ಸ್ಪೋರ್ಟಿ ಲುಕ್... ಹೆಚ್ಚಿನ ಮೈಲೇಜ್... ಆಕರ್ಷಕ ಬೆಲೆಯ ಬಜಾಜ್ ಪಲ್ಸರ್ NS125 ವಿಶೇಷತೆಗಳು

2025 ಬಜಾಜ್ ಪಲ್ಸರ್ NS125 ತನ್ನ ಸ್ಪೋರ್ಟಿ ಪರ್ಫಾಮೆನ್ಸ್, ಆಧುನಿಕ ತಂತ್ರಜ್ಞಾನ ಮತ್ತು 125 ಸಿಸಿ ವಿಭಾಗದಲ್ಲಿ ಮೌಲ್ಯಯುತ ವೈಶಿಷ್ಟ್ಯಗಳನ್ನು ಹೊಂದಿದೆ. ಅಲ್ಲದೆ ಹೊಸ ಅಪ್‌ಡೇಟ್‌ಗಳೊಂದಿಗೆ 125 ಸಿಸಿ ವಿಭಾಗದಲ್ಲಿ, ಬಜಾಜ್ ಪಲ್ಸರ್ NS125 ಮೋಟಾರ್‌ಸೈಕಲ್ ಈಗ ಬ್ಲೂಟೂತ್ ಮತ್ತು ABS ನಂತಹ ಆಧುನಿಕ ತಂತ್ರಜ್ಞಾನದ ನವೀಕರಣಗಳೊಂದಿಗೆ TVS ರೈಡರ್ 125, ಹೀರೋ ಎಕ್ಸ್‌ಟ್ರೀಮ್ 125R, ಮತ್ತು ಹೋಂಡಾ SP125 ನಂತಹ ಬೈಕ್‌ಗಳಿಗೆ ಪ್ರಮುಖ ಪ್ರತಿಸ್ಪರ್ಧಿಯಾಗಿದೆ. ಈ ಬೈಕ್ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ.

ನವೀಕರಿಸಿದ NS125 ಬೈಕ್ ಟೆಲಿಸ್ಕೋಪಿಕ್ ಫ್ರಂಟ್ ಸಸ್ಪೆನ್ಷನ್ ಮತ್ತು ಸವಾರಿ ಸೌಕರ್ಯಕ್ಕಾಗಿ ಹಿಂಭಾಗದಲ್ಲಿ ಐದು - ಹಂತದ ಹೊಂದಾಣಿಕೆ ಮಾಡಬಹುದಾದ ಮಾನೋಶಾಕ್ ಅನ್ನು ಹೊಂದಿದೆ. ABS ವೇರಿಯೆಂಟ್ ಸುರಕ್ಷತೆಗಾಗಿ 240 mm ಫ್ರಂಟ್ ಡಿಸ್ಕ್ ಬ್ರೇಕ್‌ನೊಂದಿಗೆ ಜೋಡಿಯಾಗಿರುವ ಸಿಂಗಲ್-ಚಾನೆಲ್ ABS ಮತ್ತು ಕಾಂಬಿ ಬ್ರೇಕ್ ಸಿಸ್ಟಮ್ (CBS) ನೊಂದಿಗೆ 130 mm ಹಿಂಭಾಗದ ಡ್ರಮ್ ಬ್ರೇಕ್ ಅನ್ನು ಉಳಿಸಿಕೊಂಡಿದೆ.

2025-bajaj-pulsar-ns125-top-things-you-must-know

ಹೊಸ 2025 ರ ಬಜಾಜ್ ಪಲ್ಸರ್ NS125 ಮೋಟಾರ್‌ಸೈಕಲ್ ಎಂಜಿನ್ ವಿಷಯಕ್ಕೆ ಬಂದರೆ, ಈಗ ಅದೇ 124.45 cc ಏರ್ - ಕೂಲ್ಡ್, 4 - ವಾಲ್ವ್ SOHC ಎಂಜಿನ್ ಹೊಂದಿದ್ದು, ಇದು 12 PS ಪವರ್ ಮತ್ತು 11 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನೊಂದಿಗೆ ಬರುತ್ತದೆ.

ಇದರ ಇಂಧನ ದಕ್ಷತೆಯು ಪೀಟರ್‌ಗೆ 64.75 ಕಿ.ಮೀ ಮೈಲೇಜ್ ನೀಡುತ್ತದೆ. 145 ಕೆ.ಜಿ ತೂಕ ಮತ್ತು 12-ಲೀಟರ್ ಇಂಧನ ಟ್ಯಾಂಕ್ ಸಾಮರ್ಥ್ಯದೊಂದಿಗೆ, ಇದು ಹಗುರವಾದ ಸ್ಪೋರ್ಟಿ ಕಮ್ಯೂಟರ್ ಬೈಕ್ ಆಗಿದೆ. ಬಣ್ಣದ ವಿಷಯದಲ್ಲಿ, ನವೀಕರಿಸಿದ ಮಾದರಿಯು ಬ್ಲಾಕ್, ಬ್ಲೂ, ಆರೆಂಜ್, ರೆಡ್ ಮತ್ತು ಪರ್ಲ್ ಮೆಟಾಲಿಕ್ ವೈಟ್ ಎಂಬ ಐದು ಆಯ್ಕೆಗಳಲ್ಲಿ ಬರುತ್ತದೆ.

2025-bajaj-pulsar-ns125-top-things-you-must-know

ಬಜಾಜ್ ಪ್ರಕಾರ, ಎಂಟ್ರಿ ಲೆವೆಲ್ ಪರ್ಫಾರ್ಮೆನ್ಸ್ ಮೋಟಾರ್ ಸೈಕಲ್ ಗಳಿಗೆ ಸುಧಾರಿತ ತಂತ್ರಜ್ಞಾನಗಳನ್ನು ತರುವ ಕಾರ್ಯತಂತ್ರಕ್ಕೆ ಈ ನವೀಕರಣವು ಹೊಂದಿಕೆಯಾಗುತ್ತದೆ. ಬಜಾಜ್ ಪಲ್ಸರ್ NS125 ಬೈಕ್ LED DRL ಗಳು, LED ಟೈಲ್ ಲೈಟ್‌ಗಳು, USB ಚಾರ್ಜಿಂಗ್ ಪೋರ್ಟ್, ಸರ್ವಿಸ್ ಡ್ಯೂ ಇಂಡಿಕೇಟರ್ ಮತ್ತು ಸುಧಾರಿತ ರೈಡರ್ - ಪ್ಯಾಸೆಂಜರ್ ಸೌಕರ್ಯಕ್ಕಾಗಿ ಸ್ಪ್ಲಿಟ್ ಸೀಟ್‌ಗಳನ್ನು ಸಹ ಹೊಂದಿದೆ.

2025 ರ ಬಜಾಜ್ ಪಲ್ಸರ್ NS125 ಈಗ ಬೆಲೆ 98,400 ರೂ. (ಎಕ್ಸ್-ಶೋರೂಂ) ನಲ್ಲಿ ಖರೀದಿಗೆ ಲಭ್ಯವಿದೆ. ರೈನ್, ರೋಡ್ ಮತ್ತು ಆಫ್-ರೋಡ್ ಎಂಬ ಮೂರು ವಿಭಿನ್ನ ಹೊಸ ರೈಡ್‌ ಮೋಡ್‌ಗಳು ಸವಾರರಿಗೆ ವಿಭಿನ್ನ ರೈಡಿಂಗ್ ಪರಿಸ್ಥಿತಿಗಳ ಆಧಾರದ ಮೇಲೆ ಪರ್ಫಾಮೆನ್ಸ್ ಮತ್ತು ಟ್ರಾಕ್ಷನ್ ಅನ್ನು ಅತ್ಯುತ್ತಮವಾಗಿಸಲು ಅನುವು ಮಾಡಿಕೊಡುತ್ತದೆ. ಜೊತೆಗೆ ಹೊಸ ಪರ್ಲ್ ಮೆಟಾಲಿಕ್ ವೈಟ್ ಬಣ್ಣದ ಆಯ್ಕೆಯೊಂದಿಗೆ ನವೀಕರಿಸಿದೆ.

2025-bajaj-pulsar-ns125-top-things-you-must-know

'ಆಫ್-ರೋಡ್' ಮೋಡ್ ಸಡಿಲವಾದ ಭೂಪ್ರದೇಶದಲ್ಲಿ ಉತ್ತಮ ಟ್ರಾಕ್ಷನ್‌ಗಾಗಿ ಹೆಚ್ಚಿನ ವೀಲ್ ಸ್ಲಿಪ್ ಆಗದಂತೆ ನೋಡಿಕೊಳ್ಳುತ್ತದೆ. 'ರೋಡ್' ಮೋಡ್ ಅನ್ನು ನಗರ ಮತ್ತು ಹೆದ್ದಾರಿ ಬಳಕೆಗಾಗಿ ಉದ್ದೇಶಿಸಲಾಗಿದ್ದರೆ, 'ರೈನ್' ಮೋಡ್ ಜಾರುವ ಮೇಲ್ಮೈಗಳಲ್ಲಿ ವರ್ಧಿತ ಬ್ರೇಕಿಂಗ್ ನಿಯಂತ್ರಣವನ್ನು ನೀಡುತ್ತದೆ. ಅಲ್ಲದೆ ಹೊಸ ರೈಡ್‌ ಮೋಡ್‌ಗಳ ಸೇರ್ಪಡೆಯು ಬೈಕ್‌ನ ಬಹುಮುಖತೆ ಮತ್ತು ನಿಯಂತ್ರಣವನ್ನು ಹೆಚ್ಚಿಸುತ್ತದೆ.

ಬೈಕ್ ಈಗ ಕರೆ ಮತ್ತು SMS ಎಚ್ಚರಿಕೆಗಳಿಗಾಗಿ ಮೊಬೈಲ್ ಜೋಡಣೆಯೊಂದಿಗೆ ಬ್ಲೂಟೂತ್ ಸಂಪರ್ಕ, ನ್ಯಾವಿಗೇಷನ್ ಅಸಿಸ್ಟ್ ಮತ್ತು ಗೇರ್ ಇಂಡಿಕೇಟರ್, ಇಂಧನ ಆರ್ಥಿಕತೆ ಮತ್ತು ಟ್ರಿಪ್ ಮೀಟರ್‌ಗಳು ಸೇರಿದಂತೆ ವಿವಿಧ ಮಾಹಿತಿಯನ್ನು ತೋರಿಸುವ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಅನ್ನು ಹೊಂದಿದೆ.

More from DriveSpark

Article Published On: Sunday, October 26, 2025, 16:49 [IST]
English summary
2025 bajaj pulsar ns125 top things you must know
Read more on bajaj auto india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+