Zelio: ಹೊಸ ಈವಾ ಸೀರೀಸ್ ಎಲೆಕ್ಟ್ರಿಕ್ ಸ್ಕೂಟರ್‌ಗಳು ಮಾರುಕಟ್ಟೆಗೆ.. ರೂ.56,051 ಆರಂಭಿಕ ಬೆಲೆ, 100 Km ರೇಂಜ್!

ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕ ಝೆಲಿಯೊ ಇಬೈಕ್ಸ್ (Zelio Ebikes), ಹೊಚ್ಚ ಹೊಸ ಈವಾ ಸಿರೀಸ್ (Eeva series) ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಬಿಡುಗಡೆಗೊಳಿಸಿದೆ. ಇವುಗಳು ಈವಾ (Eeva), ಈವಾ ಇಕೋ (Eeva Eco) ಮತ್ತು ಈವಾ ಝಡ್ಎಕ್ಸ್ ಪ್ಲಸ್ (Eeva ZX+) ಎಂಬ 3 ವಿಭಿನ್ನ ಮಾದರಿಗಳ (Models) ಆಯ್ಕೆಯಲ್ಲಿಯೂ ಖರೀದಿಗೆ ಲಭ್ಯವಿದ್ದು, ರೂ. 56,051 ದಿಂದ ರೂ.90,500 ಎಕ್ಸ್ ಶೋರೂಂ ಬೆಲೆಯನ್ನು ಹೊಂದಿವೆ. ನಗರ ಪ್ರಯಾಣಕ್ಕೆ ಹೆಚ್ಚು ಸೂಕ್ತವಾಗಿದ್ದು, ದಿನನಿತ್ಯ ಕೆಲಸಕ್ಕೆ ತೆರಳುವ ಉದ್ಯೋಗಿಗಳು ಹಾಗೂ ವಿದ್ಯಾರ್ಥಿಗಳು ಬಳಕೆ ಮಾಡಬಹುದು.

ಝೆಲಿಯೊ ಈವಾ (Zelio Eeva): ಈ ಎಲೆಕ್ಟ್ರಿಕ್ ಸ್ಕೂಟರ್ 60ವಿ/32ಎಹೆಚ್ ಲೀಡ್ ಆಸಿಡ್ ಮತ್ತು 72ವಿ/38ಎಹೆಚ್ ಲೀಡ್ ಆಸಿಡ್ ಒಳಗೊಂಡಂತೆ ವಿವಿಧ ಬ್ಯಾಟರಿ ಪ್ಯಾಕ್‌ಗಳನ್ನು ಹೊಂದಿದ್ದು, ಸಂಪೂರ್ಣ ಚಾರ್ಜ್‌ನಲ್ಲಿ 55 ರಿಂದ 100 ಕಿಲೋಮೀಟರ್‌‌ವರೆಗೂ ರೇಂಜ್ (ಮೈಲೇಜ್) ಕೊಡುತ್ತದೆ. ಜೊತೆಗೆ ಬ್ಯಾಟರಿ ಪ್ಯಾಕ್‌ಗೆ ಅನುಗುಣವಾಗಿ ರೂ.56,051 ದಿಂದ ರೂ.79,051 ಎಕ್ಸ್ ಶೋರೂಂ ದರವನ್ನು ಪಡೆದಿದೆ.

Zelio Eeva Series Electric scooters Launch In India Rs 56 051 Price Details

ಈ ನೂತನ ಝೆಲಿಯೊ ಈವಾ ಎಲೆಕ್ಟ್ರಿಕ್ ಸ್ಕೂಟರ್, ಶಕ್ತಿಯುತವಾದ ಬಿಎಲ್‌ಡಿಸಿ ಮೋಟಾರ್ ಹೊಂದಿದೆ. 80 ಕೆಜಿ ತೂಕವಿದ್ದು, 180 ಕೆಜಿವರೆಗೆ (ವ್ಯಕ್ತಿಗಳು - ವಸ್ತು) ಸಾಗಿಸಬಲ್ಲದು. ಸುರಕ್ಷತೆಗಾಗಿ ಮುಂಭಾಗ (ಫ್ರಂಟ್) ಹಾಗೂ ಹಿಂಭಾಗ (ರೇರ್) ಡ್ರಮ್ ಬ್ರೇಕ್‌ನ್ನು ಒಳಗೊಂಡಿದೆ. ಡಿಜಿಟಲ್ ಡಿಸ್ಪ್ಲೇ, ಆಂಟಿ-ಥೆಫ್ಟ್ ಅಲಾರ್ಮ್, ರಿವರ್ಸ್ ಗೇರ್, ಪಾರ್ಕಿಂಗ್ ಸ್ವಿಚ್, ಆಟೋ ರಿಪೇರಿ ಸ್ವಿಚ್, ಯುಎಸ್‌ಬಿ ಚಾರ್ಜರ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ.

ಝೆಲಿಯೊ ಈವಾ ಇಕೋ (Zelio Eeva Eco): ಇದು 48ವಿ/32ಎಹೆಚ್ ಲೀಡ್ ಆಸಿಡ್, 60ವಿ/32ಎಹೆಚ್ ಲೀಡ್ ಆಸಿಡ್ ಮತ್ತು 60ವಿ/30ಎಹೆಚ್ ಲಿಥಿಯಂ ಐಯಾನ್ ಬ್ಯಾಟರಿಯನ್ನು ಪಡೆದಿದೆ. ಭರ್ತಿ ಚಾರ್ಜ್‌ನಲ್ಲಿ 50 ರಿಂದ 100 ಕಿಲೋಮೀಟರ್‌‌ವರೆಗೂ ಓಡುತ್ತದೆ. ರೂ.52,000 ದಿಂದ ರೂ.68,000 ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ.

Zelio Eeva Series Electric scooters Launch In India Rs 56 051 Price Details

ಹೊಸ ಝೆಲಿಯೊ ಈವಾ ಇಕೋ ಎಲೆಕ್ಟ್ರಿಕ್ ಸ್ಕೂಟರ್, 48/60ವಿ ಸಾಮರ್ಥ್ಯದ ಬಿಎಲ್‌ಡಿಸಿ ಮೋಟಾರ್ ಹೊಂದಿದೆ. ಮುಂಭಾಗ (ಫ್ರಂಟ್) ಡಿಸ್ಕ್ ಮತ್ತು ಹಿಂಭಾಗ (ರೇರ್) ಡ್ರಮ್ ಬ್ರೇಕ್‌ನ್ನು ಒಳಗೊಂಡಿದೆ. ಡಿಜಿಟಲ್ ಡಿಸ್ಪ್ಲೇ ಮತ್ತು ಸೆಂಟ್ರಲ್ ಲಾಕಿಂಗ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಪಡೆದಿದೆ. ಬ್ಲ್ಯೂ, ಗ್ರೇ, ವೈಟ್, ಬ್ಲ್ಯಾಕ್ & ರೆಡ್ ಬಣ್ಣದ (ಕಲರ್) ಆಯ್ಕೆಯನ್ನು ಕೂಡ ಹೊಂದಿದೆ.

ಝೆಲಿಯೊ ಝಡ್ಎಕ್ಸ್ ಪ್ಲಸ್ (Zelio Eeva ZX+): ಈ ಎಲೆಕ್ಟ್ರಿಕ್ ಸ್ಕೂಟರ್, 60ವಿ/32ಎಹೆಚ್ ಲೀಡ್ ಆಸಿಡ್ ಹಾಗೂ 72ವಿ/38ಎಹೆಚ್ ಲೀಡ್ ಆಸಿಡ್ ಒಳಗೊಂಡಂತೆ ವಿವಿಧ ಬ್ಯಾಟರಿ ಪ್ಯಾಕ್‌ಗಳನ್ನು ಪಡೆದಿದೆ. ಪೂರ್ತಿ ಚಾರ್ಜ್‌ನಲ್ಲಿ 55 ರಿಂದ 100 ಕಿಲೋಮೀಟರ್‌‌ವರೆಗೂ ಕ್ರಮಿಸುತ್ತದೆ. ರೂ.67,500 ದಿಂದ ರೂ.90,500 ಎಕ್ಸ್ ಶೋರೂಂ ದರವನ್ನು ಹೊಂದಿದೆ.

Zelio Eeva Series Electric scooters Launch In India Rs 56 051 Price Details

ನೂತನ ಝೆಲಿಯೊ ಝಡ್ಎಕ್ಸ್ ಪ್ಲಸ್, 60/72ವಿ ಸಾಮರ್ಥ್ಯದ ಬಿಎಲ್‌ಡಿಸಿ ಮೋಟಾರ್ ಒಳಗೊಂಡಿದೆ. ಸವಾರರಿಗೆ ಗರಿಷ್ಠ ರಕ್ಷಣೆ ಒದಗಿಸಲು ಡಿಸ್ಕ್/ಡ್ರಮ್ ಬ್ರೇಕ್‌ನ್ನು ಪಡೆದಿದೆ. ಆಂಟಿ-ಥೆಫ್ಟ್ ಅಲಾರಂ, ರಿವರ್ಸ್ ಗೇರ್, ಪಾರ್ಕಿಂಗ್ ಸ್ವಿಚ್, ಆಟೋ ರಿಪೇರ್ ಸ್ವಿಚ್, ಯುಎಸ್‌ಬಿ ಚಾರ್ಜರ್ ಮತ್ತು ಡಿಜಿಟಲ್ ಡಿಸ್ಪ್ಲೇ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Wednesday, August 28, 2024, 15:53 [IST]
English summary
Zelio eeva series electric scooters launch india rs 56051 price details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+