ಹೊಸ ಸ್ಕೂಟರ್ ಬಿಡುಗಡೆ: 100 ಕಿ.ಮೀಗೆ ಕೇವಲ 3 ರೂ. ಖರ್ಚು, ರಿವರ್ಸ್ ಗೇರ್ ಕೂಡ ಇದೆ!
ಭಾರತೀಯ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಜೀಲಿಯೋ ಇ-ಬೈಕ್ಸ್ (ZELIO Ebikes), ತನ್ನ ಜನಪ್ರಿಯ X-MEN ಸರಣಿಯ ನವೀಕೃತ X-MEN 2.0 ಇವಿ ಸ್ಕೂಟರ್ ಅನ್ನು ಇಂದು (ನವೆಂಬರ್ 12) ಬಿಡುಗಡೆ ಮಾಡಿದೆ. ವರ್ಧಿತ ವೈಶಿಷ್ಟ್ಯಗಳು ಮತ್ತು ಸುಧಾರಿತ ದಕ್ಷತೆಯೊಂದಿಗೆ, X-MEN 2.0 ಆಧುನಿಕ ನಗರ ಪ್ರಯಾಣಿಕರ ಅಗತ್ಯತೆಗಳನ್ನು ಪೂರೈಸಲು ವಿನ್ಯಾಸಗೊಳಿಸಲಾಗಿದೆ. ವಿದ್ಯಾರ್ಥಿಗಳು, ಕಚೇರಿ ಕೆಲಸಗಾರರು ಮತ್ತು ಇತರ ನಗರ ಪ್ರಯಾಣಿಕರಿಗೆ ವಿಶ್ವಾಸಾರ್ಹ, ಪರಿಸರ ಸ್ನೇಹಿ ಮತ್ತು ಸೊಗಸಾದ ಸವಾರಿಯನ್ನು ಬಯಸುವವರಿಗೆ ಈ ಸ್ಕೂಟರ್ ಉತ್ತಮ ಆಯ್ಕೆಯಾಗಿದೆ ಎಂದು ಕಂಪನಿ ಹೇಳಿದೆ.
ನಾಲ್ಕು ವಿಭಿನ್ನ ರೂಪಾಂತರಗಳಲ್ಲಿ ಲಭ್ಯವಿರುವ X-MEN 2.0 ಎಲೆಕ್ಟ್ರಿಕ್ ಸ್ಕೂಟರ್, ಬ್ಯಾಟರಿಗಳನ್ನು ಆಧರಿಸಿ ಬೆಲೆಗಳನ್ನು ಹೊಂದಿದೆ. 60V 32AH ಬ್ಯಾಟರಿ ಹೊಂದಿರುವ ಸ್ಕೂಟರ್ ಬೆಲೆಯು ರೂ.71,500 ಇದ್ದು, 72V 32AH ಬ್ಯಾಟರಿ ಹೊಂದಿರುವ ಸ್ಕೂಟರ್ ಬೆಲೆಯು ರೂ.74,000 ಇದೆ. ಹಾಗೆಯೇ ಲಿಥಿಯಂ-ಐಯಾನ್ 60V 30AH ಬ್ಯಾಟರಿಯ ಸ್ಕೂಟರ್ ಬೆಲೆಯು ರೂ.87,500 ಇದ್ದು, 74V 32AH ಲಿಥಿಯಂ-ಐಯಾನ್ ಬೆಲೆ ರೂ.91,500 ಇದೆ. (ಎಕ್ಸ್ ಶೋರೂಂ ಬೆಲೆಗಳು)

X-MEN 2.0 ಸ್ಕೂಟರ್ 25 km/h ಗರಿಷ್ಠ ವೇಗ ಹೊಂದಿದ್ದು, ಒಂದು ಚಾರ್ಜ್‌ನಲ್ಲಿ 100 ಕಿ.ಮೀ ರೇಂಜ್ ನೀಡುತ್ತದೆ. ಇದರ 60/72V BLDC ಮೋಟಾರ್ ಪ್ರತಿ ಚಾರ್ಜ್‌ಗೆ ಕೇವಲ 1.5 ಯೂನಿಟ್ ವಿದ್ಯುತ್ ಅನ್ನು ಬಳಸುತ್ತದೆ, ಬೆಂಗಳೂರಿನಲ್ಲಿ ಪ್ರತಿ ಯೂನಿಟ್ ವಿದ್ಯುತ್‌ಗೆ 1.49 ಪೈಸೆ ಖರ್ಚಾಗುತ್ತದೆ. ಈ ಲೆಕ್ಕದಲ್ಲಿ 1.5 ಯೂನಿಟ್‌ಗೆ ಸುಮಾರು 2.23 ಪೈಸೆ ಖರ್ಚಾಗುತ್ತದೆ. ಅಲ್ಲಿಗೆ ಕೇವಲ 3 ರೂಪಾಯಿ ಇದ್ದರೇ 100 ಕಿ.ಮೀ ಓಡಿಸಬಹುದು.
ಹೊಸ X-MEN 2.0 ಸ್ಕೂಟರ್ 90 ಕೆ.ಜಿ ಒಟ್ಟು ತೂಕ ಮತ್ತು 180 ಕೆ.ಜಿ ಲೋಡಿಂಗ್ ಸಾಮರ್ಥ್ಯವನ್ನು ಹೊಂದಿದೆ. ಈ ಸ್ಕೂಟರ್ ಚಾರ್ಜಿಂಗ್ ಸಮಯವು ಬ್ಯಾಟರಿ ಪ್ರಕಾರವನ್ನು ಅವಲಂಭಿಸಿ ಬದಲಾಗುತ್ತದೆ. ಲಿಥಿಯಂ-ಐಯಾನ್ ಮಾದರಿಗಳು 4 ರಿಂದ 5 ಗಂಟೆಗಳನ್ನು ತೆಗೆದುಕೊಳ್ಳುತ್ತವೆ. ಲೀಡ್ ಆಸಿಡ್ ಮಾದರಿಗಳನ್ನು ಸಂಪೂರ್ಣವಾಗಿ ಚಾರ್ಜ್ ಮಾಡಲು 8 ರಿಂದ 10 ಗಂಟೆಗಳ ಅಗತ್ಯವಿದೆ.

ಹೊಸ ಸ್ಕೂಟರ್ ಗ್ರೀನ್, ವೈಟ್, ಸಿಲ್ವರ್ ಮತ್ತು ರೆಡ್ ಸೇರಿದಂತೆ ನಾಲ್ಕು ರೋಮಾಂಚಕ ಬಣ್ಣದ ಆಯ್ಕೆಗಳಲ್ಲಿ ಲಭ್ಯವಿದೆ. ಮುಂಭಾಗ ಮತ್ತು ಹಿಂಭಾಗದಲ್ಲಿ ಡಿಸ್ಕ್ ಬ್ರೇಕ್‌ಗಳು, ಮುಂಭಾಗದಲ್ಲಿ ಅಲಾಯ್ ವೀಲ್‌ಗಳು ಮತ್ತು ಹಿಂಭಾಗದಲ್ಲಿ ಹಬ್ ಮೋಟಾರ್‌ನೊಂದಿಗೆ ಬರುತ್ತದೆ. ಹಾಗೆಯೇ ಮುಂಭಾಗ ಟೆಲಿಸ್ಕೋಪಿಕ್ ಮತ್ತು ಹಿಂಭಾಗದ ಸ್ಪ್ರಿಂಗ್-ಲೋಡೆಡ್ ಶಾಕ್ ಅಬ್ಸಾರ್ಬರ್‌ಗಳನ್ನು ನೀಡಲಾಗಿದೆ.
ಹೆಚ್ಚುವರಿ ವೈಶಿಷ್ಟ್ಯಗಳಲ್ಲಿ ಆಂಟಿ-ಥೆಫ್ಟ್ ಅಲಾರ್ಮ್, ಸೆಂಟ್ರಲ್ ಲಾಕಿಂಗ್, ರಿವರ್ಸ್ ಗೇರ್, ಪಾರ್ಕಿಂಗ್ ಸ್ವಿಚ್, ಆಟೋ-ರಿಪೇರಿ ಸ್ವಿಚ್, USB ಚಾರ್ಜರ್ ಮತ್ತು ಡಿಜಿಟಲ್ ಡಿಸ್ಪ್ಲೇ ನೀಡಲಾಗಿದೆ. ಈ ಪ್ರಭಾವಶಾಲಿ ವೈಶಿಷ್ಟ್ಯಗಳ ಜೊತೆಗೆ, ZELIO ಲೀಡ್ ಆಸಿಡ್ ಮತ್ತು ಲಿಥಿಯಂ-ಐಯಾನ್ ಬ್ಯಾಟರಿ ರೂಪಾಂತರಗಳಿಗೆ ಒಂದು ವರ್ಷ ಅಥವಾ 10,000 ಕಿ.ಮೀ ಸಮಗ್ರ ಖಾತರಿಯನ್ನು ನೀಡಲಾಗಿದೆ.
ಕಂಪನಿಯು 2021 ರಲ್ಲಿ ಪ್ರಾರಂಭವಾದಾಗಿನಿಂದ, ZELIO Ebikes ತ್ವರಿತವಾಗಿ ಭಾರತೀಯ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ಪ್ರಬಲ ಕಂಪನಿಯಾಗಿ ಹೊರಹೊಮ್ಮಿದೆ. ದೇಶಾದ್ಯಂತ 256 ಡೀಲರ್‌ಶಿಪ್‌ಗಳು ಮತ್ತು 2,00,000 ಕ್ಕೂ ಹೆಚ್ಚು ತೃಪ್ತ ಗ್ರಾಹಕರೊಂದಿಗೆ, ಕಂಪನಿಯು ಬಲವಾದ ಬೆಳವಣಿಗೆಯ ಹಾದಿಯಲ್ಲಿದೆ. ಮಾರ್ಚ್ 2025 ರ ವೇಳೆಗೆ ಡೀಲರ್‌ಶಿಪ್ ನೆಟ್‌ವರ್ಕ್ 400ಕ್ಕೆ ವಿಸ್ತರಿಸಲು ಯೋಜಿಸಿರುವುದಾಗಿ ಕಂಪನಿ ಹೇಳಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








