ಬಜೆಟ್ ಬೆಲೆಯಲ್ಲಿ ಭರ್ಜರಿ ಅಡ್ವೆಂಚರ್ ಬೈಕ್: ಟ್ರಿಪ್ ಹೋಗಲು ಭರ್ಜರಿ ಆಫರ್‌ಗಳು ಸಹ ಫ್ರೀ..!
ಭಾರತೀಯ ಮಿಡ್ ಅಡ್ವೆಂಚರ್ ಮೋಟಾರ್ ಸೈಕಲ್ ಸೆಗ್ಮೆಂಟ್‌ನಲ್ಲಿ ಇರುವ ಕೆಲವೇ ಕೆಲವು ಬೈಕ್‌ಗಳಲ್ಲಿ ಯೆಜ್ಡಿ ಕಂಪನಿಯ ಯಜ್ಡಿ ಅಡ್ವೆಂಚರ್ ಸಹ ಒಂದು. ಈ ಸೆಗ್ಮೆಂಟ್‌ನಲ್ಲಿ ಸ್ಪರ್ಧಿಗಳಿಲ್ಲದೆ ರಾಜನಂತೆ ಮೆರೆಯುತ್ತಿದ್ದ ರಾಯುಲ್ ಎನ್‌ಫೀಲ್ಡ್ ಹಿಮಾಲಯನ್ 411 ಬೈಕ್‌ಗೆ ಟಕ್ಕರ್ ಕೊಡಲು ಯೆಜ್ಡಿ ಈ ಬೈಕ್ ಅನ್ನು ಲಾಂಚ್ ಮಾಡಿತ್ತು. ಒಂದು ಮಟ್ಟಿಗೆ ಅದರಲ್ಲಿ ಯಶಸ್ಸನ್ನೂ ಸಹ ಯಜ್ಡಿ ಪಡೆಯಿತು ಎಂದರೆ ತಪ್ಪಾಗಲಾರದು. ಇದೀಗ ಬಂದ ಮಾಹಿತಿಗಳ ಪ್ರಕಾರ ಯಜ್ಡಿ ಕಂಪನಿಯು ತನ್ನ ಅಡ್ವೆಂಚರ್ ಬೈಕ್ ಮಾದರಿಗೆ ಭರ್ಜರಿ ಆಫರ್ ಅನ್ನು ನೀಡುತ್ತಿದೆ.
ಹೌದು, ಇದೀಗ ಕಂಪನಿಯು ಹೊಸ ಯಜ್ಡಿ ಅಡ್ವೆಂಚರ್ ಬೈಕ್ ಅನ್ನು ಕೊಳ್ಳುವವರಿಗೆ ಉಚಿತವಾಗಿ ಮೌಂಟೇನ್ ಪ್ಯಾಕ್ ಆಕ್ಸಸರೀಸ್ ಅನ್ನು ನೀಡುತ್ತಿದೆ. ಯುವಕರನ್ನು ಈ ಬೈಕ್ ಕಡೆಗೆ ಹೆಚ್ಚು ಹೆಚ್ಚು ಆಕರ್ಷಿಸುವ ಸಲುವಗಿ ಕಂಪನಿ ಈ ಆಕ್ಸಸರೀಸ್‌ಗಳನ್ನು ಉಚಿತವಾಗಿ ನೀಡಲಾಗುತ್ತಿದೆ ಎಂಬುದು ಎಲ್ಲರ ಮಾತು. ಈ ಮೌಂಟೇನ್ ಪ್ಯಾಕ್ ಆಕ್ಸಸರೀಸ್‌ನಲ್ಲಿ ಏನೆಲ್ಲಾ ಸಿಗುತ್ತದೆ ಎಂಬುದನ್ನು ಈಗ ನೋಡೋಣ.

ಮೊದಲಿಗೆ ಈ ಬೈಕ್ ಜೊತೆ ಜೆರ್ರಿ ಕ್ಯಾನ್‌ಗಳನ್ನು ಉಚಿತವಾಗಿ ನೀಡಲಾಗುತ್ತದೆ. ಇದನ್ನು ಬೈಕ್‌ನ ಟ್ಯಾಂಕ್ ಪ್ರೊಟೆಕ್ಟರ್‌ನಲ್ಲಿರುವ ಗ್ರಿಲ್‌ನಲ್ಲಿ ಅಳವಡಿಸಲು ಸಾಧ್ಯವಾಗುತ್ತದೆ. ಹ್ಯಾಂಡ್ ಗಾರ್ಡ್‌ಗಳು, ಹೆಡ್‌ಲ್ಯಾಂಪ್ ಗ್ರಿಲ್, ಕ್ರ್ಯಾಶ್ ಗಾರ್ಡ್, ಮೈನ್ ಕೇಜ್‌ಗಳು ಈ ಬೈಕ್‌ನೊಂದಿಗೆ ಉಚಿತವಾಗಿ ಸಿಗುತ್ತದೆ. ಈ ಹಿಂದೆ ಇದಕ್ಕಾಗಿ ಕಂಪನಿ ಸುಮಾರು 17,000 ರೂಗಳನ್ನು ಚಾರ್ಜ್ ಮಾಡುತ್ತಿತ್ತು. ಆದರೆ ಇದೀಗ ಉಚಿತವಾಗಿ ನೀಡಲಾಗುತ್ತದೆ.
90ರ ದಶಕದಲ್ಲಿ ಬೈಕ್ ಪ್ರಿಯರ ಆಯ್ಕೆಯಲ್ಲಿ ತನ್ನದೆ ಆದ ಗ್ರಾಹಕರ ವರ್ಗವನ್ನೇ ಹುಟ್ಟುಹಾಕುವಲ್ಲಿ ಯಶಸ್ವಿಯಾಗಿದ್ದ ಕಾರಣಾಂತರಗಳಿಂದ ಮಾರುಕಟ್ಟೆಯಿಂದ ಹಿಂದೆ ಸರಿದಿತ್ತು. ಬಳಿಕ ಮಹೀಂದ್ರಾ ಒಡೆತನದ ಕ್ಲಾಸಿಕ್ ಲೆಜೆಂಡ್ ಕಂಪನಿಯು ಯೆಜ್ಡಿ ಬ್ರಾಂಡ್‌ಗೆ ಹೊಸ ರೂಪ ನೀಡುವ ಮೂಲಕ ಮರಳಿ ಮಾರುಕಟ್ಟೆಗೆ ಪರಿಚಯಿಸಿದ್ದು, ಯೆಜ್ಡಿ ರೋಡ್‌ಸ್ಟರ್, ಯೆಜ್ಡಿ ಸ್ಕ್ರ್ಯಾಂಬ್ಲರ್ ಮತ್ತು ಯೆಜ್ಡಿ ಅಡ್ವೆಂಚರ್ ಬೈಕ್ ಮಾದರಿಗಳನ್ನು ಬಿಡುಗಡೆ ಮಾಡಿತ್ತು.
ಈ ಯೆಜ್ಡಿ ಅಡ್ವೆಂಚರ್ ಬಗ್ಗೆ ನೋಡುವುದಾದರೆ, ಯೆಜ್ಡಿ ಕಂಪನಿಯು (Yezdi Adventure) ಮೂರು ಬೈಕ್ ಮಾದರಿಗಳಲ್ಲೂ ಒಂದೇ ಎಂಜಿನ್ ಆಯ್ಕೆ ನೀಡಿದ್ದರೂ ಕೂಡಾ ವಿವಿಧ ಮಾದರಿಗಳಿಗೆ ಅನುಗುಣವಾಗಿ ಪರ್ಫಾಮೆನ್ಸ್ ಏರಿಳಿತ ಮಾಡಲಾಗಿದ್ದು, 334ಸಿಸಿ, ಸಿಂಗಲ್-ಸಿಲಿಂಡರ್, ಲಿಕ್ವಿಡ್-ಕೂಲ್ಡ್ ಎಂಜಿನ್‌ನೊಂದಿಗೆ 6-ಸ್ಪೀಡ್ ಗೇರ್‌ಬಾಕ್ಸ್ ಆಯ್ಕೆ ಹೊಂದಿವೆ.
ರಿಯಲ್ ವ್ಹೀಲ್ ವೈಶಿಷ್ಟ್ಯತೆ ಹೊಂದಿರುವ ಹೊಸ ಮಾದರಿಗಳಲ್ಲಿ ರೋಡ್‌ಸ್ಟರ್ ಮಾದರಿಯು 29.3 ಬಿಎಚ್‌ಪಿ ಮತ್ತು 29 ಎನ್ಎಂ ಟಾರ್ಕ್ ಉತ್ಪಾದಿಸಿದರೆ ಸ್ಕ್ರ್ಯಾಂಬ್ಲರ್ ಮಾದರಿಯು 28.7 ಬಿಎಚ್‌ಪಿ ಮತ್ತು 28.2 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಹಾಗೆಯೇ ಅಡ್ವೆಂಚರ್ ಮಾದರಿಯು 29.7 ಬಿಎಚ್‌ಪಿ ಮತ್ತು 29.9 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.
ಅಡ್ವೆಂಚರ್ ಮಾದರಿಯು ಹೆಚ್ಚು ಆಕರ್ಷಕವಾಗಿದ್ದು, ಅಡ್ವೆಂಚರ್ ಮಾದರಿಯು ವಿಶೇಷವಾಗಿ ದೂರದ ಪ್ರಯಾಣಕ್ಕೆ ಮತ್ತು ಸಾಹಸಿ ಬೈಕ್ ರೈಡಿಂಗ್ ಅನುಭವಕ್ಕಾಗಿ ವಿಶೇಷವಾಗಿ ಅಭಿವೃದ್ದಿಗೊಳಿಸಲಾಗಿದೆ. ಡಬಲ್ ಕ್ರೇಡಲ್ ಚಾಸಿಸ್ ಅನ್ನು ಹೊಂದಿರುವ ಅಡ್ವೆಂಚರ್ ಬೈಕ್ ಮಾದರಿಯು ರೋಡ್‌ಸ್ಟರ್ ಮತ್ತು ಸ್ಕ್ರ್ಯಾಂಬ್ಲರ್ ಮಾದರಿಗಳಿಂತಲೂ ಹೆಚ್ಚು ಶಕ್ತಿಶಾಲಿಯಾಗಿದ್ದು, ಆಫ್ ರೋಡ್ ಮತ್ತು ಆನ್‌ರೋಡ್‌ಗಳಲ್ಲೂ ಗಮನಸೆಳೆಯುತ್ತದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








