ZELIO: ಅತ್ಯಾಕರ್ಷಕ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ, ರೂ.81,999.. 100 Km ರೇಂಜ್, ರಿವರ್ಸ್ ಗೇರ್ ಕೂಡ ಇದೆ!
ಹರಿಯಾಣ ಮೂಲದ ಝೆಲಿಯೊ ಇಬೈಕ್ಸ್ (Zelio Ebikes) ಜನಪ್ರಿಯ ಎಲೆಕ್ಟ್ರಿಕ್ ದ್ವಿಚಕ್ರ ವಾಹನ (Electric Two Wheeler) ತಯಾರಿಕ ಕಂಪನಿಯಾಗಿ ಗುರುತಿಕೊಂಡಿದೆ. ದೇಶೀಯ ಮಾರುಕಟ್ಟೆಯಲ್ಲಿ ಅತ್ಯುತ್ತಮ ವಿನ್ಯಾಸ ಹಾಗೂ ವೈಶಿಷ್ಟ್ಯಗಳನ್ನು ಹೊಂದಿರುವ ವಿವಿಧ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಮಾರಾಟ ಮಾಡುತ್ತಿದ್ದು, ಗ್ರಾಹಕರು ಕೂಡ ಮನಸೊತ್ತಿದ್ದಾರೆ. ಮಧ್ಯಮ ವರ್ಗದ ಜನರಿಗಾಗಿ ಕಂಪನಿಯು ಗುರುವಾರ ಹೊಚ್ಚ ಹೊಸ ಮಿಸ್ಟರಿ (Mystery) ಹೆಸರಿನ ಹೈ-ಸ್ಪೀಡ್ ಎಲೆಕ್ಟ್ರಿಕ್ ಸ್ಕೂಟರ್‌ನ್ನು ಬಿಡುಗಡೆಗೊಳಿಸಿದೆ. ಬನ್ನಿ.. ಈ ನೂತನ ಸ್ಕೂಟರ್ ಬೆಲೆ ಹಾಗೂ ವಿಶೇಷತೆ ಕುರಿತಂತೆ ಸಂಪೂರ್ಣವಾದ ಮಾಹಿತಿ ತಿಳಿಯೋಣ.
ಹೊಸ ಝೆಲಿಯೊ ಮಿಸ್ಟರಿ ಹೈ-ಸ್ಪೀಡ್ ಎಲೆಕ್ಟ್ರಿಕ್ ಸ್ಕೂಟರ್ (ZELIO Mystery High-Speed Electric Scooter) ದಿನಬಳಕೆಗೆ ಹೆಚ್ಚು ಸೂಕ್ತವಾಗಿದ್ದು, ಅತ್ಯಂತ ಕೈಗೆಟುಕುವ ಬೆಲೆಯಲ್ಲಿ ಖರೀದಿಗೆ ದೊರೆಯುತ್ತದೆ. ರೂ.81,999 ಎಕ್ಸ್ ಶೋರೂಂ ದರವನ್ನು ಹೊಂದಿದೆ. ಬ್ಲ್ಯಾಕ್, ಸೀ ಗ್ರೀನ್ ಹಾಗೂ ರೆಡ್ ಎಂಬ 3 ಬಣ್ಣಗಳ (ಕಲರ್) ಆಯ್ಕೆಯನ್ನು ಪಡೆದಿದೆ.

ಈ ಝೆಲಿಯೊ ಮಿಸ್ಟರಿ ಎಲೆಕ್ಟ್ರಿಕ್ ಸ್ಕೂಟರ್, 72ವಿ/29ಎಹೆಚ್ ಲಿಥಿಯಂ ಐಯಾನ್ ಬ್ಯಾಟರಿ ಪ್ಯಾಕ್ ಮತ್ತು 72ವಿ ಮೋಟಾರ್‌ನ್ನು ಒಳಗೊಂಡಿದೆ. ಸಂಪೂರ್ಣ ಚಾರ್ಜ್‌ನಲ್ಲಿ 100 ಕಿಲೋಮೀಟರ್‌ವರೆಗೆ ರೇಂಜ್ (ಮೈಲೇಜ್) ನೀಡುತ್ತದೆ. 70 ಕೆಎಂಪಿಹೆಚ್ ಟಾಪ್ ಸ್ಪೀಡ್‌ನ್ನು ಹೊಂದಿದೆ. ಇದರಲ್ಲಿರುವ ಬ್ಯಾಟರಿಯು 4 ರಿಂದ 5 ಗಂಟೆಯಲ್ಲಿ ಪೂರ್ತಿಯಾಗಿ ಚಾರ್ಜ್ ಆಗಿಬಿಡುತ್ತದೆ.
ನೂತನ ಝೆಲಿಯೊ ಮಿಸ್ಟರಿ, 120 ಕೆಜಿ ತೂಕವಿದೆ. ಸರಿ ಸುಮಾರು 180 ಕೆಜಿ (ರೈಡರ್‌ಗಳು & ಲಗೇಜ್) ಭಾರವನ್ನು ಸಾಗಿಸುವ ಸಾಮರ್ಥ್ಯವನ್ನು ಪಡೆದಿದೆ. ಸುರಕ್ಷತೆ ದೃಷ್ಟಿಯಿಂದ ಮುಂಭಾಗ (ಫ್ರಂಟ್) - ಹಿಂಭಾಗ (ರೇರ್) ಹೈಡ್ರಾಲಿಕ್ ಶಾಕ್ ಅಬ್ಸಾರ್ಬರ್ಸ್, ಅಡ್ವಾನ್ಸ್ಡ್ ಕಾಂಬಿ ಬ್ರೇಕ್ ಸಿಸ್ಟಮ್, ಸೆಂಟ್ರಲ್ ಲಾಕಿಂಗ್ ಸಿಸ್ಟಮ್ ಮತ್ತು ಆಂಟಿ-ಥೆಫ್ಟ್ ಅಲಾರಾಂನ್ನು ಒಳಗೊಂಡಿದೆ.

ಹೊಚ್ಚ ಹೊಸ ಝೆಲಿಯೊ ಮಿಸ್ಟರಿ ಹೈ-ಸ್ಪೀಡ್ ಎಲೆಕ್ಟ್ರಿಕ್ ಸ್ಕೂಟರ್ ಯುವ ಗ್ರಾಹಕರನ್ನು ಸೆಳೆಯುವ ಹಲವು ಆಕರ್ಷಕ ವೈಶಿಷ್ಟ್ಯಗಳನ್ನು ಹೊಂದಿದೆ. ಪ್ರಮುಖವಾಗಿ ಡಿಜಿಟಲ್ ಡಿಸ್‌ಪ್ಲೇ, ರಿವರ್ಸ್ ಗೇರ್, ಪಾರ್ಕಿಂಗ್ ಸ್ವಿಚ್, ಆಟೋ ರಿಪೇರಿ ಸ್ವಿಚ್ ಹಾಗೂ ಯುಎಸ್‌ಬಿ ಚಾರ್ಜಿಂಗ್ ಒಳಗೊಡಂತೆ ವಿವಿಧ ವೈಶಿಷ್ಟ್ಯಗಳನ್ನು ಪಡೆದಿದೆ.
ಕಳೆದ ತಿಂಗಳು (ಆಗಸ್ಟ್ 2024) ಝೆಲಿಯೊ ಇಬೈಕ್ಸ್, ಈವಾ ಸೀರೀಸ್ (Eeva series) ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಮಾರಾಟಕ್ಕೆ ತಂದಿತ್ತು. ಇವುಗಳು ಈವಾ (Eeva), ಈವಾ ಇಕೋ (Eeva Eco) ಹಾಗೂ ಈವಾ ಝಡ್ಎಕ್ಸ್ ಪ್ಲಸ್ (Eeva ZX+) ಎಂಬ 3 ಮಾದರಿಗಳ (ಮಾಡೆಲ್) ಆಯ್ಕೆಯಲ್ಲಿ ಸಹ ಲಭ್ಯವಿವೆ.
ಈ ಈವಾ ಸೀರೀಸ್ ಎಲೆಕ್ಟ್ರಿಕ್ ಸ್ಕೂಟರ್‌ಗಳು ರೂ.52,000 ದಿಂದ ರೂ.90,500 (ಎಕ್ಸ್ ಶೋರೂಂ) ಬೆಲೆಯಲ್ಲಿ ಖರೀದಿಗೆ ದೊರೆಯುತ್ತವೆ. ಭರ್ತಿ ಚಾರ್ಜ್‌ನಲ್ಲಿ 55 ರಿಂದ 100 ಕಿಲೋಮೀಟರ್‌ವರೆಗೂ ಓಡುತ್ತವೆ. ಡಿಜಿಟಲ್ ಡಿಸ್ಪ್ಲೇ, ಆಂಟಿ-ಥೆಫ್ಟ್ ಅಲಾರಾಂ, ರಿವರ್ಸ್ ಗೇರ್, ಪಾರ್ಕಿಂಗ್ ಸ್ವಿಚ್, ಆಟೋ ರಿಪೇರಿ ಸ್ವಿಚ್ ಒಳಗೊಂಡಂತೆ ಹಲವು ವೈಶಿಷ್ಟ್ಯಗಳನ್ನು ಪಡೆದಿವೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








