Yezdi Adventure: ಜನಪ್ರಿಯ ಯೆಜ್ಡಿ ಅಡ್ವೆಂಚರ್ ಬೈಕ್ ವಿಡಿಯೋ ರಿವ್ಯೂ.. ಹೇಗಿದೆ ಗೊತ್ತಾ?
ಯೆಜ್ಡಿ ಮೋಟಾರ್‌ಸೈಕಲ್ಸ್ (Yezdi Motorcycles) ಜನಪ್ರಿಯ ದ್ವಿಚಕ್ರ ವಾಹನ ತಯಾರಕ ಕಂಪನಿಯಾಗಿ ಗುರುತಿಸಿಕೊಂಡಿದೆ. ಇತ್ತೀಚೆಗೆ, ಹೊಚ್ಚ ಹೊಸ 2024ರ 'ಅಡ್ವೆಂಚರ್' ಮೋಟಾರ್‌ಸೈಕಲ್‌ನ್ನು ಅದ್ದೂರಿಯಾಗಿ ಬಿಡುಗಡೆ ಮಾಡಿದೆ. ನಮ್ಮ 'ಡ್ರೈವ್‌ಸ್ಪಾರ್ಕ್' ತಂಡದ ಪ್ರತಿನಿಧಿಗೆ ಕೆಲವೇ ದಿನಗಳ ಹಿಂದೆ, ನೂತನ ಯೆಜ್ಡಿ ಅಡ್ವೆಂಚರ್ (Yezdi Adventure) ಬೈಕ್‌ನ್ನು ಟೆಸ್ಟ್ ರೈಡ್ ನಡೆಸಲು ಕಂಪನಿಯು ಪುಣೆಗೆ ಆಹ್ವಾನಿಸಿತ್ತು. ಅವರು ಹೊಸ ಮೋಟಾರ್‌ಸೈಕಲ್ ಕುರಿತಂತೆ ವಿಡಿಯೋ ರಿವ್ಯೂ (ವಿಮರ್ಶೆ) ಮಾಡಿದ್ದಾರೆ. ನೀವೇ ನೋಡಿ..
ವಿನ್ಯಾಸ: ಯೆಜ್ಡಿ ಅಡ್ವೆಂಚರ್' ಮೋಟಾರ್‌ಸೈಕಲ್ ವಿನ್ಯಾಸ ಸಾಕಷ್ಟು ಹೊಸತನದಿಂದ ಕೂಡಿದೆ. ಎಂಜಿನ್ ಸುತ್ತಲೂ ಮೆಟಲ್ ಕೇಜ್ ಒಳಗೊಂಡಿದೆ. ಇದು ಮೋಟಾರ್‌ಸೈಕಲ್‌ನ ಎಂಜಿನ್‌ನ್ನು ಸುರಕ್ಷಿತವಾಗಿರಲು ನೆರವಾಗುತ್ತದೆ. ಜೊತೆಗೆ ಎತ್ತರದ ವಿಂಡ್‌ಶೀಲ್ಡ್, ವೃತ್ತಾಕಾರದ ಹೆಡ್‌ಲೈಟ್ ಸೆಟಪ್ ಹಾಗೂ ಅತ್ಯುತ್ತಮವಾದ ಎಕ್ಸಾಸ್ಟ್ ಪೈಪ್‌ನ್ನು ಒಳಗೊಂಡಿದೆ. ಟೊರ್ನಾಡೊ ಬ್ಲ್ಯಾಕ್, ಮ್ಯಾಗ್ನೈಟ್ ಮೆರೂನ್, ವುಲ್ಫ್ ಗ್ರೇ ಹಾಗೂ ಗ್ಲೇಸಿಯರ್ ವೈಟ್ ಎಂಬ 4 ಆಕರ್ಷಕ ಬಣ್ಣಗಳ ಆಯ್ಕೆಯನ್ನು ಪಡೆದಿದೆ.
ಕಾರ್ಯಕ್ಷಮತೆ: ಯೆಜ್ಡಿ ಅಡ್ವೆಂಚರ್ ಬೈಕ್ ಹೊಸದಾದ ಶಕ್ತಿಯುತ ಆಲ್ಫಾ-2 ಆಧಾರಿತ 334 ಸಿಸಿ ಲಿಕ್ವಿಡ್-ಕೂಲ್ಡ್, ಸಿಂಗಲ್-ಸಿಲಿಂಡರ್ ಪೆಟ್ರೋಲ್ ಎಂಜಿನ್‌ನ್ನು ಹೊಂದಿದ್ದು, ಇದು 30.2 ಪಿಎಸ್ ಗರಿಷ್ಠ ಶಕ್ತಿ (ಪವರ್) ಮತ್ತು 29.9 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 6-ಸ್ಪೀಡ್ ಗೇರ್‌ಬಾಕ್ಸ್‌ನ್ನು ಪಡೆದಿದೆ. 30 ರಿಂದ 35 ಕೆಎಂಪಿಎಲ್‌ವರೆಗೆ ಮೈಲೇಜ್ ಕೊಡುತ್ತದೆ ಎಂದು ಅಂದಾಜಿಸಲಾಗಿದೆ.
ಹೊಸ ಯೆಜ್ಡಿ ಅಡ್ವೆಂಚರ್ ಬೈಕ್ 188 ಕೆಜಿ ತೂಕವಿದೆ. ದೊಡ್ಡದಾದ 15.5-ಲೀಟರ್ ಸಾಮರ್ಥ್ಯದ ಇಂಧನ (ಫ್ಯುಯೆಲ್) ಟ್ಯಾಂಕ್‌ನ್ನು ಒಳಗೊಂಡಿದೆ. ಸೀಟ್ ಹೈಟ್ (ಆಸನ ಎತ್ತರ) 815 ಎಂಎಂ ಹಾಗೂ ಗ್ರೌಂಡ್ ಕ್ಲಿಯರೆನ್ಸ್ (ನೆಲದ ಎತ್ತರ) 220 ಎಂಎಂ ಇದ್ದು, ಸಾಮಾನ್ಯ ಹಾಗೂ ಕಚ್ಚಾ ರಸ್ತೆ ಎರಡರಲ್ಲೂ ಸುಲಭವಾಗಿ ಬೈಕ್‌ನ್ನು ಓಡಿಸಬಹುದು.

ವೈಶಿಷ್ಟ್ಯಗಳು: ಈ ಬೈಕ್ ಎಲ್‌ಸಿಡಿ ಇನ್ಸ್ಟ್ರುಮೆಂಟ್ ಕನ್ಸೋಲ್, ಆನ್‌ಬೋರ್ಡ್ ಯುಎಸ್‌ಬಿ ಚಾರ್ಜರ್, ಬ್ಲೂಟೂತ್ ಕನೆಕ್ಟಿವಿಟಿ ಮತ್ತು ಟರ್ನ್-ಬೈ-ಟರ್ನ್ ನ್ಯಾವಿಗೇಶನ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಪಡೆದಿದೆ. ಮುಂಭಾಗ (ಫ್ರಂಟ್) ಟೆಲಿಸ್ಕೋಪಿಕ್ ಫೋರ್ಕ್ಸ್, ಹಿಂಭಾಗ (ರೇರ್) ಮೊನೊಶಾಕ್ ಸಸ್ಪೆನ್ಷನ್ ಸೆಟಪ್ ಹೊಂದಿದೆ. ಪ್ರಯಾಣಿಕರಿಗೆ ರಕ್ಷಣೆ ಒದಗಿಸಲು ಡಬಲ್ ಡಿಸ್ಕ್ ಬ್ರೇಕ್‌ನ್ನು ಪಡೆದಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








