Hero: 70 Km ಮೈಲೇಜ್.. ಸದ್ದಿಲ್ಲದೇ ಹೊಸ ಹೀರೋ ಪ್ಯಾಶನ್ ಪ್ಲಸ್ ಬೈಕ್ ಬಿಡುಗಡೆ, ಬೆಲೆಯೂ ಕಮ್ಮಿ, ಮಸ್ತ್ ಫೀಚರ್ಸ್!

ಹೀರೋ ಮೋಟೊಕಾರ್ಪ್ (Hero MotoCorp) ನಂ.1 ದ್ವಿಚಕ್ರ ವಾಹನ ತಯಾರಕ ಕಂಪನಿಯಾಗಿ ಹೆಸರುವಾಸಿಯಾಗಿದ್ದು, ಸದ್ದಿಲ್ಲದೇ ಪ್ಯಾಶನ್ ಪ್ಲಸ್ (Passion Plus) ಬೈಕ್‌ನ 2025ರ ಮಾಡೆಲ್‌ನ್ನು ಬಿಡುಗಡೆಗೊಳಿಸಿದೆ. ಇದು ಒಂದಷ್ಟು ಪ್ರಮುಖ ನವೀಕರಣಗಳನ್ನು ಪಡೆದುಕೊಂಡು ಮಾರಾಟಕ್ಕೆ ಬಂದಿದೆ. ಹಳೆಯ ಮಾಡೆಲ್‌ಗೆ ಹೋಲಿಕೆ ಮಾಡಿದರೆ, ಸ್ವಲ್ಪ ಹೆಚ್ಚಿನ ದರವನ್ನು ಹೊಂದಿದೆ. ಬನ್ನಿ, ನೂತನ ಮೋಟಾರ್‌ಸೈಕಲ್‌ನ ಬೆಲೆ ಎಷ್ಟು.. ವಿಶೇಷತೆಗಳೇನು ಎಂಬುದರ ಕುರಿತಂತೆ ಸಂಪೂರ್ಣವಾದ ವಿವರವನ್ನು ತಿಳಿಯೋಣ.

2025ರ ಹೊಚ್ಚ ಹೊಸ ಹೀರೋ ಪ್ಯಾಶನ್ ಪ್ಲಸ್ (Hero Passion Plus) ಬೈಕ್‌ನ್ನು ಅತ್ಯಂತ ಕೈಗೆಟುಕುವ ಬೆಲೆಯಲ್ಲಿ ಪರಿಚಯಿಸಲಾಗಿದೆ. ಇದು ರೂ.82,016 (ಎಕ್ಸ್-ಶೋರೂಂ - ಜೈಪುರ) ದರವನ್ನು ಒಳಗೊಂಡಿದೆ. ಹಳೆಯ ಮಾಡೆಲ್‌ ರೂ.79,901 ಬೆಲೆಯನ್ನು ಹೊಂದಿತ್ತು. ಅದಕ್ಕೆ ಹೋಲಿಸಿದರೆ, ಸುಮಾರು ರೂ.2,000 ದಷ್ಟು ದುಬಾರಿಯಾಗಿದೆ.

2025 Hero Passion Plus Bike Launched In India Price Mileage And Features Details

ನೂತನ ಹೀರೋ ಪ್ಯಾಶನ್ ಪ್ಲಸ್ ಮೋಟಾರ್‌ಸೈಕಲ್‌ನ ವಿನ್ಯಾಸದಲ್ಲಿಯೂ ಅಷ್ಟಾಗಿ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲ. ಈ ಬೈಕ್ ಕೂಡ 2024ರ ಮಾಡೆಲ್‌ನಂತೆಯೇ ಇದ್ದು, ಅತ್ಯುತ್ತಮವಾದ ಹ್ಯಾಲೊಜೆನ್ ಹೆಡ್‌ಲೈಟ್ ಹಾಗೂ ಟೈಲ್ ಲೈಟ್‌ನ್ನು ಪಡೆದಿದೆ. ಇದರ ಒಟ್ಟಾರೆ ವಿನ್ಯಾಸ ರಸ್ತೆಯಲ್ಲಿ ನೋಡುಗರ ಕಣ್ಣು ಕುಕ್ಕುವಂತಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ.

ಈ ಹೀರೋ ಪ್ಯಾಶನ್ ಪ್ಲಸ್ ಬೈಕ್‌ನ ಹಳೆಯ ಮಾಡೆಲ್ ಬ್ಲ್ಯಾಕ್ ಹೆವಿ ಗ್ರೇ, ಬ್ಲ್ಯಾಕ್ ಗ್ರೇ ಸ್ಟ್ರೈಪ್, ಸ್ಪೋರ್ಟ್ ರೆಡ್ ಮತ್ತು ಬ್ಲ್ಯಾಕ್ ನೆಕ್ಸಸ್ ಬ್ಲೂ ಎಂಬ 4 ಬಣ್ಣಗಳ ಆಯ್ಕೆಯಲ್ಲಿ ಗ್ರಾಹಕರ ಖರೀದಿಗೆ ದೊರೆಯುತ್ತಿತ್ತು. ಸದ್ಯ, ಬ್ಲ್ಯಾಕ್ ಗ್ರೇ ಸ್ಟ್ರೈಪ್ & ಸ್ಪೋರ್ಟ್ ರೆಡ್ ಬಣ್ಣಗಳನ್ನು ತೆಗೆದುಹಾಕಲಾಗಿದೆ. ಅವುಗಳ ಬದಲಾಗಿ ಹೊಸ ಮಾಡೆಲ್‌ಗಾಗಿ ಬ್ಲೂಯಿಶ್ ಟೀಲ್ ಹಾಗೂ ಸ್ಪೋರ್ಟ್ಸ್ ರೆಡ್ ಬ್ಲ್ಯಾಕ್ 2 ವಿನೂತನ ಬಣ್ಣಗಳನ್ನು ಪರಿಚಯಿಸಲಾಗಿದೆ.

2025 Hero Passion Plus Bike Launched In India Price Mileage And Features Details

ನೂತನ ಮೋಟಾರ್‌ಸೈಕಲ್‌ನ ಎಂಜಿನ್‌ನ್ನು ಒಬಿಡಿ 2ಬಿ (OBD-2B) ಮಾನದಂಡಗಳಿಗೆ ಅನುಗುಣವಾಗಿ ನವೀಕರಿಸಲಾಗಿದೆ. ಇದು ಇಂಗಾಲದ ಹೊರಸೂಸುವಿಕೆಯಲ್ಲಿ ಯಾವುದೇ ರೀತಿಯಲ್ಲಿ ಸಮಸ್ಯೆ ಕಂಡುಬಂದರೆ, ಸವಾರನನ್ನು ಎಚ್ಚರಿಸುತ್ತದೆ. ಅದರ ಹೊರತಾಗಿ ಇದರ ಕಾರ್ಯಕ್ಷಮತೆಯಲ್ಲಿ ಯಾವುದೇ ಪ್ರಮುಖ ಮಾರ್ಪಾಡುಗಳು ಆಗಿಲ್ಲ. ಬಹುತೇಕ ಹಳೆಯ ಮಾಡೆಲ್‌ನಂತೆಯೇ ಕೆಲಸ ಮಾಡುತ್ತದೆ.

ಹೊಸ ಹೀರೋ ಪ್ಯಾಶನ್ ಪ್ಲಸ್ ಬೈಕ್‌ 97.2 ಸಿಸಿ ಸಿಂಗಲ್ ಸಿಲಿಂಡರ್, ಏರ್ ಕೋಲ್ಡ್ ಪೆಟ್ರೋಲ್ ಎಂಜಿನ್‌ನ್ನು ಪಡೆದಿದೆ. 8000 ಆರ್‌ಪಿಎಂನಲ್ಲಿ 7.91 ಬಿಹೆಚ್‌ಪಿ ಅಶ್ವ ಶಕ್ತಿ (ಹಾರ್ಸ್ ಪವರ್) ಮತ್ತು 6000 ಆರ್‌ಪಿಎಂನಲ್ಲಿ 8.05 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಹೊರಹಾಕುತ್ತದೆ. 4-ಸ್ಪೀಡ್ ಗೇರ್‌ಬಾಕ್ಸ್‌ನ್ನು ಒಳಗೊಂಡಿದೆ. 60 ರಿಂದ 70 ಕೆಎಂಪಿಎಲ್‌ವರೆಗೂ ಮೈಲೇಜ್ ನೀಡುತ್ತದೆ.

2025 Hero Passion Plus Bike Launched In India Price Mileage And Features Details

ಈ ಮೋಟಾರ್‌ಸೈಕಲ್‌ 1982 ಎಂಎಂ ಉದ್ದ, 770 ಎಂಎಂ ಅಗಲ ಮತ್ತು 1087 ಎಂಎಂ ಎತ್ತರವಿದೆ. 1235 ಎಂಎಂ ವೀಲ್‌ಬೇಸ್ ಹಾಗೂ 168 ಎಂಎಂ ಗ್ರೌಂಡ್ ಕ್ಲಿಯರೆನ್ ಅನ್ನು ಹೊಂದಿದೆ. ನೂತನ ಬೈಕ್ 115 ಕೆಜಿ ತೂಕವಿದ್ದು, 11 ಲೀಟರ್ ಸಾಮರ್ಥ್ಯದ ಫ್ಯುಯೆಲ್ ಟ್ಯಾಂಕ್‌ನ್ನು ಪಡೆದಿದೆ.

ಹೊಸ ಹೀರೋ ಪ್ಯಾಶನ್ ಪ್ಲಸ್ ಬೈಕ್‌ ಹತ್ತಾರು ಆಕರ್ಷಕ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಬಹುಮುಖ್ಯವಾಗಿ ಡಿಜಿಟಲ್ ಅನಲಾಗ್ ಕ್ಲಸ್ಟರ್, ಇಂಟಿಗ್ರೇಟೆಡ್ ಬ್ರೇಕಿಂಗ್ ಸಿಸ್ಟಮ್, ಮೊಬೈಲ್ ಚಾರ್ಜಿಂಗ್ ಪೋರ್ಟ್ ಮತ್ತು ಯುಟಿಲಿಟಿ ಬಾಕ್ಸ್‌ನ್ನು ಪಡೆದಿದೆ. ಮುಂಭಾಗ (ಫ್ರಂಟ್) ಟೆಲಿಸ್ಕೋಪಿಕ್ ಸಸ್ಪೆನ್ಷನ್ ಸೆಟಪ್ ಪಡೆದಿದ್ದು, ಸುರಕ್ಷತೆಗಾಗಿ ಡ್ರಮ್ ಬ್ರೇಕ್‌ಗಳನ್ನು ಹೊಂದಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋ ಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Thursday, April 10, 2025, 10:36 [IST]
English summary
2025 hero passion plus bike launched in india price mileage and features details
Read more on hero motocorp india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+