ್ಟ್‌ಗಳ ನಿಯಂತ್ರಣವನ್ನು ತಮ್ಮ ಕೈಯಲ್ಲಿ ಮಾಡಬಹುದು. ಅಲ್ಲಿಗೆ ಸವಾರ ತನ್ನ ಅನುಕೂಲತೆಯನ್ನು ನೋಡಿಕೊಂಡು ಗೇರ್ ಬದಲಾವಣೆ ಆಯ್ಕೆಯನ್ನು ಮಾಡಿಕೊಳ್ಳಬಹುದು.
ಬೈಕಿನ ಬಲ ಸ್ವಿಚ್ ಗೇರ್‌ನಲ್ಲಿ 'ಮೋಡ್' ಬಟನ್ ಇದ್ದು, ಇದು ಯಮಹಾ ಎಎಂಟಿ ಸಿಸ್ಟಮ್ ಅನ್ನು ಡಿ ಅಥವಾ ಡಿ + ಗೆ ಬದಲಾಯಿಸಲು ನೀಡಲಾಗಿದೆ. ಇಲ್ಲಿ D ಅಂದರೆ ಹೆಚ್ಚು ಆರಾಮದಾಯಕ ಗೇರ್‌ಗಾಗಿ ಆರಂಭಿಕ ಅಪ್ ಶಿಫ್ಟ್‌ಗಳಿಗೆ ಬದಲಾಯಿಸಲು ಮತ್ತು ಎಂಜಿನ್ ಅನ್ನು ಶಾಂತವಾಗಿಡಲು ಬಳಸಬಹುದು. ಡಿ + ಎಂದರೆ ಎಂಜಿನ್ ಅನ್ನು ಹೆಚ್ಚಿನ ರೆವ್ಸ್, ತ್ವರಿತ ಶಿಫ್ಟ್‌ಗಳು ಮತ್ತು ವೇಗ ಹೆಚ್ಚಿಸಲು ಬಳಸಬಹುದು.
ಈ ಯಮಹಾ ಹೊಸ ತಂತ್ರಜ್ಞಾನವು ಯಾವಗ ಬಳಕೆಗೆ ಬರಲಿದೆ ಎಂಬುದರ ಬಗ್ಗೆ ಖಚಿತ ಮಾಹಿತಿಯಿಲ್ಲವಾದರೂ, ಭವಿಷ್ಯದಲ್ಲಿ ಇದು ಪ್ರೀಮಿಯಂ ಮೋಟಾರ್ ಸೈಕಲ್‌ಗಳಲ್ಲಿ ಮಾತ್ರ ನೀಡುವ ಸಾಧ್ಯತೆಯಿದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ಡ್ರೈವ್‌ಸ್ಪಾರ್ಕ್ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳನ್ನು ಫಾಲೋ ಮಾಡಿ. ನಮ್ಮ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








