Ather: ಬೆಂಗಳೂರಿನ ಎಥರ್‌ನಿಂದ '450' ಸೀರೀಸ್ ಎಲೆಕ್ಟ್ರಿಕ್ ಸ್ಕೂಟರ್‌ಗಳು ಬಿಡುಗಡೆ.. ಬೆಲೆ ಎಷ್ಟು, ವಿಶೇಷತೆಗಳೇನು?
ಬೆಂಗಳೂರಿನ ಎಥರ್ ಎನರ್ಜಿ (Ather Energy), ವಿಶ್ವಾಸಾರ್ಹ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕ ಕಂಪನಿಯಾಗಿದೆ. ದೇಶೀಯ ಮಾರುಕಟ್ಟೆಯಲ್ಲಿ ಆಕರ್ಷಕವಾಗಿರುವ ವಿವಿಧ ಇ-ಸ್ಕೂಟರ್‌ಗಳನ್ನು ಮಾರಾಟಗೊಳಿಸುತ್ತಿದೆ. ಶನಿವಾರ 2025ರ ಹೊಚ್ಚ ಹೊಸ '450' ಸೀರೀಸ್ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಬಿಡುಗಡೆಗೊಳಿಸಿದೆ. ನೂತನ ಮಾಡೆಲ್‌ಗಳು ವಿನ್ಯಾಸದಲ್ಲಿ ಯಾವುದೇ ಬದಲಾವಣೆಗಳನ್ನು ಪಡೆದುಕೊಂಡಿಲ್ಲ. ಆದರೂ ಕಾರ್ಯಕ್ಷಮತೆಯಲ್ಲಿ ಸಾಕಷ್ಟು ಸುಧಾರಣೆಯನ್ನು ಕಂಡಿವೆ. ಆ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.
ಹೊಸ ಎಥರ್ 450 ಸೀರೀಸ್ ಎಲೆಕ್ಟ್ರಿಕ್ ಸ್ಕೂಟರ್‌ಗಳು, ಒಂದಷ್ಟು ನವೀಕರಣಗಳನ್ನು ಪಡೆದುಕೊಂಡಿದ್ದರೂ ಕೈಗೆಟುಕುವ ಬೆಲೆಯಲ್ಲಿ ಮಾರಾಟಕ್ಕೆ ಬಂದಿವೆ. 450ಎಸ್ ರೂ.1,29,999, 450ಎಸ್ ಪ್ರೊ ಪ್ಯಾಕ್ ರೂ.1,43,999, 450ಎಕ್ಸ್ (2.9 ಕೆಡಬ್ಲ್ಯೂಹೆಚ್) ರೂ.1,46,999, 450ಎಕ್ಸ್ ಪ್ರೊ ಪ್ಯಾಕ್ (2.9 ಕೆಡಬ್ಲ್ಯೂಹೆಚ್) ರೂ.1,63,999, 450ಎಕ್ಸ್ (3.7 ಕೆಡಬ್ಲ್ಯೂಹೆಚ್) ರೂ.56,999, 450ಎಕ್ಸ್ ಪ್ರೊ ಪ್ಯಾಕ್ (3.7 ಕೆಡಬ್ಲ್ಯೂಹೆಚ್) ರೂ.1,76,999 ಹಾಗೂ 450 ಅಪೆಕ್ಸ್ ರೂ.1,99,999 (ಎಕ್ಸ್ ಶೋರೂಂ) ದರವನ್ನು ಒಳಗೊಂಡಿದೆ.

ಎಥರ್ 450ಎಸ್: ಈ ಎಲೆಕ್ಟ್ರಿಕ್ ಸ್ಕೂಟರ್ 2.9 ಕಿಲೋ ವ್ಯಾಟ್ (ಕೆಡಬ್ಲ್ಯೂಹೆಚ್) ಸಾಮರ್ಥ್ಯದ ಬ್ಯಾಟರಿ ಆಯ್ಕೆಯನ್ನು ಪಡೆದಿದೆ. ಸಂಪೂರ್ಣ ಚಾರ್ಜ್‌ನಲ್ಲಿ 122 ಕಿಲೋಮೀಟರ್‌ವರೆಗೆ ರೇಂಜ್ (ಮೈಲೇಜ್) ನೀಡುತ್ತದೆ. ಕಲರ್ ಎಲ್‌ಸಿಡಿ ಸ್ಕ್ರೀನ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಇದೇ 450ಎಸ್ ಇ- ಸ್ಕೂಟರ್‌ನ 'ಪ್ರೊ ಪ್ಯಾಕ್' ಮಾಡೆಲ್ ಹೆಚ್ಚುವರಿಯಾಗಿ ನ್ಯಾವಿಗೇಷನ್ & ರೈಡಿಂಗ್ ಮೋಡ್‌ಗಳನ್ನು ಹೊಂದಿದೆ.
ಎಥರ್ 450ಎಕ್ಸ್ (2.9 ಕೆಡಬ್ಲ್ಯೂಹೆಚ್): ಇದರ ಹೆಸರೇ ಹೇಳುವಂತೆ 2.9 ಕಿಲೋ ವ್ಯಾಟ್ (ಕೆಡಬ್ಲ್ಯೂಹೆಚ್) ಬ್ಯಾಟರಿ ಪ್ಯಾಕ್ ಪಡೆದಿದೆ. ಭರ್ತಿ ಚಾರ್ಜ್‌ನಲ್ಲಿ 126 ಕಿಲೋಮೀಟರ್‌ವರೆಗೆ ಓಡುತ್ತದೆ. ಟ್ರೂ ರೆಡ್ & ಹೈಪರ್ ಸ್ಯಾಂಡ್ ಎಂಬ ಬಣ್ಣಗಳ ಆಯ್ಕೆಯಲ್ಲಿಯೂ ಸಿಗುತ್ತದೆ. 'ಪ್ರೊ ಪ್ಯಾಕ್' ಮಾಡೆಲ್ ಬ್ಲೂಟೂತ್ ಕನೆಕ್ಟಿವಿಟಿ, ಗೂಗಲ್ ಮ್ಯಾಪ್ಸ್, ಆಟೋಹೋಲ್ಡ್ ಮತ್ತು ಫೈಂಡ್ ಮೈ ಸ್ಕೂಟರ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ.

ಎಥರ್ 450ಎಕ್ಸ್ (3.7 ಕೆಡಬ್ಲ್ಯೂಹೆಚ್): ಈ ಎಲೆಕ್ಟ್ರಿಕ್ ಸ್ಕೂಟರ್ ಕೂಡ ತನ್ನ ಹೆಸರಿಗೆ ತಕ್ಕಂತೆ 3.7 ಕಿಲೋ ವ್ಯಾಟ್ (ಕೆಡಬ್ಲ್ಯೂಹೆಚ್) ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಆಯ್ಕೆಯನ್ನು ಹೊಂದಿದೆ. ಪೂರ್ತಿ ಚಾರ್ಜ್‌ನಲ್ಲಿ 161 ಕಿಲೋಮೀಟರ್‌ವರೆಗೆ ಕ್ರಮಿಸುತ್ತದೆ. ಇದರ 'ಪ್ರೊ ಪ್ಯಾಕ್' ಮಾಡೆಲ್ ಅತ್ಯುತ್ತಮ ರೈಡಿಂಗ್ ಮೋಡ್‌ಗಳು ಮತ್ತು ಪ್ರೀಮಿಯಂ ವೈಶಿಷ್ಟ್ಯಗಳನ್ನು ಹೊಂದಿದೆ.
ಎಥರ್ 450 ಅಪೆಕ್ಸ್: ಇದು ಶಕ್ತಿಯುತವಾದ ಎಲೆಕ್ಟ್ರಿಕ್ ಸ್ಕೂಟರ್ ಆಗಿದ್ದು, 3.7 ಕಿಲೋ ವ್ಯಾಟ್ (ಕೆಡಬ್ಲ್ಯೂಹೆಚ್) ಬ್ಯಾಟರಿ ಪ್ಯಾಕ್ ಪಡೆದಿದೆ. . ಸಂಪೂರ್ಣ ಚಾರ್ಜ್‌ನಲ್ಲಿ 157 ಕಿಲೋಮೀಟರ್‌ವರೆಗೆ ರೇಂಜ್ (ಮೈಲೇಜ್) ಕೊಡುತ್ತದೆ. ಇದರ ಪ್ರೊ ಪ್ಯಾಕ್' ಮಾಡೆಲ್ ಹಲವು ನವೀನ ಶೈಲಿಯ ವೈಶಿಷ್ಟ್ಯಗಳನ್ನು ಒಳಗೊಂಡಿದೆ.

ಎಲ್ಲ ಎಥರ್ 450 ಸೀರೀಸ್ ಇ-ಸ್ಕೂಟರ್‌ಗಳು, ಇನ್-ಬೋರ್ಡ್ ಎಲೆಕ್ಟ್ರಿಕ್ ಮೋಟಾರ್ ಮತ್ತು ಎಲ್ಇಡಿ ಲೈಟಿಂಗ್ ಹೊಂದಿವೆ. ಮುಂಭಾಗ (ಫ್ರಂಟ್) ಟೆಲಿಸ್ಕೋಪಿಕ್ ಫೋರ್ಕ್ ಹಾಗೂ ಹಿಂಭಾಗ (ರೇರ್) ಮೊನೊಶಾಕ್ ಸಸ್ಪೆನ್ಷನ್ ಸೆಟಪ್ ಅನ್ನು ಪಡೆದಿವೆ. ಜೊತೆಗೆ ಡುಯಲ್ ಡಿಸ್ಕ್ ಬ್ರೇಕ್ ಆಯ್ಕೆಯನ್ನು ತನ್ನದಾಗಿಸಿಕೊಂಡಿವೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








